Asianet Suvarna News Asianet Suvarna News

Leo Luck: ಸಿಂಹ ರಾಶಿಯವರಿಗೆ ಜೀವಿತದ ಈ ವರ್ಷಗಳಲ್ಲಿ ಪ್ರಗತಿ ಹೆಚ್ಚು!

ಸಿಂಹ ರಾಶಿಯವರು ತುಂಬಾ ಧೈರ್ಯಶಾಲಿ ಮತ್ತು ಭಾವೋದ್ರಿಕ್ತರು. ಅವರು ಸ್ನೇಹಿತರಿಗೆ ತುಂಬಾ ನಿಷ್ಠರಾಗಿರುತ್ತಾರೆ. ಇದರ ಹೊರತಾಗಿ ಅವರ ಅದೃಷ್ಟದ ಬಣ್ಣ, ವಾರ, ವರ್ಷ, ಸಂಖ್ಯೆ ಎಲ್ಲದರ ಬಗ್ಗೆ ಇಲ್ಲಿ ತಿಳಿಸಲಾಗಿದೆ. 

Leo Personality know in which years of life they progress skr
Author
First Published Oct 15, 2022, 11:34 AM IST | Last Updated Oct 15, 2022, 11:34 AM IST

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಶಿಚಕ್ರದ ಐದನೇ ರಾಶಿಯು ಸಿಂಹ ರಾಶಿಯಾಗಿದೆ. ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯದೇವನು ಈ ರಾಶಿಚಕ್ರದ ಏಕೈಕ ಅಧಿಪತಿ ಮತ್ತು ಗ್ರಹಗಳ ರಾಜ. ಹಾಗಾಗಿ ಸೂರ್ಯನು  ಸಿಂಹ ರಾಶಿಯ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತಾನೆ. ಜುಲೈ 22ರಿಂದ ಆಗಸ್ಟ್ 23ರ ನಡುವೆ ಜನಿಸಿದವರು ಈ ಚಿಹ್ನೆಯ ಅಡಿಯಲ್ಲಿ ಬರುತ್ತಾರೆ. ಈ ರಾಶಿಚಕ್ರದ ಜನರು ತುಂಬಾ ಉತ್ಸಾಹ ಮತ್ತು ಧೈರ್ಯದಿಂದ ತುಂಬಿರುತ್ತಾರೆ. ಸಿಂಹ ರಾಶಿಯ ಜನರು ತಮ್ಮ ಸ್ನೇಹಿತರ ಕಡೆಗೆ ಬಹಳ ನಿಷ್ಠಾವಂತರು ಮತ್ತು ಬೆಂಬಲ ನೀಡುತ್ತಾರೆ. ಈ ಜನರು ತಮ್ಮ ಸಮಸ್ಯೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಿಷ್ಣಾತರು. ಇದಲ್ಲದೆ, ಈ ರಾಶಿಚಕ್ರದ ಜನರು ಇನ್ನೂ ಅನೇಕ ಗುಣಗಳು ಮತ್ತು ಗುಣಲಕ್ಷಣಗಳನ್ನು ಹೊಂದಿದ್ದಾರೆ. ಅವರ ಗುಣಲಕ್ಷಣಗಳೇನು ಎಂಬುದಷ್ಟೇ ಅಲ್ಲದೆ, ಅವರು ಯಾವ ವರ್ಷಗಳಲ್ಲಿ ಪ್ರಗತಿಯನ್ನು ಪಡೆಯುತ್ತಾರೆ ಮತ್ತು ಅವರ ಅದೃಷ್ಟ ಯಾವಾಗ ಏರುತ್ತದೆ ಎಂಬುದನ್ನು ನೋಡೋಣ.

ಸಿಂಹ ರಾಶಿಯ ಗುಣಲಕ್ಷಣಗಳು(Leo zodiac traits)
ಸಿಂಹ ರಾಶಿಯವರು ಮಹತ್ವಾಕಾಂಕ್ಷೆಯುಳ್ಳವರು, ಅವರಿಗೆ ತಮ್ಮ ಗುರಿಯ ಸ್ಪಷ್ಟ ಅರಿವಿರುತ್ತದೆ. ಅವರಿಗೆ ಜೀವನದಿಂದ ಅನೇಕ ನಿರೀಕ್ಷೆಗಳಿವೆ. ಈ ಜನರು ತಮ್ಮ ಕೆಲಸದ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ಅವರಲ್ಲಿ ಯಾರ ಮೇಲೂ ದ್ವೇಷವಿರುವುದಿಲ್ಲ ಮತ್ತು ಯಾರ ಮೇಲೂ ಅಸೂಯೆ ಇಲ್ಲ.

