ಬಂಗಾರ-ಬೆಳ್ಳಿ ಆಭರಣಗಳ ಮೇಲೆ ಅತಿಯಾದ ಮೋಹ ನಮಗೆ. ಎಲ್ಲಾದ್ರೂ ಅದು ಕಳೆದು ಹೋದ್ರೆ ಜೀವ ಹೋದಂತಾಗುತ್ತೆ. ಹಾಗೆ ಎಲ್ಲಾದ್ರೂ ಸಿಕ್ಕರೆ ಖುಷಿ ಕಂಟ್ರೋಲ್ ಮಾಡೋದು ಕಷ್ಟ. ಆದ್ರೆ ಕಳೆದುಕೊಂಡ ಬಂಗಾರ – ಸಿಕ್ಕ ಬಂಗಾರ ಎರಡೂ ಒಳ್ಳೆಯದಲ್ಲ ಎಂಬುದು ನಿಮಗೆ ಗೊತ್ತಾ?
ಮನುಷ್ಯ (Human) ಜೀವನ, ಸುಖ (Happy), ಸಂತೋಷ, ಸಮೃದ್ಧಿ ಬಗ್ಗೆ ಹಿಂದೂ ಧರ್ಮದಲ್ಲಿ ವಿವರಿಸಲಾಗಿದೆ. ಸುಖ-ಸಮೃದ್ಧಿಗಾಗಿ ಯಾವ ನಿಯಮಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ. ಕೆಲವೊಂದು ನಮಗೆ ತಿಳಿಯದೇ ತಪ್ಪು (Wrong) ಗಳಾಗಿರುತ್ತವೆ. ಅದ್ರಿಂದ ಭವಿಷ್ಯದಲ್ಲಿ ಸಿಗ್ಬೇಕಾದ ಸುಖ ನಮಗೆ ಪ್ರಾಪ್ತಿಯಾಗುವುದಿಲ್ಲ. ನಮ್ಮ ದಿನನಿತ್ಯದ ಜೀವನದಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳು ಕೂಡ ನಮ್ಮ ಭವಿಷ್ಯ (Future) ದ ಮೇಲೆ ಪರಿಣಾಮ ಬೀರುತ್ತವೆ. ಅನೇಕ ಬಾರಿ ಅವುಗಳನ್ನು ನಾವು ನಿರ್ಲಕ್ಷ್ಯ ಮಾಡಿರ್ತೇವೆ. ಪದೇ ಪದೇ ಮನೆಯಲ್ಲಿ ಹಾಲು ಉಕ್ಕುವುದ್ರಿಂದ ಹಿಡಿದು ರಸ್ತೆಯಲ್ಲಿ ಸಿಗುವ ನಾಣ್ಯದವರೆಗೆ ಎಲ್ಲವೂ ನಮ್ಮ ಬದುಕಿನಲ್ಲಿ ಬದಲಾವಣೆಯ ಅಥವಾ ಶುಭ –ಅಶುಭದ ಸಂಕೇತವಾಗಿರುತ್ತದೆ. ಬಂಗಾರ- ಬೆಳ್ಳಿಯನ್ನು ಎಲ್ಲರೂ ಇಷ್ಟಪಡ್ತಾರೆ. ಭಾರತದಲ್ಲಿ ಬಂಗಾರ –ಬೆಳ್ಳಿ ಆಭರಣಕ್ಕೆ ಸದಾ ಬೇಡಿಕೆಯಿದೆ. ಬೆಲೆ ಎಷ್ಟೇ ಹೆಚ್ಚಾದ್ರೂ ಜನರು ಅದರ ಖರೀದಿ ಬಿಡುವುದಿಲ್ಲ. ಶಾಸ್ತ್ರಗಳಲ್ಲಿಯೂ ಚಿನ್ನ ಮತ್ತು ಬೆಳ್ಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಯಾವುದೇ ಶುಭ ಸಮಾರಂಭದಲ್ಲಿ ಚಿನ್ನವನ್ನು ಖರೀದಿಸಿದರೆ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಜನರು ಹಬ್ಬದಲ್ಲಿ ಬಂಗಾರ –ಬೆಳ್ಳಿ ಖರೀದಿ ಮಾಡ್ತಾರೆ. ಚಿನ್ನ-ಬೆಳ್ಳಿಗೆ ಸಂಬಂಧಿಸಿದ ಅನೇಕ ಶಕುನಗಳು ಮತ್ತು ಅಪಶಕುನಗಳನ್ನು ಸಹ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ, ಚಿನ್ನವನ್ನು ಕಳೆದುಕೊಳ್ಳುವುದು ಮತ್ತು ಪಡೆಯುವುದು ಅಶುಭ. ಇಂದು ಅದ್ರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡ್ತೇವೆ.
