Asianet Suvarna News Asianet Suvarna News

ಬಾಗಲಕೋಟೆ ಜಿಲ್ಲೆಯ ಸೂಳಿಕೇರಿ ಗ್ರಾಮದಲ್ಲಿ ಮಾರುತೇಶ ದೇವರಿಗೆ ಅಪರೂಪದ ಕಾಯಿ ಸೇವೆ

ಜಾತ್ರೆ ಸಂದರ್ಭಗಳಲ್ಲಿ ತೇರು ಮತ್ತು ಪಲ್ಲಕ್ಕಿಗಳಿಗೆ ಹೂ, ಹಣ್ಣು, ಉತ್ತತ್ತಿಗಳನ್ನ ಎಸೆಯೋದು ಕಾಮನ್, ಆದರೆ ಬಾಗಲಕೋಟೆ  ಜಿಲ್ಲೆಯ ಸೂಳಿಕೇರಿ ಗ್ರಾಮದ ಮಾರುತೇಶ ದೇವರ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಜನರ ಮಧ್ಯೆಯೇ ನಿಂತು ಪಲ್ಲಕ್ಕಿ ಉತ್ಸವಕ್ಕೆ ಇಡಿಯಾದ ನೂರಾರು ತೆಂಗಿನಕಾಯಿಗಳನ್ನೇ ಎಸೆಯಲಾಗುತ್ತದೆ.

Lord Marutesha festival in Sulikeri village of Bagalkote district gow
Author
First Published Dec 12, 2022, 10:39 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ  (ಡಿ.12): ಬಾಗಲಕೋಟೆ ಸಾಮಾನ್ಯವಾಗಿ ಜಾತ್ರೆ ಸಂದರ್ಭಗಳಲ್ಲಿ ತೇರು ಮತ್ತು ಪಲ್ಲಕ್ಕಿಗಳಿಗೆ ಹೂ, ಹಣ್ಣು, ಉತ್ತತ್ತಿಗಳನ್ನ ಎಸೆಯೋದು ಕಾಮನ್, ಆದರೆ ಸಾವಿರಾರು ಜನರ ಮಧ್ಯೆಯೇ ನಿಂತು ಪಲ್ಲಕ್ಕಿ ಉತ್ಸವವೊಂದಕ್ಕೆ ಇಡಿಯಾದ ನೂರಾರು ತೆಂಗಿನಕಾಯಿಗಳನ್ನೇ ತೂರಲಾಗುತ್ತೇ ಅಂದ್ರೆ ನಂಬ್ತೀರಾ.  ಇದು  ಬಾಗಲಕೋಟೆ ಜಿಲ್ಲೆಯ ಸೂಳಿಕೇರಿ ಗ್ರಾಮದ ಮಾರುತೇಶ ದೇವರ ಪಲ್ಲಕ್ಕಿ ಉತ್ಸವದಲ್ಲಿ ನಡೆದುಕೊಂಡು ಬಂದಿರೋ ಅಪರೂಪದ ಸಂಪ್ರದಾಯ ಪದ್ಧತಿ.  ಭಕ್ತರು ತಮ್ಮ ಆರಾಧ್ಯ ದೈವವಾಗಿರೋ ಮಾರುತೇಶ್ವರನಿಗೆ ಇಡಿಯಾದ ತೆಂಗಿನಕಾಯಿಗಳನ್ನ ಹಿಡಿದು ತೂರುವ ದೃಶ್ಯ ಕಂಡು ಬಂದದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದಲ್ಲಿ. ಪ್ರತಿವರ್ಷ ಡಿಸೆಂಬರ ತಿಂಗಳಲ್ಲಿ ನಡೆಯೋ ಈ ಮಾರುತೇಶ್ವರನ ಕಾರ್ತಿಕೋತ್ಸವದಲ್ಲಿ ಪಲ್ಲಕ್ಕಿ ಉತ್ಸವವನ್ನ ಊರ ತುಂಬ ಮೆರವಣಿಗೆ ಮಾಡುವುದರ ಮೂಲಕ ನಡೆಸಲಾಗುತ್ತೇ. ಅಂತಿಮವಾಗಿ ಪಲ್ಲಕ್ಕಿ ದೇವಾಲಯದ ಆವರಣದಲ್ಲಿ ಬರುತ್ತಲೇ 3 ಸುತ್ತ ಹಾಕುವುದಷ್ಟೇ ತಡ ದೇವಾಲಯದ ಸುತ್ತಮುತ್ತಲಿನ ಕಟ್ಟಡಗಳ ಮೇಲೆ, ಕೆಳಗೆ ನಿಂತಿರೋ ಸಾವಿರಾರು ಭಕ್ತರು ಏಕಕಾಲಕ್ಕೆ ಆಗಸಕ್ಕೆ ತೆಂಗಿನಕಾಯಿಗಳನ್ನ ತೂರಲಾರಂಭಿಸುತ್ತಾರೆ. ಬಾನೆತ್ತರಕ್ಕೆ ಅವುಗಳನ್ನ ತೂರುತ್ತಿರೋ ದೃಶ್ಯ ರೋಮಾಂಚನಗೊಳಿಸುತ್ತೇ. 

