ಕೃಷ್ಣ ಭಕ್ತೆ ಮೀರಾಬಾಯಿ ಹಿಂದಿನ ಜನ್ಮದಲ್ಲಿ ಯಾರಾಗಿದ್ದಳು ಗೊತ್ತೇ?
ಮೀರಾಭಾಯಿ ಕೃಷ್ಣನ ಭಕ್ತೆಯಾದರೂ ಆಕೆಗೆ ಕೂಡಾ ಚಿತ್ತೋರ್‌ಗಢ್‌ನಲ್ಲಿ ದೇವಾಲಯ ಕಟ್ಟಲಾಗಿದೆ ಎಂದರೆ ಮೀರಾಳ ಆಧ್ಯಾತ್ಮ ಸಾಕ್ಷಾತ್ಕಾರ ಎಷ್ಟಿತ್ತು ನೀವೇ ಲೆಕ್ಕ ಹಾಕಿ. ಸಂತಳಾಗಿ, ಕವಿಯಾಗಿ, ಕೃಷ್ಣನ ಧ್ಯಾನದಲ್ಲೇ ಜೀವನ ಸವೆಸಿದ ಮೀರಾ ಬದುಕಿನ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಮೀರಾಭಜನ್- ಕೃಷ್ಣನ ಕುರಿತು ಭಕ್ತೆ ಮೀರಾ ರಚಿಸಿದ ಭಜನೆ ಗೀತೆಗಳು ಉತ್ತರ ಭಾರತದಲ್ಲಿ ಸಖತ್ ಫೇಮಸ್. 16ನೇ ಶತಮಾನದ ರಾಜಪುತ್ರಿ ಮೀರಾಬಾಯಿ ಕೂಡಾ ಬಹಳ ಖ್ಯಾತ ಭಕ್ತೆ. ರಾಜಕುಮಾರಿಯಾದರೂ ಸಂತಳಂತೆ ಬದುಕಿದ, ಕೃಷ್ಣನನ್ನೇ ತನ್ನ ಪತಿಯೆಂದು ನಂಬಿ ಬೀವನಪೂರ್ತಿ ಸವೆಸಿದ ಮೀರಾಬಾಯಿಯ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ..
ಇದನ್ನೂ ಓದಿ: 101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ
ಮೀರಾಭಾಯಿ ರಾಜಕುಮಾರಿ
ರಾಜಸ್ಥಾನದ ಜೋಧ್‌ಪುರವನ್ನು ರಾಜಧಾನಿಯಾಗಿ ಹೊಂದಿದ್ದ ರಾಥೋಡ್ ಸಂಸ್ಥಾನದ ಸಂಸ್ಥಾಪಕ ರಾವ್ ಜೋಧಾಜಿಯ ಮೂರನೇ ಮಗ ರಾವ್ ದೂದಾಜಿ. ಈ ದೂದಾಜಿಯ ಮೊಮ್ಮಗಳೇ ಮೀರಾಬಾಯಿ.
ತಂದೆತಾಯಿಯ ಪ್ರೀತಿ ವಂಚಿತೆ
ಮೀರಾಬಾಯಿ ಜನಿಸಿದ್ದು 1557ರಲ್ಲಿ ರಾಜಸ್ಥಾನದ ಕುಡ್ಕಿ ಎಂಬಲ್ಲಿ. ಆಕೆಗಿನ್ನು 5ರಿಂದ 7 ವರ್ಷವಿದ್ದಾಗ ತಾಯಿ ತೀರಿಕೊಂಡರು. ಆಕೆಯ ತಂದೆ ರತ್ನಸಿಂಗ್ ಮೊಘಲ್ ದೊರೆ ಅಕ್ಭರ್ ಸೇನೆಯೆದುರು ಕಾದಾಡುವಾಗ ವಾರಮರಣವಪ್ಪಿದರು. ಹಾಗಾಗಿ, ಮೀರಾಬಾಯಿಗೆ ತಂದೆತಾಯಿಯ ಪ್ರೀತಿ ಹೆಚ್ಚು ಕಾಲ ಸಿಗಲಿಲ್ಲ. ಆಕೆ ತನ್ನ ತಾತ ರಾವ್ ದೂದಾಜಿಯ ಆರೈಕೆಯಲ್ಲಿ ಬೆಳೆದರು ಮೀರಾ. ಅವರು ತಮ್ಮ ಮಂತ್ರಿಗಳು ಸೇನಾಧಿಪತಿಗಳೊಂದಿಗೆ ಗಹನ ಚರ್ಚೆಯಲ್ಲಿ ತೊಡಗಿದ್ದಾಗ ಪುಟಾಣಿ ಮೀರಾ ಅವರ ಕಾಲುಗಳ ಮೇಲೇರಿ ಆಟವಾಡುತ್ತಿದ್ದಳು ಎನ್ನಲಾಗುತ್ತದೆ.
