Winter Festivals: ಪ್ರವಾಸಕ್ಕೆ ಪ್ಲಸ್ ಆಗೋ ಚಳಿಗಾಲದ ಉತ್ಸವಗಳು..

ಡಿಸೆಂಬರ್, ಜನವರಿ ತಿಂಗಳು ಪ್ರವಾಸಕ್ಕೆ ಸಕಾಲ. ಈ ಸಂದರ್ಭದಲ್ಲಿ ಪ್ರವಾಸ ಹೋಗುವ ಜೊತೆಗೆ ಆಯಾ ಸ್ಥಳಗಳಲ್ಲಿ ನಡೆವ ಉತ್ಸವಗಳನ್ನೂ ನೋಡ ಸಿಕ್ಕರೆ ಬೋನಸ್ ಇದ್ದಂತೆ. ಈ ತಿಂಗಳಲ್ಲಿ ಯಾವೆಲ್ಲ ಉತ್ಸವಗಳು ನಡೆಯಲಿವೆ ಎಂಬುದಿಲ್ಲಿದೆ ನೋಡಿ. 

Must Attend Fair and Festivals of India in Winter skr

ಚಳಿಗಾಲವೆಂದರೆ ವರ್ಷಾಂತ್ಯ. ಈ ಸಂದರ್ಭದಲ್ಲಿ ಹೆಚ್ಚಿನ ಕಂಪನಿಗಳಲ್ಲಿ ರಜೆಗಳು ಸಿಗುತ್ತವೆ. ಹಾಗಾಗಿ, ಎಲ್ಲಿಗಪ್ಪಾ ಪ್ರವಾಸ ಹೋಗೋದು ಎಂದು ಗೂಗಲ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ರೆ ಕೊಂಚ ಇಲ್ ನೋಡಿ. ಚಳಿಗಾಲ(Winter Season)ದಲ್ಲಿ ವಿಶೇಷವಾಗಿ ಭಾರತದ ಎಲ್ಲೆಡೆ ವಿವಿಧ ಹಬ್ಬ, ಜಾತ್ರೆ, ಉತ್ಸವಗಳು ನಡೆಯುತ್ತವೆ. ಇವೆಲ್ಲವನ್ನು ಕಣ್ತುಂಬಿಕೊಳ್ಳಲು ವಿದೇಶಿಗರೇ ಮುಗಿ ಬೀಳುತ್ತಾರೆ. ಅಂಥದರಲ್ಲಿ ನಮ್ಮ ದೇಶದ ಉತ್ಸವಗಳನ್ನು ನಾವೇ ನೋಡದಿದ್ರೆ ಹೇಗೆ? ಈ ಸಮಯದಲ್ಲಿ ಯಾವೆಲ್ಲ ಪ್ರಮುಖ ಉತ್ಸವಗಳನ್ನು ನೀವು ನೋಡಲೇಬೇಕು ಗೊತ್ತಾ?

ರಣ್ ಉತ್ಸವ್(Rann Utsav)
ನವೆಂಬರ್‌ನಿಂದ ಫೆಬ್ರವರಿವರೆಗೂ ಗುಜರಾತ್‌ನ ಕುಛ್‌ನಲ್ಲಿ ರಣ್ ಉತ್ಸವ್ ನಡೆಯುತ್ತದೆ. ಭಾರತದ ಬಿಳಿ ಮರಳುಗಾಡಾದ ಕುಛ್‌ನಲ್ಲಿ ನಡೆಯುವ ಜಾನಪದ ನೃತ್ಯ, ಹಾಡು, ಜಾತ್ರೆಗಳ ಸಮಾಗಮ. ಈಗಲೇ ಬುಕ್ ಮಾಡಿಕೊಂಡು ರಣ್ ಉತ್ಸವ್‌ನಲ್ಲಿ ಭಾಗಿಯಾಗಿ.

