Mysuru: ಚಾಮುಂಡಿ ಬೆಟ್ಟದ ಮಹಾನಂದಿಗೆ ಮಹಾಭಿಷೇಕ
ಚಾಮುಂಡಿಬೆಟ್ಟದ ಮೇಲಿನ ಏಕಶಿಲಾ ವಿಗ್ರಹ ಮಹಾನಂದಿಗೆ ಭಾನುವಾರ ಮಹಾಭಿಷೇಕ ನೆರವೇರಿತು. ಸುತ್ತೂರು ಮಠದ ಶ್ರೀ ಶಿವಾರತ್ರಿದೇಶಿಕೇಂದ್ರ ಸ್ವಾಮೀಜಿ ಮತ್ತು ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಮಹಾಭಿಷೇಕವನ್ನು ಬೆಟ್ಟದ ಬೆಳಗ ಚಾರಿಟಬಲ್ ಟ್ರಸ್ಟ್‌ನವರು ಆಯೋಜಿಸಿದ್ದರು.
ಮೈಸೂರು (ನ.14): ಚಾಮುಂಡಿಬೆಟ್ಟದ ಮೇಲಿನ ಏಕಶಿಲಾ ವಿಗ್ರಹ ಮಹಾನಂದಿಗೆ ಭಾನುವಾರ ಮಹಾಭಿಷೇಕ ನೆರವೇರಿತು. ಸುತ್ತೂರು ಮಠದ ಶ್ರೀ ಶಿವಾರತ್ರಿದೇಶಿಕೇಂದ್ರ ಸ್ವಾಮೀಜಿ ಮತ್ತು ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ ನೇತೃತ್ವದಲ್ಲಿ ನಡೆದ ಈ ಮಹಾಭಿಷೇಕವನ್ನು ಬೆಟ್ಟದ ಬೆಳಗ ಚಾರಿಟಬಲ್ ಟ್ರಸ್ಟ್‌ನವರು ಆಯೋಜಿಸಿದ್ದರು. ಅನೇಕ ವರ್ಷಗಳಿಂದ ಪ್ರತಿವರ್ಷದ ಕಾರ್ತಿಕ ಮಾಸದಲ್ಲಿ ಟ್ರಸ್ಟ್ ವತಿಯಿಂದ ಮಹಾಭಿಷೇಕ ಆಯೋಜಿಸುತ್ತಿದ್ದು, ಇದು 17ನೇ ಬಾರಿಗೆ ಆಯೋಜಿಸಲಾಗಿದೆ. ಮಹಾನಂದಿಗೆ 32 ಬಗೆಯ ಪೂಜೆ ನೆರವೇರಿಸಲಾಯಿತು.
ವಿವಿಧ ಹಣ್ಣು, ಹಾಲು, ಚಂದನ, ಶ್ರೀಗಂಧ, ಬಿಲ್ವಪತ್ರೆ, ಖರ್ಜೂರ, ಕೊಬ್ಬರಿ, ಹರಿಶಿಣ ಮತ್ತು ಕುಂಕಮದಿಂದ ಅಭಿಷೇಕ ನೆರವೇರಿಸಲಾಯಿತು. ನಂತರ ಕೊನೆಯಲ್ಲಿ ಜಲಾಭಿಷೇಕದೊಡನೆ ಮಹಾಭಿಷೇಕವನ್ನು ಸಮಾಪ್ತಿಗೊಳಿಸಲಾಯಿತು. ಈ ವೇಳೆ ನೂರಾರು ಮಂದಿ ಭಕ್ತರು ಹಾಜರಿದ್ದರು. ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳಾದ ಎನ್. ಗೋವಿಂದ, ಎಸ್. ಪ್ರಕಾಶನ್, ವಿ.ಎನ್. ಸುಂದರ್, ಶಿವಕುಮಾರ್ ಮೊದಲಾದವರು ಇದ್ದರು.
