Astrology Tips : ಮನೆಯಲ್ಲಿ ಹನುಮಂತನ ಪೂಜೆ ಮಾಡ್ತಿದ್ರೆ ಈ ನಿಯಮ ತಪ್ಪಿಸ್ಬೇಡಿ
ಕಲಿಯುಗದ ಶಕ್ತಿ ದೇವರ ಹನುಮಂತ. ಭಕ್ತರಿಗೆ ಬೇಗ ಕೃಪೆ ತೋರುವ ಹನುಮಂತನ ಆರಾಧನೆಯನ್ನು ಭಕ್ತರು ಭಕ್ತಿಯಿಂದ ಮಾಡುತ್ತಾರೆ. ಕೆಲವೊಮ್ಮೆ ತಿಳಿಯದೆ ಪೂಜೆ ನಿಯಮಗಳನ್ನು ಮೀರಿ ಸಂಕಷ್ಟಕ್ಕೆ ಸಿಲುಕುತ್ತಾರೆ.
ಹಿಂದೂ ಧರ್ಮದಲ್ಲಿ ದೇವರ ಪೂಜೆಯನ್ನು ಭಯ –ಭಕ್ತಿಯಿಂದ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ನಾನಾ ದೇವರುಗಳಿವೆ. ಪ್ರತಿಯೊಬ್ಬರೂ ತಮ್ಮಿಷ್ಟದ ದೇವರ ಪೂಜೆ ಮಾಡ್ತಾರೆ. ಎಲ್ಲರ ಮನೆಯಲ್ಲಿ ದೇವರಿಗಾಗಿ ಪ್ರತ್ಯೇಕ ಮನೆಯಿರುತ್ತದೆ. ಈ ಮನೆಯಲ್ಲಿ ಗಣಪತಿ, ಈಶ್ವರ, ಲಕ್ಷ್ಮಿ, ಪಾರ್ವತಿ, ಹನುಮಂತ ಹೀಗೆ ನಾನಾ ದೇವರ ಮೂರ್ತಿ ಹಾಗೂ ಫೋಟೋಗಳಿರುತ್ತವೆ. ಒಂದೊಂದು ದೇವರ ಪೂಜೆ ಹಾಗೂ ಆರಾಧನೆ ಬೇರೆ ಬೇರೆ ರೀತಿಯಲ್ಲಿರುತ್ತದೆ. ಭಕ್ತರು ನಿಯಮದಂತೆ ಪೂಜೆ ಮಾಡಿದ್ರೆ ಮಾತ್ರ ಹೆಚ್ಚಿನ ಫಲ ಸಿಗಲು ಸಾಧ್ಯವಾಗುತ್ತದೆ.
ಕಲಿಯುಗದ ದೇವರು (God) ಹನುಮಂತ (Hanuman) ಎಂದು ನಂಬಲಾಗುತ್ತದೆ. ಹನುಮಂತನಿಗೆ ಅಪಾರ ಶಕ್ತಿಯಿದೆ. ಸರಳ ಭಕ್ತಿಯನ್ನು ಹನುಮಂತ ಮೆಚ್ಚುತ್ತಾನೆ. ಆದ್ರೆ ಶುದ್ಧತೆ ಆತನಿಗೆ ಮುಖ್ಯವಾಗುತ್ತದೆ. ಒಮ್ಮೆ ಹನುಮಂತನ ಕೃಪೆಗೆ ಪಾತ್ರರಾದ್ರೆ ಮತ್ತೆ ಯಾವುದೇ ಸಮಸ್ಯೆ ನಿಮ್ಮ ಬಳಿ ಸುಳಿಯುವುದಿಲ್ಲ. ಯಾವುದೇ ಸೋಲು ನಿಮ್ಮನ್ನು ಆವರಿಸುವುದಿಲ್ಲ. ಸದಾ ಗೆಲುವಿನ ಕುದುರೆಯನ್ನು ನೀವು ಏರಬೇಕು ಎಂದಾದ್ರೆ ಮನೆಯಲ್ಲಿ ಹನುಮಂತನ ಫೋಟೋ ಅಥವಾ ಮೂರ್ತಿಯಿದ್ದರೆ ನಿಯಮ ಪಾಲನೆ ಮಾಡಿ. ಯಾವೆಲ್ಲ ನಿಯಮಗಳನ್ನು ಪಾಲನೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೆವೆ.
ಹನುಮಂತನ ಫೋಟೋ – ವಿಗ್ರಹ ಇಲ್ಲಿಡಿ : ರಾಹು (Rahu), ಶನಿ ಮತ್ತು ದುಷ್ಟಶಕ್ತಿಗಳಿಂದ ನಿಮ್ಮನ್ನು ರಕ್ಷಿಸುವ ಶಕ್ತಿ ಹನುಮಂತನಿಗಿದೆ. ಮನೆಯಲ್ಲಿ ಹನುಮಂತನ ಫೋಟೋ ಇಡುವಾಗ ತಪ್ಪುಗಳನ್ನು ಮಾಡಬಾರದು. ನೈಋತ್ಯ (Southwest) ದಿಕ್ಕಿನಲ್ಲಿ ಹನುಮಂತನ ಫೋಟೋವನ್ನು ಇಡಬಾರದು. ಇದ್ರಿಂದ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿಯೂ ಹನುಮಂತನ ಫೋಟೋ ಇಡಬಾರದು. ಇದ್ರಿಂದ ಮನೆಯಲ್ಲಿ ನಡೆಯಬೇಕಾಗಿದ್ದ ಶುಭ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಅನಾವಶ್ಯಕ ವಿವಾದಗಳು ನಡೆಯುತ್ತವೆ. ಹಾಗಾಗಿ ಹನುಮಂತನ ಫೋಟೋ ಅಥವಾ ವಿಗ್ರಹವನ್ನು ನೀವು ನೈಋತ್ಯ ಮತ್ತು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ.
