Asianet Suvarna News Asianet Suvarna News

Kids Astrology : ಉಜ್ವಲ ಭವಿಷ್ಯಕ್ಕೆ ಮಕ್ಕಳು ಪ್ರತಿ ದಿನ ಮಾಡ್ಬೇಕು ಈ ಕೆಲಸ

ಈಗಿನ ಬ್ಯುಸಿ ಲೈಫ್ ನಲ್ಲಿ ಮಕ್ಕಳಿಗೆ ಸಮಯವೇ ಇಲ್ಲ. ರಾತ್ರಿ ತಡವಾಗಿ ಮಲಗುವ ಮಕ್ಕಳು ಬೆಳಿಗ್ಗೆ ಎದ್ದು ಸ್ಕೂಲಿಗೆ ಓಡ್ತಾರೆ. ಆದ್ರೆ ಬೆಳಿಗ್ಗೆ ಬೇಗ ಎದ್ದು ಕೆಲ ಕೆಲಸಗಳನ್ನು ನಿತ್ಯ ಮಾಡುವ ಮಕ್ಕಳ ಭವಿಷ್ಯ ಯಾವಾಗ್ಲೂ ಹಸನಾಗಿರುತ್ತದೆ.
 

Tips every child should follow everyday for their good future
Author
First Published Nov 12, 2022, 12:46 PM IST

ದಿನದ ಆರಂಭ ಚೆನ್ನಾಗಿದ್ರೆ ದಿನ ಉತ್ತಮವಾಗಿರುತ್ತೆ. ಪ್ರತಿ ದಿನ ಉತ್ತಮವಾಗಿದ್ರೆ ಭವಿಷ್ಯ ಚೆನ್ನಾಗಿರುತ್ತೆ. ಬೆಳಿಗ್ಗೆ ಫ್ರೆಶ್ ಆಗಿ ಏಳೋದು ಬಹಳ ಮುಖ್ಯ. ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೆ ಕೂಡ ಬೆಳಗಿನ ಬೆಳಕು ತಾಜಾತನ ನೀಡ್ಬೇಕು. ಬೆಳಿಗ್ಗೆ ಒಳ್ಳೆ ಮೂಡ್ ನಲ್ಲಿ ಎದ್ರೆ ಮಕ್ಕಳು ಫಟಾಫಟ್ ಅಂತ ಕೆಲಸ ಮಾಡ್ತಾರೆ. ಹಾಗೆ ಬೆಳಿಗ್ಗೆ ಕೆಲ ಕೆಲಸಗಳನ್ನು ಮಾಡಿದ್ರೆ ಅದು ಮಕ್ಕಳ ಉತ್ತಮ ಭವಿಷ್ಯಕ್ಕೆ ನೆರವಾಗುತ್ತದೆ. 

ಶಾಸ್ತ್ರಗಳಲ್ಲಿ ಕೂಡ ಮಕ್ಕಳು (Children) ಬೆಳಿಗ್ಗೆ ಎದ್ದ ತಕ್ಷಣ ಏನೇನು ಮಾಡಬೇಕು ಎಂಬುದನ್ನು ಹೇಳಲಾಗಿದೆ.  ಬೆಳಿಗ್ಗೆ ಎದ್ದ ನಂತರ ಮಕ್ಕಳು ಕೆಲ ಕೆಲಸ ಮಾಡಿದ್ರೆ ಇದ್ರಿಂದ ಅವರ ಬುದ್ಧಿ ಚುರುಕಾಗುತ್ತದೆ. ಸುಂದರ, ಆರೋಗ್ಯ (Health) ಕರ ಜೀವನಕ್ಕೆ ಆ ಕೆಲಸಗಳು ನೆರವಾಗುತ್ತವೆ.

ಬೆಳಿಗ್ಗೆ (Morning)  ಎದ್ದ ತಕ್ಷಣ ಮಕ್ಕಳು ಏನು ಮಾಡ್ಬೇಕು ಗೊತ್ತಾ?  