ರೈಲು ಆಯ್ತು ಈಗ ಮೈಸೂರು ವಿಮಾನ ನಿಲ್ದಾಣಕ್ಕೂ ಒಡೆಯರ್ ಹೆಸರು: ಸಂಸದ ಪ್ರತಾಪ್ ಸಿಂಹ
ಶನೈಶ್ವರ ಸ್ವಾಮಿ ದೇವಸ್ಥಾನದ ವೆಬ್‌ಸೈಟ್‌ಗೆ ಚಾಲನೆ: ಕಳೆದ 75 ವರ್ಷಗಳ ಹಿಂದೆ ವಿಗ್ರಹ ಪ್ರತಿಷ್ಠಾಪನೆಗೊಂಡು ಆನಂತರ ಜೀರ್ಣೋದ್ದಾರಗೊಂಡಿರುವ ಚೌಕಹಳ್ಳಿ ಗ್ರಾಮದ ಶನೈಶ್ಚರ ಸ್ವಾಮಿ ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲೆಂದು ದೇವಸ್ಥಾನದ ಟ್ರಸ್ಟ್ ವತಿಯಿಂದ ವೆಬ್‌ಸೈಟ್ ಆರಂಭಿಸಲಾಗಿದೆ ಎಂದು ಅಧ್ಯಕ್ಷ ರಾಘವೇಂದ್ರಸ್ವಾಮಿ ಹೇಳಿದರು. ದೇವಾಲಯದ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ದೇವಾಲಯದ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಿಂದಲ್ಲದೆ ರಾಜ್ಯದ ನಾನಾ ಭಾಗಗಳಿಂದ ಇಲ್ಲಿನ ದೇವಾಲಯಕ್ಕೆ ಭಕ್ತರು ಆಗಮಿಸುತ್ತಿದ್ದು ಅವರ ಅನುಕೂಲಕ್ಕೆ ಮುಂದೆ ಮತ್ತಷ್ಟುಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು. ಪ್ರಸ್ತುತ ಪ್ರತಿ ಶನಿವಾರ ಮತ್ತು ಬುಧವಾರ ದೇವಾಲಯದಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿದ್ದು ಅಮವಾಸ್ಯೆ ಮತ್ತು ಹುಣ್ಣಿಮೆಯಂದು ರುದ್ರಾಭಿಷೇಕ ನಡೆಯಲಿದ್ದು ಮಹಾಶಿವರಾತ್ರಿ ಹಬ್ಬದ ವಾರದ ನಂತರ ವಾರ್ಷಿಕ ಆರಾಧನೆ ಮತ್ತು ಶನೈಶ್ಚರ ಜಯಂತಿ ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.
ಟಿಪ್ಪುವಿನ ಪ್ರತಿಮೆ ಏಕೆ ಬೇಕು?: ಸಾಹಿತಿ ಎಸ್.ಎಲ್.ಭೈರಪ್ಪ
ಸಂಕ್ರಾಂತಿ ಹಬ್ಬದ ಮಾರನೆ ದಿನ ನವಗ್ರಹ ಶಾಂತಿ ಹೋಮ ನಡೆಯಲಿದ್ದು ಭಕ್ತರು ಮುಂದೆ ವೆಬ್‌ಸೈಟ್ ಮೂಲಕ ದೇವಾಲಯದಲ್ಲಿ ನಡೆಯಲಿರುವ ಧಾರ್ಮಿಕ ಮತ್ತು ಪೂಜಾ ಕಾರ್ಯಕ್ರಮಗಳ ಪೂರ್ಣ ಮಾಹಿತಿ ಪಡೆಯಬಹುದು. ದೇವಾಲಯದ ರಾಜ ಗೋಪುರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಭಕ್ತರು ಆರ್ಥಿಕ ಸಹಾಯ ಮಾಡುವ ಮೂಲಕ ನಮ್ಮ ಸೇವಾ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಅವರು ಕೋರಿದರು. ಹೆಚ್ಚಿನ ಮಾಹಿತಿಗೆ ಮೊ. 94495 37296 ಸಂಪರ್ಕಿಸುವಂತೆ ಮನವಿ ಮಾಡಿದರು. ಅರ್ಚಕ ಆನಂದ್, ವಿಬ್‌ಸೈಟ್ ವಿನ್ಯಾಸಕ ರೇಣುಕಾಪ್ರಸಾದ್ ಮೊದಲಾದವರು ಇದ್ದರು.