Asianet Suvarna News Asianet Suvarna News

ಮದುವೆಯಂಥ ಶುಭ ಸಂದರ್ಭದಲ್ಲಿಯೂ ಕಪ್ಪು ಬಳೆ ಧರಿಸುವುದೇಕೆ?

ಮದುವೆ ಅಂದ್ರೆ ಶುಭ ಕಾರ್ಯ. ಹಿಂದೂ ಧರ್ಮದಲ್ಲಿ ಶುಭ ಸಮಾರಂಭಗಳಲ್ಲಿ ಕಪ್ಪು ಬಣ್ಣವನ್ನು ದೂರವಿಡಲಾಗುತ್ತದೆ. ಆದ್ರೆ ಮದುವೆಯಲ್ಲಿ ವಧುವಿಗೆ ಕಪ್ಪು ಬಳೆಗಳನ್ನು ಹಾಕಲಾಗುತ್ತದೆ. ಇದಕ್ಕೆ ವಿಶೇಷ ಅರ್ಥವಿದೆ. 
 

Black Bangles Significance For Brides
Author
First Published Nov 11, 2022, 3:30 PM IST

ಹಿಂದೂ ವಿವಾಹದಲ್ಲಿ ಅನೇಕ ಪದ್ಧತಿಗಳನ್ನು ಆಚರಣೆ ಮಾಡಲಾಗುತ್ತದೆ. ಅದ್ರಲ್ಲೂ ವಧು ಹೆಚ್ಚು ಸಂಪ್ರದಾಯಗಳನ್ನು ಪಾಲನೆ ಮಾಡಬೇಕಾಗುತ್ತದೆ. ಕೆಲ ಪದ್ಧತಿಗಳನ್ನು ಜನರು ಶತಮಾನಗಳಿಂದ ಆಚರಿಸಿಕೊಂಡು ಬರ್ತಿದ್ದಾರೆ. ಆದ್ರೆ ಯಾಕೆ ಆಚರಣೆ ಮಾಡ್ತಿದ್ದೇವೆ ಎಂಬುದು ಜನರಿಗೆ ತಿಳಿದಿಲ್ಲ.  

ಮದುವೆ (Marriage) ಸಂದರ್ಭದಲ್ಲಿ ವಧು ಕೆಂಪು (Red) ಬಳೆಗಳೊಂದಿಗೆ ಕಪ್ಪು ಬಳೆ (Bangles) ಗಳನ್ನು ಧರಿಸುವುದು ಸಂಪ್ರದಾಯ.  ಹಿಂದೂ ಧರ್ಮದಲ್ಲಿ ಕಪ್ಪು (Black) ಬಣ್ಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳಲ್ಲಿ ಕಪ್ಪು ಬಣ್ಣದ ಬಟ್ಟೆ, ಬಳೆಯನ್ನು ಧರಿಸುವುದಿಲ್ಲ. ವಿಶೇಷವಾಗಿ ಮದುವೆಯ ಸಂದರ್ಭದಲ್ಲಿ ಕಪ್ಪು ಬಣ್ಣವನ್ನು ವಧುವಿನಿಂದ ದೂರ ಇಡಲಾಗುತ್ತದೆ. ಆದರೆ ಕೆಲವೆಡೆ ವಧು ಕಪ್ಪು ಬಳೆಗಳನ್ನು ಮದುವೆ ಸಂದರ್ಭದಲ್ಲಿ ಧರಿಸ್ತಾಳೆ. ಮದುವೆ ಮುಗಿದ ತಕ್ಷಣ ಅದನ್ನು ತೆಗೆಯೋದಿಲ್ಲ. ಕೆಲ ದಿನ ಕಪ್ಪು ಬಳೆಗಳನ್ನು ಧರಿಸಿರುತ್ತಾಳೆ. ಅದಕ್ಕೆ ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ. 

ಕಪ್ಪು ಬಣ್ಣವನ್ನು ಶುಭ ಸಮಾರಂಭಗಳಲ್ಲಿ ಬಳಸಲಾಗುವುದಿಲ್ಲ. ಆದರೆ ಕಪ್ಪು ಕೆಟ್ಟದ್ದಲ್ಲ ಎನ್ನುತ್ತದೆ ಶಾಸ್ತ್ರ. ಕಪ್ಪು ಬಣ್ಣವು ಸ್ವತಃ ನಕಾರಾತ್ಮಕತೆಯನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ. ಹಾಗಾಗಿ ಅದನ್ನು ಮಂಗಳಕರ ಸಂದರ್ಭಗಳಲ್ಲಿ ಬಳಸಬಹುದು. ನಕಾರಾತ್ಮಕ ಶಕ್ತಿ ನಾಶಪಡಿಸುವ ಉದ್ದೇಶದಿಂದಲೇ ವಧುವಿಗೆ ಕಪ್ಪು ಬಳೆಗಳನ್ನು ನೀಡಲಾಗುತ್ತದೆ. 

Vastu Tips: ವಿವಾಹಿತ ಮಹಿಳೆ ಈ ದಿಕ್ಕಲ್ಲಿ ಕಾಲಿಟ್ಟು ಮಲಗಿದ್ರೆ ಹಣ ನಷ್ಟವಾಗುತ್ತೆ!

