Asianet Suvarna News Asianet Suvarna News

Personality Traits and Zodiacs: ಈ 4 ರಾಶಿಯ ಪುರುಷರು ಸಂಬಂಧವನ್ನು ಕಂಟ್ರೋಲ್ ಮಾಡ ಬಯಸುತ್ತಾರೆ!

ಕೆಲ ರಾಶಿಯ ಪುರುಷರು ಸಂಬಂಧಗಳಲ್ಲಿ ಹೆಚ್ಚು ಕಂಟ್ರೋಲಿಂಗ್ ಆಗಿ ಬಿಡುತ್ತಾರೆ. ತಾನು ಹೇಳಿದಂತೆಯೇ ಕೇಳಬೇಕು, ತನ್ನ ನಿಯಂತ್ರಣದಲ್ಲಿಯೇ ಇರಬೇಕು ಎಂದು ಬಯಸುತ್ತಾರೆ. ಇಂಥ ಪುರುಷರು ಹೆಚ್ಚಾಗಿ ಯಾವ ರಾಶಿಗೆ ಸೇರಿದವರು ತಿಳ್ಕೋಬೇಕಾ?

Men of these zodiac signs often become controlling skr
Author
Bangalore, First Published Jan 6, 2022, 12:20 PM IST

ಸಂಬಂಧಗಳು ಶುರುವಾಗುವಾಗ ಎಲ್ಲ ಹುಡುಗರೂ ಹಾಗೆ- ಅವರಷ್ಟು ಒಳ್ಳೆಯವರು ಮತ್ತೊಬ್ಬರು ಇರಲು ಸಾಧ್ಯವಿಲ್ಲ ಎನಿಸುತ್ತದೆ. ಅವರ ಬೆಸ್ಟ್ ಬಿಹೇವಿಯರ್ ಮಾತ್ರ ತೋರಿಸುತ್ತಿರುತ್ತಾರೆ. ಅದೇನು ಪ್ರಜ್ಞಾಪೂರ್ವಕವಾಗಿ ಅಲ್ಲ. ಸಂಬಂಧದ ಆರಂಭದ ಹುರುಪೇ ಹಾಗೆ. ಆದರೆ, ಸಂಬಂಧ ಹಳತಾದಂತೆಲ್ಲ ಅವರ ವರ್ತನೆ ಬದಲಾಗುತ್ತದೆ. ಕೆಲವರು ಸೈಲೆಂಟಾದರೆ, ಮತ್ತೆ ಕೆಲವರು ಆಸಕ್ತಿ ಕಳೆದುಕೊಳ್ಳಬಹುದು. ಇನ್ನೂ ಕೆಲವರು ತಮ್ಮ ಸಂಗಾತಿಯನ್ನು ಸಂಪೂರ್ಣ ತಮ್ಮ ನಿಯಂತ್ರಣ(controlling)ದಲ್ಲಿಟ್ಟುಕೊಳ್ಳಲು ಹಪಹಪಿಸುತ್ತಾರೆ. ಇವರ ಈ ವರ್ತನೆಯಿಂದ ಸಂಗಾತಿಗೆ ಉಸಿರುಗಟ್ಟುವಂತಾಗುತ್ತದೆ. ನಿಧಾನವಾಗಿ ಸಂಬಂಧ (relationship) ಹದಗೆಡುತ್ತದೆ. ಇಂಥ ಟಾಕ್ಸಿಕ್ ವರ್ತನೆ ಕೆಲ ರಾಶಿಯವರಲ್ಲಿ ಹೆಚ್ಚು. ಸಂಗಾತಿಯನ್ನು ನಿಯಂತ್ರಣದಲ್ಲಿಡಲು ಬಯಸುವ ಪುರುಷರು ಹೆಚ್ಚಾಗಿ ಯಾವ ರಾಶಿ(zodiac sign)ಗೆ ಸೇರಿರುತ್ತಾರೆ ಎಂಬುದಿಲ್ಲಿದೆ. 

