Asianet Suvarna News Asianet Suvarna News

ಯೌವನದ ಹುಚ್ಚು, ಅತೀ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಬೇಗಾಗುತ್ತೆ ವಯಸ್ಸು!

ಬಿಸಿ ರಕ್ತ ಕುದಿಯುತ್ತಿರುವ ಕಾಲ ಯೌವನ. ಅತ್ಯುತ್ಸಾಹದ ಗುಂಗಿನಲ್ಲಿರುವ ಜನರಿಗೆ ನೆಲ ಕಾಣೋದಿಲ್ಲ. ತಾವು ಮಾಡಿದ್ದೆಲ್ಲ ಸರಿ ಎಂಬ ಭ್ರಮೆಯಲ್ಲಿ ಅಮೂಲ್ಯ ಜೀವನ ಹಾಳುಮಾಡಿಕೊಳ್ತಾರೆ. ನಾನಾ ಚಟಕ್ಕೆ ಬಿದ್ದು ಗುರಿ ಮರೆಯುತ್ತಾರೆ. 
 

Life Inspirational Quotes These Mistakes In Young Age Made Your Whole Life Ruin roo
Author
First Published Jun 27, 2023, 12:29 PM IST | Last Updated Jun 27, 2023, 12:29 PM IST

ಕೊನೆಗಾಲದಲ್ಲಿ ಕುಳಿತುಕೊಂಡು ಹಿಂದೆ ಆ ತಪ್ಪು ಮಾಡ್ಬಾರದಿತ್ತು, ಈ ತಪ್ಪು ಮಾಡ್ಬಾರದಿತ್ತು ಎಂದು ಕೈ ಕೈ ಹಿಸುಕಿಕೊಂಡ್ರೆ ಏನೂ ಪ್ರಯೋಜನವಿಲ್ಲ. ಯೌವನದಲ್ಲಿಯೇ ಸುವರ್ಣ ಭವಿಷ್ಯಕ್ಕೆ ಅಡಿಪಾಯ ಹಾಕ್ಬೇಕು.  ಕಳೆದು ಹೋದ ಕಾಲ ಮತ್ತೆ ಸಿಗೋದಿಲ್ಲ ಎಂದು ಹಿರಿಯರು ಹೇಳುವ ಮಾತು ನೂರಕ್ಕೆ ನೂರು ಸತ್ಯ. 

ಮನುಷ್ಯ ತಪ್ಪು ಮಾಡೋದು ಸಹಜ. ತಪ್ಪುಗಳೇ ಜೀವನ (Life) ವಾದ್ರೆ ಕಷ್ಟ. ಅದ್ರಲ್ಲೂ ಯೌವನ (Youth) ದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಮುಂದಿನ ಜೀವನ ಹೇಗಿರಬೇಕು ಎಂಬ ಗುರಿಯೊಂದಿಗೆ ನಡೆಯಬೇಕು. ಹದಿಹರೆಯ, ಯೌವನದಲ್ಲಿ ಮನುಷ್ಯನ ಮನಸ್ಸು ಚಂಚಲವಾಗಿರುತ್ತದೆ. ಆಸೆ ಬೆಟ್ಟದಷ್ಟಿದ್ದರೂ ಕಷ್ಟಪಡುವ ಮನಸ್ಸಿರೋದಿಲ್ಲ. ಆರಾಮವಾಗಿ ಕುಳಿತು ಕಾಲಹರಣ ಮಾಡಲು, ಸ್ನೇಹಿತ (Friend) ರ ಜೊತೆ ಎಂಜಾಯ್ ಮಾಡಲು ಮನಸ್ಸು ಎಳೆಯುತ್ತಿರುತ್ತದೆ. 20 ರಿಂದ 30 ವರ್ಷದ ಸಮಯದಲ್ಲಿ ನೀವು ಅಪ್ಪಿತಪ್ಪಿಯೂ ಕೆಲ ತಪ್ಪುಗಳನ್ನು ಮಾಡಬಾರದು. ಇದ್ರಿಂದ ಮುಂದೆ ದೊಡ್ಡ ಮಟ್ಟದಲ್ಲಿ ತುಂಬಲಾಗದ ನಷ್ಟವನ್ನು ನೀವು ಅನುಭವಿಸುತ್ತೀರಿ. ನಾವಿಂದು ಯೌವನದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಯೌವನದ ಸಮಯದಲ್ಲಿ ಪ್ರೀತಿ, ಉತ್ಸಾಹ, ಕನಸು,ಆದರ್ಶಗಳು  ನಮ್ಮ ಹೃದಯದಲ್ಲಿ ಮೊಳಕೆಯೊಡೆಯುತ್ತವೆ. ಹುಡುಗರು ಮತ್ತು ಹುಡುಗಿಯರು ತಮ್ಮದೇ ಲೋಕದಲ್ಲಿ ತೇಲುತ್ತಾರೆ. ಪ್ರಪಂಚವನ್ನು ಅವರ ದೃಷ್ಟಿಯಲ್ಲಿ ಮಾತ್ರ ನೋಡ್ತಾರೆ. ಸ್ವಚ್ಛಂದವಾಗಿ ಹಕ್ಕಿಯಂತೆ ಹಾರಾಡುವ ಇವರಿಗೆ ಧರ್ಮ ಹಾಗೂ ಸಮಾಜ ಕೆಟ್ಟದಾಗಿ ಕಾಣುತ್ತದೆ. ಇವುಗಳು ತಮ್ಮ ಸುಖ ಜೀವನಕ್ಕೆ ಅಡ್ಡಿಯಾಗಿವೆ ಎಂದು ಭಾವಿಸಲು ಶುರು ಮಾಡ್ತಾರೆ. 

