ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ತಿರುಪತಿ ತಿರುಮಲ ದೇಗುಲ ನಿರ್ಮಾಣವಾಗಿ 12 ವರ್ಷ. ಈ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್, ಮಹಾ ಸಂಪ್ರೋಕ್ಷಣ ಕಾರ್ಯಕ್ರಮ ಹಮ್ಮಿಕೊಂಡಿದೆ.
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಮೇ.07): ಬೆಂಗಳೂರಿನ (Bengaluru) ವೈಯಾಲಿಕಾವಲ್‌ನಲ್ಲಿರುವ (Vyalikaval) ತಿರುಪತಿ ತಿರುಮಲ ದೇಗುಲ (Tirumala Tirupati Devasthanam) ನಿರ್ಮಾಣವಾಗಿ 12 ವರ್ಷ. ಈ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್, ಮಹಾ ಸಂಪ್ರೋಕ್ಷಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಕುರಿತು TTD ಬೆಂಗಳೂರು ಸಲಹಾ ಸಮಿತಿ ಸದಸ್ಯರು ಇಂದು ಸುದ್ದಿಗೋಷ್ಟಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬೆಂಗಳೂರು TTD ಸಲಹಾ ಸಮಿತಿ ಅಧ್ಯಕ್ಷ ಡಾ. ಸಂಪತ್ ರವಿ ನಾರಾಯಣ್, ವೈಯಾಲಿಕಾವಲ್ ತಿರುಪತಿ ತಿರುಮಲ ದೇಗುಲಕ್ಕೆ 12 ವರ್ಷ ತುಂಬಿರೋದ್ರಿಂದ ಮೂರು ದಿನ ಮಹಾ ಸಂಪ್ರೋಕ್ಷಣ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಮೇ 9, 10, 11ರಂದು ನಡೆಯಲಿರುವ ಮಹಾ ಸಂಪ್ರೋಕ್ಷಣ ಕಾರ್ಯಕ್ರಮ ನಡೆಯಲಿದೆ ಎಂದು ವಿವರಣೆ ನೀಡಿದರು. ಮೇ 11 ರಂದು ಪೂರ್ಣಾಹುತಿ ಮಹಾ ಸಂಪ್ರೋಕ್ಷಣೆ ನಡೆಯಲಿದೆ. ತಿರುಪತಿಯಿಂದ ಅರ್ಚಕರು ಇಲ್ಲಿಗೆ ಬಂದು ಯಜ್ಞ ಯಾಗಾದಿಗಳನ್ನ ನೆರವೇರಿಸಲಿದ್ದಾರೆ. ಏಳು ಯಜ್ಞಕುಂಡಗಳನ್ನ ನಿರ್ಮಿಸಲಾಗ್ತಿದ್ದು, ಕಾರ್ಯಕ್ರಮಕ್ಕೆತಯಾರಿಗಳು ನಡೆಯುತ್ತಿವೆ. ಮಹಾ ಸಂಪ್ರೋಕ್ಷಣೆ ಮಾಡುವ ಬಗ್ಗೆ ಡಾ. ಸಂಪತ್ ರವಿ ನಾರಾಯಣ್ ವಿವರಣೆ ನೀಡಿದರು. ವೈಯಾಲಿಕಾವಲ್‌ನ ದೇಗುಲ ನಿರ್ಮಿಸಿ 12 ವರ್ಷಗಳಾಗಿದೆ. 12 ವರ್ಷಕ್ಕೊಮ್ಮೆ ಮಹಾ ಸಂಪ್ರೋಕ್ಷಣ ಕಾರ್ಯಕ್ರಮ ನಡೆಯುತ್ತೆ.
ಟಿಟಿಡಿಯಿಂದ ತಿರುಪತಿ ‘ಹನುಮ ಜನ್ಮಸ್ಥಳ’ ಅಭಿವೃದ್ಧಿಗೆ ಶಂಕು: ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸಡ್ಡು ಯತ್ನ!
