Asianet Suvarna News Asianet Suvarna News

Astrology Tips : ಸ್ನಾನ ಮಾಡಿದ ತಕ್ಷಣ ಮಹಿಳೆಯರು ಮಾಡ್ಬೇಡಿ ಈ ಕೆಲಸ

ಕುಂಕುಮ ಮಹಿಳೆಗೆ ಶೋಭೆ. ಸುಮಂಗಲಿಯಾದವಳು ಪ್ರತಿ ದಿನ ಕುಂಕುಮವನ್ನಿಟ್ಟುಕೊಳ್ಳಬೇಕು. ಆದ್ರೆ ಸಿಂಧೂರವನ್ನು ಹೇಗ್ ಹೇಗೋ ಇಟ್ಟುಕೊಂಡ್ರೆ ಒಳ್ಳೆಯದಾಗುವುದಿಲ್ಲ. ಅದಕ್ಕೂ ಒಂದಿಷ್ಟು ನಿಯಮಗಳಿವೆ. ಅದನ್ನು ಪಾಲಿಸಿದ್ರೆ ಮಾತ್ರ ಸುಖ ಪ್ರಾಪ್ತಿಯಾಗುತ್ತದೆ.
 

Married Women Should Not Put Sindoor soon After Taking Bath
Author
Bangalore, First Published Jul 30, 2022, 12:50 PM IST

ಹಿಂದೂ ಧರ್ಮದ ಹದಿನಾರು ಸಂಸ್ಕಾರಗಳಲ್ಲಿ ಮದುವೆಯೂ ಒಂದು. ಮದುವೆಯ ನಂತರ ಮಹಿಳೆಯರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ವಿವಾಹಿತ ಮಹಿಳೆ ಕೆಲವು ಆಚರಣೆಗಳನ್ನು ಪಾಲನೆ ಮಾಡಬೇಕಾಗುತ್ತದೆ. ಹಿಂದೂ ಸಮಾಜದಲ್ಲಿ  ಮದುವೆಯ ನಂತರ ಸಿಂಧೂರವನ್ನು ಇಟ್ಟುಕೊಳ್ಳುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ವಿವಾಹಿತ ಮಹಿಳೆಯ ಸಿಂಧೂರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರಗಳ ಪ್ರಕಾರ,  ಗಂಡನ ದೀರ್ಘಾಯಸ್ಸು ಮತ್ತು ಸಂತೋಷ ಮತ್ತು ಸಮೃದ್ಧಿ ಸಂಕೇತ ಕುಂಕುಮ. ಪ್ರತಿ ದಿನ ಕುಂಕುಮ ಇಟ್ಟುಕೊಳ್ಳುವುದ್ರಿಂದ ಗಂಡನ ಆಯುಷ್ಯ ವೃದ್ಧಿಯಾಗುತ್ತದೆ. ಹೆಣ್ಣಿನ ಸೌಭಾಗ್ಯವೂ ಹೆಚ್ಚುತ್ತದೆ ಎನ್ನುತ್ತಾರೆ.  ಹಿಂದೂ ಸಮಾಜದಲ್ಲಿ ವಿವಾಹಿತ ಮಹಿಳೆಯರು ಕುಂಕುಮ ಇಟ್ಟುಕೊಳ್ಳುವುದನ್ನು ಪ್ರಮುಖ ಅಲಂಕಾರ ಎಂದು ಪರಿಗಣಿಸಲಾಗುತ್ತದೆ . ಆದರೆ ಸಿಂಧೂರವನ್ನು ಇಟ್ಟುಕೊಳ್ಳಲು ಕೆಲವು ನಿಯಮಗಳಿವೆ. ಅದನ್ನು ಮಹಿಳೆಯರು ಅನುಸರಿಸಬೇಕಾಗುತ್ತದೆ. ಈ ನಿಯಮಗಳನ್ನು ನಿರ್ಲಕ್ಷಿಸಿದರೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಂಕುಮ ಇಟ್ಟುಕೊಳ್ಳುವ ಬಗ್ಗೆ ಹಿಂದೂ ಧರ್ಮದಲ್ಲಿ ಯಾವ ನಿಯಮಗಳಿವೆ ಎಂಬುದನ್ನು ನಾವಿಂದು ಹೇಳ್ತೇವೆ.   