ಮಂಗಳವಾರ ‘ಈ ರೀತಿ’ ಹನುಮನ ಜಪಿಸಿ; ಸಂಕಷ್ಟ ದೂರ ಮಾಡಿ..!

ಯಾವುದೇ ವ್ಯಕ್ತಿ ತಮ್ಮ ಪ್ರಪಂಚದಲ್ಲಿ ಮುಳುಗದೇ ಲೌಕಿಕ ಅಸ್ತಿತ್ವದ ಬಗ್ಗೆ ತಿಳಿದಿರಬೇಕು. ನಿಮ್ಮ ಜೀವನವನ್ನು ಯೌವನದಲ್ಲೇ ಕಳೆಯಲು ಸಾಧ್ಯವಿಲ್ಲ. ಮುಂದೆಯೂ ದಿನಗಳಿದೆ ಎಂಬುದನ್ನು ಅರಿಯಬೇಕು. ಕುಡಿತ, ಸ್ನೇಹಿತರ, ಪ್ರೀತಿಯ ಗುಂಗು, ಹೊಡೆದಾಟ, ಅಹಂ (Ego), ಅತ್ಯುತ್ಸಾಹದಲ್ಲಿ ಯಡವಟ್ಟುಗಳನ್ನು ಮಾಡಬಾರದು. ಇದ್ರಿಂದ ವ್ಯರ್ಥ ಸಮಯ ಹಾಳಾಗುತ್ತದೆ. ನಿಮ್ಮ ಮಹಾನ್ ಆದರ್ಶಗಳು, ಕನಸುಗಳು ಮೂಲೆ ಸೇರುತ್ತವೆ. ಯೌವನದಲ್ಲಿ ನೀವು ಮಾಡಬೇಕಾಗಿದ್ದ ಕೆಲಸ ಹಾಗೆಯೇ ನಿಲ್ಲವು ಕಾರಣ, ಮುಂದೆ ಎಷ್ಟೇ ಕಷ್ಟಪಟ್ಟರೂ ಅದನ್ನು ಸಾಧಿಸೋದು ಕಷ್ಟವಾಗುತ್ತದೆ. ಈ ವಯಸ್ಸಿನಲ್ಲಿ ಜನರು ತಮ್ಮ ಜೀವನದ ಮಹತ್ವ ಅರಿಯುವ ಬದಲು ಭ್ರಮೆಯಲ್ಲಿರ್ತಾರೆ. ಯುವಕ ಹಾಗೂ ಯುವತಿ ಇಬ್ಬರೂ ಈ ಸಮಯದಲ್ಲಿ ತಮ್ಮ ಜೀವನದ ಗುರಿಯನ್ನು ನಿರ್ಧರಿಸುವುದು ಬಹಳ ಮುಖ್ಯ.