ತೆಯ್ಯಮ್ ಹಬ್ಬ(Theyyam Festival)
ಕೇರಳದ ಪೆರುಮ್ತಿಟ್ಟ ಥರವಾಡ್ ತೆಯ್ಯಂ ಹಬ್ಬವು ಈ ವರ್ಷಾಂತ್ಯದ ಟ್ರಿಪ್‌ನಲ್ಲಿ ನೀವು ಸವಿಯಬಹುದಾದ ಸೊಗಸಾದ ಉತ್ಸವ. ಡಿಸೆಂಬರ್ 28ರಿಂದ ಕಾಸರಗೋಡಿನಲ್ಲಿ ತೆಯ್ಯಮ್ ಆರಂಭವಾಗುತ್ತದೆ. 

ಈ Vaastu tips ಪಾಲಿಸಿದ್ರೆ ಆರೋಗ್ಯ ಸಮಸ್ಯೆ ಇರೋದಿಲ್ಲ..

ವಿಂಟರ್ ಫೆಸ್ಟಿವಲ್(Winter Festival)
ರಾಜಸ್ಥಾನ ಎಂದರೇ ರಂಗು ರಂಗೋಲಿ. ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಅದರಲ್ಲೂ ನವೆಂಬರ್, ಡಿಸೆಂಬರ್ ರಾಜಸ್ಥಾನ ಭೇಟಿಗೆ ಹೇಳಿ ಮಾಡಿಸಿದ್ದು. ನಾಳೆಯಿಂದ ರಾಜಸ್ಥಾನದ ಜನಪ್ರಿಯ ಸ್ಥಳ ಮೌಂಟ್ ಅಬು(Mount Abu)ವಿನಲ್ಲಿ ವಿಂಟರ್ ಫೆಸ್ಟಿವಲ್ ಆರಂಭವಾಗಲಿದೆ. ವಿಶಿಷ್ಠ ಸಂಸ್ಕೃತಿ, ಸಂಪ್ರದಾಯಗಳಿಂದ ಕಣ್ಮನ ಸೆಳೆವ ರಾಜಸ್ಥಾನದ ನೃತ್ಯ,, ಹಾಡುಗಳು ಎಲ್ಲವೂ ಈ ವಿಂಟರ್‌ ಫೆಸ್ಟಿವಲ್‌ನಲ್ಲಿ ಮನರಂಜಿಸುತ್ತವೆ. ಅದರಲ್ಲೂ ಇಲ್ಲಿನ ಖ್ಯಾತ ಘೂಮರ್(Ghoomar) ಹಾಗೂ ಗೇರ್ ನೃತ್ಯಗಳನ್ನು ಕಣ್ತುಂಬಿಕೊಳ್ಳಬಹುದು. 

ಗಂಗಾಸಾಗರ್ ಮೇಳ(GangaSagar Mela)
ಕೋಲ್ಕತ್ತಾದ ಗ್ಯಾಂಗೆಸ್ ಡೆಲ್ಟಾ ದ್ವೀಪದಲ್ಲಿ ಪ್ರತಿ ವರ್ಷ ಗಂಗಾ ಸಾಗರ್ ಮೇಳ ನಡೆಯುತ್ತದೆ. ಈ ಹಬ್ಬವು ಜಗತ್ತಿನಲ್ಲೇ ಅತಿ ಹೆಚ್ಚು ಜನ ಸೇರುವ ಎರಡನೇ ಮೇಳವಾಗಿದೆ. ಜನವರಿ 14ರಂದು ಈ ಮೇಳ ಆರಂಭವಾಗಲಿದ್ದು, ಲಕ್ಷಾಂತರ ಭಕ್ತರು ಗಂಗೆಯಲ್ಲಿ ಮುಳುಗೆದ್ದು ಜಾತ್ರೆ ಆರಂಭಿಸಲಿದ್ದಾರೆ. ಸುಮಾರು 2 ತಿಂಗಳ ಕಾಲ ಮೇಳ ನಡೆಯುತ್ತದೆ. 