ಕುಂಕುಮ (Sindoor) ಇಟ್ಟುಕೊಳ್ಳುವ ಬಗ್ಗೆ ಹಿಂದೂ ಧರ್ಮ (Hinduism ) ದಲ್ಲಿದೆ ಈ ಎಲ್ಲ ನಿಯಮ : 

ಸ್ನಾನ (Bathing) ಮಾಡಿದ ನಂತ್ರ ಕುಂಕುಮ :  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹಿಳೆಯರು ಸ್ನಾನ ಮಾಡಿದ ತಕ್ಷಣ ಸಿಂಧೂರವನ್ನು ಹಚ್ಚಿಕೊಳ್ಳಬಾರದು. ಇದು ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಬಹುದು. 

ಕೂದಲು ತೊಳೆದ ನಂತ್ರ ಸಿಂಧೂರ : ಬರೀ ಸ್ನಾನ ಮಾಡಿದ ನಂತ್ರ ಮಾತ್ರವಲ್ಲ ಕೂದಲು ತೊಳೆದ ನಂತ್ರವೂ ಕುಂಕುಮ ಹಚ್ಚಬಾರದು. ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಕೂದಲಿಗೆ ಬಣ್ಣ ಹಚ್ಚಿಕೊಂಡು ತಲೆಯನ್ನು ಮಾತ್ರ ತೊಳೆದುಕೊಳ್ತಾರೆ. ಅಂಥವರು ಕೂಡ ಕೂದಲು ತೊಳೆದ ತಕ್ಷಣ ಸಿಂಧೂರವನ್ನು ಹಚ್ಚಬಾರದು. ಹೀಗೆ ಮಾಡಿದ್ರೆ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ. ಮಹಿಳೆ ಇದ್ರಿಂದ ನಷ್ಟ ಅನುಭವಿಸುತ್ತಾಳೆ. ಸುಖ – ಶಾಂತಿ ಭಂಗವಾಗುತ್ತದೆ. ಕೌಟುಂಬಿಕ ಗಲಾಟೆ ಹೆಚ್ಚಾಗುತ್ತದೆ.

ಬೇರೆಯವರ ಕುಂಕುಮ : ಅಪ್ಪಿತಪ್ಪಿಯೂ ಬೇರೆ ಮಹಿಳೆಯರ ಸಿಂಧೂರವನ್ನು ಬಳಸಬಾರದು. ಹಾಗೆ ಮಾಡುವುದನ್ನು ಧರ್ಮಗ್ರಂಥಗಳಲ್ಲಿ ಅಶುಭವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಸಿಂಧೂರವನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಹಾಗೆಯೇ ಬೇರೊಬ್ಬರ ಹಣದಿಂದಲೂ ಕುಂಕುಮವನ್ನು ಖರೀದಿ ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

ಕೂದಲಿಗೆ ಸಿಂಧೂರ : ಹಣೆಯ ಮೇಲೆ ಕುಂಕುಮ ಧರಿಸುವುದ ಪದ್ಧತಿ. ಆದ್ರೆ ಕೆಲವರು ಹಚ್ಚಿದ ಸಿಂಧೂರವನ್ನು ಕೂದಲಿನ ಮೂಲಕ ಮರೆಮಾಚುತ್ತಾರೆ. ಶಾಸ್ತ್ರಗಳ ಪ್ರಕಾರ, ಕುಂಕುಮವನ್ನು ಕೂದಲಿನ ಒಳಗೆ ಮರೆ ಮಾಚುವುದು ಒಳ್ಳೆಯದಲ್ಲ. ಇದ್ರಿಂದ ಸಂಬಂಧದಲ್ಲಿ ಸಮಸ್ಯೆ ತಲೆದೂರುತ್ತದೆ.

