Mole On Palm: ನಿಮ್ಮ ಅಂಗೈಯಲ್ಲಿ ಶ್ರೀಮಂತಿಕೆಯ ಮಚ್ಚೆ ಇದೆಯೇ?

ದೇಹದ ಮೇಲಿನ ಮಚ್ಚೆಗಳು ನಮ್ಮ ಭವಿಷ್ಯದ ಬಗ್ಗೆ ಸಾಕಷ್ಟನ್ನು ಹೇಳುತ್ತವೆ. ಅಂತೆಯೇ ಅಂಗೈ ಮಚ್ಚೆ ನಿಮ್ಮ ಬಗ್ಗೆ ಸಾಕಷ್ಟನ್ನು ಹೇಳುತ್ತದೆ. ಅಂದ ಹಾಗೆ ನಿಮ್ಮ ಅಂಗೈಯಲ್ಲಿ ಶ್ರೀಮಂತಿಕೆ ಸೂಚಿಸೋ ಮಚ್ಚೆ ಇದೆಯೇ?

Mole on hand tells your luck and nature skr

ದೇಹದಲ್ಲಿರುವ ಮಚ್ಚೆಗಳು(moles) ವ್ಯಕ್ತಿಯ ಸೌಂದರ್ಯ ಹೆಚ್ಚಿಸುತ್ತವೆ. ಆದರೆ, ಕೆಲವರಿಗೆ ತಮ್ಮ ದೇಹದ ಮಚ್ಚೆಗಳು ಇಷ್ಟವಾಗುವುದಿಲ್ಲ. ಸಾಮುದ್ರಿಕಾ ಶಾಸ್ತ್ರ(oceanography)ದಲ್ಲಿ ಈ ಮಚ್ಚೆಗಳಿಗೆ ವಿಶೇಷ ಅರ್ಥವಿದೆ. ಅವು ನಮ್ಮ ಭವಿಷ್ಯ ಸೂಚಕವಾಗಿವೆ. ಅಂಗೈ ನೋಡಿ ಭವಿಷ್ಯ ಹೇಳೋ ಪದ್ಧತಿ ನಮ್ಮಲ್ಲಿ ಮುಂಚೆಯಿಂದಲೂ ಇದೆ. ಇದೇ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಅಂಗೈ ರೇಖೆಗಳನ್ನು ನೋಡಿ ಭವಿಷ್ಯ ಹೇಳುವಂತೆ ಅಂಗೈಲಿರುವ ಮಚ್ಚೆಗಳನ್ನು ನೋಡಿಯೂ ಭವಿಷ್ಯ ಹೇಳಲಾಗುತ್ತದೆ. ಜೊತೆಗೆ, ಹಸ್ತದಲ್ಲಿ ಸೂರ್ಯ, ಚಂದ್ರ, ಬುಧ, ಗುರು, ಶುಕ್ರ ಮತ್ತು ಶನಿ ಗ್ರಹಗಳ ಪ್ರತೀಕವಾಗಿ ಪರ್ವತಗಳಿರುತ್ತವೆ. 

ಕೈಲಿರುವ ಮಚ್ಚೆಗಳ ಪ್ರಾಮುಖ್ಯತೆ
ಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ಅಂಗೈ(palm)ಯಲ್ಲಿ ಇರುವ ಮಚ್ಚೆಗಳನ್ನು ವಿವರವಾಗಿ ವಿವರಿಸಲಾಗಿದೆ. ಅಂಗೈಯಲ್ಲಿನ ಕೆಲವು ಮಚ್ಚೆಗಳು ಶುಭ ಮತ್ತು ಕೆಲವು ಅಶುಭಕರವೆಂದು ಹೇಳಲಾಗುತ್ತದೆ. ಅಂಗೈಯಲ್ಲಿ ಕೆಲವು ನಿರ್ದಿಷ್ಟ ಸ್ಥಳದಲ್ಲಿ ಮಚ್ಚೆ ಇದ್ದರೆ ಅನೇಕರು ಶ್ರೀಮಂತ(rich)ರಾಗುತ್ತಾರೆ ಎಂದು ಹೇಳಲಾಗುತ್ತದೆ. ಇಂಥ ಮಚ್ಚೆ ನಿಮಗೂ ಇದೆಯೇ?

ಶ್ರೀಮಂತಿಕೆಯ ಮಚ್ಚೆ
ಬಲ ಅಂಗೈಯ ಮೇಲಿನ ಭಾಗದಲ್ಲಿ ಮಚ್ಚೆ ಇದ್ದರೆ ಅದು ತುಂಬಾ ಮಂಗಳಕರ(auspecious)ವೆಂದು ಪರಿಗಣಿಸಲಾಗುತ್ತದೆ. ಅಂತಹ ಮಚ್ಚೆಯು ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ. ಮತ್ತೊಂದೆಡೆ, ಎಡಗೈಯ ಮೇಲಿನ ಅಂಗೈಯಲ್ಲಿ ಮಚ್ಚೆ ಇರುವುದರಿಂದ, ಒಬ್ಬ ವ್ಯಕ್ತಿಯು ಗಳಿಸಿದ ಹಣವು ತಕ್ಷಣವೇ ಖರ್ಚಾಗುತ್ತದೆ.

ಹಾರ್ಟ್ ಪ್ರಾಬ್ಲಂನಿಂದ ಪಾರಾಗಲು ಜ್ಯೋತಿಷ್ಯ ಉಪಾಯ!

ಹೆಬ್ಬೆರಳಿನ ಮೇಲೆ ಮಚ್ಚೆ 
ಹೆಬ್ಬೆರಳಿ(thumb)ನ ಮೇಲೆ ಮಚ್ಚೆ ಇರುವವರು ತುಂಬಾ ಶ್ರಮಜೀವಿಗಳು ಎಂದು ನಂಬಲಾಗಿದೆ. ಅವರ ನಡವಳಿಕೆ ಎಲ್ಲರೊಂದಿಗೆ ಚೆನ್ನಾಗಿರುತ್ತೆ. ಅಂತಹವರನ್ನು ಸಮಾಜ ತುಂಬಾ ಗೌರವಿಸುತ್ತದೆ.

ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಅಂಗೈಯ ಚಂದ್ರ ಪರ್ವತದ ಮೇಲೆ ಮಚ್ಚೆ ಹೊಂದಿದ್ದರೆ, ಆತನು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ಜನರು ಅಸ್ಥಿರ ಮತ್ತು ಪ್ರಕ್ಷುಬ್ಧರಾಗಿರುತ್ತಾರೆ. ಅಂಥವರು ಪ್ರೀತಿಯಲ್ಲಿಯೂ ವಿಫಲರಾಗುತ್ತಾರೆ.

ತೂಕ ಹೆಚ್ಚಾಗಿದ್ರೆ ಜ್ಯೋತಿಷ್ಯದ ಈ ಕ್ರಮ ಅನುಸರಿಸಬಹುದು!

ಈ ಜನರು ಅದೃಷ್ಟವಂತರು
ಕಿರುಬೆರಳಿನಲ್ಲಿ(little finger) ಮಚ್ಚೆ ಇರುವವರು ತುಂಬಾ ಅದೃಷ್ಟವಂತರು. ಅಂಥ ಜನರು ಎಂದಿಗೂ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ, ಆದರೆ ಹಣವಿದ್ದೂ ಅವರು ಜೀವನದಲ್ಲಿ ಅತೃಪ್ತರಾಗಿರುತ್ತಾರೆ. ಅವರು ಬೇರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಸ್ಯೆಗಳು ಆರೋಗ್ಯ ಮತ್ತು ಪ್ರೀತಿಯ ಜೀವನಕ್ಕೆ ಸಂಬಂಧಿಸಿರಬಹುದು.

ದಾಂಪತ್ಯ ಸಮಸ್ಯೆ
ತಮ್ಮ ಅಂಗೈಯ ಶುಕ್ರ ಪ್ರದೇಶದಲ್ಲಿ ಮಚ್ಚೆ ಇರುವವರು ವೈವಾಹಿಕ ಜೀವನ(married life)ದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಣ್ಣಪುಟ್ಟ ವಿಷಯಗಳಿಗೂ ಪಾಲುದಾರರೊಂದಿಗೆ ಜಗಳ ಮಾಡಿಕೊಳ್ಳುತ್ತಾರೆ. ಶುಕ್ರ ಪರ್ವತವು ಹೆಬ್ಬೆರಳು ಮತ್ತು ಕೈಯ ಉಳಿದ ಭಾಗವನ್ನು ಸಂಪರ್ಕಿಸುವ ಪ್ರದೇಶವಾಗಿದೆ.

ಸರ್ಕಾರಿ ಉದ್ಯೋಗ
ಯಾರಿಗಾದರೂ ಉಂಗುರದ ಬೆರಳಿನಲ್ಲಿ ಮಚ್ಚೆ ಇದ್ದರೆ, ಅವರು ಸರ್ಕಾರಿ ಉದ್ಯೋಗವನ್ನು ಪಡೆಯಬಹುದು. ಅಂಥವರು ಸ್ವಲ್ಪ ಶ್ರಮ ಹಾಕಿದರೂ ಸಾಕು, ಸರ್ಕಾರಿ ನೌಕರಿ ಸಿಗುತ್ತದೆ. ಅಲ್ಲದೆ, ಅವರು ಜೀವನದಲ್ಲಿ ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.

ಇಷ್ಟೇ ಅಲ್ಲದೆ, ಹಸ್ತದಲ್ಲಿ ಚಕ್ರದ ಚಿಹ್ನೆ ಇದ್ದರೆ ಅಂಥವರು ಜೀವನದಲ್ಲಿ ಯಶಸ್ಸನ್ನು ಪಡೆಯುವುದು ಖಚಿತ, ಅವರಿಗೆ ಬಯಸಿದ್ದೆಲ್ಲ ಬಂದೊದಗುತ್ತದೆ ಎನ್ನಲಾಗುತ್ತದೆ. ಇದಲ್ಲದೆ, ವಿಶೇಷವಾಗಿ ಹುಡುಗಿಯರ ಹಸ್ತದಲ್ಲಿ ಮೀನಿನ ಚಿಹ್ನೆ ಅಥವಾ ಆಕಾರಗಳಿದ್ದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios