ದೇವರಿಗಾಗಿ ಬಡಿದಾಡೋ ಉತ್ಸವ, ರಕ್ತ ಚೆಲ್ಲಿದರೂ ನಿಲ್ಲದು ಜನರ ರಣೋತ್ಸಾಹ

ಉತ್ಸವ ಮೂರ್ತಿಗಾಗಿ  ಬಡಿಗೆಯಿಂದ ಬಡಿದಾಡಿಕೊಳ್ಳುವ ನೂರಾರು ಜನರು
ವಿಜಯ ದಶಮಿಯ ತಡರಾತ್ರಿ ನಡೆಯೋ ವಿಶೇಷ ಆಚರಣೆ
ನಿಷೇಧವಿದ್ರೂ ನಡೆಯುತ್ತದೆ ಬಡಿಗೆ ಜಾತ್ರೆ
ಈ ವರ್ಷ ಗೊರವಪ್ಪನ ಕಾರಣಿಕೆ ಏನು?

Men Beat Each Other With sticks at Mala Malleshwara Jatre skr

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ /ಆಂಧ್ರ ಪ್ರದೇಶ: ಸಾಮಾನ್ಯವಾಗಿ ಜಾತ್ರೆ, ಹಬ್ಬ, ಉತ್ಸವಗಳು ಅಂದ್ರೆ  ದೇವರಿಗೆ ಪೂಜೆ ಪುನಸ್ಕಾರ ಮಾಡ್ತಾರೆ. ನೈವೇದ್ಯ ರೂಪದಲ್ಲಿ ಹಣ್ಣುಕಾಯಿ ಸೇರಿದಂತೆ ಇತರೆ ವಸ್ತುಗಳನ್ನು ಸಮರ್ಪಣೆ ಮಾಡ್ತಾರೆ. ಆದ್ರೆ, ಈ ಗ್ರಾಮದಲ್ಲಿ  ನಡೆಯೋ ಜಾತ್ರೆ ವೇಳೆ ಪರಸ್ಪರ ಬಡಿಗೆಯಿಂದ ಹೊಡೆದಾಡಿಕೊಂಡು ರಕ್ತಾಭಿಷೇಕ  ಮಾಡಿಕೊಳ್ಳುತ್ತಾರೆ. ಹೌದು, ಕೇಳಲು ವಿಚಿತ್ರವಾದ್ರೂ ಇಲ್ಲಿ ಮಾತ್ರ ದೇವರ ಉತ್ಸವ ಮೂರ್ತಿಗಾಗಿ 10ಕ್ಕೂ ಹೆಚ್ಚು ಗ್ರಾಮಗಳ ಮಧ್ಯೆ ನೂರಾರು ಜನರು ಬಡಿಗೆಯಿಂದ ಹೊಡೆದಾಡಿಕೊಳ್ಳುತ್ತಾರೆ. ಈ ರಕ್ತದ ಓಕುಳಿಯನ್ನು ನೋಡಲು ತಡರಾತ್ರಿ ಸಾವಿರಾರು ಜನರು ಇಲ್ಲಿಗೆ ಬರೋದು ವಾಡಿಕೆ.

