ನಿಜವಾಯ್ತು ಕೋಡಿಶ್ರೀಗಳು ನುಡಿದಿದ್ದ 'ಮಾಜಿ ಪ್ರಧಾನಿ ಸಾವು' ಭವಿಷ್ಯ!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದೊಂದಿಗೆ ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಗಿದೆ. ಜೂನ್ ತಿಂಗಳಲ್ಲಿ ಶ್ರೀಗಳು ಇಬ್ಬರು ಪ್ರಧಾನಿಗಳ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದರು.
ಬೆಂಗಳೂರು (ಡಿ.26): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಈ ನಡುವೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದ ಭವಿಷ್ಯ ಕೂಡ ನಿಜವಾಗಿದೆ. ಈ ವರ್ಷದ ಜೂನ್ 25 ರಂದು ಧಾರವಾಡದಲ್ಲಿ ಮಾತನಾಡುವ ವೇಳೆ, ಭಾರತೀಯ ಪರಂಪರೆಯ ಪ್ರಕಾರ ಪ್ರಸ್ತುತ ನಾವು ಕ್ರೋಧಿನಾಮ ಸಂವತ್ಸರದಲ್ಲಿದ್ದು, ಪಂಚ ಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಭಾರೀ ತೊಂದರೆ ಉಂಟಾಗಲಿದೆ ಎಂದು ಹೇಳಿದ್ದರು.
ನಾನು 4 ತಿಂಗಳ ಮೊದಲೇ ಹೇಳಿದಂತೆ ವಿದೇಶದಲ್ಲಿ ಭೀಕರ ಮಳೆಯಾಗ್ತದೆ, ಇಬ್ಬರು ಪ್ರಧಾನಿಗಳು ಸಾಯುತ್ತಾರೆ, ಸಾವು ನೋವುಗಳು ಸಂಭವಿಸುತ್ತವೆ, ದೊಡ್ಡ ದೊಡ್ಡವರಿಗೆ ಭಾರಿ ದುಃಖ, ನೋವು, ತಾಪಎದುರಾಗುತ್ತದೆ ಎಂದು ಹೇಳಿದ್ದೆನು. ಅದೇ ರೀತಿ ಆಗಿದೆ. ಈಗ ರಾಜ್ಯದಲ್ಲಿಯೂ ದೊಡ್ಡವರಿಗೆ ಕಷ್ಟ ಅನುಭವಿಸುವ ರೀತಿ ಪ್ರಕರಣಗಳು ನಡೆಯುತ್ತಿವೆ. ಕರೆಯದೇ ಬರುವವನು ಕೋಪ, ಬರೆಯದೇ ಹೋದವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಈ ಮೂರದ್ದೂ ನಿಯತ್ತು ಇಟ್ಟುಕೊಂಡವರಿಗೆ ಯಾವ ಸಮಸ್ಯೆಯೂ ಬರುವುದಿಲ್ಲ. ಆದರೆ, ದುಡ್ಡು, ಅಧಿಕಾರ ಮುಖ್ಯವೆಂದು ಹೊರಟವರು ಅಧಃಪತನ ಕಾಣುತ್ತಿದ್ದಾರೆ ಎಂದು ಹೇಳಿದ್ದರು.
ಅವರು ಇಬ್ಬರು ಪ್ರಧಾನಿಗಳ ಸಾವಿನ ಭವಿಷ್ಯ ನುಡಿದಿದ್ದರಾದರೂ, ವರ್ಷದ ಕೊನೆಯ ಹಂತದಲ್ಲಿ ಮನಮೋಹನ್ ಸಿಂಗ್ ನಿಧನದೊಂದಿಗೆ ಅವರು ನುಡಿದಿದ್ದ ಪ್ರಮುಖ ಮಾತು ನಿಜವಾಗಿದೆ.
