Astrology Tips: ಕಾಲ ಮೇಲೆ ಕಾಲಾಕಿ ಕೂತ್ಕೊಂಡು ಹಣ ಕಳ್ಕೊಳ್ಬೇಡಿ!
ನಾವು ಕುಳಿತುಕೊಳ್ಳುವ ಭಂಗಿ ಕೂಡ ನಮ್ಮ ಆರ್ಥಿಕ ಸ್ಥಿತಿಯನ್ನು ನಿರ್ಧರಿಸುತ್ತದೆ. ನೀವು ಹೇಗೇಗೋ ಕುಳಿತ್ಕೊಂಡ್ರೆ ಲಕ್ಷ್ಮಿ ನಿಮ್ಮ ಮೇಲೆ ಮುನಿಸಿಕೊಳ್ಬಹುದು. ಆಯಸ್ಸು ಕೂಡ ಕಡಿಮೆ ಆಗ್ಬಹುದು. ಹಾಗಾಗಿ ಕುಳಿತುಕೊಳ್ಳುವಾಗ ಕೆಲ ವಿಷ್ಯ ನೆನಪಿರಲಿ.
ಹಿಂದೂ ಧರ್ಮ (Hinduism) ದಲ್ಲಿ ಅನೇಕ ಪದ್ಧತಿ ಮತ್ತು ನಿಯಮಗಳಿವೆ. ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಹಿರಿಯರು ಶತಮಾನಗಳಿಂದ ಈ ನಿಯಮಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಹಿಂದೂ ಧರ್ಮದಲ್ಲಿರುವ ಅನೇಕ ನಿಯಮಗಳು ಉತ್ತಮ ರೀತಿಯಲ್ಲಿ ಜೀವನ ನಡೆಸುವುದನ್ನು ಕಲಿಸುತ್ತದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡ್ರೆ ಜೀವನ ಅರ್ಥಪೂರ್ಣವಾಗುತ್ತದೆ. ಸೂರ್ಯಾಸ್ತ (Sunset) ವಾದ ಮೇಲೆ ಮನೆಯನ್ನು ಪೊರಕೆಯಿಂದ ಸ್ವಚ್ಛಗೊಳಿಸಬಾರದು, ಗರ್ಭಿಣಿ ನದಿ ದಾಟಬಾರದು, ಸಂಜೆ ಬಾಗಿಲಲ್ಲಿ ಕೂರಬಾರದು, ಸ್ನಾನ (Bath) ಮಾಡಿಯೇ ದೇವರ ಮನೆ ಪ್ರವೇಶ ಮಾಡಬೇಕು ಹೀಗೆ ಹಲವಾರು ಧಾರ್ಮಿಕ ನಂಬಿಕೆ (Religious Belief)ಗಳು ನಮ್ಮ ನಡುವೆ ಇವೆ. ಎಡಗೈಯಿಂದ ಆಹಾರವನ್ನು ಸೇವಿಸಬಾರದು ಎಂದು ಧರ್ಮ ಶಾಸ್ತ್ರಗಳಲ್ಲೂ ಹೇಳಲಾಗುತ್ತದೆ. ಹಾಗೆಯೇ ಧರ್ಮ ಗ್ರಂಥದಲ್ಲಿ ಇನ್ನೊಂದು ವಿಷ್ಯವನ್ನು ಹೇಳಲಾಗಿದೆ. ಅದು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು.
ಸಾಮಾನ್ಯವಾಗಿ ಹಲವರಿಗೆ ಇಂತಹ ಅಭ್ಯಾಸವಿರುತ್ತದೆ. ಎಲ್ಲಿ ಕುಳಿತ್ರೂ ಒಂದು ಕಾಲಿನ ಮೇಲೆ ಇನ್ನೊಂದು ಕಾಲನ್ನು ಹಾಕಿರ್ತಾರೆ. ಇದನ್ನು ಅಗೌರವ ಎಂದೂ ಹೇಳಲಾಗುತ್ತದೆ. ಹಿರಿಯರ ಮುಂದೆ ಕಾಲಿನ ಮೇಲೆ ಕಾಲು ಹಾಕಿ ಕುಳಿದ್ರೆ ಇದು ಹಿರಿಯರಿಗೆ ಮಾಡುವ ಅಗೌರವ ಎನ್ನಲಾಗುತ್ತದೆ. ಆದ್ರೆ ಅನೇಕರಿಗೆ ಇದು ಅಭ್ಯಾಸವಾಗಿರುತ್ತದೆ. ಅದನ್ನು ಬಿಡುವುದು ಸುಲಭವಲ್ಲ. ಹಾಗೆ ಎರಡೂ ಕಾಲಿನ ಪಾದಗಳನ್ನು ನೆಲಕ್ಕೆ ಊರಿ ಕುಳಿತುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ನೀವೂ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ತಿದ್ದರೆ ಇಂದೇ ಈ ಅಭ್ಯಾವ ಬಿಡಲು ಪ್ರಯತ್ನಿಸಿ. ಯಾಕೆಂದ್ರೆ ಈ ಅಭ್ಯಾಸ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಧರ್ಮಗ್ರಂಥಗಳಲ್ಲಿಯೂ ಇದನ್ನು ತಪ್ಪೆಂದು ಉಲ್ಲೇಖಿಸಲಾಗಿದೆ. ಕಾಲಿನ ಮೇಲೆ ಕಾಲು ಹಾಕಿ ಯಾವಾಗ ಕುಳಿತುಕೊಳ್ಳಬಾರದು ಹಾಗೆ ಏಕೆ ಕುಳಿತುಕೊಳ್ಳಬಾರದು, ಅದ್ರಿಂದ ಆಗುವ ನಷ್ಟವೇನು ಎಂಬುದನ್ನು ಕೂಡ ಗ್ರಂಥಗಳಲ್ಲಿ ಹೇಳಲಾಗಿದೆ. ಹೀಗೆ ಕುಳಿತುಕೊಂಡ್ರೆ ಏನಾಗುತ್ತೆ ಎನ್ನುವ ಬಗ್ಗೆ ನಾವಿಂದು ಹೇಳ್ತೇವೆ.