ದಾರಿಯಲ್ಲಿ ಸಿಕ್ಕ ಆಭರಣ ಮನೆಗೆ ತರಬೇಡಿ : ದಾರಿಯಲ್ಲಿ ಬಂಗಾರ ಸಿಕ್ಕರೆ ಯಾರು ಬಿಡ್ತಾರೆ ಸ್ವಾಮಿ. ಸದ್ದಿಲ್ಲದೆ ಜೇಬಿಗೆ ಹಾಕಿಕೊಂಡು ಮನೆಗೆ ಬರ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಾರಿಯಲ್ಲಿ ಬಿದ್ದ ಚಿನ್ನವನ್ನು ಎತ್ತಿಕೊಂಡು ಮನೆಗೆ ತರುವುದು ಶುಭವಲ್ಲ. ಚಿನ್ನದ ಆಭರಣ ಕಳೆದು ಹೋಗುವುದು ಮತ್ತು ಸಿಗುವುದು ಎರಡೂ ಅಶುಭವಾಗಿದೆ. ಹಾಗಾಗಿ ದಾರಿಯಲ್ಲಿ ಸಿಕ್ಕ ಬಂಗಾರ- ಬೆಳ್ಳಿಯನ್ನು ಮನೆಗೆ ತರಬಾರದು ಎಂದು ಹಿರಿಯರು ಹೇಳುತ್ತಾರೆ. ವಾಸ್ತವವಾಗಿ, ಜ್ಯೋತಿಷ್ಯದಲ್ಲಿ ಗುರು ಗ್ರಹದೊಂದಿಗೆ ಚಿನ್ನದ ಸಂಬಂಧವನ್ನು ಹೇಳಲಾಗಿದೆ. ಚಿನ್ನವನ್ನು ಕಳೆದುಕೊಂಡರೆ ಗುರು ಗ್ರಹವು ಜೀವನದ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ ಎಂದು ನಂಬಲಾಗಿದೆ.
ARAVA GANAPATHI TEMPLE: ಗೋವಾದಿಂದ ಕಾರವಾರಕ್ಕೆ ಬಂದ ಗಣಪಗೆ ಮಾಜಿ ಯೋಧರ ಸೇವೆ
ಉಂಗುರ : ಕೈ ಬೆರಳುಗಳಿಗೆ ಒಂದಲ್ಲ ಎರಡಲ್ಲ ಮೂರ್ನಾಲ್ಕು ಉಂಗುರ ಧರಿಸುವವರಿದ್ದಾರೆ. ಬೆಳ್ಳಿ ಹಾಗೂ ಬಂಗಾರ ಎರಡೂ ಉಂಗುರವನ್ನು ಜನರು ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನ ಅಥವಾ ಬೆಳ್ಳಿಯ ಉಂಗುರವನ್ನು ಕಳೆದುಕೊಳ್ಳುವುದು ಮಂಗಳಕರವಲ್ಲ. ಈ ಕಾರಣದಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ.
ಮೂಗು ಮತ್ತು ಕಿವಿಯ ಆಭರಣ : ಶಾಸ್ತ್ರದ ಪ್ರಕಾರ ಕಿವಿಯ ಆಭರಣ ಕಳೆದು ಹೋದರೆ ಅದೂ ಕೂಡ ಅಶುಭ. ಭವಿಷ್ಯದಲ್ಲಿ ಏನಾದರೂ ಅನಾಹುತ ಸಂಭವಿಸುವ ಸೂಚನೆ ಇದಾಗಿದೆ. ಮತ್ತೊಂದೆಡೆ, ಮೂಗಿನ ನತ್ತು ಅಥವಾ ಮೂಗಿಗೆ ಸಂಬಂಧಿಸಿದ ಇತರ ಆಭರಣಗಳನ್ನು ಕಳೆದುಕೊಳ್ಳುವುದು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ. ಇದ್ರಿಂದ ಅವಮಾನ ಅಥವಾ ದೂಷಣೆ ಎದುರಿಸಬೇಕಾಗುತ್ತದೆ. ಕಿವಿಯೋಲೆ ಕಳೆದುಕೊಂಡರೆ ಕೆಟ್ಟ ಸುದ್ದಿ ಸಿಗುವ ಸಾಧ್ಯತೆಯಿರುತ್ತದೆ.
ಕಲಾವಾ ಎಂಬ ಶ್ರೀ ರಕ್ಷೆ, ಕೈಗೆ ಧರಿಸಿದರೆ ದುಷ್ಟ ಶಕ್ತಿಗಳೆಲ್ಲ ದೂರ ದೂರ
ಕಾಲು ಕಾಲುಂಗುರ : ಶಾಸ್ತ್ರದ ಪ್ರಕಾರ, ಬಲ ಪಾದದ ಕಾಲುಂಗುರವನ್ನು ಕಳೆದುಕೊಂಡರೆ ಸಾಮಾಜಿಕ ಪ್ರತಿಷ್ಠೆ ಕಡಿಮೆಯಾಗಬಹುದು. ಅದೇ ಸಮಯದಲ್ಲಿ, ಎಡ ಪಾದದ ಉಂಗುರ ಕಳೆದುಕೊಂಡರೆ ಪ್ರಯಾಣದಲ್ಲಿ ಅಪಘಾತವಾಗುವ ಸಾಧ್ಯತೆಯಿರುತ್ತದೆ.
ಕುತ್ತಿಗೆ ಮತ್ತು ತೋಳಿನ ಆಭರಣ : ಕತ್ತಿಗೆ ಹಾಕುವ ಆಭರಣ, ನೆಕ್ಲೇಸ್ ಕಳೆದುಕೊಂಡರೆ ಸಂತೋಷ-ಸಮೃದ್ಧಿಯ ಕೊರತೆ ನಿಮ್ಮನ್ನು ಕಾಡುತ್ತದೆ. ತೋಳಿಗೆ ಹಾಕುವ ಆಭರಣ ಅಥವಾ ಬಳೆಯನ್ನು ಕಳೆದುಕೊಂಡರೆ ನಿಮ್ಮ ಗೌರವಕ್ಕೆ ಧಕ್ಕೆಯಾಗುತ್ತದೆ ಎಂಬ ಸೂಚನೆಯಾಗಿದೆ.