Breaking: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ನಾಳೆ ಶಾಲಾ-ಕಾಲೇಜಿಗೆ ರಜೆ
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಜನರಿಗೆ ದೇವರು, ಧರ್ಮ, ಭವಿಷ್ಯ, ದಿನ, ಕಾಲ, ಪಂಚಾಂಗದ ಮಹತ್ವವಿದೆ. ಇದು ಭಾರತೀಯ ಪದ್ದತಿಯಲ್ಲಿ ಇದು ಕ್ರೋಧಿನಾಮ ಸಂವತ್ಸರವಾಗಿದೆ. ಇದು ಒಳಿತಿಗಿಂತ ಕೆಡುಕನ್ನು ಹೆಚ್ಚು ಮಾಡುತ್ತದೆ. ಭೂಮಿ, ಆಕಾಶ, ನೀರು, ವಾಯು, ಬೆಂಕಿ ಸೇರಿ ಐದು ಪಂಚಭೂತಗಳಿಂದ ತೊಂದರೆಯಿದೆ. ಇದನ್ನು ನಾನು ಆಕಾಶತತ್ವ ಎಂದು ಕರೆಯುತ್ತಾರೆ. ಶ್ರಾವಣದಲ್ಲಿ ಆಕಾಶ ತತ್ವದ ಬಗ್ಗೆ ಹೇಳುತ್ತೇನೆ. ಈ ಸಂವತ್ಸರದಲ್ಲಿ ಸುರಿದಲ್ಲಿಯೇ ಮಳೆ ಸುರಿಯುತ್ತದೆ. ಬೆಳೆ ಬಂದರೆ ಬಂತು ಇಲ್ಲವೆಂದರೆ ಇಲ್ಲ. ಈಗ ಜಲಪ್ರಳಯ ಆಗಲಿದೆ. ಭೂ ಕುಸಿತ ಆಗಲಿದೆ. ವಾಯುನಿಂದಲೂ ವಿಪರೀತ ತೊಂದರೆಯಿದೆ. ಆದರೂ, ನಮ್ಮ ನಾಡಿಗೆ ಈ ಬಾರಿ ಸುಭೀಕ್ಷೆಯಿದೆ ಎಂದಿದ್ದರು.
ಕ್ರೋಧಿನಾಮ ಸಂವತ್ಸರದಲ್ಲಿ ಪಂಚ ಭೂತಗಳ ಉಪಟಳ; ಇಬ್ಬರು ಪ್ರಧಾನಿಗಳ ಸಾವಿನ ಭವಿಷ್ಯ ನುಡಿದ ಕೋಡಿಶ್ರೀ
ರಾಜಕಾರಣದಲ್ಲಿ ನಾನು ಹೇಳಿದಂತೆ ಅತಂತ್ರದಿಂದಲೇ ಕೂಡಿದೆ. ಶ್ರಾವಣದಲ್ಲಿ ನಾನು ಈ ಬಗ್ಗೆ ರಾಜಕೀಯದ ಬಗ್ಗೆ ನುಡಿಯುತ್ತೇನೆ. ಅಶುಭವನ್ನು ಈಗಲೇ ನುಡಿಯಬಾರದು. ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣನ ಕೈಯಿಂದ ಕತ್ತರಿಸುತ್ತಾರೆ. ಆದರೆ, ಈಗ ಅಭಿಮನ್ಯುವಿನ ಹೆಂಡತಿ ಪಾರ್ಲಿಮೆಂಟಿಗೆ ಪ್ರವೇಶ ಮಾಡುತ್ತಾಳೆ. ಆದರೆ, ಈಗ ಪಾರ್ಲಿಮೆಂಟಿನಲ್ಲಿ ಧುರ್ಯೋಧನನ ತೊಡೆ ಮುರಿಸಿದ ಕೃಷ್ಣ ಇಲ್ಲಿಲ್ಲ. ಆದ್ದರಿಂದ ಧುರ್ಯೋಧನನೇ ಗೆಲ್ಲುತ್ತಾನೆ ಎಂದು ಸೂಚ್ಯಾರ್ಥದಲ್ಲಿ ಹೇಳಿದ್ದರು.