ವಿಜಯ ದಶಮಿಯ ತಡರಾತ್ರಿ ನಡೆಯೋ ವಿಶೇಷ ಆಚರಣೆ
ಬಳ್ಳಾರಿ ಗಡಿಭಾಗದ ಆಂಧ್ರಪ್ರದೇಶ(Andhra Pradesh) ದೇವರ ಗುಡ್ಡದಲ್ಲಿ ವಿಜಯದಶಮಿಯ ತಡರಾತ್ರಿ ಈ ವಿಶಿಷ್ಠ  ಆಚರಣೆ ನಡೆಯುತ್ತದೆ. ಮಾಳ ಮಲ್ಲೇಶ್ವರ ಕಲ್ಯಾಣೋತ್ಸವದ ವೇಳೆ  ಸಾವಿರಾರು ಜನ ಭಕ್ತರು  ಬಡಿಗೆಗಳಿಂದ ಹೊಡೆದಾಡುತ್ತಾರೆ. ಹೌದು, ಆಂಧ್ರದ  ನೆರಣಕಿ ಗ್ರಾಮಕ್ಕೆ ಸೇರಿದ ಮೀಸಲು ಅರಣ್ಯಪ್ರದೇಶದ ಗುಡ್ಡದ ಮೇಲೆ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನವಿದೆ. ವಿಜಯದಶಮಿ ದಿನದ ರಾತ್ರಿಯಂದು ಇಲ್ಲಿನ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ. ಕಲ್ಯಾಣೋತ್ಸವಕ್ಕಾಗಿ ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು  ಪಲ್ಲಕ್ಕಿಯಲ್ಲಿ ಹೊತ್ತು ನೆರಣಕಿ ಗ್ರಾಮದ ಭಕ್ತರು ಬೆಟ್ಟಕ್ಕೆ ಬರುತ್ತಾರೆ. ಬರುವಾಗ ಮತ್ತು ಹೋಗುವಾಗ ಈ ಉತ್ಸವ ಮೂರ್ತಿಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕೆಂದು ಸುತ್ತಮುತ್ತಲಿನ ಹತ್ತು ಗ್ರಾಮಸ್ಥರು ಪ್ರಯತ್ನಿಸುತ್ತಾರೆ. ಅದನ್ನು ನೆರಣಕಿ ಗ್ರಾಮಸ್ಥರು ಮಾತ್ರ ಬಿಟ್ಟುಕೊಡೋದಿಲ್ಲ. ಈ ವೇಳೆ ಪರಸ್ಪರ ಬಡಿಗೆ ಹಿಡಿದುಕೊಂಡು ಹೊಡೆದಾಡಿಕೊಳ್ಳುತ್ತಾರೆ. ನಿಯಮಗಳ ಪ್ರಕಾರ ತಲೆ, ಮುಖ  ಮತ್ತು ಕಾಲಿನ ಭಾಗದಲ್ಲಿ ಹೊಡೆಯೋ ಹಾಗಿಲ್ಲ. ಆದ್ರೇ, ಗಲಾಟೆಯ ವೇಳೆ ಯಾರು ಎಲ್ಲಿ ಹೊಡೆಯುತ್ತಾರೆ ಗೊತ್ತಾಗೋದೆ ಇಲ್ಲ! ಹಲವು ಬಾರಿ ಇಲ್ಲಿ ಸಾವನ್ನಪ್ಪಿದ ಉದಾಹರಣೆಗಳು ಇವೆ. ಈ ವರ್ಷ ಈ ಕಾಳಗದಲ್ಲಿ ಎಂಬತ್ತಕ್ಕೂ ಹೆಚ್ಚು  ಜನರಿಗೆ ಗಾಯಗಳಾಗಿದೆ. ಇದನ್ನು ನೋಡಲು ಮತ್ತು ಅದರಲ್ಲಿ ಪಾಲ್ಗೊಳ್ಳಲು ಈ ಬೆಟ್ಟದ ಪ್ರದೇಶಕ್ಕೆ ಸಾವಿರಾರು ಜನರು ಬಂದು ಸೇರುತ್ತಾರೆ. ಮಧ್ಯರಾತ್ರಿ 12ರಿಂದ 3 ಗಂಟೆವರೆಗೆ  ಈ ಕಾಳಗ ನಡೆಯುತ್ತದೆ.

