ಹೆಂಡತಿಯನ್ನು ತುಂಬಾ ಪ್ರೀತಿಸುವ ಗಂಡ ಈ ರಾಶಿಗೆ ಸೇರಿರುತ್ತಾನೆ!

ಗಂಡು ನೋಡುವಾಗ ಈ ರಾಶಿಯ ಯುವಕರು ಸಿಕ್ಕಾಗ ಕೊಂಚ ಹೆಚ್ಚೇ ಡೇಟಿಂಗ್ ಮಾಡಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಏಕೆಂದರೆ ಈ 4 ರಾಶಿಯ ಹುಡುಗರು ಬಹಳ ಉತ್ತಮ ಗಂಡಂದಿರಾಗುತ್ತಾರೆ ಎನ್ನುತ್ತದೆ ಜ್ಯೋತಿಷ್ಯ. 

Men of these 4 zodiac signs make good husbands skr

ಜ್ಯೋತಿಷ್ಯದಲ್ಲಿ, ಪ್ರತಿಯೊಂದು ರಾಶಿಚಕ್ರದ ಚಿಹ್ನೆಯು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ. ಮೇಷ ರಾಶಿಯಿಂದ ಮೀನ ರಾಶಿಯವರಿಗೂ ಅವರದೇ ಆದ ಗುಣ-ದೋಷಗಳಿವೆ. ಜ್ಯೋತಿಷ್ಯದಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳ ಹುಡುಗರನ್ನು ತುಂಬಾ ಒಳ್ಳೆಯವರು ಎಂದು ಪರಿಗಣಿಸಲಾಗುತ್ತದೆ. ಕೆಲವು ರಾಶಿಚಕ್ರದ ಹುಡುಗರು ಮದುವೆಯ ನಂತರ ಅತ್ಯುತ್ತಮ ಜೀವನ ಸಂಗಾತಿ ಎಂದು ಸಾಬೀತುಪಡಿಸುತ್ತಾರೆ ಮತ್ತು ಅವರ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾರೆ.

ಈ ರಾಶಿಚಕ್ರ ಚಿಹ್ನೆಗಳ ಹುಡುಗರು ತುಂಬಾ ಒಳ್ಳೆಯ ಗಂಡ ಎನಿಸಿಕೊಳ್ಳುತ್ತಾರೆ ಮತ್ತು ಅವರ ಹೆಂಡತಿಯರಿಗೆ ಹೆಚ್ಚಿನ ಪ್ರೀತಿ ಮತ್ತು ಗೌರವವನ್ನು ನೀಡುತ್ತಾರೆ. ಅಂತಹ ಜನರು ಉತ್ತಮ ಜೀವನ ಪಾಲುದಾರರು ಎಂದು ಸಾಬೀತುಪಡಿಸುತ್ತಾರೆ. ನಿಮ್ಮ ಜೀವನ ಸಂಗಾತಿಯು ಈ ನಾಲ್ಕು ರಾಶಿಚಕ್ರದ ಚಿಹ್ನೆಗಳಲ್ಲಿ ಒಂದಾಗಿದ್ದರೆ, ನೀವು ಅದೃಷ್ಟವಂತರು ಎಂದು ಪರಿಗಣಿಸಬಹುದು. ಈ ರಾಶಿಯ ಜನರು ಜೀವನದ ಹಾದಿಯಲ್ಲಿ ಬೆಸ್ಟ್ ಫ್ರೆಂಡ್ ಆಗಬಲ್ಲರು.. ಈ ನಾಲ್ಕು ರಾಶಿಚಕ್ರದ ಚಿಹ್ನೆಗಳ ಬಗ್ಗೆ ತಿಳಿಯೋಣ.

ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯ ಹುಡುಗರು ಹೋರಾಟಗಾರರು. ತುಂಬಾ ಬುದ್ಧಿವಂತರು ಮತ್ತು ಉಷ್ಣತೆಯಿಂದ ತುಂಬಿರುತ್ತಾರೆ. ಈ ರಾಶಿಯವರಿಗೆ ಮನೆಯೇ ಸರ್ವಸ್ವ. ಹಾಗಾಗಿ ಇವರು ಕುಟುಂಬವನ್ನು ಪ್ರೀತಿಸುತ್ತಾರೆ ಮತ್ತು ಹೆಂಡತಿ ಮಕ್ಕಳಿಗೆ ಅಂಟಿಕೊಂಡಿರಲು ಇಷ್ಟ ಪಡುತ್ತಾರೆ. ಕುಟುಂಬದ ಸಂತೋಷದಲ್ಲಿ ತಮ್ಮ ಸಂತೋಷ ಕಾಣುವ ಇವರು ಇದಕ್ಕಾಗಿ ಇತರರನ್ನು ಸಂತೋಷವಾಗಿರಿಸುತ್ತಾರೆ. ಈ ರಾಶಿಚಕ್ರದ ಜನರು ಸಂಬಂಧದ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಸಂಬಂಧಗಳನ್ನು ಬಹಳ ಗಂಭೀರವಾಗಿ ನಿರ್ವಹಿಸುತ್ತಾರೆ. ಈ ಜನರು ಮದುವೆಯ ಬಂಧವನ್ನು ಬಹಳ ಪವಿತ್ರವಾಗಿ ನಿರ್ವಹಿಸುತ್ತಾರೆ.

