Asianet Suvarna News Asianet Suvarna News

Diwali 2022: 27 ವರ್ಷಗಳ ನಂತರ ದೀಪಾವಳಿಯಂದು ಗ್ರಹಣದ ಕರಿನೆರಳು

27 ವರ್ಷಗಳ ನಂತರ ದೀಪಾವಳಿಯಂದು ಸೂರ್ಯ ಗ್ರಹಣವೂ, ಕಾರ್ತಿಕ ಪೂರ್ಣಿಮೆಯಲ್ಲಿ ಚಂದ್ರಗ್ರಹಣವೂ ಸಂಭವಿಸುತ್ತಿದೆ. ಯಾವಾಗ, ದೀಪಾವಳಿ ಪೂಜೆ ಮಾಡಬಹುದೇ ಎಲ್ಲ ವಿವರ ಇಲ್ಲಿದೆ..

After 27 years Solar Eclipse on Diwali what are its effects skr
Author
First Published Oct 13, 2022, 2:58 PM IST | Last Updated Oct 13, 2022, 2:58 PM IST

ಬರೋಬ್ಬರಿ 27 ವರ್ಷಗಳ ನಂತರ ಇಂಥದೊಂದು ಕಾಕತಾಳೀಯ ಸಂಭವಿಸುತ್ತಿದೆ. 
ಹೌದು, ಕಾರ್ತಿಕ ಮಾಸದಲ್ಲಿ 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು ಸಂಭವಿಸುತ್ತಿವೆ. ಅಷ್ಟೇ ಅಲ್ಲ, ಈ ಬಾರಿ ದೀಪಾವಳಿಯ ದಿನ ಸೂರ್ಯಗ್ರಹಣವೂ, ಕಾರ್ತೀಕ ಪೂರ್ಣಿಮೆಯ ದಿನ ಚಂದ್ರಗ್ರಹಣವೂ ಸಂಭವಿಸುತ್ತಿದೆ. ಈ ರೀತಿಯಾದ ಅಪರೂಪದ ವಿದ್ಯಮಾನ 27 ವರ್ಷಗಳ ಹಿಂದೆ ಅಂದರೆ 1995ರಲ್ಲಿ ನಡೆದಿತ್ತು. 

ಹಿಂದೂಗಳ ಅತ್ಯಂತ ಮಹತ್ವದ ಹಬ್ಬವಾದ ದೀಪಾವಳಿಯನ್ನು ಈ ವರ್ಷ ಅಕ್ಟೋಬರ್‌ನಲ್ಲಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ದೀಪಗಳ ಹಬ್ಬವು ಕೆಡುಕಿನ ಮೇಲೆ ಒಳ್ಳೆಯದು, ಕತ್ತಲೆಯ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನ ಮತ್ತು ಹತಾಶೆಯ ಮೇಲೆ ಭರವಸೆಯ ವಿಜಯವನ್ನು ಆಚರಿಸುತ್ತದೆ. ರಾಕ್ಷಸ ರಾವಣನನ್ನು ಕೊಂದು 14 ವರ್ಷಗಳ ವನವಾಸವನ್ನು ಕಳೆದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ಸಂಕೇತವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಇದು ಬಲಿಯ ಮೇಲೆ ವಾಮನ ಮತ್ತು ರಾಕ್ಷಸ ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯವನ್ನು ಸಹ ಆಚರಿಸುತ್ತದೆ.
ಆಶ್ವೀಜ ಮಾಸದ ಚತುರ್ದಶಿಯ ಅಮಾವಾಸ್ಯೆಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ. ಅಂದರೆ ಈ ವರ್ಷ ಅಕ್ಟೋಬರ್ 24ರಂದು ದೀಪಾವಳಿ ಇದೆ. ಅದೇ ತಿಥಿಯಲ್ಲಿ ಅಕ್ಟೋಬರ್ 25 ರಂದು ಸೂರ್ಯಗ್ರಹಣ ಇರುತ್ತದೆ. ಇನ್ನು ಕಾರ್ತಿಕ ಪೌರ್ಣಿಮೆಯಂದು ಅಂದರೆ, ನವೆಂಬರ್ 8ರಂದು ಚಂದ್ರಗ್ರಹಣ ಇರುತ್ತದೆ. ಈ ಕಾಕತಾಳೀಯದಿಂದ ಸೂರ್ಯಗ್ರಹಣದ ದಿನ ಹಬ್ಬ ಆಚರಿಸಬಹುದೇ ಎಂಬ ಗೊಂದಲ ಜನರಲ್ಲಿ ಮನೆ ಮಾಡಿದೆ. 