ಉಚ್ಚಿಲ ದಸರಾ: ಸಮುದ್ರ ತೀರದಲ್ಲಿ ನವದೇವಿಯರಿಗೆ ಕಡಲಾರತಿ

ನಿಷೇಧವಿದ್ರೂ ನಡೆಯುತ್ತದೆ ಬಡಿಗೆ ಜಾತ್ರೆ
ಜಾತ್ರೆ ಒಂದು ತಿಂಗಳು ಮುಂಚೆ ಗಡಿಭಾಗದ ಗ್ರಾಮಗಳಲ್ಲಿ ಬ್ಯಾನರ್ ಹಾಕೋ ಮೂಲಕ ಯಾರು ಕೂಡ ಮಾಳ ಮಲ್ಲೇಶ್ವರ ಜಾತ್ರೆ(Mala Malleshwara Jatre)ಯಲ್ಲಿ ಬಡಿಗೆಗಳನ್ನು ತರಬಾರದು, ಹೊಡೆದಾಟವನನ್ನು ನಿಷೇಧ ಮಾಡಲಾಗಿದೆ ಎಂದು ಪೊಲೀಸರು ಮತ್ತು ಜಿಲ್ಲಾಡಳಿತ ಸೂಚನೆ ನೀಡಿರುತ್ತದೆ. ಆದ್ರೆ ಅದೆಲ್ಲವನ್ನು ಮೀರಿ ಇಲ್ಲಿ ಬಡಿದಾಟ ನಡೆಯುತ್ತದೆ. ಪೊಲೀಸರು ಹಲವು ಕಡೆಗಳಲ್ಲಿ ಚೆಕ್ ಪೋಸ್ಟ್ ಮಾಡಿ ಬಡಿಗೆ ತರೋದನ್ನು ನಿಯಂತ್ರಿಸಿದ್ರೂ ಗುಡ್ಡವಾಗಿರೋ ಹಿನ್ನೆಲೆ ಭಕ್ತರು ಎಲ್ಲಿಂದಲೋ ಬಂದು ಬಡಿದಾಡಿಕೊಳ್ಳುತ್ತಾರೆ. ಬಡಿದಾಟದ ಸಂದರ್ಭದಲ್ಲಿ  ಪೊಲೀಸರ ಎದುರಿಗೇ ಈ ಕಾಳಗ ನಡೆಯುತ್ತದೆ.

ದುಬೈನಲ್ಲಿ ನಿರ್ಮಾಣವಾಯ್ತು 16 ಹಿಂದೂ ದೇವರನ್ನೊಳಗೊಂಡ ಬೃಹತ್ ದೇವಾಲಯ

ಕಾರಣಿಕೆ ಹೇಳೋ ಗೊರವಪ್ಪ
ಆಂಧ್ರಪ್ರದೇಶದ ಗುಡ್ಡದ ಮಲ್ಲಯ್ಯನ‌ ಕಾರಣಿಕಕ್ಕೆ ಸಾಕಷ್ಟು ಮಹತ್ವವಿದೆ. ಇಲ್ಲಿ ಹೇಳೋ ಕಾರಣಿಕವನ್ನು ಆಂಧ್ರಕ್ಕಿಂದ ಕರ್ನಾಟಕಕ್ಕೆ ಹೆಚ್ಚು ಹೋಲಿಕೆಯನ್ನು ಮಾಡಲಾಗುತ್ತದೆ. 
'ಈ ವರ್ಷ  ಪಾರ್ವತಿ  ಪರಮೇಶ್ವರನ ಧ್ಯಾನ ಮಾಡ್ತಾಳ. ಗಂಗೆ ಹೊಳೆದಂಡಿಗೆ ನಿಂತಾಳ. ತೂರ್ಪು ಉತ್ತರಕ್ಕೆ ಸವಾರಿ ಮಾಡ್ಯಾಳ.. 6600 ನಗ ಅರಳೆ 4100 ಒಕ್ಕಳ ಜೋಳ, ಮೂರು ಆರು, ಆರು ಮೂರು ಆದಿತಲೇ ಪರಾಕ್..'  ಎಂದು ಹೇಳಲಾಗಿದೆ. ಇದನ್ನು ಕೆಲವರು ಮಳೆ ಹೆಚ್ಚಾಗುತ್ತದೆ ಇದಕ್ಕಾಗಿ ಜನರು ದೇವರ ಮೊರೆ ಹೋಗಬೇಕಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಆರು ಮೂರು ಆರು ಅಂದ್ರೆ, ಬೆಳೆಯಲ್ಲಿ ಯಾವುದೆ ಲಾಭ ನಷ್ಟವಿಲ್ಲದಂತಾಗುತ್ತದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios