ಮುನಿಸಿಕೊಂಡ ದಂಪತಿಯ ಒಂದು ಮಾಡುತ್ತೆ ಅಲ್ಲಿಟ್ಟ ಕುಂಕುಮ!
ಕುಂಕುಮ ಎಂದಾಗ ದೇವರ ಪೂಜೆ ನೆನಪಿಗೆ ಬರುತ್ತೆ. ಪೂಜೆ ಬಿಟ್ಟು ಮಂಗಳ ಕಾರ್ಯಗಳಲ್ಲಿ ಬಳಸುವ ಈ ಕುಂಕುಮ ಸಾಕಷ್ಟು ಶಕ್ತಿಯನ್ನು ಹೊಂದಿದೆ. ಮನೆಯ ಒಂದೊಂದು ಭಾಗದಲ್ಲಿ ಈ ಕುಂಕುಮವನ್ನಿಟ್ರೆ ಒಂದೊಂದು ಲಾಭವನ್ನು ನೀವು ಪಡಿತೀರಿ.
ಕುಂಕುಮ ಎಂದರೆ ಶುಭ ಹಾಗೂ ಮಂಗಳವೆಂದು ಹಿಂದುಗಳ ನಂಬಿಕೆ. ಹೆಣ್ಣಿಗೆ ಕುಂಕುಮ ಮುತ್ತೈದೆತನದ, ಸೌಭಾಗ್ಯದ ಸಂಕೇತ. ಎಲ್ಲ ಶುಭ ಕಾರ್ಯಕ್ಕೂ ಕುಂಕುಮ ಬೇಕೇ ಬೇಕು. ಎಲ್ಲ ದೇವರ ಪೂಜೆಗೂ ಅರಿಶಿನ ಕುಂಕುಮ ಅತೀ ಮುಖ್ಯವಾಗಿದೆ. ಎಲ್ಲ ಮಂಗಳ ಕಾರ್ಯದಲ್ಲೂ ಬಳಸುವ ಕುಂಕುಮಕ್ಕೆ ಗಂಡ ಹೆಂಡತಿಯ ಸಂಬಂಧವನ್ನೂ ಗಟ್ಟಿಗೊಳಿಸುವ ಶಕ್ತಿಯಿದೆ. ಮನೆಯ ಕೆಲವು ಸ್ಥಳಗಳಲ್ಲಿ ಕುಂಕುಮವನ್ನು ಹಾಕಿದರೆ ಗಂಡ ಹೆಂಡತಿಯ ನಡುವೆ ಕಾಣಿಸಿಕೊಂಡ ಬಿರುಕು ದೂರವಾಗುತ್ತೆ. ನಾವಿಂದು ಯಾವ ಸ್ಥಳದಲ್ಲಿ ಕುಂಕುಮವನ್ನಿಟ್ಟರೆ ಯಾವ ಲಾಭ ಸಿಗುತ್ತೆ ಎಂಬುದನ್ನು ನಿಮಗೆ ಹೇಳ್ತೆವೆ.
ಮನೆ (House) ಯ ಮುಖ್ಯ ಬಾಗಿಲಿಗೆ ಕುಂಕುಮ (Kumkum) : ಮನೆಯ ಮುಖ್ಯ ಬಾಗಿಲಿಗೆ ರಂಗೋಲಿ (Rangoli) ಇಟ್ಟು ಅರಿಶಿನ ಮತ್ತು ಕುಂಕುಮ ಹಾಕುವ ಪದ್ಧತಿ ಅನೇಕ ಮನೆಗಳಲ್ಲಿದೆ. ಮನೆಯ ಮುಖ್ಯ ಬಾಗಿಲಲ್ಲಿ ದೇವರು ನೆಲೆಸಿರುತ್ತಾರೆ. ಇದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಮನೆಯ ಮುಖ್ಯ ಬಾಗಿಲಲ್ಲಿ ಕೆಂಪು ಬಣ್ಣ (color) ದ ಬಟ್ಟೆಯೊಳಗೆ ಕುಂಕುಮವನ್ನು ಹಾಕಿ ಬಾಗಿಲಿಗೆ ತೂಗಿಹಾಕಬೇಕು. ಇದರಿಂದ ಗಂಡ ಹೆಂಡತಿಯ ನಡುವೆ ಬಾಂಧವ್ಯ ಹೆಚ್ಚುತ್ತದೆ.