ಅಮ್ಮ ಹಾಕಿದ ಲಕ್ಷ್ಮಣ ರೇಖೆಯನ್ನು ದಾಟೋದೇ ಇಲ್ಲ ಈ ರಾಶಿಯವರು!

ಧಾರ್ಮಿಕ ನಂಬಿಕೆಯ ಪ್ರಕಾರ, ವಿವಾಹಿತ ಮಹಿಳೆಯರು ಕೂದಲಿನ ಬೋಚಲು ತೆಗೆದು ಅಲ್ಲಿ ಸಿಂಧೂರವನ್ನು ಇಡಬೇಕು. ಹಾಗೆಯೇ ಕೂದಲು ಒಣಗಿದ ನಂತ್ರ ಸಿಂಧೂರವನ್ನು ಹಚ್ಚಿಕೊಳ್ಳಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಸಿಂಧೂರ ಇಟ್ಟುಕೊಳ್ಳುವುದ್ರಿಂದ ಆಗುವ ಲಾಭ : 
ಕುಂಕುಮ ಸಂತೋಷವನ್ನು ಹೆಚ್ಚಿಸುತ್ತದೆ. ದೇಹವನ್ನು ಆರೋಗ್ಯವಾಡುತ್ತದೆ. ಆರೋಗ್ಯವಾಗಿರುವ ವ್ಯಕ್ತಿಯ ಆಯಸ್ಸು ಸಹಜವಾಗಿಯೇ ಹೆಚ್ಚಾಗುತ್ತದೆ. ವೈವಾಹಿಕ ಜೀವನವು ಬಲವಾಗಿರುತ್ತದೆ

ನಂಬಿಕೆಗಳ ಪ್ರಕಾರ, ಹೆಂಡತಿ  ಪ್ರತಿ ದಿನ ಸಿಂಧೂರವನ್ನಿಟ್ಟುಕೊಂಡ್ರೆ  ಪತಿ ಅಕಾಲಿಕವಾಗಿ ಸಾವನ್ನಪ್ಪುವುದಿಲ್ಲ. ಸಿಂಧೂರ, ಪತಿಯನ್ನು ಸಾವಿನಿಂದ ರಕ್ಷಿಸುತ್ತದೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. 

ಕಾಗೆ ಕಣ್ಣು, ಗೂಬೆ ಕಣ್ಣು ಮಕ್ಕಳ ಮೇಲೆ ಬೀಳುತ್ತೆ, ದೃಷ್ಟಿ ತೆಗೆಯಬೇಕು ಅಷ್ಟೇ!

ಸಿಂಧೂರವನ್ನು ಲಕ್ಷ್ಮಿ ದೇವಿಯ ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ತಾಯಿ ಸಿಂಧೂರವನ್ನು ತುಂಬಾ ಇಷ್ಟಪಡುತ್ತಾರೆ. ಲಕ್ಷ್ಮಿ ದೇವಿಯ ಪೂಜೆಯಲ್ಲಿ ಸಿಂಧೂರವನ್ನು ಬಳಸಲಾಗುತ್ತದೆ. ಲಕ್ಷ್ಮಿ ಭೂಮಿಯ ಮೇಲೆ ಐದು ಸ್ಥಳಗಳಲ್ಲಿ ನೆಲೆಸಿದ್ದಾಳೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇದರಲ್ಲಿ ಮೊದಲ ಸ್ಥಾನ ಮಹಿಳೆಯ ತಲೆ. ಮಹಿಳೆ ತನ್ನ ಹಣೆ ಮೇಲೆ ಸಿಂಧೂರ ಇಟ್ಟುಕೊಂಡ್ರೆ  ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸಿರುತ್ತದೆ.  
 

Follow Us:
Download App:
  • android
  • ios