Lucky Girls: ಪತ್ನಿಯ ಹೆಸರು ಇದಾದರೆ ಪತಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ!

ತುಲಾ ರಾಶಿ (Libra)
ಈ ರಾಶಿಯ ಹುಡುಗರು ಪತಿಯಾದ ನಂತರವೂ ತಮ್ಮ ಜೀವನ ಸಂಗಾತಿಯೊಂದಿಗೆ ಸ್ನೇಹಿತರಂತೆ ಇರುತ್ತಾರೆ. ಈ ಜನರು ತುಂಬಾ ಬಲವಾದ ಇಚ್ಛಾಶಕ್ತಿ ಮತ್ತು ಬಲವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇವರು ಜನರನ್ನು ನಂಬಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಒಮ್ಮೆ ನಂಬಿಕೆ ಇಟ್ಟರೆ, ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸುತ್ತಾರೆ. ಇವರು ಪತ್ನಿಗೆ ಮನೆಕೆಲಸದಲ್ಲೂ ಸಹಾಯ ಮಾಡುವ ಜೊತೆಗೆ ಮಕ್ಕಳನ್ನೂ ಉತ್ತಮವಾಗಿ ನಿಭಾಯಿಸುತ್ತಾರೆ.

ವೃಶ್ಚಿಕ ರಾಶಿ (Scorpio)
ಈ ರಾಶಿಯ ಜನರು ತಮ್ಮ ಸಂಗಾತಿಯ ಕಡೆಗೆ ತುಂಬಾ ನಿಷ್ಠಾವಂತರು ಮತ್ತು ಪ್ರಾಮಾಣಿಕರು. ಈ ರಾಶಿಚಕ್ರದ ಜನರು ತುಂಬಾ ಭಾವನಾತ್ಮಕವಾಗಿರುತ್ತಾರೆ ಮತ್ತು ಯಾರೊಬ್ಬರ ಮಾತುಗಳಲ್ಲಿ ಸುಲಭವಾಗಿ ತೊಡಗುತ್ತಾರೆ. ಕೆಲವೊಮ್ಮೆ ಈ ಜನರು ಸುಲಭವಾಗಿ ಮೋಸ ಹೋಗುತ್ತಾರೆ. ಈ ಜನರು ತುಂಬಾ ಮೃದು ಹೃದಯದವರು ಮತ್ತು ತಮ್ಮ ಸಂಗಾತಿಯೊಂದಿಗೆ ಉತ್ತೇಜಕ ಜೀವನವನ್ನು ನಡೆಸುತ್ತಾರೆ. ಸಂಗಾತಿಯನ್ನು ವೈಯಕ್ತಿಕವಾಗಿ ಸಾಧಿಸುವಂತೆ ಪ್ರೇರೇಪಿಸುತ್ತಾರೆ. 

Holi 2023: ಹೊಸದಾಗಿ ಮದುವೆಯಾಗಿದೀರಾ? ಹೋಳಿ ಸಮಯದಲ್ಲಿ ಅತ್ತೆ ಮನೆಯಲ್ಲಿರೋ ತಪ್ಪು ಮಾಡ್ಬೇಡಿ!

ಮೀನ ರಾಶಿ (Pisces)
ಈ ರಾಶಿಯ ಪುರುಷರು ತುಂಬಾ ಶಾಂತ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಸೌಹಾರ್ದಯುತವಾಗಿ ಜೀವನವನ್ನು ನಡೆಸುತ್ತಾರೆ. ಅವರು ತಮ್ಮ ಸಂಬಂಧದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಾರೆ. ಈ ಜನರು ಆದರ್ಶ ಜೀವನ ಸಂಗಾತಿಯಾಗುತ್ತಾರೆ. ಅವರು ಯಾವುದೇ ವಿವಾದದ ಪರಿಸ್ಥಿತಿಯನ್ನು ಬಹಳ ಆರಾಮದಾಯಕ ರೀತಿಯಲ್ಲಿ ನಿಭಾಯಿಸುತ್ತಾರೆ. ಸ್ವಭಾವತಃ, ಈ ಜನರು ತುಂಬಾ ಸೂಕ್ಷ್ಮವಾಗಿರುತ್ತಾರೆ ಮತ್ತು ತಮ್ಮ ಸಂಗಾತಿಯ ನೋವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios