ಹೌದು. ಸಿಗುತ್ತಾನೆ. ಆದರೆ ನಮ್ಮ ನಿಮ್ಮಂತವರ ಸಾಮಾನ್ಯ ಕಣ್ಣಿಗೆ ಕಾಣುವುದು ಕಷ್ಟ. ಅಂಥ ಅರ್ಜುನನಿಗೇ ಕೃಷ್ಣನ ನಿಜ ಸ್ವರೂಪ ನೋಡಲು ಸಾಧ್ಯವಾಗಲಿಲ್ಲ.
ಹಾಗಾಗಿ ಕೃಷ್ಣ 'ದಿವ್ಯಂ ದದಾಮಿ ತೇ ಚಕ್ಷು: ಪಶ್ಯ ಮೇ ಯೋಗಮೈಶ್ವರಂ' ಅಂತ ಹೇಳಿದ.

ಅಯ್ಯಾ ದಿವ್ಯ ಕಣ್ಣುಗಳ ದೃಷ್ಟಿಯನ್ನು ನೀಡುತ್ತಿದ್ದೇನೆ ನೋಡು, ನನ್ನ ಯೋಗ ಶಕ್ತಿಯನ್ನು ಅಂದ. ಆಗ ಅರ್ಜುನನಿಗೆ ಕೃಷ್ಣನನ್ನ ನೋಡಲು ಸಾಧ್ಯವಾಯ್ತು. ಅಂಥ ದಿವ್ಯದೃಷ್ಟಿ ಬೇಕಲ್ಲ..! ಆ ದೃಷ್ಟಿಯನ್ನು ತಂದುಕೊಡುವ ಸಾಧನವನ್ನ ನಾವು ಕಂಡುಕೊಂಡರೆ ಭಗವಂತನ ಸಾಕ್ಷಾತ್ಕಾರ ಅಥವಾ ಪರಮಾತ್ಮ ದರ್ಶನ ಸಾಧ್ಯವಾದೀತು.

ಊಟಕ್ಕೆ ಮುನ್ನ ಎಲೆಗೆ ಸುತ್ತುಕಟ್ಟುವುದೇಕೆ?

ದೇವರ ದರ್ಶನ ಸಾಧನ ಯಾವುದು..?

ಆ ಸಾಧನವೇ ಜಪ. ಜಪದಿಂದಲೇ ಭಗವಂತನ ದರ್ಶನ ಅಥವ ಭಗವಂತನನ್ನೇ ಹೊಂದುವ ಸ್ಥಿತಿಯನ್ನ ತಲುಪಲಿಕ್ಕೆ ಸಾಧ್ಯ. ಹಾಗಾದರೆ ಜಪ ಎಂದರೆ ಏನು..?
ಇದು ಅರ್ಥವಾದರೆ ಖಂಡಿತಾ ಭಗವಂತನನ್ನು ಕಾಣುವ ದಿವ್ಯ ದೃಷ್ಟಿ ಲಭ್ಯವಾಯಿತು ಅಂತಲೇ ಅರ್ಥ.

ಜಪದ ಅರ್ಥವೇನು..?

ಜಕಾರೋ ಜನ್ಮ ವಿಚ್ಛೇದ:
ಪಕಾರ: ಪಾಪ ನಾಶನಂ
ತಸ್ಮಾತ್ ಜಪ ಇತಿಪ್ರೀಕ್ತೋ ಜನ್ಮಪಾಪ ವಿನಾಶಕ: ಜಪ ಎಂಬ ಪದದ ಅರ್ಥವಾದರೆ ಜಪದ ಕ್ರಿಯೆಗೆ ಸುಲಭವಾಗಿ ತೊಡಗಬುದು.
ಜಕಾರೋ ಜನ್ಮ ವಿಚ್ಛೇದ:  ಜ ಎಂಬ ಅಕ್ಷರದಿಂದ ಜನ್ಮದ ನಂಟು ಕಳೆಯತ್ತೆ.
ಪ ಕಾರ: ಪಾಪನಾಶನಂ ಪ ಕಾರ ಪಾಪ ನಾಶ ಮಾಡುತ್ತದೆ.
ಹಾಗಾಗಿ ಇದು ಜನ್ಮಪಾಪ ವಿನಾಶಕವಾದ ಪದವಾಗಿದೆ.

ಶಿವನಿಗೆ ಬಿಲ್ವ ಪತ್ರೆ ಪೂಜೆ ಯಾಕೆ?

ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹುಟ್ಟು-ಸಾವು ಎರಡರಿಂದಲೂ ಮುಕ್ತರನ್ನಾಗಿ ಮಾಡುತ್ತದೆ ಈ ಜಪ. ಯಾವಾಗ ನಮಗೆ ಹುಟ್ಟು ಸಾವುಗಳಿಲ್ಲ ಆಗ ನಾವು ಪರಮಾತ್ಮನಲ್ಲೇ ಸೇರಿದ್ದೇವೆ ಅಂತ.