Travel Sickness: ಪ್ರಯಾಣದ ವೇಳೆ ಕಾಡುವ ವಾಂತಿಗೆ ಹೇಳಿ ಗುಡ್ ಬೈ

ಮರುಭೂಮಿ ಹಬ್ಬ(Desert Festival)
ರಾಜಸ್ಥಾನದ ಜೈಸಲ್ಮೇರ್‌(Jaisalmer)ನ ಅತಿ ಜನಪ್ರಿಯ ಹಬ್ಬ ಡಸರ್ಟ್ ಫೆಸ್ಟಿವಲ್. ಫೆಬ್ರವರಿಯಲ್ಲಿ ನಡೆವ ಡೆಸರ್ಟ್ ಫೆಸ್ಟಿವಲ್‌ಗೆ ವಿಶ್ವಾದ್ಯಂತದಿಂದ ಜನಸಾಗರ ಹರಿದು ಬರುತ್ತದೆ. 

ನಾಗೌರ್ ಜಾನುವಾರು ಜಾತ್ರೆ(Nagaur Cattle Fair)
ನಾಗೌರ್ ಜಾನುವಾರು ಜಾತ್ರೆ ಕೂಡಾ ರಾಜಸ್ಥಾನದ ಜನಪ್ರಿಯ ಜಾತ್ರೆಗಳಲ್ಲೊಂದು. ಪ್ರತಿ ವರ್ಷ ಫೆಬ್ರವರಿಯಲ್ಲಿ ನಾಗೌರ್ ಜಿಲ್ಲೆಯಲ್ಲಿ ನಡೆಯುವ ಜಾನುವಾರು ಭಾರತದ ಅತಿ ದೊಡ್ಡ ಜಾತ್ರೆಗಳಲ್ಲೊಂದು. ಇಲ್ಲಿ ಜಾನುವಾರು ಮಾರಾಟ ಹಾಗೂ ಪ್ರದರ್ಶನ ನಡೆಯುತ್ತದೆ. ಪ್ರತಿ ವರ್ಷ ಇದರಲ್ಲಿ 75000 ಕ್ಕೂ ಹೆಚ್ಚು ಒಂಟೆಗಳು, ಕುದುರೆಗಳು, ಎತ್ತುಗಳು ಮಾರಾಟವಾಗುತ್ತವೆ. ಇಷ್ಟೊಂದು ಸಂಖ್ಯೆಯ ಪ್ರಾಣಿಗಳನ್ನು ಒಟ್ಟಿಗೇ ನೋಡುವುದೇ ಹಬ್ಬ. 

ಕುಂಭ ಮೇಳ(Kumbh Mela)
ಜಗತ್ತಿನ ಅತಿ ದೊಡ್ಡ ಜನಸಾಗರ ಸೇರುವ ಕುಂಭಮೇಳವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಹರಿದ್ವಾರ, ಅಲಹಾಬಾದ್, ನಾಸಿಕ್, ಉಜ್ಜಯಿನಿಯಲ್ಲಿ ನಡೆಯುತ್ತದೆ. 2019ರಲ್ಲಿ ಅರ್ಧ ಕುಂಭಮೇಳ ನಡೆದಿತ್ತು. ಪೂರ್ಣ ಕುಂಭಮೇಳವು 2025ರಲ್ಲಿ ನಡೆಯಲಿದೆ. ಆದರೆ, ಸಣ್ಣಮಟ್ಟದಲ್ಲಿ ಈ ವರ್ಷ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತದೆ. 

ಗಾಳಿಪಟ ಉತ್ಸವ(Gujarat Kite Festival)
ಗುಜರಾತ್‌ನಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ನಡೆವ ಗಾಳಿಪಟ ಉತ್ಸವ ಈ ರಾಜ್ಯದ ಅತಿ ದೊಡ್ಡ ಸಂಭ್ರಮಗಳಲ್ಲೊಂದು. ಇಡೀ ರಾಜ್ಯದ ಜನತೆ, ಹೊರಗಿನ ಗಾಳಿಪಟ ಉತ್ಸಾಹಿಗಳೆಲ್ಲರೂ ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಸವೇ ಮುಚ್ಚುವಂತೆ ಗಾಳಿಪಟ ಹಾರಿಸುವುದನ್ನು ನೋಡುವುದಕ್ಕಿಂತ ಸೊಬಗು ಮತ್ತೊಂದಿರಲಾರದು. 

Latest Videos
Follow Us:
Download App:
  • android
  • ios