ಭಾರತೀಯ ಪೌರಾಣಿಕ ಕತೆಗಳಲ್ಲಿ ತಡಕಾಡಿದರೆ ಮುಗಿಯದಷ್ಟು ಪ್ರೇಮ ಕತೆಗಳಿವೆ. ಅವುಗಳಲ್ಲಿ ಆಯ್ದ ನಾಲ್ಕು ಕತೆಗಳನ್ನಿಲ್ಲಿ ಕೊಡಲಾಗಿದೆ. ಇವು ಪ್ರೇಮವೆಂಬುದು ಈ ಜಗತ್ತಿನಲ್ಲಿ ಹಿಂದೂ ಇಂದೂ ಎಂದೂ ಹೇಗೆ ವಿಶೇಷವಾಗಿದೆ ಎಂಬುದನ್ನು ಹೇಳುತ್ತದೆ.
ಭಾರತದ ಪೌರಾಣಿಕ ಕತೆಗಳಲ್ಲಿ ಎಲ್ಲ ರೀತಿಯ ಭಾವಗಳಿಗೂ ಕಂತೆ ಕಂತೆ ಕತೆಗಳಿವೆ. ಅವು ನಮ್ಮಲ್ಲೂ ಹಲವು ಭಾವಗಳನ್ನು ಸೃಷ್ಟಿಸುತ್ತವೆ. ನಮ್ಮ ಬದುಕಿಗೆ ಕೆಲವು ಹೇಗಿರಬೇಕೆಂದು ಮಾದರಿಯಾಗಿದ್ದರೆ, ಮತ್ತೆ ಕೆಲವು ಹೇಗಿರಬಾರದೆಂಬುದಕ್ಕೆ ಉದಾಹರಣೆಯಾಗಿರುತ್ತವೆ. ಪುರಾಣಗಳಲ್ಲಿ ಲವ್ ಸ್ಟೋರಿಗಳಿಗೂ ಕೊರತೆಯಿಲ್ಲ. ಅವನ್ನು ಕೇಳಿದಾಗ ಎಲ್ಲರಿಗೂ ಅವರವರ ಬದುಕಿನ ಪ್ರೀತಿಯ ನೆನಪಾಗುವುದು. ನವಿರು ಅನುಭವ ಮತ್ತೆ ಸೋಕಿದಂತಾಗುವುದು. ಭಾರತೀಯ ಪೌರಾಣಿಕ ಕತೆಗಳಲ್ಲಿ ಕೇಳಿ ಬರುವ ನಾಲ್ಕು ಅದ್ಭುತ ಸಂಬಂಧಗಳು- ಚೆಂದದ ಪ್ರೇಮ ಕತೆಗಳನ್ನಿಂದು ನೋಡೋಣ.
ಕೃಷ್ಣ ರಾಧೆ(Radha and Krishna)
ಈ ಜಗತ್ತಿನ ಅತ್ಯಂತ ಜನಪ್ರಿಯ ಪ್ರೇಮಿಗಳೆಂದರೆ ಅದು ರಾಧಾ ಮತ್ತು ಕೃಷ್ಣ. ಇವರು ದೇವರ ಸ್ತ್ರೀ ಹಾಗೂ ಪುರುಷ ರೂಪದ ಪ್ರತಿನಿಧಿಯಾಗಿದ್ದಾರೆ. ಇವರಿಬ್ಬರೂ ಒಬ್ಬರನ್ನೊಬ್ಬರು ಬಹಳವಾಗಿ ಪ್ರೀತಿಸುತ್ತಿದ್ದರು. ಆದರೆ ವಿವಾಹವಾಗಲಿಲ್ಲ. ಇವರು ಒಬ್ಬರನ್ನೊಬ್ಬರು ಮಿತಿಯಿಲ್ಲದಷ್ಟು ಅತಿಯಾಗಿ ಪ್ರೀತಿಸಿದ್ದರಿಂದ ಇಬ್ಬರೂ ಒಬ್ಬರೇ ಆಗಿ ಹೋದರು. ಹಾಗಾಗಿ, ಅವರು ವಿವಾಹವಾಗಲು ಸಾಧ್ಯವಾಗಲಿಲ್ಲ. ರಾಧೆಯು ಕೃಷ್ಣನಿಗಿಂತ ದೊಡ್ಡವಳಾಗಿದ್ದಳು. ಆದರೆ, ಅದು ಇವರ ವಿವಾಹಕ್ಕೆ ಅಡ್ಡಿಯಾಗಲಿಲ್ಲ.