ಅನುರೂಪ ಸುಂದರಿ
ಮೀರಾಬಾಯಿ ಸೌಂದರ್ಯದಲ್ಲಿ ಕೂಡಾ ರಾಜಕುಮಾರಿಯೇ. ಆಕೆಯ ಸುತ್ತ ಇರುವವರೆಲ್ಲರ ಕಣ್ಮಣಿ. ಆಕೆಯ ಮಾವ ವೀರಮಾಜಿ, ಸೋದರ ಜಯಮಲ್, ಅಜ್ಜ ದೂದಾಜಿಯೇ ಅಲ್ಲದೆ ಸಾಧುಗಳು, ಮಂತ್ರಿಗಲು, ಹಿರಿಯರು ಸೇರಿದಂತೆ ಆ ರಾಜ್ಯದ ಪ್ರತಿಯೊಬ್ಬರಿಗೂ ಮೀರಾ ಎಂದರೆ ಪ್ರೀತಿ. ಆಕೆ ರಾಜ್ಯದಲ್ಲೇ ಅತಿರೂಪ ಸುಂದರಿಯಾಗಿದ್ದರೂ, ಆ ಬಗ್ಗೆ ಯಾವುದೇ ಅಹಂಕಾರ ಮೀರಾಗಿರಲಿಲ್ಲ.
ಹೆಸರಿನ ಮೊದಲ ಅಕ್ಷರ ಮತ್ತು ವ್ಯಕ್ತಿತ್ವ
ಕೃಷ್ಣನೇ ಗಂಡನೆಂದ ತಾಯಿ
ಒಂದು ದಿನ ಐದು ವರ್ಷದ ಮೀರಾಗೆ ಆಕೆಯ ತಾಯಿ ತಲೆ ಬಾಚುವಾಗ ಎದುರಿನ ರಸ್ತೆಯಲ್ಲಿ ವಿವಾಹದ ಪೆರೇಡ್ ಹೋಗುವುದನ್ನು ಪುಟಾಣಿ ಮೀರಾ ನೋಡಿದಳು. ಎಲ್ಲರೂ ವೈಭವಯುತವಾಗಿ ಡ್ರೆಸ್ ಮಾಡಿಕೊಂಡು ಹೋಗುವುದನ್ನು ನೋಡಿದ ಮೀರಾ ಅದೇನೆಂದು ಕೇಳಿದಾಗ ಆಕೆಯ ತಾಯಿ ವಿವರಿಸುತ್ತಾಳೆ. ಆಗ ತನ್ನ ಗಂಡ ಯಾರೆಂದು ಮುಗ್ಧವಾಗಿ ಪ್ರಶ್ನಿಸುವ ಮೀರಾಳ ಪ್ರಶ್ನೆಗೆ ತಕ್ಷಣ ಏನು ಉತ್ತರಿಸುವುದು ಗೊತ್ತಾಗದ ತಾಯಿ ಅಲ್ಲಿಯೇ ಇದ್ದ ಕೃಷ್ಣನ ವಿಗ್ರಹವನ್ನು ತೋರಿಸುತ್ತಾಳೆ. ಈ ಘಟನೆ ಮೀರಾಳ ಬದುಕನ್ನೇ ಬದಲಾಯಿಸುತ್ತದೆ. ಆಕೆ ಅಂದಿನಿಂದಲೇ ಕೃಷ್ಣನ ಪ್ರೇಯಸಿಯಾಗಿ ತನ್ನನ್ನು ಪರಿಗಣಿಸುತ್ತಾಳೆ.
