ಯಾವಾಗ ನೋಡಿದ್ರೂ ದುಡ್ಡು ದುಡ್ಡು ಅಂತ ಸಾಯೋ ರಾಶಿಗಳಿವು!
ಹಣದ ವಿಚಾರದಲ್ಲಿ ಪ್ರತಿಯೊಬ್ಬರು ವಿಭಿನ್ನ ,ಒಬ್ಬರಿಗೆ ಹಣವೇ ಸರ್ವಸ್ವ , ಆದರೆ ಕೆಲವರಿಗೆ ಜೀವನ ನಡೆಸಲು ಅವಶ್ಯಕ. ಹಲವರು ಆರ್ಥಿಕವಾಗಿ ಯಶಸ್ವಿಯಾಗಲು ಹಣವನ್ನು ಗಳಿಸಲು ಪ್ರಯತ್ನಿಸುತ್ತಾರೆ. ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಆರ್ಥಿಕವಾಗಿ ಸಂತೋಷ ಮತ್ತು ಸಮೃದ್ದವಾಗಿರಲು ಇಷ್ಟ ಪಡುತ್ತಾರೆ.
ವೃಷಭ ರಾಶಿಯವರು ಆರ್ಥಿಕ ಯಶಸ್ಸನ್ನು ಸಾಧಿಸುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಇವರು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವಲ್ಲಿ ನಿಪುಣರು. ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಇಚ್ಛೆ ಪಡುತ್ತಾರೆ. ಸ್ಟಾಕ್ ಮಾರ್ಕೆಟ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.
ಮಕರ ರಾಶಿ ಹಣದ ವಿಷಯದಲ್ಲಿ ಎರಡನೇ ಬುದ್ದಿವಂತ ರಾಶಿ. ಆರ್ಥಿಕ ಗುರಿಗಳ ಬಗ್ಗೆ ಅವರ ಮಹತ್ವಾಕಾಂಕ್ಷೆ ಹೆಚ್ಚು. ಇವರು ತಾಳ್ಮೆಯಿಂದಾಗಿ ಆರ್ಥಿಕ ಯಶಸ್ಸು ಪಡೆಯುತ್ತಾರೆ.
ಕನ್ಯಾ ರಾಶಿಯವರು ಎಚ್ಚರಿಕೆಯಿಂದ ಆರ್ಥಿಕ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಹಣವನ್ನು ಉಳಿತಾಯ ಮಾಡುತ್ತಾರೆ. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸುವಲ್ಲಿ ಪರಿಣಿತರು.
ವೃಶ್ಚಿಕ ರಾಶಿಯವರು ಹಣದ ವಿಷಯದಲ್ಲಿ ತುಂಬಾ ದೃಢ ನಿಶ್ಚಯ ಹೊಂದಿರುತ್ತಾರೆ. ಆರ್ಥಿಕ ಯಶಸ್ಸು ಸಾಧಿಸಲು ಅಪಾಯವನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಹಣ ಗಳಿಸುವ ಮೂಲದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುತ್ತಾರೆ.
ಕರ್ಕಾಟಕ ರಾಶಿಯವರು ಮನಿ ಮೈಂಡೆಡ್ ಅಲ್ಲ ಆದರೆ ಹಣವನ್ನು ನಿರ್ವಹಿಸುವ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುತ್ತಾರೆ. ಅವರು ಹಣವನ್ನು ಉಳಿಸುತ್ತಾರೆ ಮತ್ತು ಹೆಚ್ಚು ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸುತ್ತಾರೆ.