ಬುಧ ಶುಕ್ರ ಯುತಿಯಿಂದ ಲಕ್ಷ್ಮೀ ನಾರಾಯಣ ಯೋಗ; 3 ರಾಶಿಗಳಿಗೆ ಸಿಗಲಿದೆ ಅದೃಷ್ಟದ ಸಾಥ್

ದೀಪಾವಳಿಯ ಮರುದಿನ ಅಕ್ಟೋಬರ್ 25 ರಂದು ಸೂರ್ಯಗ್ರಹಣ ಇರುತ್ತದೆ. ಇದರ ಸೂತಕ ಅಕ್ಟೋಬರ್ 24ರಂದು ಸಂಜೆ 4.43ರಿಂದ ಪ್ರಾರಂಭವಾಗುತ್ತದೆ. ಇದು ಭಾರತದಲ್ಲಿ ಗೋಚರಿಸುವುದರಿಂದ ಸೂತಕ ಆಚರಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ಅಕ್ಟೋಬರ್ 24 ಸೋಮವಾರದಂದು ರೂಪ ಚತುರ್ದಶಿ ಮತ್ತು ದೀಪಾವಳಿ ಹಬ್ಬವನ್ನು ಒಟ್ಟಿಗೆ ಆಚರಿಸಲಾಗುತ್ತದೆ. ಚತುರ್ದಶಿ ದಿನಾಂಕ ಅಕ್ಟೋಬರ್ 24 ಸೋಮವಾರ ಸಂಜೆ 4.34ರವರೆಗೆ ಇರಲಿದೆ. ನಂತರ ಅಮವಾಸ್ಯೆಯಂದು ದೀಪಾವಳಿ ಪ್ರಾರಂಭವಾಗುತ್ತದೆ. ಇದು ಮರುದಿನ ಸಂಜೆ 4.4ರವರೆಗೆ ಇರುತ್ತದೆ. ಅಕ್ಟೋಬರ್ 25, ಮಂಗಳವಾರ, ಕಾರ್ತಿಕ ಕೃಷ್ಣ ಅಮವಾಸ್ಯೆಯು ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಖಂಡಗ್ರಾಸ ಸೂರ್ಯಗ್ರಹಣವನ್ನು ನೋಡುತ್ತದೆ.

ವಿವಿಧ ಸಮಯಗಳಲ್ಲಿ ಪೂಜೆ
ಅಕ್ಟೋಬರ್ 24 ರಂದು ದಿನವಿಡೀ ವಿವಿಧ ಮುಹೂರ್ತಗಳಲ್ಲಿ ದೀಪಾವಳಿ ಪೂಜೆಯನ್ನು ಮಾಡಬಹುದು. ಗ್ರಹಣ ಕಾಲದ ಸೂತಕದ ಆರಂಭಕ್ಕೂ ಮುನ್ನ ದೀಪಾವಳಿ ಪೂಜೆ ಮಾಡುವುದು ಶಾಸ್ತ್ರೋಕ್ತವಾಗಿದೆ. ಅಲ್ಲದೆ, ದೀಪಾವಳಿಯು ಸಿದ್ಧಿಗಳ ಮಹಾಪರ್ವವೆಂದು ಕರೆಯುವುದರಿಂದ ಹಬ್ಬ ಆಚರಣೆಗೆ ಯಾವ ಗ್ರಹಣವೂ ಅಡ್ಡಿಯಾಗುವುದಿಲ್ಲ.  ಗ್ರಹಣ ಕಾಲದಲ್ಲಿಯೇ ಶ್ರೀರಾಮನು ಗುರು ವಸಿಷ್ಠರಿಂದ ಮತ್ತು ಶ್ರೀ ಕೃಷ್ಣನು ಸಾಂದೀಪನಿ ಗುರುಗಳಿಂದ ದೀಕ್ಷೆಯನ್ನು ಪಡೆದಿರುವ ದಂತಕತೆಯಿದೆ.

Shani Margi 2022: ಅಂತೂ ಬದುಕು ಟ್ರ್ಯಾಕ್‌ಗೆ ಬಂತು! ಈ ಐದು ರಾಶಿಗಳಿನ್ನು ನಿರಾಳರಾಗಬಹುದು..

ಗ್ರಹಣ ಮತ್ತು ಮೋಕ್ಷದ ಸಮಯ
ಅಕ್ಟೋಬರ್ 25 ರಂದು ಖಂಡಗ್ರಾಸ ಸೂರ್ಯಗ್ರಹಣ
ಸೂತಕ ಅಕ್ಟೋಬರ್ 25ರಂದು ಬೆಳಿಗ್ಗೆ 4.43ರಿಂದ
ಸಂಜೆ 4.43ಕ್ಕೆ ಗ್ರಹಣದ ಸ್ಪರ್ಶ
ಸಂಜೆ 6.41ಕ್ಕೆ ಮೋಕ್ಷ

ನವೆಂಬರ್ 8ರಂದು ಖಗ್ರಾಸ ಚಂದ್ರಗ್ರಹಣ
ಸೂತಕ ನವೆಂಬರ್ 8 ಬೆಳಿಗ್ಗೆ 5.30ರಿಂದ
ಮಧ್ಯಾಹ್ನ 2.39ರಿಂದ ಗ್ರಹಣ ಸ್ಪರ್ಶ
ಸಂಜೆ 6.23ಕ್ಕೆ ಮೋಕ್ಷ


ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios