Asianet Suvarna News Asianet Suvarna News

ಈ ನಾಲ್ಕು ರಾಶಿಯವರಿಗೆ ಸದಾ ಸೆಕ್ಸ್‌‌ನದ್ದೆ ಚಿಂತೆ, ಈ ಕ್ರಿಯೆಯಲ್ಲೂ ಚುರುಕು!

ಈ ಐದು ಜನ್ಮರಾಶಿಗಳ ಜನ ಸೆಕ್ಸ್ ವಿಚಾರದಲ್ಲಿ ಭಯಂಕರ ಮುಂದು. ಅದರ ಬಗ್ಗೆ ಯೋಚಿಸುವುದರಲ್ಲೂ, ಆ ಕ್ರಿಯೆಯಲ್ಲೂ ಬಹಳ ಚುರುಕು. ಹಾಗಿದ್ದರೆ ಯಾರವರು, ಏನು ಮಾಡ್ತಾರೆ?

Leo gemini pisces taurus think about sexuality and active on bad o
Author
First Published Apr 27, 2024, 6:00 PM IST

ಸೆಕ್ಸ್ ಬಗ್ಗೆ ಛೀ ಥೂ ಅಂತ ಆಟಿಟ್ಯೂಡ್ ತೋರಿಸಿದ್ರೂ, ಗಲೀಜು, ಅಸಹ್ಯ ಅಂತೆಲ್ಲ ಸಂಭಾವಿತರ ಫೋಸ್ ನೀಡಿದ್ರೂ ಒಳಗಿಂದೊಳಗೇ ಇದಕ್ಕಾಗಿ ಹಪಹಪಿಸೋರೇ ಎಲ್ಲಾ. ಆಹಾರ, ನಿದ್ದೆಯಷ್ಟೇ ಮಹತ್ವದ ಈ ವಿಚಾರದಲ್ಲಿ ಕೆಲವರು ಸಖತ್ ಪಂಟರಾಗಿದ್ರೆ, ಮತ್ತೂ ಕೆಲವರು ಮಹಾ ಬೋರು. ಈ ಐದು ರಾಶಿಯ ಜನ ಮಾತ್ರ ಆ ವಿಚಾರದಲ್ಲಿ ಪಂಟರು. ಹಾಸಿಗೆಗೆ ಬಿದ್ದರೆ ಇವರನ್ನು ಮೀರಿಸೋದಕ್ಕಾಗಲ್ಲ. ಯಾವ ರಾಶಿಗಳವು? ಸೆಕ್ಸ್‌ ವಿಚಾರದಲ್ಲಿ ಆ ರಾಶಿಯವರ ವರ್ತನೆ ಹೇಗೆ?

ವೃಷಭ (Taurus)
ಸೆಕ್ಸ್ ವಿಚಾರದಲ್ಲಿ ಈ ರಾಶಿಯವರು ಬಹಳ ಕಾನ್ಫಿಡೆಂಟ್. ಇವರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಮಾತ್ರ ಕಾನ್ಫಿಡೆನ್ಸ್ ಇರೋದಲ್ಲ, ಈ ವಿಚಾರದಲ್ಲಿ ಜೊತೆಗಿದ್ದವರ ಆತ್ಮವಿಶ್ವಾಸವನ್ನೂ ಹೆಚ್ಚಿಸುವ ಟ್ಯಾಲೆಂಟ್ ಸಹಜವಾಗಿ ಇದೆ. ಲೈಂಗಿಕತೆ ವಿಚಾರದಲ್ಲಿ ಇವರಿಗೆ ಕುತೂಹಲ ಹೆಚ್ಚು. ಸೆಕ್ಸ್‌ಅನ್ನು ಎಕ್ಸಪ್ಲೋರ್ ಮಾಡುವ, ವಿವಿಧ ಪ್ರಯೋಗಕ್ಕೊಡ್ಡಿಕ್ಕೊಳ್ಳೋದ್ರಲ್ಲಿ ಎಕ್ಸ್‌ಪರ್ಟ್ ಗಳು. ಸೆಕ್ಸ್‌ಅನ್ನು ತಾವು ಎನ್‌ಜಾಯ್ ಮಾಡೋದಲ್ಲದೇ ಜೊತೆಗಿರುವವರೂ ಎನ್‌ಜಾಯ್ ಮಾಡೋ ಹಾಗೆ ಮಾಡ್ತಾರೆ. ಮಾತು ಕಮ್ಮಿ ಕ್ರಿಯೆ ಜಾಸ್ತಿ ಅನ್ನೋದು ಇವರ ಸ್ವಭಾವ. ಇವರನ್ನು ಲೈಫ್‌ ಪಾರ್ಟನರ್‌ ಆಗಿ ಪಡೆದವರಿಗೆ ಈ ಕೆಲವೊಂದು ಮನೋಭಾವ ಕಂಡು ಡೌಟ್ ಬರಬಹುದು. ಆದರೆ ಆ ಹೊತ್ತಲ್ಲಿ ಯಾವುದೇ ಡೌಟ್‌ಗಳಿರದಂತೆ ಸನ್ನಿವೇಶ ನಿಭಾಯಿಸೋದ್ರಲ್ಲಿ ಇವ್ರು ಎಕ್ಸ್‌ಪರ್ಟ್ಸ್.