ಇದು ದೇವರಿಗೆ ಶಕ್ತಿ ತುಂಬುವ ಕಾರ್ಯಕ್ರಮ. ದೇಗುಲ ನಿರ್ಮಿಸಿ ಉದ್ಘಾಟನೆ ಮಾಡುವಾಗ ಹೇಗೆ ಸಂಕಲ್ಪ ಮಾಡಿ ದೇವರಿಗೆ ಶಕ್ತಿ ತುಂಬಲಾಗುತ್ತದೆಯೋ ಹಾಗೇ ಈ ಕಾರ್ಯಕ್ರಮ ಮಾಡಲಾಗುತ್ತೆ. ಇದೊಂದು ರೀತಿ ದೇಗುಲವನ್ಮ ಪುನರುಜ್ಜೀವನ ಮಾಡುವ ಕಾರ್ಯ ಎಂದರು. ಈ ಮಹಾ ಸಂಪ್ರೋಕ್ಷಣ ಕಾರ್ಯಕ್ರಮದ ಮುಗಿದ ಬಳಿಕ ದೇಗುಲದ ಆವರಣದೊಳಗೆ ಒಂದಷ್ಟು ನಿರ್ಮಾಣ ಕೆಲಸಗಳನ್ನ ಮಾಡಲು ನಿರ್ಧರಿಸಲಾಗಿದೆ. ದೇಗುಲದ ಆವರಣದಲ್ಲಿ ಕಲ್ಯಾಣಿ, ಪದ್ಮಾವತಿ ಸನ್ನಿಧಿಯನ್ನ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಆಂಧ್ರದ ತಿರುಪತಿಗೆ ಪ್ರತಿಸ್ಪರ್ಧಿಯಾಗಿ ನಿಂತ ತೆಲಂಗಾಣದ ಯದಾದ್ರಿ
ವೈಯಾಲಿಕಾವಲ್ ಟಿಡಿಟಿ ದೇಗುಲದಲ್ಲೇ ಕೇಶಮುಂಡನ: ತಿಮ್ಮಪ್ಪನ ಭಕ್ತರು ತಿರುಪತಿ ದೇಗುಲಕ್ಕೆ ಹೋಗಿ ಹರಕೆಯ ಕೇಶ ಮುಂಡನ ಮಾಡಿಸಿಕೊಳ್ಳಬೇಕಾಗಿಲ್ಲ. ಇನ್ಮುಂದೆ ವೈಯಾಲಿ ಕಾವಲ್ ಟಿಟಿಡಿ ದೇಗುಲದಲ್ಲೇ ಹರಕೆಯ ಕೇಶಮುಂಡನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಆರು ತಿಂಗಳಲ್ಲಿ ಬರಲಿದೆ ಈ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನ ಮಾಡಲಾಗಿದೆ. ಕರ್ನಾಟಕದ ಭಕ್ತರಿಗಾಗಿ ತಿರುಪತಿ ಮಾದರಿಯಲ್ಲಿ ದೇವಸ್ಥಾನ ಅಭಿವೃದ್ಧಿಗೂ ಪ್ಲ್ಯಾನ್ ಮಾಡಲಾಗಿದೆ. ಬೆಂಗಳೂರಿನ ಈಶಾನ್ಯ ದಿಕ್ಕಿನಲ್ಲಿ ತಿರುಪತಿ ಮಾದರಿಯಲ್ಲಿ ದೇಗುಲ ನಿರ್ಮಿಸುವ ಯೋಜನೆ ಇದೆ. ತಿರುಪತಿ ಮಾದರಿಯಲ್ಲಿ ದೇಗುಲ ನಿರ್ಮಿಸುವ ಯೋಜನೆ ಇದೆ. ಆಗಮ ಶಾಲೆ, ಪದ್ಮಾವತಿ ಸನ್ನಿಧಿ, ಕಲ್ಯಾಣ ಕಟ್ಟ ಎಲ್ಲವನ್ನೂ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜಾಗದ ಹುಡುಕಾಟ ಕೂಡ ನಡೆಯುತ್ತಿದೆ. ಸುಮಾರು 30 ರಿಂದ 50 ಎಕರೆ ಜಾಗ ನೋಡ್ತಿದ್ದೇವೆ ಎಂದು ಡಾ. ಸಂಪತ್ ರವಿ ನಾರಾಯಣ್ ತಿಳಿಸಿದರು.