ಆ ಸ್ಥಿತಿಗೆ ತಲುಪುವುದು ಹೇಗೆ..?

ಅದನ್ನೇ ನಾವು ಅರಿಯಬೇಕಾದದ್ದು. ಹುಟ್ಟು-ಸಾವಿನಿಂದ ಹೊರಬರಲಿಕ್ಕೆ ಕೆಲವು ಜಪ ಮಾರ್ಗಗಳಿವೆ. ಯಾರಿಗೆ ಯಾವ ಜಪ ಸಾಧ್ಯವಿದೆ ಅದನ್ನ ಅವರು ಅನುಸರಿಸಬಹುದು.

ಜಪದ ವಿಧಗಳು

1 ನಿತ್ಯಜಪ
2 ನೈಮಿತ್ತಿಕ ಜಪ
3 ಕಾಮ್ಯ ಜಪ
4. ಪ್ರದಕ್ಷಿಣೆ ಜಪ
5 ಅಖಂಡ ಜಪ
6 ಅಜಪಾಜಪ
7 ಲಿಖಿತ ಜಪ
8 ಅಚಲ ಜಪ
9 ಚಲ ಜಪ
ಹೀಗೆ ಇನ್ನೂ ಕೆಲವಿವೆ. ಈ ಜಪಗಳ ತಾತ್ಪರ್ಯ ಅರ್ಥವಾದರೆ ಜಪ ಮಾಡಲಿಕ್ಕೆ ಸುಲಭವಾಗುತ್ತದೆ.

ಶುಭ ಸಂದರ್ಭದಲ್ಲಿ ಬಳಸೋ ಬೆಳ್ಳಿ ಏಕೆ ಪವಿತ್ರ ಲೋಹ?

ನಿತ್ಯ ಜಪ - ನಿತ್ಯವೂ ತಪ್ಪದೇ ಒಂದು ನಿಗದಿತ ಸಮಯದಲ್ಲಿ ಮಾಡು ಜಪ ಅದೇ ನಿತ್ಯಜಪ ಅದು ಆತ್ಮೋನ್ನತಿಯನ್ನು ತಂದುಕೊಡುತ್ತದೆ.

ನೈಮಿತ್ತಿಕ ಜಪ - ಇದು ವಿಶೇಷ ದಿನಗಳಲ್ಲಿ ಮಾಡುವ ಜಪ. ಸಂಕ್ರಮಣ, ನವರಾತ್ರಿ, ಶಿವರಾತ್ರಿ ಇಂಥ ಪರ್ವ ಕಾಲದಲ್ಲಿ ಮಾಡುವ ಜಪ

ಕಾಮ್ಯ ಜಪ - ಹೆಸರೇ ಹೇಳುವ ಹಾಗೆ ಒಂದು ಅಪೇಕ್ಷೆಯಿಂದ ಮಾಡಬಹುದಾದ ಜಪ. ಉದಾಹರಣೆಗೆ ವಿವಾಹಾಕಾಂಕ್ಷೆಯಿಂದ ಮಾಡುವ ಕಾತ್ಯಾಯಿನಿ ಜಪ, ಆರೋಗ್ಯ ಸದೃಢತೆಗೆ ಮಾಡುವ ಸೂರ್ಯ ಜಪ, ಧನಾಕರ್ಷಣೆಗೆ ಮಾಡುವ ಮಹಾಲಕ್ಷ್ಮೀ ಜಪ ಇತ್ಯಾದಿ.
 
ಪ್ರದಕ್ಷಿಣಾ ಜಪ - ದೇವಾಲಯದಲ್ಲಿ, ಅಶ್ವತ್ಥದ ಬಳಿಯಲ್ಲಿ ಮಾಡುವ ಪ್ರದಕ್ಷಿಣಾ ಜಪ

ಅಖಂಡ ಜಪ - ಹೆಸರೇ ಹೇಳುವ ಹಾಗೆ ಖಂಡ ಮಾಡದೇ ಮಾಡುವ ಜಪ. ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾರಂಭಿಸಿ ಎಡಬಿಡದೆ ನಿರ್ದಿಷ್ಟ ಕಾಲದವರೆಗೆ ಹಗಲೂ ರಾತ್ರಿ ಎನ್ನದೆ ನಿರಂತರವಾಗಿ ಮಾಡುವ ಜಪ.

ಅಜಪಾಜಪ - ಇದು ಹಂಸ ಜಪ ಅಂತಾರೆ ಸೋಹಂ ಎಂಬುದನ್ನ ಹೇಳುವುದು
 
ಲಿಖಿತ ಜಪ - ದೇವರ ನಾಮಗಳನ್ನು ಬರೆಯುತ್ತಾ ಜಪಿಸಿವುದು.

ಅಚಲ ಜಪ - ಒಂದೇ ಕಡೆ ಸ್ಥಿರವಾಗಿ ಕುಳಿತು ಮಾಡುವ ಜಪ.

