Asianet Suvarna News Asianet Suvarna News

ಹಣಕಾಸು ಸಮೃದ್ಧಿಗೆ ಮನೆಯಲ್ಲಿರಲಿ ಈ ಶಂಖ!

ಗೋವಿನ ಮುಖದ ರೀತಿಯೇ ಕಾಣುವ ಈ ಶಂಖವು ಅತ್ಯಂತ ಅಪರೂಪದ ಶಂಖವಾಗಿದೆ. ಹಾಗಾಗಿ ಇದಕ್ಕೆ ಕಾಮಧೇನು ಅಂದರೆ ಗೋವಿನ ಶಂಖವೆಂದು ಕರೆಯುತ್ತಾರೆ. ಈ ಶಂಖವನ್ನು ಮನೆಯಲ್ಲಿಟ್ಟುಕೊಂಡರೆ ಶಾಂತಿ-ನೆಮ್ಮದಿ ಮತ್ತು ಸುಖ ಜೀವನ ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ ಇದರಿಂದ ಸಂಪತ್ತು ಸಹ ವೃದ್ಧಿಯಾಗುತ್ತದೆ.
 

Keep this conch for economic prosperity and many other benefits at home
Author
Bangalore, First Published Jun 4, 2022, 8:26 PM IST

ಪುರಾಣಗಳಲ್ಲಿ ಹೇಳಿರುವ ಅನೇಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದರಿಂದ ಸುಖ, ಸಂಪತ್ತು ಮತ್ತು ನೆಮ್ಮದಿಯನ್ನು ಕಾಣಬಹುದಾಗಿದೆ. ಪವಿತ್ರವಾದ ಅನೇಕ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಮನೆಯ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಅಂತಹ ಪವಿತ್ರ (Auspicious) ವಸ್ತುಗಳಲ್ಲೊಂದಾದ ಶಂಖದ ಬಗ್ಗೆ ತಿಳಿಯೋಣ...

ಶಂಖನಾದವಿಲ್ಲದೇ ದೇವರ ಪೂಜೆ ಪೂರ್ಣವಾಗುವುದಿಲ್ಲವೆಂದು ಹೇಳಲಾಗುತ್ತದೆ. ಅನೇಕ ರೀತಿಯ ಶಂಖಗಳಿದ್ದು (Conch), ಅವುಗಳ ಬಳಕೆಯಿಂದ ಸಕಾರಾತ್ಮಕ (Positive) ಶಕ್ತಿ ಸಿಗುತ್ತದೆ.ಶಂಖಗಳಲ್ಲಿ ಮುಖ್ಯವಾಗಿ ವಾಮಾವರ್ತಿ, ದಕ್ಷಿಣಾವರ್ತಿ ಹಾಗೂ ಮಧ್ಯವರ್ತಿ ಎಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಕಾಮಧೇನು ಶಂಖವೂ ಸಹ ಒಂದು. ಈ ಶಂಖವು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು ಸಹ ಆಗಿದೆ. ಈ ಶಂಖವು ಹೆಚ್ಚು ಫಲಪ್ರದವಾಗಿದೆ, ಇದರಿಂದ ಅನೇಕ ಲಾಭಗಳನ್ನು (Benefits) ಪಡೆಯಬಹುದಾಗಿದೆ. ಇದರ ಬಗ್ಗೆ ಇನ್ನಷ್ಟು ತಿಳಿಯೋಣ...

ಈ ಶಂಖ ಮನೆಯಲ್ಲಿದ್ದರೆ ಶುಭ – ಲಾಭ
ಕಾಮಧೇನು ಶಂಖ (Kamadhenu conch) ಮನೆಯಲ್ಲಿ  ಇದ್ದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ, ಈ ಶಂಖದಿಂದ ಅನೇಕ ಶುಭಫಲಗಳನ್ನು ನೀಡುತ್ತದೆ. ಲಕ್ಷ್ಮೀ (Goddess Lakshmi) ಕೃಪೆ ಸದಾ ಇರಬೇಕೆಂದರೆ ಈ ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಮಹರ್ಷಿ ಪುಲಸ್ತ್ಯ ಮತ್ತು ಋಷಿ ವಸಿಷ್ಠರು ಮಹಾಲಕ್ಷ್ಮೀ ಕೃಪೆ ಪಡೆಯುವುದಕ್ಕಾಗಿ ಕಾಮಧೇನು ಶಂಖವನ್ನು ಪೂಜಿಸಬೇಕೆಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಮಹರ್ಷಿಗಳು ಸಹ ಈ ಮುಖಾಂತರವೇ ಲಕ್ಷ್ಮೀ ದೇವಿಯ ಕೃಪೆಯನ್ನು ಪಡೆದಿದ್ದರೆನ್ನಲಾಗುತ್ತದೆ. ಹಾಗಾಗಿ ಪುರಾಣದ ಋಷಿಗಳು ಕಾಮಧೇನು ಶಂಖದ ಮೂಲಕ ಬೇಕಾದ್ದನ್ನು ಪಡೆಯುತ್ತಿದ್ದರು. 