ಕುಂಕುಮವನ್ನು ದೇವರ ಮನೆಯಲ್ಲಿಡಿ : ಮನೆಯಲ್ಲಿ ದೇವರ ಕೋಣೆ ಅತ್ಯಂತ ಪವಿತ್ಯ ಸ್ಥಳವಾಗಿದೆ. ಅಲ್ಲಿ ಕುಂಕುಮ, ಅಗರಬತ್ತಿ, ದೀಪಗಳನ್ನು ಇಡುವುದು ಸಾಮಾನ್ಯ. ದೇವರ ಮನೆಯಲ್ಲಿ ಸಣ್ಣ ಪ್ಯಾಕೆಟ್ ನಲ್ಲಿ ಕುಂಕುಮವನ್ನು ಇಡಬೇಕು. ಇದರಿಂದ ಗಂಡ ಹೆಂಡತಿಯ ನಡುವೆ ಮೂಡಿರುವ ಬಿರುಕು ದೂರವಾಗುತ್ತದೆ.
ಅಡುಗೆ (Kitchen) ಮನೆಯಲ್ಲಿ ಕುಂಕುಮ ಇಟ್ಟು ನೋಡಿ : ಅಡುಗೆ ಮನೆಯಲ್ಲಿ ಕುಂಕುವನ್ನು ಇಡುವವರು ತೀರ ವಿರಳ. ಒಗ್ಗರಣೆಗೆ ಬೇಕಾದ ಅರಿಶಿನವನ್ನು ಇಟ್ಟುಕೊಳ್ಳುತ್ತಾರೆಯೇ ಹೊರತು ಕುಂಕುಮವನ್ನು ಯಾರೂ ಇಟ್ಟುಕೊಳ್ಳುವುದಿಲ್ಲ. ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ. ಗಂಡನ ಹೃದಯಕ್ಕೂ ಹೊಟ್ಟೆಗೂ ನೇರ ಸಂಬಂಧವಿದೆ ಎಂದು ಹೇಳುತ್ತಾರೆ. ಹಾಗಾಗಿ ಅಡುಗೆ ಮನೆಯಲ್ಲಿ ಕುಂಕುಮವನ್ನು ಇಟ್ಟರೆ ವಿವಾಹ ಜೀವನದಲ್ಲಿ ಪ್ರೀತಿ ಹೆಚ್ಚುತ್ತದೆ.
ಜಗತ್ತಿನಲ್ಲಿ ಎಲ್ಲವೂ ಸುಂದರವಾಗಿಯೇ ಕಾಣಿಸುತ್ತವೆ ಈ Zodiac Signsಗೆ!
ಮಲಗುವ ಕೋಣೆಯಲ್ಲಿ (Bed Room) ಹೀಗೆ ಮಾಡಿ : ಮದುವೆಯಾದ ದಂಪತಿಗೆ ಮಲಗುವ ಕೋಣೆ ಮಹತ್ವವಾಗಿರುತ್ತದೆ. ಕೆಂಪು ಬಟ್ಟೆಯಲ್ಲಿ ಸ್ವಲ್ಪ ಕುಂಕುಮವನ್ನು ಹಾಕಿ ಮಲಗುವ ಕೋಣೆಯ ಹಾಸಿಗೆಯ ಕೆಳಗೆ ಇಡಬೇಕು. ಇದರಿಂದ ಗಂಡ ಹೆಂಡತಿಯ ನಡುವಿನ ಮುನಿಸು ದೂರವಾಗಿ ಇಬ್ಬರೂ ನೆಮ್ಮದಿಯಿಂದ ಬದುಕುವಂತಾಗುತ್ತದೆ.
ಮನೆಯ ತ್ರಿಜೂರಿಯಲ್ಲಿ (Wardrobe) ಕುಂಕುಮವನ್ನಿಡಿ : ಮನೆಯ ತ್ರಿಜೂರಿಯಲ್ಲಿ ಸಾಕ್ಷಾತ್ ಲಕ್ಷಿಯೇ ನೆಲೆಸಿರುತ್ತಾಳೆ ಎಂದು ತ್ರಿಜೂರಿಯನ್ನು ಪೂಜಿಸುತ್ತೇವೆ. ಕೆಲವೊಮ್ಮೆ ಆರ್ಥಿಕ ಸಮಸ್ಯೆಗಳಿಂದಲೂ ಗಂಡ ಹೆಂಡತಿಯ ನಡುವೆ ಜಗಳವಾಗುತ್ತದೆ. ಹೀಗಿರುವಾಗ ಮನೆಯ ತ್ರಿಜೂರಿಯಲ್ಲಿಯೂ ಕುಂಕುಮವನ್ನು ಇಡಬೇಕು. ಇದರಿಂದ ಮನೆಯಲ್ಲಿ ಹಾಗೂ ಪತಿಯ ಕೆಲಸ, ವ್ಯಾಪಾರಗಳಲ್ಲಿಯೂ ಲಾಭ ಹೆಚ್ಚಾಗುತ್ತೆ.
ಪರ್ಸ್ (Purse)ನಲ್ಲಿ ಕುಂಕುಮ ಇಟ್ಟರೆ ಈ ಲಾಭ : ಸಾಮಾನ್ಯವಾಗಿ ಪರ್ಸ್ ನಲ್ಲಿ ಹಣ, ಪೆನ್, ಡೈರಿ, ಮೊಬೈಲ್ ಮುಂತಾದವುಗಳಿರುತ್ತೆ. ಗಂಡ ಹೆಂಡತಿಯರಿಬ್ಬರೂ ಪರ್ಸ್ ನಲ್ಲಿ ಕುಂಕುಮವನ್ನು ಇಟ್ಟುಕೊಳ್ಳುವುದರಿಂದ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ.
ಮದುವೆಯ ಫೋಟೋ (Wedding Album) : ಮದುವೆಯ ಫೋಟೋವಂತೂ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ. ಮದುವೆಯ ಫೋಟೋದ ಹಿಂದೆ ಕುಂಕುಮವನ್ನು ಇಡುವುದರಿಂದ ಗಂಡ ಹೆಂಡತಿಯ ನಡುವೆ ವಿರಸದ ವಾತಾವರಣ ಸೃಷ್ಠಿಯಾಗುವುದಿಲ್ಲ. ಇದರಿಂದ ಸಂತಾನ ಭಾಗ್ಯ ಕೂಡ ದೊರಕುತ್ತೆ.
Valentine's Day 2023: ಪ್ರೇಮಿಗಳ ವಾರದಲ್ಲಿ ಬಯಸಿದ ಪ್ರೀತಿ ಪಡೆಯಲು ಈ ಪರಿಹಾರ ಮಾಡಿ..
ತುಳಸಿಗೆ ಕುಂಕುಮ ಹಚ್ಚಿ: ಎಲ್ಲ ಹಿಂದುಗಳ (Hindus) ಮನೆಯ ಮುಂದೆ ತುಳಸಿ ಗಿಡವನ್ನು ನಾವು ನೋಡ್ಬಹುದು. ಅದನ್ನು ಅನೇಕರು ಪ್ರತಿ ದಿನ ಪೂಜಿಸುತ್ತಾರೆ. ತುಳಸಿಗೆ ಪ್ರತಿನಿತ್ಯ ಪೂಜೆ ಮಾಡುವ ವೇಳೆ ಕುಂಕುಮವನ್ನು ಹಾಕಬೇಕು. ಹಾಗೆಯೇ ಕೆಂಪು ಬಣ್ಣದ ಬಟ್ಟೆಯೊಳಗೆ ಕುಂಕುಮವನ್ನು ಹಾಕಿ ತುಳಸಿ ಗಿಡದ ಬಳಿ ಇಡಬೇಕು. ಇದರಿಂದ ದಾಂಪತ್ಯ ಜೀವನದ ಎಲ್ಲ ಭೌತಿಕ ಸುಖ ಲಭಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.