ಶ್ರದ್ದಾಭಕ್ತಿಯಿಂದ ನಡೆದ ಶ್ರೀ ಮಳಲೂರಮ್ಮ ದೇವಿಯ ಜಾತ್ರಾ ಮಹೋತ್ಸವ

ಚಿಕ್ಕಮಗಳೂರು ತಾಲ್ಲೂಕಿನ ಮಳಲೂರು ಗ್ರಾಮದ ಪುರಾತನ ಇತಿಹಾಸವುಳ್ಳ ಹದಿನಾರು ಹಳ್ಳಿಯ ಗ್ರಾಮದೇವತೆಯಾದ ಮಳಲೂರಮ್ಮ ದೇವಿಯ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು. 

Malaluramma fare in Chikmagalore skr

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು ತಾಲ್ಲೂಕಿನ ಮಳಲೂರು ಗ್ರಾಮದ ಪುರಾತನ ಇತಿಹಾಸವುಳ್ಳ ಹದಿನಾರು ಹಳ್ಳಿಯ ಗ್ರಾಮದೇವತೆಯಾದ ಮಳಲೂರಮ್ಮ ದೇವಿಯ ಜಾತ್ರಾ ಮಹೋತ್ಸವವು ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು. ದೇವಾಲಯ ಸುತ್ತಮುತ್ತಲು ಹಳ್ಳಿಸೊಗಡಿನ ಆಟಿಕೆ ವಸ್ತುಗಳು, ತಿಂಡಿ ತಿನಿಸುಗಳು ಗ್ರಾಮಸ್ಥರನ್ನು ಆಕರ್ಷಿ ಸುತ್ತಿತ್ತು. ಯುವಕರು, ಮಕ್ಕಳು ಜಾತ್ರಾ ಮಹೋತ್ಸವದಲ್ಲಿ ನಡೆಯುವ ವಿವಿಧ ಆಟಗಳಲ್ಲಿ ಭಾಗವಹಿಸಿ ಮನರಂಜಿಸಿದರು. 

ಎತ್ತಿನಗಾಡಿಯಲ್ಲಿ ಮೆರವಣಿಗೆ: ವಿವಿಧ ಗ್ರಾಮಗಳಿಂದ ಆಗಮಿಸಿದ ಯುವಕರು ಎತ್ತಿನಗಾಡಿಯನ್ನು ಅಲಂಕೃತಗೊಳಿಸಿ ದೇವಾಲಯದ ಸುತ್ತಮುತ್ತಲು ಮೆರವಣಿಗೆ ಹಾಕಿದರು. ದೇವಾಲಯದಿಂದ ಶ್ರೀ ಮಳಲೂರಮ್ಮ ದೇವಿಯನ್ನು ವಾದ್ಯಗೋಷ್ಠಿಯೊಂದಿಗೆ ಕರೆತಂದು ಅಲಂಕೃತ ರಥದಲ್ಲಿ ಕುಳ್ಳಿರಿಸಿ ವಿಶೇಷ ಪೂಜೆಯನ್ನು ನಡೆಸಲಾಯಿತು. ನಂತರ ನೂರಾರು ಸಂಖ್ಯೆಯಲ್ಲಿ ಭಕ್ತರು ಜಯಘೋಷದೊಂದಿಗೆ ರಥವನ್ನು ಮುನ್ನೆಡೆಸಿದರು. ಇದೇ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು  ಅಲಂಕೃತ ರಥೋತ್ಸವ ಆರಂಭವಾಗುತ್ತಿದ್ದಂತೆ ಬಾಳೆಹಣ್ಣನ್ನು ತೂರುವ ಮೂಲಕ ಸಂಭ್ರಮಿಸಿದರು. ನಾಳೆ ಗ್ರಾಮದಲ್ಲಿ ಮರಿಸಿಡಿ ಜಾತ್ರೆ ಹಾಗೂ ವಿಶೇಷ ಪೂಜೆ ಜರುಗಲಿದೆ.

ಇಷ್ಟಾರ್ಥ ಈಡೇರಿಕೆಗಾಗಿ ಕೆಂಪು ದಾರದ ಈ ಸರಳ ಪರಿಹಾರ ಕಾರ್ಯ ಕೈಗೊಳ್ಳಿ..

Latest Videos
Follow Us:
Download App:
  • android
  • ios