ಮಂತ್ರಾಲಯದಲ್ಲಿ ಸಾಮೂಹಿಕ ಅಷ್ಟೋತ್ತರ ಪಾರಾಯಣ

ಅಧಿ​ಕ​ಶ್ರಾ​ವಣ ಮಾಸ ಹಾಗೂ ರಾಯರ ವಾರ ಗುರು​ವಾರ ಆಗಿ​ದ್ದ​ರಿಂದ ಸಾಮೂಹಿಕ ಅಷ್ಟೋತ್ತರ ಪಾರಾಯಣದಲ್ಲಿ ವಿವಿಧ ಭಜನಾ ಮಂಡ​ಳಿ​ಗಳು, ಭಕ್ತರು ಭಾಗ​ವ​ಹಿಸಿದ್ದರು. ಕಾರ್ಯ​ಕ್ರಮ ಹಿನ್ನೆ​ಲೆ​ಯಲ್ಲಿ ಶ್ರೀಮ​ಠ​ದಿಂದ ಉಚಿತ ವಸ​ತಿ,​ಪ್ರ​ಸಾ​ದದ ವ್ಯವ​ಸ್ಥೆ​ಯನ್ನು ಮಾಡ​ಲಾ​ಗಿತ್ತು. 

Mass Ashtotthara Parayana Held in Mantralayam grg

ರಾಯ​ಚೂರು(ಆ.04):  ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಧಿಕ ಶ್ರಾವಣ ಮಾಸದ ನಿಮಿ​ತ್ತ ​ಸಾಮೂಹಿಕ ಅಷ್ಟೋತ್ತರ ಪಾರಾಯಣ ಗುರು​ವಾರ ನಡೆ​ಯಿತು.

ಬೆಳಗ್ಗೆ ಶ್ರೀ ರಾ​ಘ​ವೇಂದ್ರ ಸ್ವಾಮಿ​ಗಳ ಮೂಲ​ ಬೃಂದಾ​ವ​ನಕ್ಕೆ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅಭಿಷೇಕ, ಮಹಾ​ಮಂಗ​ಳಾ​ರ​ತಿ​ಯ​ನ್ನು ನೆರವೇರಿಸಿದರು. ಇದರ ಜೊತೆಗೆ ಮೂಲ​ರಾ​ಮ​ದೇ​ವ​ರಿಗೆ ಸಂಸ್ಥಾ​ನ​ಮ​ಠದ ಪೂಜೆ​ಯನ್ನು ಮಾಡಿ​ದ​ರು. ನಂತರ ಶ್ರೀಮ​ಠದ ಪ್ರಾಂಗ​ಣ​ದಲ್ಲಿ ನಡೆದ ವೇದಿಗೆ ಕಾರ್ಯ​ಕ್ರ​ಮ​ದಲ್ಲಿ ಶ್ರೀಗ​ಳು ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಅನು​ಗ್ರಹ ಸಂದೇಶ ನೀಡಿ​ದ​ರು.

ಜ್ಞಾನವಾಪಿ ಕ್ಯಾಂಪಸ್‌ ಸಮೀಕ್ಷೆ; ಈ ಪ್ರಮುಖ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು?

ಅಧಿ​ಕ​ಶ್ರಾ​ವಣ ಮಾಸ ಹಾಗೂ ರಾಯರ ವಾರ ಗುರು​ವಾರ ಆಗಿ​ದ್ದ​ರಿಂದ ಸಾಮೂಹಿಕ ಅಷ್ಟೋತ್ತರ ಪಾರಾಯಣದಲ್ಲಿ ವಿವಿಧ ಭಜನಾ ಮಂಡ​ಳಿ​ಗಳು, ಭಕ್ತರು ಭಾಗ​ವ​ಹಿಸಿದ್ದರು. ಕಾರ್ಯ​ಕ್ರಮ ಹಿನ್ನೆ​ಲೆ​ಯಲ್ಲಿ ಶ್ರೀಮ​ಠ​ದಿಂದ ಉಚಿತ ವಸ​ತಿ,​ಪ್ರ​ಸಾ​ದದ ವ್ಯವ​ಸ್ಥೆ​ಯನ್ನು ಮಾಡ​ಲಾ​ಗಿತ್ತು. ಈ ಸಂದ​ರ್ಭ​ದಲ್ಲಿ ಶ್ರೀಮ​ಠದ ವಿದ್ವಾಂಸ​ರು,​ ಪಂಡಿ​ತ​ರು ಉಪಸ್ಥಿತರಿದ್ದರು.  

Latest Videos
Follow Us:
Download App:
  • android
  • ios