ಸಿಂಹ ರಾಶಿಯ ಜನರು ತಮಾಷೆಯಾಗಿರುತ್ತಾರೆ. ಅವರು ನಗುವುದು ಮತ್ತು ತಮಾಷೆ ಮಾಡಲು ಇಷ್ಟಪಡುತ್ತಾರೆ. ಈ ಜನರು ಬೇಗನೆ ಇತರರೊಂದಿಗೆ ಬೆರೆಯುತ್ತಾರೆ. ಅವರು ತನ್ನ ಕುಟುಂಬದ ಬಗ್ಗೆ ಬಹಳ ಎಚ್ಚರಿಕೆಯಿಂದಿರುತ್ತಾರೆ ಮತ್ತು ಬದ್ಧರಾಗಿರುತ್ತಾರೆ. ಅವರ ಆದಾಯ(income) ಚೆನ್ನಾಗಿಯೇ ಇರುತ್ತದೆ. ಬುದ್ಧಿವಂತರಾದ ಇವರು, ಹೋದಲ್ಲೆಲ್ಲ ಎಲ್ಲರ ಗಮನ ಸೆಳೆಯಲು ಬಯಸುತ್ತಾರೆ.

ಉತ್ತಮ ಹಣದ ಹರಿವಿಗಾಗಿ ದೀಪಾವಳಿ 2022ರ ವಾಸ್ತು ಸಲಹೆಗಳು

ಸಿಂಹ ರಾಶಿಯವರು ನೈಸರ್ಗಿಕವಾಗಿ ಹುಟ್ಟಾ ನಾಯಕರು. ಅವರು ಕ್ಯಾನ್ ಡು ಮನೋಭಾವದಿಂದ ಅಭಿವೃದ್ಧಿ ಹೊಂದುತ್ತಾರೆ. ಅವರು ತಮ್ಮ ಗುರಿಗಳನ್ನು ಸಾಧಿಸಲು ಕಷ್ಟಪಟ್ಟು ಕೆಲಸ ಮಾಡುತ್ತಾರೆ.

ಸಿಂಹ ರಾಶಿಯಲ್ಲಿ ಜನಿಸಿದವರು ತಮ್ಮ ದಾಂಪತ್ಯದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಅವರ ಅದೃಷ್ಟವು ಮದುವೆಯ ನಂತರವೇ ಹೆಚ್ಚುತ್ತದೆ. ಅವರು ತಮ್ಮ ತಾಯಿಯೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಸ್ವಭಾವತಃ ಕರುಣಾಮಯಿಯಾದ ಅವರು ಶ್ರಮಜೀವಿಗಳು ಮತ್ತು ನ್ಯಾಯವನ್ನು ಪ್ರೀತಿಸುವವರೂ ಆಗಿರುತ್ತಾರೆ. ಸಿಂಹ ರಾಶಿಯವರು ಅತ್ಯುತ್ತಮ ಪ್ರೇಮಿಗಳು. ಆದರೆ, ಅವರು ಏಕಾಂಗಿಯಾಗಿ ನಡೆಯಲು ಕೂಡಾ ಹೆದರುವುದಿಲ್ಲ. ಅವರು ಉರಿಯುತ್ತಿರುವ ಉತ್ಸಾಹ ಮತ್ತು ಅಮಲೇರಿಸುವ ಹುಚ್ಚುತನದಿಂದ ಪ್ರೀತಿಸುತ್ತಾರೆ. 

Diwali 2022: 27 ವರ್ಷಗಳ ನಂತರ ದೀಪಾವಳಿಯಂದು ಗ್ರಹಣದ ಕರಿನೆರಳು

ಅದೃಷ್ಟವು ಜೀವನದ ಈ ವರ್ಷಗಳಲ್ಲಿ ಸಂಭವಿಸುತ್ತದೆ 
ಸಿಂಹ ರಾಶಿಯ ಜನರ ಅದೃಷ್ಟವು ಅವರ ಜೀವನದ 16ನೇ ವರ್ಷ, 22ನೇ ವರ್ಷ, 24ನೇ ವರ್ಷ, 26ನೇ ವರ್ಷ, 28ನೇ ವರ್ಷ ಮತ್ತು 32ನೇ ವರ್ಷದಲ್ಲಿ ಇರುತ್ತದೆ.

ಸಿಂಹ ರಾಶಿಯವರಿಗೆ ಅದೃಷ್ಟ ಸಂಖ್ಯೆ : 1 ರಿಂದ 4
ಸಿಂಹ ರಾಶಿಯವರಿಗೆ ಅದೃಷ್ಟದ ಬಣ್ಣಗಳು: ಚಿನ್ನದ ಬಣ್ಣ, ಕೆಂಪು, ಕಿತ್ತಳೆ ಮತ್ತು ಕೆನೆ ಬಣ್ಣ
ಸಿಂಹ ರಾಶಿಯವರಿಗೆ ಅದೃಷ್ಟದ ದಿನ: ಭಾನುವಾರ, ಮಂಗಳವಾರ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios