Asianet Suvarna News Asianet Suvarna News

ಕೃಷ್ಣ ಜನ್ಮಾಷ್ಟಮಿ 2023 ಶುಭ ಮುಹೂರ್ತ,ಮಹತ್ವ

ಪಂಚಾಂಗದ ಪ್ರಕಾರ ಕೃಷ್ಣ ಜನ್ಮಾಷ್ಟಮಿ , ಈ ವರ್ಷದ ಶ್ರಾವಣ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಸೆಪ್ಟೆಂಬರ್ 6, 3.37 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಸೆಪ್ಟೆಂಬರ್ 7 ರಂದು ಸಂಜೆ 4.14 ಕ್ಕೆ ಕೊನೆಗೊಳ್ಳುತ್ತದೆ.

krishna janmashtami 2023 here all the information suh
Author
First Published Sep 5, 2023, 2:28 PM IST

ಭಗವಾನ್ ಕೃಷ್ಣನ ಜನ್ಮ ವಾರ್ಷಿಕೋತ್ಸವವನ್ನು ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವು ಭೂಮಿಯ ಮೇಲೆ ಕೃಷ್ಣನಾಗಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಭಕ್ತರು ತಮ್ಮ ವಿಗ್ರಹಗಳಿಗೆ ಪೂರ್ಣ ಭಕ್ತಿಯಿಂದ ಉಪವಾಸ ಮಾಡುತ್ತಾರೆ ಮತ್ತು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜೆಯನ್ನು ಮಾಡುತ್ತಾರೆ. ಶ್ರೀಕೃಷ್ಣನಿಗೆ ಪಲ್ಲಕ್ಕಿಯನ್ನು ಅಲಂಕರಿಸಿ ಶ್ರೀಕೃಷ್ಣನ ಜನ್ಮ ವೃತ್ತಾಂತವನ್ನು ನಾಟಕ ಅಥವಾ ಚಲನಚಿತ್ರದ ಮೂಲಕ ಚಿತ್ರಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪಂಚಾಂಗದ ಪ್ರಕಾರ, ಈ ವರ್ಷದ ಶ್ರಾವಣ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಸೆಪ್ಟೆಂಬರ್ 6, 3.37 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಸೆಪ್ಟೆಂಬರ್ 7 ರಂದು ಸಂಜೆ 4.14 ಕ್ಕೆ ಕೊನೆಗೊಳ್ಳುತ್ತದೆ. ಅಲ್ಲದೆ, ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 9.21 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10.25 ಕ್ಕೆ ಕೊನೆಗೊಳ್ಳುತ್ತದೆ. ನಂಬಿಕೆಯ ಪ್ರಕಾರ, ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು, ಆದ್ದರಿಂದ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6 ರಂದು ಮಾತ್ರ ಆಚರಿಸಲಾಗುತ್ತದೆ. ಈ ದಿನದಂದು ಪೂಜೆಯ ಶುಭ ಸಮಯವು ರಾತ್ರಿ 11:47 ರಿಂದ 12:42 ರವರೆಗೆ ಇರುತ್ತದೆ. ಶ್ರೀಕೃಷ್ಣನ ಆರಾಧನೆಯು ಭಕ್ತರ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಯಾವಾಗ ನೋಡಿದ್ರೂ ದುಡ್ಡು ದುಡ್ಡು ಅಂತ ಸಾಯೋ ರಾಶಿಗಳಿವು!

 

ಜನ್ಮಾಷ್ಟಮಿಯ ದಿನದಂದು ರಾತ್ರಿ 12 ಗಂಟೆಗೆ ಮಗುವಿನ ರೂಪದಲ್ಲಿ ಶ್ರೀಕೃಷ್ಣನ ಜನ್ಮವನ್ನು ಆಚರಿಸಬೇಕು.  ಶಂಖದಲ್ಲಿ ಹಾಲಿನ ಅಭಿಷೇಕ ಮಾಡಬೇಕು. ಅಭಿಷೇಕವನ್ನು ಐದು ವಸ್ತುಗಳಿಂದ ಕೂಡ ಮಾಡಬಹುದು . ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲ ಅಭಿಷೇಕ ಮಾಡಿ.  ನಂತರ, ಕೃಷ್ಣಗೆ ಸುಂದರವಾದ ಬಟ್ಟೆಗಳನ್ನು ತೊಡಿಸಿ, ಕಿರೀಟವನ್ನು ತೊಡಿಸಿ . ಕೃಷ್ಣ ಜನ್ಮಾಷ್ಟಮಿಯ ದಿನದಂದು, ಧಾರ್ಮಿಕ ಸ್ಥಳಕ್ಕೆ ಹೋಗಿ ಹಣ್ಣು ಮತ್ತು ಧಾನ್ಯಗಳನ್ನು ದಾನ ಮಾಡಿ. ಶ್ರೀಕೃಷ್ಣ ಗೆ ಕೊಳಲು ಮತ್ತು ನವಿಲು ಗರಿಗಳನ್ನು ತನ್ನಿ. ಪೂಜೆಯ ಸಮಯದಲ್ಲಿ ಅದನ್ನು ಭಗವಂತನಿಗೆ ಅರ್ಪಿಸಬೇಕು. ಜನ್ಮಾಷ್ಟಮಿಯಂದು ಪುಟ್ಟ ಶ್ರೀಕೃಷ್ಣ ಗೆ ಬೆಣ್ಣೆ ಮತ್ತು ಸಕ್ಕರೆಯ ಪ್ರಸಾದವನ್ನು ನೀಡಿ. ಹಾಗೆಯೇ ಪೂಜೆಯಲ್ಲಿ ತುಳಸಿಯನ್ನು ಬಳಸಬೇಕು 

ಒಂದರಿಂದ ಐದು ವರ್ಷದೊಳಗಿನ ಯಾವುದೇ ಮಗುವಿಗೆ ಬೆಣ್ಣೆ-ಸಕ್ಕರೆಯನ್ನುನೀಡಿ. ಈ ದಿನ ಹಸು-ಕರುವಿನ ವಿಗ್ರಹ ಅಥವಾ ಫೋಟೋವನ್ನು ಮನೆಗೆ ತಂದು ಪೂಜೆ ಮಾಡುವ ಸ್ಥಳದಲ್ಲಿ ಇಟ್ಟು ಪೂಜಿಸಿ. ಹಸುವಿನ ಸೇವೆ ಮಾಡಿ. ಹಸುವಿಗೆ ಮೇವು ಅಥವಾ ರೊಟ್ಟಿಯನ್ನು ನೀಡಿ ಆಶೀರ್ವಾದ ಪಡೆಯಿರಿ. ಹಳದಿ ಚಂದನವನ್ನು ಭಗವಂತನಿಗೆ ಅರ್ಪಿಸಿ. ಹಳದಿ ಬಣ್ಣದ ಬಟ್ಟೆಗಳನ್ನು ಪಾರಿಜಾತ ಹೂವುಗಳನ್ನು ಅರ್ಪಿಸಬೇಕು.
 

Follow Us:
Download App:
  • android
  • ios