ಹನುಮಂತನಿಗೆ ಈ ಆಹಾರ ನೀಡಬೇಡಿ : ದೇವಾನುದೇವತೆಗಳ ಪೂಜೆ ವೇಳೆ ಅವರಿಗೆ ಇಷ್ಟವಾದ ಆಹಾರವನ್ನು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ಅವರಿಗೆ ಇಷ್ಟದ ಆಹಾರ ನೀಡಲು ಸಾಧ್ಯವಿಲ್ಲದೆ ಹೋದ್ರೂ ತೊಂದರೆಯಿಲ್ಲ ಆದ್ರೆ ಅವರಿಗೆ ಕೋಪ ತರಿಸುವ ಆಹಾರವನ್ನು ನೀಡಬೇಡಿ. ಹನುಮಂತನ ಪೂಜೆ ವೇಳೆ ಬಾದೊಷವನ್ನು ಎಂದಿಗೂ ನೀಡಬೇಡಿ. ಇದ್ರಿಂದ ನೀವು ತೊಂದರೆ ಅನುಭವಿಸಬೇಕಾಗುತ್ತದೆ.
ಹಳೆ ಬಟ್ಟೆಗಳನ್ನು ಮನೆಯಲ್ಲಿಟ್ರೆ ಜೀವನದಲ್ಲಿ ಉದ್ಧಾರವೇ ಆಗಲ್ವಂತೆ
ಹನುಮಂತನಿಗೆ ದೂರ್ವೆ ಅರ್ಪಿಸಬೇಡಿ : ಹನುಮಂತ ರಾಮನ ಭಕ್ತ. ಆತನ ಪೂಜೆ ವೇಳೆ ನೀವು ಯಾವ ಹೂವನ್ನು ಅರ್ಪಿಸಬೇಕು ಎಂಬುದನ್ನು ತಿಳಿದಿರಬೇಕು. ಹಾಗೆಯೇ ದೂರ್ವೆಯನ್ನು ಎಂದಿಗೂ ಆತನಿಗೆ ಅರ್ಪಿಸಬಾದು. ಹಾಗೆಯೇ ಮಂದಾರ ಪುಷ್ಪವನ್ನು ಹಾಕಬೇಡಿ. ಇದ್ರಿಂದು ಹನುಮಂತನ ಕೃಪೆ ನಿಮಗೆ ಸಿಗುವುದಿಲ್ಲ.
ಬೆಡ್ ರೂಮಿನಲ್ಲಿ ಬೇಡ ಹನುಮಂತನ ಫೋಟೋ : ಹನುಮನ ಭಕ್ತರು ಬೆಳಿಗ್ಗೆ ಎದ್ದ ತಕ್ಷಣ ಹನುಮಂತನ ದರ್ಶನ ಪಡೆಯಲು ಬಯಸ್ತಾರೆ. ಇದೇ ಕಾರಣಕ್ಕೆ ಬೆಡ್ ರೂಮಿನಲ್ಲಿ ಫೋಟೋ ಇಟ್ಟುಕೊಂಡಿರುತ್ತಾರೆ. ಹನುಮಂತ ಬ್ರಹ್ಮಚಾರಿ. ಅದಕ್ಕಾಗಿ ಮಲಗುವ ಕೋಣೆಯಲ್ಲಿ ಫೋಟೋ ಹಾಕಬೇಡಿ. ಮನೆಯ ಸಮೃದ್ಧಿಗೆ ಇದು ಅಡ್ಡಿಯಾಗುತ್ತದೆ.
Astrology Tips: ಮಂತ್ರಕ್ಕಿದೆ 108ರ ನಂಟು
ಮಾಂಸಾಹಾರ ತ್ಯಜಿಸಿ : ಮನೆಯಲ್ಲಿ ಹನುಮಂತನ ಫೋಟೋ ಅಥವಾ ವಿಗ್ರಹಕ್ಕೆ ಪೂಜೆ ಮಾಡ್ತಿದ್ದರೆ ನೀವು ಶುದ್ಧತೆ ಕಾಯ್ದುಕೊಳ್ಳಬೇಕು. ಹಾಗೆಯೇ ಹನುಮಾನ್ ಚಾಲೀಸಾವನ್ನು 21 ದಿನಗಳು ಅಥವಾ 40 ದಿನಗಳವರೆಗೆ ಪಠಿಸಬೇಕೆಂದು ನಿರ್ಣಯವನ್ನು ತೆಗೆದುಕೊಂಡಿದ್ದರೆ ಆ ಸಮಯದಲ್ಲಿ ಮಾಂಸ, ಮದ್ಯ, ಬೆಳ್ಳುಳ್ಳಿ, ಈರುಳ್ಳಿ ಇತ್ಯಾದಿಗಳನ್ನು ಸೇವಿಸಬಾರದು.
ಮಹಿಳೆಯರು ಮಾಡಬಾರದು ಈ ಕೆಲಸ : ಹನುಮಂತ ಬಾಲ ಬ್ರಹ್ಮಚಾರಿ. ಹಾಗಾಗಿ ಮಹಿಳೆಯರು ಹನುಮಂತನನ್ನು ಪೂಜಿಸಬಹುದು. ಆದ್ರೆ ಹನುಮಂತನ ಫೋಟೋ ಅಥವಾ ವಿಗ್ರಹವನ್ನು ಮುಟ್ಟಬಾರದು. ಹೀಗೆ ಮಾಡಿದ್ರೆ ಪೂಜೆಯ ಫಲ ನಿಮಗೆ ಸಿಗುವುದಿಲ್ಲ.