ಮೇಷ(Aries)
ಈ ರಾಶಿಯ ಪುರುಷರ ಜೊತೆ ಇರುವುದು ಸವಾಲೆನಿಸುವುದು, ಆದರೆ ಇವರದು ಅಷ್ಟೇ ಆಸಕ್ತಿಕರ ವ್ಯಕ್ತಿತ್ವ ಕೂಡ. ಆದರೆ, ಇವರಿಗೆ ಸ್ವಾರ್ಥವೂ ಹೆಚ್ಚು, ತಮ್ಮ ಮಾತಿನಂತೆ ನಡೆಸುವ ಸಲುವಾಗಿ ನಿಮ್ಮನ್ನು ಅಳಿಸಬಲ್ಲರು. ಯಾವಾಗಲೂ ತಮಗೆ ಬೇಕಾದದ್ದನ್ನು ಪಡೆದೇ ತೀರುವವರು, ಜೊತೆಗೆ ಸಂಗಾತಿಯ ಅಭಿಪ್ರಾಯ(opinion)ಕ್ಕೆ ಅಷ್ಟೇನೂ ಮನ್ನಣೆ ಕೊಡದವರು ಇವರು. ಏಕೆಂದರೆ, ಅವರಿಗೆ ಅವರ ಅಭಿಪ್ರಾಯಗಳ ನಡುವೆ ನುಸುಳುವ ಇನ್ನೊಂದು ಮಾತೆಂದರೆ ಆಗದು. ಇವರಲ್ಲಿ ಸಂಗಾತಿಯೆಡೆ ಭಾವನೆ ಇಲ್ಲದಂತೆ ಇರುವುದು, ಕ್ರೂರ(cruel)ವಾಗಿ ವರ್ತಿಸುವ ಗುಣಗಳು ಅಡಗಿ ಕೂತಿರುತ್ತವೆ. ಅವು ಯಾವಾಗ ಬೇಕಾದರೂ ಹೊರ ಬರಬಹುದು. ಇವರ ವಿಷಕಾರಿ ವರ್ತನೆ ಅಪಾಯಕಾರಿಯಾಗಿರುತ್ತದೆ. 

Loan Tips: ಹೀಗೆ ಶಿವನ ಆರಾಧನೆ ಮಾಡಿದ್ರೆ ಸಾಲ ಮುಕ್ತರಾಗೋದು ಖಂಡಿತಾ..

ವೃಷಭ(Taurus)
ಸಾಮಾನ್ಯವಾಗಿ ಬಹಳ ಕಾಳಜಿ ಉಳ್ಳವರಾಗಿರುವ ವೃಷಭದ ಪುರುಷರು ಕೆಲವೊಮ್ಮೆ ಅಭದ್ರತೆ(insecure) ಎದುರಿಸುತ್ತಾರೆ. ಈ ಅಭದ್ರತಾ ಭಾವನೆ ಹೆಚ್ಚಾದಾಗ, ಅದನ್ನು ಮುಚ್ಚಿ ಹಾಕಲು ಎಲ್ಲವನ್ನೂ, ಎಲ್ಲರನ್ನೂ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ. ನೋಡಲು ಅತಿ ತಾಳ್ಮೆಯವರಾಗಿ, ಕರುಣಾಮಯಿಯಾಗಿರುವ ಇವರಿಗೆ ಮತ್ತೊಂದು ಮುಖವೂ ಇದೆ. ಅವರು ಒಳಗೊಳಗೇ ಕುಶಾಗ್ರಮತಿಯಾಗಿ ಹೊಂಚು ಹಾಕಬಲ್ಲರು. ಸಾಧುವಾಗಿ ಕಾಣುತ್ತಲೇ ಸಂಗಾತಿಯ ಮೇಲೆ ಪ್ರಬಲತೆ ಸಾಧಿಸಬಲ್ಲರು.

