ಗುರೂಜಿ ಲವ್ ಮ್ಯಾರೇಜ್ ಆಗುತ್ತೋ, ಲವ್ ಮ್ಯಾರೇಜ್ ಆಗುತ್ತೋ ಎಂದು ಜ್ಯೋತಿಷಿ ಬಳಿ ಪ್ರಶ್ನೆ ಕೇಳಿದ ಬೆಂಗಳೂರು ಯುವತಿ ಕೊನೆಗೆ 6 ಲಕ್ಷ ರೂಪಾಯಿ ಕಳೆದಕೊಂಡ ಘಟನೆ ನಡೆದಿದೆ. ಅಷ್ಟಕ್ಕೂ ಪ್ರಶ್ನೆ ಕೇಳಿದ ಬೆನ್ನಲ್ಲೇ ದುಡ್ಡು ಕಳೆದುಕೊಂಡಿದ್ದು ಹೇಗ?
ಬೆಂಗಳೂರು(ಫೆ.17) ನಕಲಿ ಜ್ಯೋತಿಷಿ ಮಾತು ಕೇಳಿ ಹಲವರು ಸಂಕಷ್ಟಕ್ಕೆ ಸಿಲುಕಿದ ಘಟನೆಗಳಿವೆ. ಇದೀಗ ಜ್ಯೋತಿಷಿಗಳು ಕೂಡ ಆನ್‌ಲೈನ್ ಮೂಲಕ ಸೇವೆ ನೀಡುತ್ತಿದ್ದಾರೆ. ಇದರಲ್ಲಿ ಅಸಲಿ ಯಾರು? ನಕಲಿ ಯಾರು ಅನ್ನೋದು ಪತ್ತೆ ಹಚ್ಚುವುದು ಸವಾಲಿನ ಕೆಲಸ. ನಕಲಿ ಕೈಯಲ್ಲಿ ಸಿಲುಕಿದರೆ ಸಮಸ್ಯೆ ಮತ್ತಷ್ಟು ದೊಡ್ಡದಾಗಲಿದೆ. ಇಷ್ಟೇ ಅಲ್ಲ ಇದ್ದ ಹಣವೂ ಕಳೆದೆುಕೊಳ್ಳಬೇಕಾಗುತ್ತದೆ. ಇದಕ್ಕೆ ಬೆಂಗಳೂರಿನ 24 ವರ್ಷದ ಯುವತಿ ಪ್ರಕರಣವೇ ಉದಾಹರಣೆ. ಈಕೆ ಆನ್‌ಲೈನ್ ಮೂಲಕ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ. ಈಕೆಯ ಕುತೂಹಲ ಹಾಗೂ ಪ್ರಶ್ನೆ ಅತ್ಯಂತ ಸರಳ. ನನಗೆ ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್? ಈ ಕುರಿತು ಮಾಹಿತಿ ಕೇಳಿದ್ದಾರೆ. ಕೆಲ ಮಂತ್ರಗಳನ್ನು ಪಠಿಸಿ ನಿಮ್ಗೆ ಪಕ್ಕಾ ಲವ್ ಮ್ಯಾರೇಜ್ ಎಂದಿದ್ದು ಮಾತ್ರ ಗೊತ್ತು. ಬಳಿಕ ಯುವತಿಯ ಸಂಕಷ್ಟ ಡಬಲ್ ಆಗಿದೆ. ಕಾರಣ ಖಾತೆಯಲ್ಲಿದ್ದ 6 ಲಕ್ಷ ರೂಪಾಯಿ ಕಳದುಕೊಂಡಿದ್ದಾಳೆ.
ಯುವತಿ ಆನ್ ಇನ್‌ಸ್ಟಾಗ್ರಾಂನಲ್ಲಿ ಜ್ಯೋತಿಷಿಯೊಬ್ಬರನ್ನು ಫಾಲೋ ಮಾಡುತ್ತಿದ್ದರು. ಈ ಜ್ಯೋತಿಷಿಗೆ ಇನ್‌ಸ್ಟಾಗ್ರಾಂನಲ್ಲಿ ಭಾರಿ ಫಾಲೋವರ್ಸ್ ಹೊಂದಿದ್ದರು. ಪ್ರತಿ ದಿನ ಸಲಹೆ, ಸೂಚನೆ ಮೂಲಕ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇನ್ನು ಈ ಜ್ಯೋತಿಷಿ ಬಳಿಕ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಹೀಗೆ ಇನ್‌ಸ್ಟಾಗ್ರಾಂ ಮೂಲಕ ಬೆಂಗಳೂರಿನ ಯುುವತಿ ನಕಲಿ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾಳೆ. ತನಗೆ ಲವ್ ಮ್ಯರೇಜ್ ಅಥವಾ ಅರೇಂಜ್ ಮ್ಯಾಜ್ ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಉತ್ತರಿಸಲು ಕೆಲ ಮಾಹಿತಿಯನ್ನು ಜ್ಯೋತಿಷಿ ಕೇಳಿದ್ದಾನೆ.
ಬೆಂಗಳೂರು: ಫೇಸ್‌ಬುಕ್‌ನಲ್ಲಿ ಸ್ನೇಹಿತನ ನಕಲಿ ಖಾತೆ ತೆರೆದು 1.5 ಲಕ್ಷ ಟೋಪಿ!