ವಿವಿಧ ಹರಕೆಗಳನ್ನ ಹೊತ್ತ ಭಕ್ತರು ಇಂತಿಷ್ಟು ತೆಂಗಿನಕಾಯಿಗಳನ್ನ ತೂರುವುದಾಗಿ ಮಾರುತೇಶನಿಗೆ ಬೇಡಿಕೊಂಡಿರ್ತಾರೆ, ಆ ಪ್ರಕಾರವಾಗಿ ತೆಂಗಿನಕಾಯಿ ತೂರಿ ಕೃತಾರ್ಥರಾಗ್ತಾರೆ. ಆದರೆ ನೂರಾರು ಭಕ್ತರ ಮಧ್ಯೆಯೇ ನಡೆದ್ರೂ ಯಾರೊಬ್ಬರಿಗೂ ಕಾಯಿ ತಾಕಿ ತೊಂದರೆಯಾದ ಉದಾಹರಣೆಗಳಿಲ್ಲ, ಒಂದೊಮ್ಮೆ ಬಡಿದ್ರೂ ಕಷ್ಟಗಳು ಪರಿಹಾರವಾಗ್ತಾವೆ ಅನ್ನೋ ನಂಬಿಕೆ ನಮ್ಮಲ್ಲಿದೆ ಅಂತಾರೆ ಸ್ಥಳೀಯರಾದ ಲಕ್ಷ್ಮಣ.
                               
ಪಲ್ಲಕ್ಕಿಗೆ ತೂರಿದಾಗ ಸಿಗುವ ತೆಂಗಿನಕಾಯಿ ದೇವರ ಪ್ರಸಾದ....ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರ ದಂಡು...
ಇನ್ನು ತೆಂಗಿನಕಾಯಿ ತೂರೋದು ಒಂದೆಡೆಯಾದ್ರೆ ಅದನ್ನ ಪಡೆಯಲು ಜನ್ರು ನಾ ಮುಂದು ತಾ ಮುಂದು ಅಂತಾರೆ, ಯಾಕಂದ್ರೆ ತೂರಿದ ತೆಂಗಿನಕಾಯಿಗಳು ಯಾರಿಗೆ ಸಿಗುತ್ತೋ ಅದುವೇ ಭಕ್ತರಿಗೆ ಮಾರುತೇಶನ ಪ್ರಸಾದವಾಗಿರುತ್ತೇ. ಹೀಗಾಗಿ ತೂರಿದ ತೆಂಗಿನಕಾಯಿಗಳನ್ನ ಪಡೆಯೋ ಜನರು ಅದರಿಂದಲೇ ಸಿಹಿ ಪದಾರ್ಥ ತಯಾರಿಸಿ ಮನೆ ಮಂದಿಯೆಲ್ಲಾ ನೈವೇದ್ಯವಾಗಿ ಸ್ವೀಕರಿಸ್ತಾರೆ. ಇನ್ನು  ಈ ತೆಂಗಿನಕಾಯಿ ಜಾತ್ರೆಗಾಗಿ ದೂರದ ಹುಬ್ಬಳ್ಳಿ, ಬೆಳಗಾವ, ಗದಗ, ವಿಜಾಪೂರ ಸೇರಿದಂತೆ ರಾಜ್ಯದ ವಿವಿಧ ಊರುಗಳಿಂದ ಜನ್ರು ಬಂದು ತೆಂಗಿನಕಾಯಿ ತೂರಿ ತಮ್ಮ ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ. ಒಟ್ಟಾರೆ ಕಾರ್ತಿಕದಲ್ಲಿ ಕಾಯಿ ತೂರೋದೆ ವಿಶೇಷ ಅಂತಾರೆ ಗ್ರಾಮದ  ರಾಮನಗೌಡ ಕಿತ್ತಲಿ.

ಮಹಾಯುದ್ಧ, ಬಿಸಿಯೇರಿಕೆ, ಮಂಗಳನ ಮೇಲೆ ಮನುಷ್ಯ.. Nostradamus predictions 2023.

ಇಷ್ಟಾರ್ಥ ಸಿದ್ದಿಯಾದರೆ ಕಾಯಿ ಸೇವೆ ಹರಕೆ:
ಇನ್ನು ಸೂಳಿಕೇರಿ ಗ್ರಾಮದ ಮಾರುತೇಶನಿಗೆ ಭಕ್ತರು ಹರಕೆಯ ರೂಪದಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಯಾದರೆ ೧೦ , ೫೦, ೧೦೦ ಹೀಗೆ ತಮ್ಮ ಶಕ್ತ್ಯಾನುಸಾರ ದೇವರಿಗೆ ಕಾಯಿ ತೂರುವ ಹರಕೆ ಹೊರುತ್ತಾರೆ. ಇದರಿಂದ ಮನೆಯಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಯಾದರೆ ಸಾಕು ಬೇಡಿಕೆಕೊಂಡಂತೆ ಕಾಯಿ ತೂರಿ ದೇವರಿಗೆ ಹರಕೆ ತೀರಿಸುವ ಪದ್ಧತಿ ಇಲ್ಲಿದೆ.

ತುಲಾ ರಾಶಿಗೆ ಬೆಟ್ಟದಂತೆ ಬಂದ ಕಷ್ಟಗಳೆಲ್ಲ ಬೆಣ್ಣೆಯಂತೆ ಕರಗುವ ವರ್ಷ 2023

ಒಟ್ಟಿನಲ್ಲಿ ಸಾವಿರಾರು ಜನರ ಮಧ್ಯೆಯೇ ತೆಂಗಿನಕಾಯಿಗಳನ್ನು ತೂರಿದ್ರೂ ಏನು ಆಗದೇ ಕಳೆದ ಹಲವು ವರ್ಷಗಳಿಂದ ಧಾರ್ಮಿಕ ಸಂಪ್ರದಾಯವೊಂದು ಇಂದಿನ ಆಧುನಿಕ ಯುಗದಲ್ಲೂ ನಡೆದಕೊಂಡು ಬಂದಿರೋದು ಮಾತ್ರ ಅಚ್ಚರಿಯೇ ಸರಿ 

Follow Us:
Download App:
  • android
  • ios