ಯೌವನದ ಬಗ್ಗೆ ಧರ್ಮ ಹೇಳೋದೇನು? : ಪುರಾಣಗಳ ಪ್ರಕಾರ, ಆಂತರಿಕ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುವ ಜೀವಿ ಮಾತ್ರ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದಂತಹ ಪುರುಷಾರ್ಥವನ್ನು ಮಾಡಲು ಅರ್ಹನಾಗಿರುತ್ತಾನೆ. ಧರ್ಮಗ್ರಂಥಗಳ ಪ್ರಕಾರ, ನೆಲೆಯಿಲ್ಲದೆ ಅಲೆಯುವ, ಅತಿಯಾಗಿ ಓಡಾಡುವ ವ್ಯಕ್ತಿ  ಸಮಯಕ್ಕಿಂತ ಮುಂಚೆಯೇ ವಯಸ್ಸಾದವರಂತೆ ಕಾಣಲು ಪ್ರಾರಂಭಿಸುತ್ತಾನೆ. ಋಷಿಮುನಿಗಳು, ಸಂತರು ನಿತ್ಯವೂ ಕಾಡಿಗೆ ಹೋಗುತ್ತಿದ್ದರು. ಆದರೆ ಚಾತುರ್ಮಾಸ ಬಿದ್ದ ತಕ್ಷಣ ಅವರೂ ಕೂಡ ನಾಲ್ಕು ತಿಂಗಳು ಒಂದೇ ಸ್ಥಳದಲ್ಲಿ ಧ್ಯಾನ ಮಾಡುತ್ತ ಕುಳಿತುಕೊಳ್ಳುತ್ತಿದ್ದರು. ಅಂದ್ರೆ ಗುರಿ ಸಾಧನೆಗೆ ಒಂದೇ ಕಡೆ ನೆಲೆ ನಿಲ್ಲೋದು ಬಹಳ ಮುಖ್ಯವೆಂದಾಯ್ತು. 

Zodaic Sign: ಈ ರಾಶಿಯವರ ವಿರೋಧ ಕಟ್ಟಿ ಕೊಂಡ್ರೆ ಅಷ್ಟೇ, ಸೇಡು ತೀರಿಸಿಕೊಳ್ಳದೇ ಬಿಡಲ್ಲ!

ಧರ್ಮಗ್ರಂಥಗಳ ಪ್ರಕಾರ, ಅತಿಯಾದ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ವ್ಯಕ್ತಿಗೆ ಅಕಾಲಿಕವಾಗಿ ವಯಸ್ಸಾಗುತ್ತಾನೆ. ಅಂತಃಶಕ್ತಿ ಮತ್ತು ಯೌವನದ ನಾಶ ಬೇಗ ಆಗುತ್ತದೆ. ಇದೇ ಕಾರಣಕ್ಕೆ ಸಂಬಂಧದ ಬಗ್ಗೆ ಧರ್ಮಗ್ರಂಥಗಳಲ್ಲಿ ನಿಯಮಗಳನ್ನು ಹಾಕಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಯೌವನದಲ್ಲಿ ತನ್ನ ದೈಹಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಶ್ರಮಿಸಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

ಚಾಣಕ್ಯ ಕೂಡ ಯೌವನವು ದುಃಖ ನೀಡುವಂತಹದ್ದು ಎಂದಿದ್ದಾರೆ. ಯೌವನದಲ್ಲಿ ಬಯಕೆಗಳು ಹೆಚ್ಚು ಮತ್ತು ಅವು ಈಡೇರದಿದ್ದರೆ ದುಃಖವು ಹೆಚ್ಚಾಗುತ್ತದೆ. ಈ ವಯಸ್ಸಿನಲ್ಲಿ ವ್ಯಕ್ತಿ ಅತ್ಯುತ್ಸಾಹದಲ್ಲಿ ತನ್ನ ವಿವೇಕ ಕಳೆದುಕೊಳ್ಳುತ್ತಾನೆ. ಚಾಣಕ್ಯನ ಪ್ರಕಾರ, ಯೌವನವು ವ್ಯಕ್ತಿಯನ್ನು ವಿವೇಚನಾರಹಿತನನ್ನಾಗಿ ಮಾಡುತ್ತದೆ. ಇದರಿಂದ ಅವನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  
 

Latest Videos
Follow Us:
Download App:
  • android
  • ios