Asianet Suvarna News Asianet Suvarna News

ರೇವತಿ ನಕ್ಷತ್ರದಲ್ಲಿ Kashi Vishwanath Corridor ಉದ್ಘಾಟಿಸಿದ ಮೋದಿ, ಹೀಗಿದೆ ಈ ನಕ್ಷತ್ರದ ಮಹತ್ವ!

* Kashi Vishwanath Corridor ಉದ್ಘಾಟಿಸಿದ ಮೋದಿ

* ಸ್ವಕ್ಷೇತ್ರ ವಾರಾಣಸಿಯಲ್ಲಿ ಮೋದಿಗೆ ಅದ್ಧೂರಿ ಸ್ವಾಗತ

* ರೇವತಿ ನಕ್ಷತ್ರದಲ್ಲಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ

Modi Inaugurates Kashi Vishwanath Corridor in Revati Nakshatra Know the Importance pod
Author
Bangalore, First Published Dec 13, 2021, 3:40 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ರೇವತಿ ನಕ್ಷತ್ರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು 20 ನಕ್ಷತ್ರಗಳನ್ನೊಳಗೊಂಡ ನಕ್ಷತ್ರಪುಂಜವಾಗಿದೆ. ನಕ್ಷತ್ರಗಳ ಸಾಲಿನಲ್ಲಿ ಕೊನೆಯ ನಕ್ಷತ್ರ. ಜ್ಯೋತಿಷಿಗಳು ವಿದ್ಯಾಭ್ಯಾಸ ಆರಂಭ, ಗೃಹಪ್ರವೇಶ, ಮದುವೆ, ದೇವರ ಪ್ರತಿಷ್ಠಾಪನೆ, ವಸ್ತ್ರ ತಯಾರಿಕೆ ಇತ್ಯಾದಿ ಶುಭ ಕಾರ್ಯಗಳ ಆರಂಭಕ್ಕೆ ರೇವತಿ ನಕ್ಷತ್ರವೇ ಪ್ರಶಸ್ತ ಎನ್ನುತ್ತಾರೆ. ಈ ರಾಶಿಯ ಅಧಿದೇವತೆ ಪೂಶನ್ ದೇವ. ಈ ರಾಶಿಯ ನಾಲ್ಕು ಪಾದಗಳು ಮೀನ ರಾಶಿಗೆ ಸೇರಿವೆ. ಇದರ ಅಧಿಪತಿ ಗ್ರಹ ಬುಧ. ಈ ನಕ್ಷತ್ರದ ಮೇಲೆ ಗುರು ಮತ್ತು ಬುಧ ಸಂಯೋಜಿತ ಪರಿಣಾಮವನ್ನು ಬೀರುತ್ತವೆ. ಈ ರಾಶಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

1. ವೈದಿಕ ಜ್ಯೋತಿಷ್ಯದ ಪ್ರಕಾರ, ರೇವತಿ ನಕ್ಷತ್ರವು ಮೃದಂಗದ ಆಕಾರದಂತೆ ಕಾಣುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರ ರಾಶಿಯು ಮೀನ ಮತ್ತು ಈ ನಕ್ಷತ್ರದ ಅಧಿಪತಿ ಬುಧ ಅಥವಾ ದೇವತೆಗಳ ಅಧಿಪತಿ ಗುರು ಆಗಿರುತ್ತಾನೆ. ಬುಧವು ಬುದ್ಧಿಮತ್ತೆಗೆ ಕಾರಣವಾದ ಗ್ರಹವಾಗಿದೆ, ಹಾಗೆಯೇ ಇದನ್ನು ಕರುಣಾಮಯಿ ಗ್ರಹವೆಂದು ಪರಿಗಣಿಸಲಾಗಿದೆ.