ನಳ ದಮಯಂತಿ(Nala and Damayanti)
ಇಂದು ಮೊಬೈಲ್ ನಂಬರ್ ಮಿಸ್ ಆಗಿ ಮೆಸೇಜ್ ಮಾಡಿಕೊಂಡು ಜೋಡಿಗಳು ಕನೆಕ್ಟ್ ಆಗುವುದು ನಿಮಗೆ ಗೊತ್ತಿರಬಹುದು. ಇದಕ್ಕೂ ಮುನ್ನ ಪತ್ರ ಮುಖೇನ ಲವ್ ಆಗುತ್ತಿದ್ದುದೂ ಗೊತ್ತಿರಬಹುದು. ಆದರೆ ಈ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ಗೆ ಶತಶತಮಾನಗಳ ಹಿಂದೆಯೇ ಮಾದರಿಯಾದವರು ನಳ ಮತ್ತು ದಮಯಂತಿ. ಇವರಿಬ್ಬರೂ ಹಂಸದ ಮೂಲಕ ಒಬ್ಬರಿಗೊಬ್ಬರು ಸಂದೇಶ ಕಳುಹಿಸಿಕೊಳ್ಳುತ್ತಿದ್ದರು. ಹಾಗೆಯೇ ಅವರ ಪ್ರೀತಿಯರಳಿದ್ದು. ದಮಯಂತಿಯ ಸ್ವಯಂವರದಲ್ಲಿ ಆಕೆ ನಳನನ್ನೇ ಆರಿಸಿಕೊಂಡು ಅದ್ಧೂರಿ ವಿವಾಹವಾಗುತ್ತಾರೆ. ಆದರೆ, ನಳನನ್ನು ಆತನ ಜೂಜಿನ ಕಾರಣಕ್ಕೆ ರಾಜ ಸ್ಥಾನದಿಂದ ಕೆಳಗಿಳಿಸಿ ವನವಾಸಕ್ಕೆ ಹೋಗಬೇಕಾಗುತ್ತದೆ. ದಮಯಂತಿಯನ್ನು ಬಿಟ್ಟು ಹೋಗಬೇಕಾಗುತ್ತದೆ. ಆದರೆ, ಕಡೆಗೂ ಅವರಿಬ್ಬರ ತಾಳ್ಮೆ, ತ್ಯಾಗ ಹಾಗೂ ಪ್ರೀತಿಯ ಕಾರಣದಿಂದಾಗಿ ಇಬ್ಬರೂ ಒಂದಾಗುತ್ತಾರೆ.
ಮನೆಯಲ್ಲಿ ಸಮೃದ್ಧಿ ಬೇಕೆಂದರೆ Laughing Buddhaನನ್ನು ಇಲ್ಲಿಡಿ..