ಚಲ ಜಪ - ಓಡಾಡುತ್ತಾ ಹೇಳಿಕೊಳ್ಳಬಹುದಾದ ಜಪ.

ಹೀಗೆ ಹಲವು ಜಪ ಬಗೆಗಳಿದ್ದಾವೆ. ಕೃಷ್ಣ ಈ ಜಪವನ್ನ ಯಜ್ಞ ಎಂದು ಕರೆದಿದ್ದಾನೆ. ಜಪಯಜ್ಞ ಅಂತಲೇ ಗುರ್ತಿಸಿದ್ದಾನೆ. ಹಾಗಾದರೆ ಯಾವ ಜಪ ಮಾಡಬೇಕು ಎಂಬುದು ನಿರ್ಧಾರವಾಗಬೇಕು. ಮೇಲಿನವು ಜಪ ವಿಧಗಳಾದರೆ ಯಾವ ಮಂತ್ರದ ಜಪವಾಗಬೇಕು ಎಂಬುದೂ ನಿಶ್ಚಿತ ಮಾಡಿಕೊಳ್ಳಬೇಕು.

ಮೌಢ್ಯ ಬಿತ್ತೋ ವಾಸ್ತುಶಾಸ್ತ್ರ: ಜೋಪಾನವಾಗಿರಿ...

ಯಾವ ಜಪ ಬೇಕು..?

ಏಕಾಕ್ಷರಿ ಎನಿಸುವ ಓಂ ಜಪ ದಿಂದ ಹಿಡಿದು ಚತುರ್ವಿಂಶತ್ಯಕ್ಷರಿ ಅಂದರೆ 24 ಅಕ್ಷರಗಳವರೆಗೆ ಇರುವ ಗಾಯತ್ರೀ ಜಪದ ವರೆಗೆ ಹಲವು ಜಪಗಳಿವೆ. ನಿಮಗೆ ಇಷ್ಟವಾದ ಜಪವನ್ನ ಆಯ್ಕೆ ಮಾಡಿಕೊಂಡು ಆ ಭಗವಂತನ ದರ್ಶನಕ್ಕೆ ತೊಡಗಬಹುದು.

ಏಕಾಕ್ಷರಿ  ಮಂತ್ರ  - ಓಂ
ದ್ವ್ಯಕ್ಷರಿ ಮಂತ್ರ - ರಾಮ
ತ್ರ್ಯಕ್ಷರೀ ಮಂತ್ರ - ಶ್ರೀ ರಾಮ, ಓಂ ಶೀವ, ಶಿವೋಹಂ
ಪಂಚಾಕ್ಷರೀ ಮಂತ್ರ - ನಮ: ಶೀವಾಯ
ಷಡಕ್ಷರೀ ಮಂತ್ರ - ಓಂ ನಮ: ಶಿವಾಯ, ಹ್ರೀಂ ನಮ: ಶಿವಾಯ, ಶೊಂ ಶಿವಾಯೈ ನಮ:
 ಅಷ್ಟಾಕ್ಷರೀ ಮಂತ್ರ - ಓಂ ನಮೋ ನಾರಾಯಣಾಯ
ದಶಾಕ್ಷರೀ ಮಂತ್ರ - ಓಂ ನಮೋ ಭಗವತೇ ರುದ್ರಾಯ
ದ್ವಾದಶಾಕ್ಷರೀ ಮಂತ್ರ - ಓಂ ನಮೋ ಭಗವತೇ ವಾಸುದೇವಾಯ / ಶ್ರೀ ಲಲಿತಾತ್ರಿಪುರ ಸೌಂದರ್ಯೈ ನಮ: ತ್ರಯೋದಶಾಕ್ಷರೀ
ಮಂತ್ರ - ಓಂ ಶ್ರೀ ಲಲಿತಾತ್ರಿಪುರ ಸೌದರ್ಯೈ ನಮ:
ಪಂಚದಶಾಕ್ಷರೀ ಮಂತ್ರ - ಕ ಏ ಈ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸಕಲ ಹ್ರೀಂ
ಚತುರ್ವಿಂಶತ್ಯಕ್ಷರ - ಗಾಯತ್ರೀ ಮಂತ್ರ
ಇವೆಲ್ಲವೂ ಜಪದ ಮಂತ್ರಗಳು ಯಾರಿ ಯಾವ ಜಪ ಬೇಕು ನಿರ್ಣಯಿಸಿ ಗುರುಗಳಿಂದ ಉಪದೇಶ ಸ್ವೀಕರಿಸಿ ಜಪ ಮಾಡಿ ಖಂಡಿತಾ ಇಚ್ಛಿತ ದೇವರ ಸಾಕ್ಷಾತ್ಕಾರವಾಗುವುದರಲ್ಲಿ ಸಂದೇಹವಿಲ್ಲ.

ವೃಕ್ಷದಲ್ಲಿ ಬ್ರಹ್ಮ, ವಿಷ್ಣು, ಶಿವನನ್ನು ನೋಡುವ ಸಂಸ್ಕತಿ ನಮ್ಮದು...