Asianet Suvarna News Asianet Suvarna News

Numerology Tips: ದಾಂಪತ್ಯದ ಗುಟ್ಟು ಬಿಚ್ಚಿಡುತ್ತೆ ನಿಮ್ಮ ಮದುವೆ ದಿನಾಂಕ

ಭಾರತದಲ್ಲಿ ಈಗ್ಲೂ ಜಾತಕ ಹೊಂದಿಸಿ ಮದುವೆ ಮಾಡುವ ಸಾಕಷ್ಟು ಕುಟುಂಬವಿದೆ. ಮದುವೆ ನಂತ್ರ ದಂಪತಿ ಸುಖವಾಗಿರಲಿ ಎನ್ನುವ ಕಾರಣಕ್ಕೆ ಜಾತಕ ನೋಡಲಾಗುತ್ತದೆ. ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮದುವೆಯಾಗುವ ಮುನ್ನ ದಿನಾಂಕದ ಬಗ್ಗೆಯೂ ಗಮನ ನೀಡಿ ಎನ್ನುತ್ತದೆ ಸಂಖ್ಯಾಶಾಸ್ತ್ರ.
 

Marriage Date Predict About Your Relationship
Author
First Published Oct 12, 2022, 5:29 PM IST | Last Updated Oct 12, 2022, 5:29 PM IST

ಜಾತಕದ ಹೊರತಾಗಿ ಸಂಖ್ಯಾಶಾಸ್ತ್ರದ ಮೂಲಕವೂ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಸಂಖ್ಯಾಶಾಸ್ತ್ರದ ಮೂಲಕ ನೀವು ವೃತ್ತಿ, ಆರೋಗ್ಯ, ಮದುವೆ ಸೇರಿದಂತೆ ಅನೇಕ ವಿಷ್ಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಮದುವೆಯಾದ ದಿನಾಂಕ ಕೂಡ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವ ದಿನಾಂಕದಂದು ಮದುವೆಯಾಗಿದ್ದೀರಿ ಎಂಬುದನ್ನು ನೋಡಿ, ನಿಮ್ಮ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಹೇಳಬಹುದು. 

ಮದುವೆ (Marriage) ದಿನಾಂಕ ಹಾಗೂ ದಾಂಪತ್ಯ ಜೀವನ : 

ದಿನಾಂಕ ಒಂದು : ಯಾವುದೇ ತಿಂಗಳ 1, 10, 19 ಮತ್ತು 28 ನೇ ತಾರೀಖಿನಂದು ನಿಮ್ಮ ಮದುವೆಯಾಗಿದ್ದರೆ ಸಂಖ್ಯಾಶಾಸ್ತ್ರ (Numerology) ದ ಪ್ರಕಾರ, 2, 3, 4, 5, 7, 8, 9 ಸಂಖ್ಯೆಗಳು ನಿಮಗೆ ತುಂಬಾ ಒಳ್ಳೆಯದು. ಈ ದಿನಾಂಕದಂದು ಮದುವೆಯಾದ  ಜನರು ತಮ್ಮ ಮದುವೆಯ ಬಗ್ಗೆ ಗಂಭೀರವಾಗಿರುತ್ತಾರೆ. ಕ್ರೀಯಾಶೀಲವಾಗಿರುವ ಇವರು ತಮ್ಮ ಜೀವನದ ಬಗ್ಗೆ ಹೆಚ್ಚು ಫೋಕಸ್ ಮಾಡಲು ಇಷ್ಟಪಡ್ತಾರೆ. ಆದ್ರೆ ಸ್ವಲ್ಪ ಅಹಂಕಾರ (ego ) ಇವರಿಗಿರುತ್ತದೆ. ಇದ್ರಿಂದ ದಾಂಪತ್ಯದಲ್ಲಿ ಸಣ್ಣ ಪುಟ್ಟ ಗಲಾಟೆ ನಡೆಯುತ್ತದೆ.  

ದಿನಾಂಕ ಎರಡು :  ಯಾರು ಎರಡು, ಹನ್ನೊಂದು ಅಥವಾ ಇಪ್ಪತ್ತನೇ ತಾರೀಖಿನಂದು ಮದುವೆಯಾಗಿರ್ತಾರೋ ಅವರು ತಮ್ಮ ಸಂಬಂಧಕ್ಕೆ ಬಹಳ ನಿಷ್ಠರಾಗಿರುತ್ತಾರೆ. ದಂಪತಿ ಮಧ್ಯೆ ಬಾಂಧವ್ಯ (Attachment) ಇರುತ್ತದೆ. ಪರಸ್ಪರ ಕಾಳಜಿ ವಹಿಸುವ ಸ್ವಭಾವ ಹೊಂದಿರುತ್ತಾರೆ. ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗ್ತಾರೆ. ಆದ್ರೆ ಇವರ ಜೀವನ (Life) ದಲ್ಲಿ ಮೂರನೇ ವ್ಯಕ್ತಿಯಿಂದಾಗಿ ದಾಂಪತ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

ದಿನಾಂಕ ಮೂರು : ಮೂರು, ಮೂವತ್ತು ಅಥವಾ 12ನೇ ತಾರೀಖಿನಂದು ಮದುವೆಯಾದ ಜೋಡಿ ಯಶಸ್ವಿಯಾಗ್ತಾರೆ. ಅವರ ಜೀವನದಲ್ಲಿ ಸದಾ ಸುಖ, ಸಮೃದ್ಧಿ ಇರುತ್ತದೆ.  ಈ ದಂಪತಿ  ಜೀವನದಲ್ಲಿ ಶಿಸ್ತು (Discipline) ಮತ್ತು ಉತ್ತಮ ಜೀವನ ನಡೆಸಲು ಇಷ್ಟಪಡುತ್ತಾರೆ.