ತಂದೆ – ತಾಯಿಗೆ ನಮಸ್ಕಾರ : ಹಿಂದಿನ ಕಾಲದಲ್ಲಿ ಎದ್ದ ನಂತ್ರ ನಿತ್ಯ ಕರ್ಮ ಮುಗಿಸಿ ಮಕ್ಕಳು ತಂದೆ – ತಾಯಿ ಸೇರಿದಂತೆ ಮನೆಯ ಹಿರಿಯರಿಗೆ ನಮಸ್ಕಾರ ಮಾಡ್ತಿದ್ದರು. ಆದ್ರೆ ಈಗಿನ ದಿನಗಳಲ್ಲಿ ಈ ಪದ್ಧತಿ ಕಣ್ಣಿಗೆ ಕಾಣ್ತಿಲ್ಲ. ಇದನ್ನು ಅನೇಕರು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ  ಬೆಳಗ್ಗೆ ಎದ್ದ ನಂತರ ಎಲ್ಲಕ್ಕಿಂತ ಮೊದಲು ಮನೆಯಲ್ಲಿ ಇರುವ ತಂದೆ-ತಾಯಿ ಮತ್ತು ಹಿರಿಯರಿಗೆ ನಮಸ್ಕರಿಸಬೇಕು. ಹಿರಿಯರ ಆಶೀರ್ವಾದ ಬಹಳ ಮುಖ್ಯ. ಹಿರಿಯರ ಆಶೀರ್ವಾದವಿದ್ರೆ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಪಡೆಯಬಹುದು. ಮಕ್ಕಳಿಗೆ ಆರಂಭದಿಂದಲೇ ಈ ಅಭ್ಯಾಸ ಕಲಿಸಿದ್ರೆ ಅವರು ದೊಡ್ಡವರಾದ್ಮೇಲೆ ಹಿರಿಯರಿಗೆ ಗೌರವ ನೀಡುತ್ತಾರೆ. ಹಾಗೆಯೇ ತಗ್ಗಿ ಬಗ್ಗಿ ನಡೆಯುತ್ತಾರೆ. 

ಪ್ರತಿ ದಿನ ಬೆಳಿಗ್ಗೆ ಮಕ್ಕಳಿಗಿರಲಿ ವ್ಯಾಯಾಮ : ಆರೋಗ್ಯದಲ್ಲಿ ಸುಧಾರಣೆ ಕಾಣಲಿ ಎಂದು ಅನಾರೋಗ್ಯಕ್ಕೆ ಒಳಗಾದ್ಮೇಲೆ ವ್ಯಾಯಾಮ ಮಾಡಿದ್ರೆ ಪ್ರಯೋಜನವಿಲ್ಲ. ಜೀವನದ ಮೊದಲ ಸಂತೋಷವೆಂದರೆ ಆರೋಗ್ಯಕರ ದೇಹ. ದೇಹವು ಆರೋಗ್ಯವಾಗಿದ್ದರೆ, ಬುದ್ಧಿಯ ಬೆಳವಣಿಗೆಯೂ ವೇಗವಾಗಿರುತ್ತದೆ. ಯೋಗ, ವ್ಯಾಯಾಮಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಅಭ್ಯಾಸ ಮಾಡಿಸಬೇಕು. ಬಾಲ್ಯದಿಂದ ಮಕ್ಕಳು ಪ್ರತಿ ದಿನ ಬೆಳಿಗ್ಗೆ ಯೋಗಾಭ್ಯಾಸ ಮಾಡ್ತಾ ಬಂದ್ರೆ ಅವರು ಅನೇಕ ರೋಗದಿಂದ ದೂರವಿರಬಹುದು. ಆದ್ದರಿಂದ ಮಕ್ಕಳು ದಿನನಿತ್ಯ ವ್ಯಾಯಾಮ ಮಾಡಿ ಸ್ವಲ್ಪ ಹೊತ್ತು ಧ್ಯಾನ ಮಾಡಬೇಕು ಎಂದು ಹಿರಿಯರು, ಶಾಸ್ತ್ರಗಳು ಹೇಳುತ್ತವೆ. ಇದು ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ.  ಯೋಗದಿಂದ ಸಾಕಷ್ಟು ಪ್ರಯೋಜ ಮಕ್ಕಳಿಗಾಗುತ್ತದೆ. 
 