ಸಾಧುವಿನಿಂದ ಪೂಜೆ ಕಲಿತ ಮೀರಾ
ಐದನೇ ವರ್ಷದಿಂದಲೇ ಮೀರಾ ಕೃಷ್ಣನನ್ನು ಗಂಡನೆಂದು ಭಾವಿಸಿ ಆಡುತ್ತಿದ್ದಳು. ಒಂದು ದಿನ ಆಸ್ಥಾನಕ್ಕೆ ಬಂದ ಸಾಧುವೊಬ್ಬರು ಕೃಷ್ಣನ ಮೂರ್ತಿ ಹಿಡಿದು ತಂದು ಮಂತ್ರ ಹೇಳಿ ಅದನ್ನು ಪೂಜಿಸಿದರು. ಅಷ್ಟೇ ಅಲ್ಲ ಅದರೆದುರು ನರ್ತಿಸಿ ಭಜನೆ ಕೂಡಾ ಮಾಡಿದರು. ಇದನ್ನು ನೋಡಿದ ಮೀರಾ ತನಗೆ ಆ ಮೂರ್ತಿ ಬೇಕೆಂದು ಹಟ ಹಿಡಿದು ಪಡೆದಳಷ್ಟೇ ಅಲ್ಲ, ದೇವರನ್ನು ಪೂಜಿಸುವ ರೀತಿಯನ್ನು ಸಾಧುವಿನಿಂದ ಹೇಳಿಸಿಕೊಂಡಳು.
ಕೈ ತುಂಬಾ ದುಡ್ಡು ಬೇಕೆಂದ್ರೆ ಹೀಗ್ ಮಾಡಿ
ಕೃಷ್ಣನೇ ಆಟದ ವಸ್ತು
ಪುಟ್ಟ ಮಕ್ಕಲು ಹೇಗೆ ಊಟನಿದ್ರೆ ಮರೆತು ತಮ್ಮ ಗೊಂಬೆಗಳೊಂದಿಗೆ ಆಡುತ್ತಾರೋ ಅಂತೆಯೇ ಮೀರಾ ಕೃಷ್ಣನ ಮೂರ್ತಿಯೊಂದಿಗೆ ಆಡುತ್ತಿದ್ದಳು. ಆತನಿಗೆ ಊಟ ಮಾಡಿಸುವುದು, ನಿದ್ರೆ ಮಾಡಿಸುವುದು, ಬಟ್ಟೆ ಬದಲಿಸುವುದು, ಒಡವೆಗಳನ್ನು ಹಾಕುವುದು, ಮಲಗಿಸಲು ಹಾಡು ಹೇಳುವುದು- ಎಲ್ಲವೂ ಮೀರಾಳ ಪ್ರೀತಿಯ ಕೆಲಸಗಳೇ. ಹೀಗೇ ಆಕೆ 16ನೇ ವರ್ಷದವರೆಗೆ ಬೆಳೆದಳು.
ಭೋಜರಾಜನೊಂದಿಗೆ ಮದುವೆ
ಅಕ್ಭರನ ಚಕ್ರಾಧಿಪತ್ಯ ಜೋರಾಗಿದ್ದ ದಿನಗಳು. ರಜಪೂತರೆಲ್ಲರೂ ಈ ಮೊಘಲ್ ದೊರೆಯ ವಿರುದ್ಧ ಒಂದಾದರು. ಈ ಸಂದರ್ಭದಲ್ಲಿ ಪವರ್‌ಫುಲ್ ರಾಜ ಎನಿಸಿದ್ದ ಸಂಗ್ರಾಮಸಿಂಗ್ ಹಾಗೂ ದೂದಾಜಿ ನಡುವೆ ಸಂಬಂಧ ಅಷ್ಟೇನು ಚೆನ್ನಾಗಿರಲಿಲ್ಲ. ಆದರೆ, ಅವರು ಆ ಸಂಬಂಧ ಉತ್ತಮಪಡಿಸಿಕೊಂಡು ಅಕ್ಬರ್ ವಿರುದ್ಧ ಹೋರಾಡಲು ತೀರ್ಮಾನಿಸಿದರು. ಈ ಸಂಬಂಧ ಸುಧಾರಣೆಗಾಗಿ ಸಂಗ್ರಾಮ್ಸಿಂಗ್ ಹಿರಿಯ ಪುತ್ರ ಭೋಜರಾಜನೊಂದಿಗೆ ಮೀರಾಳ ಇಷ್ಟದ ವಿರುದ್ಧ ವಿವಾಹ ನೆರವೇರಿಸಿದರು.
ಕೃಷ್ಣನೇ ಪತಿ ಎಂದು ಹಟ ಹಿಡಿದ ಮೀರಾ
ಆದರೆ, ವಿವಾಹದ ಬಳಿಕವೂ ಮೀರಾ ಭೋಜರಾಜನಿಗೆ ತನ್ನನ್ನು ಮುಟ್ಟಲೂ ಬಿಡಲಿಲ್ಲ. ಬದಲಿಗೆ ತಾನು ಈಗಾಗಲೇ ಅಮ್ಮನ ಆಸೆಯಂತೆ ಶ್ರೀಕೃಷ್ಣನೊಂದಿಗೆ ವಿವಾಹವಾಗಿರುವುದಾಗಿ ಹೇಳಿ ಕೃಷ್ಣನ ಆರಾಧನೆಯಲ್ಲಿ ತೊಡಗಿದಳು. ಆಕೆಯ ಈ ನಡೆ ಸಂಗ್ರಾಮಸಿಂಗ್ ಕುಟುಂಬಕ್ಕೆ ನುಂಗಲಾರದ ತುತ್ತಾಯಿತು. ಕಷ್ಟಗಳು ಮೀರಾ ಪಾಲಿಗೆ ಸರತಿಯಲ್ಲಿ ಬಂದವು.
ದೇವರನ್ನು ಒಲಿಸಿಕೊಳ್ಳುವ ಮಾರ್ಗವಿದು
ಮೀರಾಳ ಕೊಲೆ ಯತ್ನ
ಯಾವ ರೀತಿಯಲ್ಲಿ ಪ್ರಯತ್ನಿಸಿದರೂ ಮೀರಾ ಸಿಸೋಡಿಯಾದ ರಾಣಿಯಾಗಿ ಬದುಕಲು ತಯಾರಿಲ್ಲದೆ ಹೋದಾಗ ಅವಳನ್ನು ಕೊಲೆ ಮಾಡಲು ಹಲವು ಯತ್ನಗಳು ನಡೆದವು. ಹೂವಿನ ಹಾರದಲ್ಲಿ ಹಾವನ್ನಿಟ್ಟು ಕೊಡಲಾಯಿತು. ಆಕೆ ಭಯವಿಲ್ಲದೆ ಅದನ್ನು ಧರಿಸಿದಳು. ಹಾವು ಕಚ್ಚಲಿಲ್ಲ. ಆಕೆಯ ಪತಿಯ ಅಕಾಲಿಕ ಮರಣದ ಬಳಿಕ ಮೈದುನ ವಿಕ್ರಮಾದಿತ್ಯ ರಾಜ್ಯಾಡಳಿತ ವಹಿಸಿಕೊಂಡ. ಆಗ ಮೀರಾಳಿಗೆ ಕೊಡಬಾರದ ಕಷ್ಟ ನೀಡಲಾಯಿತು. ಎಲ್ಲವನ್ನೂ ಕೃಷ್ಣನ ಹೆಸರೇಳಿಕೊಂಡು ಅನುಭವಿಸಿದಳು ಯೌವನದಲ್ಲಿದ್ದ ಮೀರಾ. ಕಡೆಗೆ ಇನ್ನೇನೂ ಮಾಡಲು ತಿಳಿಯದೆ ಆಕೆಯನ್ನು ತಂದೆಯ ಮನೆಗೆ ಓಡಿಸಲಾಯಿತು. ಹುಟ್ಟೂರಿನಲ್ಲಿ ಕೂಡಾ ಯುದ್ಧಗಳು ಪದೇ ಪದೆ ಆಗುತ್ತಿದ್ದುದರಿಂದ ಅಲ್ಲೂ ಇರಲಾರದದೆ ಮೀರಾ ವೃಂದಾವನಕ್ಕೆ ಪಯಣ ಬೆಳೆಸಿದಳು.
ರಾಧೆಯ ಪುನರ್ಜನ್ಮ
ಕೃಷ್ಣ ಗೋಪಿಯರೊಂದಿಗೆ ಆಡಿ ಬೆಳೆದ ವೃಂದಾವನದಲ್ಲಿ ಆಕೆಗೆ ತನ್ನ ಹಳೆಯ ಜನ್ಮ ನೆನಪಾಗುತ್ತದೆ. ತಾನೇ ಕೃಷ್ಣನ ಪ್ರೇಯಸಿ ರಾಧ ಎಂಬುದು ತಿಳಿಯುತ್ತದೆ.