ವಿಜಯ್ ಕುಮಾರ್ ಎಂದು ಗುರುತಿಸಿಕೊಂಡ ವ್ಯಕ್ತಿ, ತಾನು ಪರಿಣಿತ ಜ್ಯೋತಿಷಿ ಎಂದು ಹೇಳಿಕೊಂಡು ಜಾತಕ ವಿಶ್ಲೇಷಣೆಗಾಗಿ ಆಕೆಯ ಹೆಸರು ಮತ್ತು ಹುಟ್ಟಿದ ವಿವರಗಳನ್ನು ಹಂಚಿಕೊಳ್ಳುವಂತೆ ಮನವೊಲಿಸಿದ್ದ. ಇದರಂತೆ ಎಲ್ಲಾ ಮಾಹಿತಿಗಳನ್ನು ಕಳುಹಿಸಿದ ಬಳಿಕ ಆನ್‌ಲೈನ್ ಮೂಲಕವೇ ಉತ್ತರ ನೀಡಿದ್ದ. ನಿಮಗೆ ಪಕ್ಕಾ ಲವ್ ಮ್ಯಾರೇಜ್ ಎಂದಿದ್ದಾರೆ. ಪ್ರೇಮ ವಿವಾಹವಾಗುತ್ತದೆ ಎಂದು ಹೇಳಿದ ನಂತರ, ಕುಮಾರ್ ಆಕೆಯ ಜಾತಕದಲ್ಲಿ ವಿಶೇಷ ಪೂಜೆಗಳು ಅಗತ್ಯವಿರುವ ಜ್ಯೋತಿಷ್ಯ ಸಮಸ್ಯೆಗಳಿವೆ ಎಂದು ಹೇಳಿದ್ದಾನೆ. TOI ವರದಿಯ ಪ್ರಕಾರ, ಆರಂಭದಲ್ಲಿ ಅವರು 1,820 ರೂ. ಕೇಳಿದರು, ಅದನ್ನು ಆಕೆ ಡಿಜಿಟಲ್ ಪಾವತಿ ಅಪ್ಲಿಕೇಶನ್ ಮೂಲಕ ಪಾವತಿಸಿದರು. ಕಾಲಾನಂತರದಲ್ಲಿ, ಅವರು ಆಕೆಯ ವೈವಾಹಿಕ ಭವಿಷ್ಯದ ಬಗ್ಗೆ ಹಲವಾರು ಕಥೆಗಳನ್ನು ಹೆಣೆದು, ಹೆಚ್ಚುವರಿ ಪೂಜೆಗಳಿಗೆ ಪದೇ ಪದೇ ಹಣವನ್ನು ಬೇಡುತ್ತಿದ್ದರು. ವಂಚನೆ ಅರಿವಾಗುವ ಹೊತ್ತಿಗೆ, ಅವರು ಈಗಾಗಲೇ ಸುಮಾರು ₹6 ಲಕ್ಷ ವರ್ಗಾಯಿಸಿದ್ದರು.
ಹಣ ವಾಪಸ್ ಕೇಳಿದಾಗ ಬೆದರಿಕೆ
ಯುವತಿ ಹಣ ವಾಪಸ್ ಕೇಳಿದಾಗ, ಕುಮಾರ್ ಕೇವಲ ₹13,000 ಹಿಂದಿರುಗಿಸಿದನು ಮತ್ತು ಬೆದರಿಕೆ ಹಾಕಲು ಪ್ರಾರಂಭಿಸಿದನು. ಹಣ ವಾಪಸ್ ಪಡೆಯಲು ಒತ್ತಾಯಿಸಿದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತು ಆತ್ಮಹತ್ಯೆ ಪತ್ರದಲ್ಲಿ ಆಕೆಯ ಹೆಸರನ್ನು ಬರೆಯುವುದಾಗಿ ಎಚ್ಚರಿಕೆ ನೀಡಿದ. ಕೆಲವು ದಿನಗಳ ನಂತರ, ಪ್ರಶಾಂತ್ ಎಂಬ ವಕೀಲ ಎಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿ, ಆಕೆಯ ಬೇಡಿಕೆಗಳಿಂದಾಗಿ ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾನೆ ಎಂದು ಹೇಳಿದ.
ಪೊಲೀಸ್ ತನಿಖೆಯಿಂದ ಸೈಬರ್ ವಂಚನೆ ಬಯಲು
ತಾನು ವಂಚನೆಗೊಳಗಾಗಿದ್ದೇನೆ ಎಂದು ಅರಿತುಕೊಂಡ ಯುವತಿ, ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರಿಗೆ ದೂರು ನೀಡಿದರು. ಈ ಸಂಪೂರ್ಣ ವಂಚನೆಯನ್ನು ಸೈಬರ್ ಅಪರಾಧಿಗಳು ನಡೆಸಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ, ನಿಜವಾದ ಜ್ಯೋತಿಷಿ ಅಥವಾ ವಕೀಲ ಯಾರೂ ಭಾಗಿಯಾಗಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್ಎಸ್ ಸೆಕ್ಷನ್ 318 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ಕೂತು ದುಬೈನಲ್ಲಿದೀವಿ ಅಂತಾ ವಂಚಿಸ್ತಿದ್ದ ಖದೀಮರ ಬಂಧನ ಹೇಗೆ ವಂಚಿಸುತ್ತಿದ್ದರು ಗೊತ್ತಾ?