ವಿಶ್ವಾಮಿತ್ರ ಮತ್ತು ಮೇನಕೆ(Vishwamitra and Menaka)
ಘೋರ ತಪಸ್ಸಿನಲ್ಲಿ ನಿರತರಾಗಿದ್ದ ವಿಶ್ವಾಮಿತ್ರರನ್ನು ವಿಚಲಿತಗೊಳಿಸಲು ಇಂದ್ರನು ಸುಂದರಿಯಾದ ಅಪ್ಸರೆ ಮೇನಕೆಯನ್ನು ಕಳುಹಿಸುತ್ತಾನೆ. ವಿಶ್ವಾಮಿತ್ರ ತಮ್ಮ ತಪಸ್ಸಿನಿಂದ ವರಗಳನ್ನು ಪಡೆದರೆ ತಾನು ಇಂದ್ರ ಪದವಿ ತ್ಯಜಿಸಬೇಕಾದ ಭಯ ಆತನನ್ನು ಕಾಡಿರುತ್ತದೆ. ಆದರೆ, ಮೇನಕೆಗೆ ವಿಶ್ವಾಮಿತ್ರರ ಮೇಲೆ ನಿಜವಾಗಲೂ ಪ್ರೀತಿಯಾಗಿ ಬಿಡುತ್ತದೆ. ಆಕೆ ಋಷಿಯ ಬಳಿ ತನ್ನ ಪ್ರೇಮ ನಿವೇದನೆ ಮಾಡುತ್ತಾಳೆ. ಆದರೆ, ಅವಳು ಮತ್ತೆ ಎಂದಿಗೂ ಋಷಿಯನ್ನು ಭೇಟಿಯಾಗದಂತೆ ಶಾಪಗ್ರಸ್ಥಳಾಗುತ್ತಾಳೆ. ಇಂದ್ರ ವ್ಯಕ್ತಿಯೊಬ್ಬನನ್ನು ಹಾಳು ಮಾಡಲು ಕಳುಹಿಸಿದರೆ ಆಕೆ ಆತನನ್ನು ಪ್ರೀತಿಸುತ್ತಾಳೆ.
ಕಾಲ್ಬೆರಳು ನೋಡಿ ವ್ಯಕ್ತಿತ್ವ ಹೇಳ್ಬಹುದು.. ನಿಮ್ಮ ಕಾಲ್ಬೆರಳು ಯಾವ ಆಕಾರವಿದೆ?
ಸಾವಿತ್ರಿ ಮತ್ತು ಸತ್ಯವಾನ್(Savitri and Satyavan)
ಮಾದ್ರದ ರಾಜಕುಮಾರಿ ಸಾವಿತ್ರಿಯು ಬಲ್ವದ ರಾಜ ಸತ್ಯವಾನನ್ನು ವಿವಾಹವಾಗಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಆತ ರಾಜ್ಯ ಕಳೆದುಕೊಂಡ ಕುರುಡ, ನತದೃಷ್ಟ ರಾಜನಾಗಿರುತ್ತಾನೆ. ಆತ ಸಾಯುವುದಾಗಿ ಮಾತುಗಳೂ ಇರುತ್ತವೆ. ಹಾಗಿದ್ದೂ ಸಾವಿತ್ರಿ ಆತನನ್ನೇ ವಿವಾಹವಾಗಲು ಆಯ್ಕೆ ಮಾಡಿಕೊಳ್ಳುತ್ತಾಳೆ. ವರ್ಷದ ಬಳಿಕ ಯಮ ಸತ್ಯವಾನನ ಜೀವ ತೆಗೆದುಕೊಂಡು ಹೋಗಲು ಬರುತ್ತಾನೆ. ಆಗ ಸಾವಿತ್ರಿ ಯಮನಲ್ಲಿ ಗಂಡನನ್ನು ಬಿಟ್ಟು ಹೋಗುವಂತೆ ದುಂಬಾಲು ಬೀಳುತ್ತಾಳೆ. ಇದಕ್ಕೆ ಯಮ ಒಪ್ಪದೆ ಆಕೆಯ ಮೂರು ಬೇರೆ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳುತ್ತಾನೆ. ಆಗ ಸಾವಿತ್ರಿಯು ತನ್ನ ಮಾವನು ಆತನ 100 ಮೊಮ್ಮಕ್ಕಳು ಉದ್ಯಾನದಲ್ಲಿ ಆಡುವುದನ್ನು ನೋಡುವಂತೆ ಮಾಡಲು ಕೇಳುತ್ತಾಳೆ. ಅವಳ ಬುದ್ಧಿವಂತಿಕೆಗೆ ಮೆಚ್ಚಿದ ಯಮ ಸತ್ಯವಾನ್‌ಗೆ ಜೀವ ಮರಳಿಸುತ್ತಾನೆ.