ಸಿಂಹ (Leo)
ನೋಡೋದಕ್ಕೆ ಸಾಮಾನ್ಯವಾಗಿ ಕಂಡರೂ ಆ ವಿಷಯಕ್ಕೆ ಬಂದರೆ ಪ್ರಚಂಡರು. ಹಾಗಂದ ಬೇಲಿ ಹಾರೋದು ಈ ರಾಶಿಯವರ ಸ್ವಭಾವ ಅಲ್ಲವೇ ಅಲ್ಲ. ಸೆಕ್ಸ್ ವಿಚಾರದಲ್ಲಿ ಸಂಗಾತಿಗೆ ನಿಷ್ಠರು. ಯಾವುದೋ ದುರ್ಬಲ ಗಳಿಗೆಯಲ್ಲಿ ಬೇರೆ ಸಂಬಂಧಗಳಿಗೆ ಎಡತಾಕಿದ್ರೂ ಅದರಲ್ಲಿ ನೆಮ್ಮದಿಗಿಂತ ಕಿರಿಕಿರಿ ಅನುಭವಿಸುವವರು. ಇವರ ಆತ್ಮವಿಶ್ವಾಸ ಹೆಚ್ಚಿ. ಮೋಹಕವಾಗಿದ್ದು ಲೈಂಗಿಕವಾಗಿ ಸದಾ ಸಕ್ರಿಯರಾಗಿದ್ದಾರೆ. ಜೊತೆಗೆ ಇವರು ಸಂಪೂರ್ಣವಾಗಿ ಲೈಂಗಿಕತೆಯನ್ನು ಪ್ರೀತಿಸುತ್ತಾರೆ. ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಮೋಹಕ ವರ್ಚಸ್ಸನ್ನು ಹೊಂದಿದವರಾಗಿದ್ದು, ಸ್ವಭಾವದಿಂದ ಯಾರನ್ನಾದರೂ ಮೋಡಿ ಮಾಡುತ್ತದೆ. ತೀವ್ರವಾದ ಮುನ್ನಲಿವು ಅಥವಾ ಫೋರ್‌ ಪ್ಲೇಯನ್ನು ಪ್ರೀತಿಸುತ್ತಾರೆ. ತಮ್ಮ ಸಂಗಾತಿಯನ್ನು ಬಹಳ ವಿಶೇಷವೆಂದು ಭಾವಿಸಬೇಕು ಎಂಬ ಮನಸ್ಥಿತಿ ಇವರದು.

Sexual Health : ಸೆಕ್ಸ್ ನಂತ್ರ ಧಮ್ ಎಳೆಯೋರಿಗೆ ಕ್ಯಾನ್ಸರ್ ಬೆನ್ನು ಹತ್ತುತ್ತೆ ಹುಷಾರ್!

ಮಿಥುನ (Gemini)
ಮಾಮೂಲಿಯಾಗಿ ಸಿಕ್ಕಾಗ ದ್ವಂದ ವ್ಯಕ್ತಿತ್ವದ ಮೂಲಕ ಇತರರ ಜೊತೆಗೆ ಸಂವಹನ ಮಾಡುತ್ತಾರೆ. ಆದರೆ ಲೈಂಗಿಕತೆ ಸಮಯದಲ್ಲಿ ಇದೆಲ್ಲ ಮಾಯವಾಗಿ ತುಂಬಾ ಖುಷಿಯಾಗುತ್ತದೆ. ಸೆಕ್ಸ್‌ನಲ್ಲಿ ಸಂಗಾತಿಗೆ ಅಧೀನವಾಗೋದಕ್ಕೂ ಸೈ, ತಮ್ಮ ಪ್ರಾಬಲ್ಯ ಮೆರೆಯೋದಕ್ಕೂ ಸೈ. ಒಟ್ಟಾರೆ ಪಾರ್ಟನರ್‌ಗೆ ಬೇಸರವಾಗಲು ಬಿಡುವುದಿಲ್ಲ. ಜೆಮಿನಿಸ್ ಅಂದರೇ ಮಿಥುನ. ಯಾವಾಗಲೂ ಲೈಂಗಿಕತೆಯನ್ನು ಆಸಕ್ತಿದಾಯಕ ಮತ್ತು ತೀವ್ರವಾಗಿಸಲು ಹೊಸ ಟೆಕ್ನಿಕ್ ಬಳಸುತ್ತಾರೆ. ತಮ್ಮ ಲೈಂಗಿಕ ಅವಧಿಗಳನ್ನು ಸ್ಮರಣೀಯವಾಗಿಸಲು ಸೆಕ್ಸ್ ಆಟಿಕೆಗಳನ್ನು ಬಳಸಬಹುದು. ಆದರೆ ಇದಕ್ಕೆಲ್ಲ ಎನ್‌ಜಾಯ್ ಮಾಡುವ ಉದ್ದೇಶ ಇರುತ್ತದೆಯೇ ಹೊರತು ಜೊತೆಗಿರುವವರಿಗೆ ಹರ್ಟ್ ಮಾಡುವ, ಅವರನ್ನು ಬಲಿಪಶುವನ್ನಾಗಿಸುವ ಗುಣ ಇರುವುದಿಲ್ಲ. ಸೆಕ್ಸ್‌ನಲ್ಲಿ ಸ್ನೇಹಮಯಿಗಳಾಗಿರುತ್ತಾರೆ.

ಮೀನ (Pisces)
ಲೈಂಗಿಕತೆಯಲ್ಲಿ (Sexuality) ಬಹಳ ಸೂಕ್ಷ್ಮ ಮತ್ತು ಭಾವನಾತ್ಮಕವಾಗಿ (Emotionally) ಸ್ಪಂದಿಸುತ್ತಾರೆ. ಜೊತೆಗಿರುವವರಿಗೆ ಈ ಕ್ರಿಯೆ ಆರಾಮದಾಯಕವಾಗುವಂತೆ ಮಾಡುತ್ತಾರೆ. ಜೊತೆಗಿರುವವರನ್ನು ಮುಂದುವರಿಯಲು ಬಿಡುತ್ತಾರೆ. ಅವರಾಗವರೇ ಸೆಕ್ಸ್‌ನಲ್ಲಿ ಮುಂದೆ ಹೋಗೋದು ಕಡಿಮೆ. ಜೊತೆಗಿರುವವರು ಮುಂದುವರಿಯದಿದ್ದರೆ ಯಾವುದೇ ಚಲನೆಯನ್ನು ಪ್ರಯತ್ನಿಸಲು ಹೋಗುವುದಿಲ್ಲ. ಬಹಳ ತಾಳ್ಮೆಯಿಂದಿರುತ್ತಾರೆ. ಆದರೆ ಲೈಂಗಿಕತೆಯ ಮಧ್ಯದಲ್ಲಿಯೇ, ಅವರು ಕೆಲವು ಹೊಸ ಲೈಂಗಿಕ ಚಲನೆಗಳಿಂದ ಜೊತೆಗಿರುವವರನ್ನು ಆಶ್ಚರ್ಯಗೊಳಿಸಬಹುದು, ಬಯಸಿದ ರೀತಿಯಲ್ಲಿ ಜೊತೆಗಿರುವವರನ್ನು ಹೇಗೆ ಮೆಚ್ಚಿಸಬೇಕೆಂದು ಇವರಿಗೆ ತಿಳಿದಿದೆ. ಇವರು ಜೊತೆಗಾರರ ಲೈಂಗಿಕ ಅಗತ್ಯಗಳನ್ನು ತಿಳಿದಿರುತ್ತಾರೆ, ಆದ್ದರಿಂದ ಈ ರಾಶಿಯವರ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದಾಗ ಹೆಚ್ಚಾಗಿ ನಿರಾಶೆಗೆ ಅವಕಾಶ ಇರೋದಿಲ್ಲ.

ವಾತ್ಸಾಯನ ಕಾಮಸೂತ್ರ: ಪುರುಷನ ಪ್ರೇಮವನ್ನು ಸ್ತ್ರೀ ತಿರಸ್ಕರಿಸುವುದು ಯಾಕೆ?
 

Latest Videos
Follow Us:
Download App:
  • android
  • ios