January Born: ಜನವರಿಯಲ್ಲಿ ಹುಟ್ಟಿದವರು ಹೇಗೆ ಗೊತ್ತಾ?

ಮಿಥುನ(Gemini)
ಇವರು ತಮ್ಮ ಬುದ್ಧಿವಂತಿಕೆ ಬಳಸಿ ವ್ಯಕ್ತಿಯನ್ನು ಪ್ರೀತಿಗೆ ಬೀಳಿಸಿಕೊಳ್ಳಬಲ್ಲರು. ಬಹಳ ಫ್ರೆಂಡ್ಲಿಯಾಗಿಯೂ, ಹೊಂದಾಣಿಕೆಯವರಾಗಿಯೂ ಇರಬಲ್ಲರು. ಆದರೆ ಇವರಿಗೆ ಮತ್ತೊಂದು ಆಯಾಮವೂ ಇದೆ. ಆ ಮತ್ತೊಂದು ಮುಖವಾಡದಲ್ಲಿ ಜೊತೆಗಿದ್ದವರಿಗೆ ತಾವು ಜಗತ್ತಿನಲ್ಲೇ ಅತಿ ಕನಿಷ್ಠರು ಎಂಬ ಭಾವನೆ ಬರುವಂತೆ ಮಾಡಬಲ್ಲರು. ಇವರಿಗೆ ಸಿಟ್ಟು ಬಂದಾಗ ಪ್ರೀತಿ ಗೀತಿ ಇತ್ಯಾದಿ ಎಲ್ಲ ಮರೆತು ಸಿಕ್ಕಾಪಟ್ಟೆ ಪೋಸೆಸಿವ್ ಆಗಬಲ್ಲರು. ಈ ಸಂದರ್ಭದಲ್ಲೇ ಅವರು ಸಂಗಾತಿಯ ಮೇಲೆ ನಿಯಂತ್ರಣ ತೆಗೆದುಕೊಂಡು ಉಸಿರುಗಟ್ಟುವಂತೆ ಮಾಡುವುದು. 

ಕುಂಭ(Aquarius)
ಈ ರಾಶಿಯ ಪುರುಷರು ಕ್ರಾಂತಿಕಾರಿಗಳೆಂದರೇ(revolutionaries) ಸರಿ. ಬಹಳ ಒರಟು ಹಾಗೂ ಅಷ್ಟೇ ಭಾವನೆಗಳಿಲ್ಲದಂತೆ ವರ್ತಿಸಬಲ್ಲರು. ಜೊತೆಯಿಂದ್ದವರಿಂದ ದೂರಾಗಿ ಏನೂ ಆಗಿಯೇ ಇಲ್ಲ ಎಂಬಂತೆ ಇರಬಲ್ಲರು. ಅವರು ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಸಂಗಾತಿಯೆದುರು ಸಮರ್ಪಣೆ ಮಾಡಿಕೊಳ್ಳುವುದು, ತಪ್ಪೊಪ್ಪಿಕೊಳ್ಳುವುದು ದೂರದ ಮಾತು. ತಮ್ಮ ಕೆಟ್ಟ ಮೂಡ್‌ನಲ್ಲಿದ್ದಾಗ, ಅಥವಾ ಸಂಗಾತಿಯ ಮೇಲೆ ಮುನಿಸಿಕೊಂಡಾಗ ಬಹಳ ಟಾಕ್ಸಿಕ್ ಆಗಬಲ್ಲರು. ಅಪನಂಬಿಕೆ ತೋರಿಸುವ ಜೊತೆಗೆ, ಸಂಗಾತಿ ಕಡೆಯವರೆಲ್ಲರ ಮೇಲೂ ಹದ್ದಿನ ಕಣ್ಣಿಟ್ಟು ಅನುಮಾನಿಸುವರು. 

Follow Us:
Download App:
  • android
  • ios