2. ರೇವತಿಯು 27 ನಕ್ಷತ್ರಗಳಲ್ಲಿ ಕೊನೆಯದಾಗಿರುವುದರಿಂದ ತನ್ನ ಮೂಲ ನಿವಾಸಿಗಳ ಜೀವನವನ್ನು ಪೋಷಿಸುವ ಮತ್ತು ಬೆಳಕನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ನಕ್ಷತ್ರವು ಫಲಪ್ರದ ಪ್ರಯಾಣಗಳಿಗೆ ಸಂಬಂಧಿಸಿದೆ. ರೇವತಿ ಎಂದರೆ 'ಸಮೃದ್ಧಿ'  ಹಾಗೂ ಇದು ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವಾಗಿದೆ. ರೇವತಿ ನಕ್ಷತ್ರ ಹೊಂದಿರುವವರು ಎಲ್ಲರಿಗೂ ಬೆಂಬಲವನ್ನು ನೀಡುತ್ತಾರೆ ಮತ್ತು ಹೆಚ್ಚಿನ ಸಮಯ ಆಶಾವಾದಿಗಳಾಗಿರುತ್ತಾರೆ.

3. ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧವು ರೇವತಿ ನಕ್ಷತ್ರದ ಅಧಿಪತಿ ಗ್ರಹವಾಗಿದೆ. ಇದು ಆಳವಾದ ಕಲಿಕೆ, ಸುರಕ್ಷಿತ ಪ್ರಯಾಣ ಮತ್ತು ಸಂಪತ್ತನ್ನು ಸಂಕೇತಿಸುತ್ತದೆ. ಈ ನಕ್ಷತ್ರದ ದೇವತೆ ಪ್ರಜಾಪತಿಯ ಪುತ್ರ ಪೂಶನ್ ದೇವ.

4. ರೇವತಿ ನಕ್ಷತ್ರದ ಮೊದಲ ಪಾದದಲ್ಲಿ ಜನಿಸಿದವರು ಜ್ಞಾನವಂತರು. ಲಗ್ನ ನಕ್ಷತ್ರದ ಅಧಿಪತಿ ಬುಧನು ನಕ್ಷತ್ರ ಚರಣ ಅಧಿಪತಿಯೊಂದಿಗೆ ದ್ವೇಷವನ್ನು ಹೊಂದಿದ್ದಾನೆ. ಆದ್ದರಿಂದ, ಗುರುವಿನ ಸ್ಥಿತಿ ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಗುರುವಿನಿಂದಾಗಿ, ವ್ಯಕ್ತಿಯು ಉತ್ತಮ ಸ್ಥಾನಮಾನವನ್ನು ಪಡೆಯುತ್ತಾನೆ ಮತ್ತು ಇದು ವ್ಯಕ್ತಿಗೆ ಆರೋಗ್ಯಕರವಾಗಿರುತ್ತದೆ. ಬುಧದ ಸ್ಥಾನ ಮಧ್ಯಮ ಫಲಿತಾಂಶಗಳನ್ನು ನೀಡುತ್ತದೆ.

5. ರೇವತಿ ನಕ್ಷತ್ರದ ಎರಡನೇ ಪಾದದ ಅಧಿಪತಿ ಶನಿ. ರೇವತಿ ನಕ್ಷತ್ರದ ಎರಡನೇ ಹಂತದಲ್ಲಿ ಜನಿಸಿದವರು ಕಳ್ಳಸಾಗಣೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಲಗ್ನಸ್ಥ ಗುರುವು ನಕ್ಷತ್ರದ ಅಧಿಪತಿಯಾದ ಶನಿಯೊಂದಿಗೆ ದ್ವೇಷವನ್ನು ಹೊಂದಿದ್ದು, ನಕ್ಷತ್ರದ ಅಧಿಪತಿ ಬುಧನು ಗುರುವಿನೊಡನೆಯೂ ದ್ವೇಷವನ್ನು ಹೊಂದಿದ್ದಾನೆ. ಆದ್ದರಿಂದ, ಗುರು ಮತ್ತು ಶನಿಯ ಸ್ಥಿತಿ ಮಧ್ಯಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಬುಧ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಬುಧದಿಂದ ಮನೆಯ ಸಂತೋಷ ಮತ್ತು ವಸ್ತು ಸಾಧನೆಗಳು ಪ್ರಾಪ್ತಿಯಾಗುತ್ತವೆ.

Follow Us:
Download App:
  • android
  • ios