ಇದು ಮದುವೆ ವಿಷಯ, ಕುಜ ದೋಷದ ನಿರ್ಲಕ್ಷ್ಯ ಬೇಡ

ಇರ್ಷಾರ್ಥ ಸಿದ್ಧಿಗೆ
ಮನೆಯಲ್ಲಿ ಕಾಮಧೇನು ಶಂಖವನ್ನು ಇಟ್ಟುಕೊಂಡರೆ ಮನಸ್ಸಿನ ಆಸೆಗಳು ಪೂರೈಸುತ್ತವೆ. ಬಯಸಿದ ಎಲ್ಲ ವಿಚಾರಗಳು ಈಡೇರುತ್ತವೆ (Fulfill) ಎಂದು ಹೇಳಲಾಗುತ್ತದೆ. ಪೂಜೆಯ ಸಮಯದಲ್ಲಿ ಈ ಶಂಖವನ್ನು ಮನೆಯಲ್ಲಿ ಮೊಳಗಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಪುರಾಣ ಹೇಳುತ್ತದೆ. ಯಾವುದಾದರೂ ಆಸೆಗಳು ನೆರವೇರಬೇಕೆಂದರೆ, ಈ ಶಂಖವನ್ನು ಶ್ರದ್ಧಾ-ಭಕ್ತಿಯಿಂದ ನಿತ್ಯವೂ ಪೂಜೆ ಮಾಡಬೇಕು. 

ಮೋಕ್ಷ ಪ್ರಾಪ್ತಿಗೆ ಈ ಶಂಖ (Moksha)
ಮೋಕ್ಷವನ್ನು ಪಡೆಯಲು ಶ್ರೀ ಮಹಾ ವಿಷ್ಣುವನ್ನು ಭಕ್ತಿಯಿಂದ ಭಜಿಸಬೇಕೆಂದು ಒಂದು ಕಡೆ ಹೇಳಿದರೆ, ಅದರಷ್ಟೇ ಪವಿತ್ರವಾದ ಕಾಮಧೇನು ಶಂಖವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಮೋಕ್ಷ ಪ್ರಾಪ್ತಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಶಂಖವು ಅತ್ಯಂತ ಶಕ್ತಿಶಾಲಿ ಎಂದೂ ಸಹ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಮೂವತ್ಮೂರು ಕೋಟಿ ದೇವತೆಗಳು ನೆಲೆಸಿರುವುದಾಗಿ, ಅಷ್ಟೂ ದೇವರ (God) ಕೃಪೆ ಪ್ರಾಪ್ತವಾಗುತ್ತದೆ. ಈ ಶಂಖವು ಅತ್ಯಂತ ಶ್ರೇಷ್ಠವಾಗಿದ್ದು, ಇದಕ್ಕೆ ಪೂಜೆ ಸಲ್ಲಿಸುವುದರಿಂದ ಮನೋಕಾಮನೆಗಳು ಪೂರೈಸುತ್ತವೆ. ಈ ಶಂಖವನ್ನು ದಾನ ಮಾಡುವುದರಿಂದ ಸಹ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಶುಭ ಸಂದರ್ಭಗಳಲ್ಲಿ ದೇವಸ್ಥಾನದಲ್ಲಿ (Temple) ಕಾಮಧೇನು ಶಂಖವನ್ನು ದಾನ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ನಿಮ್ಮ ಜಾತಕದಲ್ಲಿದೆಯಾ ಈ ಯೋಗ...? ಇದ್ದರೆ ವೃತ್ತಿ, ಉದ್ಯಮದಲ್ಲಿ ಭರ್ಜರಿ ಯಶ!!!

ಸಂಪತ್ತಿಗೆ ರಕ್ಷಣೆ (Wealth protection)
ಕಾಮಧೇನು ಶಂಖವು ಮನೆಯಲ್ಲಿದ್ದರೆ ಸಂಪತ್ತಿಗೆ ರಕ್ಷಣೆ ಸಿಕ್ಕಂತೆಯೇ ಲೆಕ್ಕ. ಅಂದರೆ, ನ್ಯಾಯವಾಗಿ ಸಂಪಾದಿಸಿದ ಹಣವು ಅಷ್ಟು ಸುಲಭದಲ್ಲಿ ಕೈಬಿಟ್ಟು ಹೋಗುವುದಿಲ್ಲ. ಈ ಶಂಖದ ಕೃಪೆಯಿಂದಾಗಿ ಹಣವನ್ನು (Money) ಉಳಿಸುವುದಲ್ಲದೇ, ಸಂಪತ್ತನ್ನು ಹೆಚ್ಚಿಸಿಕೊಳ್ಳ ಬಹುದಾಗಿದೆ. ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೆಂದಾದರೆ, ಪ್ರತಿದಿನ ಹೊಸ ಹೊಸ ಖರ್ಚುಗಳು ಉಂಟಾಗುತ್ತಿದ್ದರೆ, ಅದಕ್ಕೆ ಪರಿಹಾರವಾಗಿ ಹಣ ಇಡುವ ಜಾಗದಲ್ಲಿ ಕಾಮಧೇನು ಶಂಖವನ್ನು ಇಡಬೇಕು. ಆಗ ಲಕ್ಷ್ಮೀ ಕೃಪೆ ಸಿಗುವುದಲ್ಲದೇ, ಹಣ ವ್ಯಯ ಕಡಿಮೆಯಾಗುತ್ತದೆ. 

ಮನಸ್ಸಿಗೆ ಬಲ ನೀಡಲು ಕಾಮಧೇನು ಶಂಖ (mental strength) 
ಈ ಶಂಖವನ್ನು ದಿನನಿತ್ಯ (Daily) ಪೂಜಿಸುವುದರಿಂದ ಮನಸ್ಸಿಗೆ ಬಲ ಸಿಗುತ್ತದೆ. ಮನೋಬಲ, ಮಾನಸಿಕ ಸ್ಥೈರ್ಯ ಮತ್ತು ತರ್ಕಶಕ್ತಿಯು ವೃದ್ಧಿಯಾಗುತ್ತದೆ. ಹೆಸರೇ ಹೇಳುವಂತೆ ಕಾಮಧೇನು ಎಂದರೆ ಕೇಳಿದ್ದನ್ನು ಕೊಡುವುದಾಗಿದೆ. ಹಾಗಾಗಿ ಈ ಶಂಖಕ್ಕೆ ಹೆಚ್ಚಿನ ಶಕ್ತಿ ಇದೆ. ಹೀಗಾಗಿ ಈ ಶಂಖವನ್ನು ಶುದ್ಧ ಜಲದಿಂದ ಸ್ವಚ್ಛಗೊಳಿಸಬೇಕು. ನಂತರ ಶ್ವೇತ ವಸ್ತ್ರವನ್ನು ಹಾಸಿ ಅದರ ಮೇಲಿಡಬೇಕು. ಶಂಖವನ್ನು ಹೂವಿನಿಂದ ಅಲಂಕರಿಸಿ ಅದರ ಬಳಿ ದೀಪವನ್ನು ಹಚ್ಚಿಡಬೇಕು. ಅದಾದ ನಂತರ “ಓಂ ನಮಃ ಗೋಮುಖೀ ಕಾಮಧೇನು ಶಂಖಾಯ ಮಮ ಸರ್ವ ಕಾರ್ಯಸಿದ್ದಿ ಕುರು - ಕುರು ನಮಃ’’ ಎಂಬ ಮಂತ್ರವನ್ನು (Mantra) ಪಠಿಸವುದರಿಂದ ಸಕಲ ಇಷ್ಟಾರ್ಥ ಸಿದ್ಧಿಸುತ್ತದೆ.

Follow Us:
Download App:
  • android
  • ios