Numerology: ಈ ಸಂಖ್ಯೆಗಿಂದು ಹೆಚ್ಚಲಿರುವ ಆರೋಗ್ಯ ಸಮಸ್ಯೆ

ದಿನಾಂಕ ನಾಲ್ಕು : ಯಾವುದೇ ತಿಂಗಳ 4, 13 ಅಥವಾ 22ನೇ ತಾರೀಖಿನಂದು ಮದುವೆಯಾದ ಜೋಡಿಯ ವೈವಾಹಿಕ ಜೀವನ ಐಷಾರಾಮಿಯಿಂದ ಕೂಡಿರುತ್ತದೆ. ಅವರು ತಮ್ಮ ಸಂಬಂಧದಲ್ಲಿ ತೃಪ್ತರಾಗಿರುತ್ತಾರೆ. ತಮ್ಮ ಸಂಗಾತಿಯಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ.

ದಿನಾಂಕ ಐದು  : ಐದು, 14 ಅಥವಾ 23 ರಂದು ಮದುವೆಯಾದ ಜೋಡಿ  ಹಠಮಾರಿ ಸ್ವಭಾವದವರಾಗಿರುತ್ತಾರೆ. ಇವರು ತ್ವರಿತ ನಿರ್ಧಾರ (Decision) ತೆಗೆದುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇಬ್ಬರ ಹಠ, ಸಂಬಂಧದ (Bonding) ಮೇಲೆ ಪರಿಣಾಮ ಬೀರುತ್ತದೆ.

ದಿನಾಂಕ ಆರು : 6, 15 ಅಥವಾ 24 ರಂದು ಮದುವೆಯಾದ ಜನರು  ಸ್ನೇಹಿತರಂತಿರುತ್ತಾರೆ. ಸಂಬಂಧಿಕರ ಮಧ್ಯೆ ಜನಪ್ರಿಯರಾಗಲು ಇಷ್ಟಪಡುತ್ತಾರೆ. 

ದಿನಾಂಕ  ಏಳು : ಯಾವುದೇ ತಿಂಗಳ  7, 16, 25ನೇ ತಾರೀಖಿನಂದು ವಿವಾಹವಾಗುವ ಜನರು, ವೈವಾಹಿಕ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಇವರು ಪ್ರವಾಸವನ್ನು (Travel) ಹೆಚ್ಚು ಇಷ್ಟಪಡ್ತಾರೆ. ಆಕರ್ಷಕವಾದ ಜೀವನ (Attractive Life) ಅವರದ್ದಾಗಿರುತ್ತದೆ.

ದಿನಾಂಕ ಎಂಟು : 8, 17 ಅಥವಾ 26ನೇ ತಾರೀಖಿನಂದು ಮದುವೆಯಾದ ಜನರ ವೈವಾಹಿಕ ಜೀವನ ಯಶಸ್ವಿಯಾಗುತ್ತದೆ. ಯಾವುದೇ ಸಮಯದಲ್ಲೂ ಇವರು ಸಂಗಾತಿಯನ್ನು ಬಿಟ್ಟುಕೊಡುವುದಿಲ್ಲ. ಕಷ್ಟದ ಸಂದರ್ಭದಲ್ಲೂ ಸಂಗಾತಿಯನ್ನು ಬೆಂಬಲಿಸುವ ಮೂಲಕ ಗೆಲುವಿಗೆ ನೆರವಾಗ್ತಾರೆ.  

Astrology Tips : ನರಕ ಚತುರ್ದಶಿ ದಿನ ಈ ಉಪಾಯ ಮಾಡಿ ಚಮತ್ಕಾರ ನೋಡಿ

ದಿನಾಂಕ ಒಂಭತ್ತು : 9, 18 ಅಥವಾ 27ನೇ ತಾರೀಖಿನಂದು ಮದುವೆಯಾಗುವ ದಂಪತಿ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಕಂಡು ಬರುತ್ತವೆ. ಆದ್ರೆ ಇದು ದೀರ್ಘಕಾಲ ಇರುವುದಿಲ್ಲ. ಗಲಾಟೆ ಇದ್ರೂ ಪ್ರೀತಿಗೆ ಕೊರತೆಯಿರುವುದಿಲ್ಲ. ದಂಪತಿ ಮಧ್ಯೆ ನಂಬಿಕೆ ಹೆಚ್ಚಿರುತ್ತದೆ. ಹಾಗಾಗಿ ಭಿನ್ನಾಭಿಪ್ರಾಯ ಕೆಲ ಸಮಯದಲ್ಲಿ ದೂರವಾಗುತ್ತದೆ. 

Latest Videos
Follow Us:
Download App:
  • android
  • ios