ದೇವರ ಪ್ರಾರ್ಥನೆ, ಪೂಜೆ : ಪ್ರತಿ ದಿನ ದೇವರ ಪೂಜೆ ಹಾಗೂ ಪ್ರಾರ್ಥನೆ ಮಾಡುವುದು ಕೂಡ ಬಹಳ ಮುಖ್ಯ. ಮಕ್ಕಳಲ್ಲಿ ದೇವರ ಮೇಲಿನ ನಂಬಿಕೆ ಭಾವನೆ ಜಾಗೃತಗೊಂಡರೆ ಅವರ ಗಮನ ಚಂಚಲಗೊಳ್ಳುವುದಿಲ್ಲ. ಹಾಗಾಗಿ ಪ್ರತಿನಿತ್ಯ ಮಕ್ಕಳಿಗೆ ಗಣಪತಿ ಆರಾಧನೆ ಮಾಡುವಂತೆ ಪಾಲಕರು ಕಲಿಸಿಕೊಡಬೇಕು. ಗಣೇಶನ ಪೂಜೆ ಮಾಡುವುದ್ರಿಂದ ಮಕ್ಕಳ ಬುದ್ಧಿ ಚುರುಕಾಗುತ್ತದೆ. ಜೊತೆಗೆ ವಿದ್ಯಾರ್ಥಿ ಜೀವನ ಸಮೃದ್ಧವಾಗಿರುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸ ಬಹಳ ಮುಖ್ಯ.

Vastu Tips: ವಿವಾಹಿತ ಮಹಿಳೆ ಈ ದಿಕ್ಕಲ್ಲಿ ಕಾಲಿಟ್ಟು ಮಲಗಿದ್ರೆ ಹಣ ನಷ್ಟವಾಗುತ್ತೆ!

ಪ್ರತಿ ದಿನ ಸ್ನಾನ : ಬಾಹ್ಯ ಮತ್ತು ಆಂತರಿಕ ಸ್ವಚ್ಛತೆಗಾಗಿ ಸ್ನಾನಕ್ಕೆ ಧರ್ಮದಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಮಕ್ಕಳು ಪ್ರತಿದಿನ ಸ್ನಾನ ಮಾಡಬೇಕು. ಇದ್ರಿಂದ ಮಕ್ಕಳ ಮನಸ್ಸು ಹಾಗೂ ದೇಹ ಎರಡೂ ಶುದ್ಧವಾಗುತ್ತದೆ. ಬೆಳಿಗ್ಗೆ ಸ್ನಾನ ಮಾಡಿದ ನಂತರ ತಮ್ಮ ಕೆಲಸವನ್ನು ಮಾಡಲು ಕಲಿಸಬೇಕು. ಸ್ನಾನ ಮಾಡಿ ದೇವರ ಆರಾಧನೆ ಮಾಡಿದ್ರೆ ಲಕ್ಷ್ಮಿ ಮತ್ತು ಗಣಪತಿ ಕೃಪೆ ಸದಾ ಮಕ್ಕಳ ಮೇಲಿರುತ್ತದೆ.

ಮದುವೆಯಂಥ ಶುಭ ಸಂದರ್ಭದಲ್ಲಿಯೂ ಕಪ್ಪು ಬಳೆ ಧರಿಸುವುದೇಕೆ?

ಬೆಳಿಗಿನ ಓದು : ಬೆಳಿಗ್ಗೆ ಎದ್ದು ಓದುವುದು ಒಳ್ಳೆಯ ಅಭ್ಯಾಸ. ಬೆಳಿಗ್ಗಿನ ಶಾಂತ ವಾತಾವರಣದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಿದ್ರೆ ಓದಿದ್ದು ನೆನಪಿನಲ್ಲಿ ಇರುತ್ತದೆ. 
 

Follow Us:
Download App:
  • android
  • ios