ದೀಪ ಹಚ್ಚುವಾಗ ಈ ನಿಯಮಗಳನ್ನು ಪಾಲಿಸುತ್ತಿದ್ದೀರಾ?
ಧರ್ಮಗ್ರಂಥಗಳ ಪ್ರಕಾರ, ಒಬ್ಬ ವ್ಯಕ್ತಿಯು ಯಾವುದೇ ಕೆಲಸದ ಮಾಡಿದರೂ ಅದು ದೇವಾನು ದೇವತೆಗಳಿಗೆ ಸಂಬಂಧಿಸಿದೆ. ಕೆಟ್ಟ ಅಭ್ಯಾಸ ಮಾಡುವ ವ್ಯಕ್ತಿಗೆ ದೇವರು ದಯೆ ತೋರುವುದಿಲ್ಲ. ಅಂಥವರಿಗೆ ದೇವರ ಆಶೀರ್ವಾದವಿರುವುದಿಲ್ಲ. ಕಾಲಿನ ಮೇಲೆ ಕಾಲು ಹಾಕಿ ಕುಳಿತ ವ್ಯಕ್ತಿಗೂ ದೇವರು ಕೃಪೆ ತೋರುವುದಿಲ್ಲವೆಂದು ನಂಬಲಾಗಿದೆ.
ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಅಶುಭವೆಂದು ಏಕೆ ಪರಿಗಣಿಸಲಾಗುತ್ತದೆ? :
ಲಕ್ಷ್ಮಿ ಮುನಿಸು : ಶಾಸ್ತ್ರಗಳ ಪ್ರಕಾರ, ಸಂಪತ್ತಿನ ಅಧಿದೇವತೆ ಲಕ್ಷ್ಮಿ, ಕಾಲಿನ ಮೇಲೆ ಕಾಲು ಹಾಕಿ ಕುಳಿತರೆ ಕೋಪಗೊಳ್ಳುತ್ತಾಳೆ. ಅದರಲ್ಲೂ ಸಂಜೆಯ ವೇಳೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು. ಸಂಜೆಯ ಸಮಯದಲ್ಲಿ ಲಕ್ಷ್ಮಿ ಮನೆ ಪ್ರವೇಶ ಮಾಡುತ್ತಾಳೆ. ಆ ವೇಳೆ ಕಾಲಿನ ಮೇಲೆ ಕಾಲು ಹಾಕಿ ಕುಳಿತ್ರೆ ಅಹಂಕಾರ ಪ್ರದರ್ಶನ ಮಾಡಿದಂತೆ. ತಾಯಿಗೆ ಅವಮಾನ ಮಾಡಿದಂತಾಗುತ್ತದೆ ಎಂಬ ನಂಬಿಕೆಯಿದೆ.
ಆರ್ಥಿಕ ಸಮಸ್ಯೆ : ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ವ್ಯಕ್ತಿಯು ಎಂದಿಗೂ ಹಣವನ್ನು ಗಳಿಸಲು ಸಾಧ್ಯವಿಲ್ಲ ಎಂದು ನಂಬಲಾಗಿದೆ. ಅವರು ಯಾವಾಗಲೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
ಈ ರೀತಿ ವಿಮಾನದ ಕನಸು ಬಿದ್ರೆ ನಿಮ್ಮ ಆಸೆಗಳೆಲ್ಲ ಈಡೇರುತ್ತವೆ ಎಂದರ್ಥ!
ಮಲಗುವಾಗ್ಲೂ ಇದು ನೆನಪಿರಲಿ : ಕುಳಿತುಕೊಳ್ಳುವಾಗ ಮಾತ್ರವಲ್ಲ ಬಹುತೇಕರು ಕಾಲಿನ ಮೇಲೆ ಕಾಲಿಟ್ಟು ಮಲಗ್ತಾರೆ. ಇದು ಕೂಡ ಶುಭವಲ್ಲ. ಕಾಲಿನ ಮೇಲೆ ಕಾಲಿಟ್ಟು ಮಲಗಿದ್ರೆ ವ್ಯಕ್ತಿಯ ವಯಸ್ಸು ಕಡಿಮೆಯಾಗುತ್ತದೆ. ಹಾಗಾಗಿ ಕಾಲಿನ ಮೇಲೆ ಕಾಲು ಹಾಕಿ ಮಲಗುವುದನ್ನು ತಪ್ಪಿಸಿ. ಇಷ್ಟೇ ಅಲ್ಲ ಕೆಲ ಅನಾರೋಗ್ಯಕ್ಕೆ ಇದು ಕಾರಣವಾಗುತ್ತದೆ. ಹಾಗೆ ಕೆಲ ಅನಾರೋಗ್ಯದ ಲಕ್ಷಣವೂ ಹೌದು.