ಕಪ್ಪು ಗಾಜಿನ ಬಳೆ ಧರಿಸಲು ಕಾರಣಗಳು : ಉತ್ತರ ಭಾರತದ ಅನೇಕ ಸ್ಥಳಗಳಲ್ಲಿ ವಧು ಕಪ್ಪು ಬಣ್ಣದ ಬಳೆಗಳನ್ನು ಧರಿಸುವುದನ್ನು ನೀವು ನೋಡಬಹುದು. ಕೆಂಪು ಬಳೆಗಳ ಮಧ್ಯೆ ಕಪ್ಪು ಬಳೆಗಳನ್ನು ಹಾಕಿರಲಾಗುತ್ತದೆ. ವಧುವಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎನ್ನುವ ಕಾರಣಕ್ಕೆ ಕಪ್ಪು ಬಳೆಗಳನ್ನು ತೊಡಿಸಲಾಗುತ್ತದೆ. ನಕಾರಾತ್ಮಕ ಶಕ್ತಿ ನಾಶಕ್ಕೂ ಕಪ್ಪು ಬಳೆಗಳನ್ನು ಹಾಕಲಾಗುತ್ತದೆ.  ಇದು ಮಾತ್ರವಲ್ಲದೆ, ಕಪ್ಪು ಬಳೆಗಳು ಆರ್ಥಿಕ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ಗಂಡನ ಆರ್ಥಿಕ ಪ್ರಗತಿಗಾಗಿ ವಧು ಕೂಡ ಕಪ್ಪು ಬಳೆಯನ್ನು ಧರಿಸಬೇಕು. ಕಪ್ಪು ಬಣ್ಣವು ಗಾಢವಾಗಿರುತ್ತದೆ.  ಇದು ಸಂಬಂಧ ಆಳವಾಗಲು ನೆರವಾಗುತ್ತದೆ. ಹಾಗಾಗಿ ವಧು ಕಪ್ಪು ಬಳೆಯನ್ನು ಧರಿಸಬೇಕು.

ಕಪ್ಪು ಬಳೆಯನ್ನು ಎಷ್ಟು ದಿನ ಧರಿಸಬೇಕು ? : ಕಪ್ಪು ಬಣ್ಣದ ಬಳೆಗಳನ್ನು ನವ ವಧುಗಳು ಸುಮಾರು 6 ತಿಂಗಳ ಕಾಲ ಧರಿಸುತ್ತಾರೆ. ಈ 6 ತಿಂಗಳಲ್ಲಿ  ಪ್ರತಿ 10 ದಿನಗಳಿಗೊಮ್ಮೆ ಅವಳು ತನ್ನ ಬಳೆಯನ್ನು ಬದಲಾಯಿಸಬೇಕಾಗುತ್ತದೆ. ಬಳೆಯನ್ನು ಬದಲಾಯಿಸುವ ಮೊದಲು ಬಳೆ ಒಡೆದ್ರೆ  ನಕಾರಾತ್ಮಕ ಶಕ್ತಿಯ ನಾಶವಾಗಿದೆ ಎಂದರ್ಥ. 

ಬದಲಿಸಿದ ಬಳೆಯನ್ನು ಏನು ಮಾಡ್ಬೇಕು ? : ಕಪ್ಪು ಬಳೆಯನ್ನು ಬದಲಾಯಿಸಿದ ನಂತರ ಹಳೆಯ ಕಪ್ಪು ಬಳೆಯನ್ನು ಬೇರೆ ಯಾವುದೇ ಮಹಿಳೆಗೆ ಧರಿಸಲು ನೀಡಬಾರದು. ಅದನ್ನು ಪವಿತ್ರ ನದಿಗೆ ಇಲ್ಲವೆ ಹೊಲಕ್ಕೆ ಹಾಕಬೇಕು.     

ನಕಾರಾತ್ಮಕ ಶಕ್ತಿಯನ್ನು (Negative Energy) ದೂರವಿಡುತ್ತೆ ಕಬ್ಬಿಣದ ಬಳೆ : ಇನ್ನು ಕೆಲವು ಕಡೆ ವಧುವಿಗೆ ಕಬ್ಬಿಣದ ಬಳೆ ಅಥವಾ ಕಬ್ಬಿಣದ ಉಂಗುರವನ್ನು ಹಾಕಲಾಗುತ್ತದೆ. ಕಬ್ಬಿಣವು ಶನಿಯ ಸಂಕೇತವಾಗಿರುವುದರಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಕಪ್ಪು ಮತ್ತು ನೀಲಿ ಬಣ್ಣಗಳು ಶನಿಗ್ರಹವನ್ನು ಪ್ರತಿನಿಧಿಸುತ್ತವೆ. ಪೂಜೆಯ ಸಂದರ್ಭಗಳಲ್ಲಿ ಈ ಬಣ್ಣವನ್ನು ಬಳಸುವುದಿಲ್ಲ. ಆದರೆ ಈ ಎರಡೂ ಬಣ್ಣಗಳು ಅಶುಭವಲ್ಲ ಎನ್ನುತ್ತದೆ ಶಾಸ್ತ್ರ.

Astrology Tips : ಅಶ್ವತ್ಥ ಮರಕ್ಕೆ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಪೂಜೆ ಮಾಡ್ಬೇಡಿ

ಗಾಜಿಗಿದೆ ಮಹತ್ವ (Significance for Glass) : ಹಿಂದೂ ಧರ್ಮದಲ್ಲಿ ಗಾಜನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಕಪ್ಪು ಬಳೆಯನ್ನು ಧರಿಸಬೇಕಾದರೆ ಅದನ್ನು ಯಾವುದ್ರಿಂದ ತಯಾರಿಸಲಾಗಿದೆ ಎಂಬುದನ್ನು ಗಮನಿಸಿ. ಗಾಜಿನಿಂದ ತಯಾರಿಸಿದ ಕಪ್ಪು ಬಳೆಗಳನ್ನು ಮಾತ್ರ ಧರಿಸಿ. ಲೋಹ ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸಿದ ಕಪ್ಪು ಬಳೆಗಳನ್ನು ಧರಿಸಬೇಡಿ.

Follow Us:
Download App:
  • android
  • ios