ಧರ್ಮಕ್ಕೂ ಮಿಗಿಲಾದ ಭಕ್ತಿ: ಮುಸ್ಲಿಂ ರಾಮ ಭಕ್ತನೊರ್ವರಿಂದ ಶ್ರೀರಾಮ ಕೋಟಿ ವ್ರತ!
98 ವರ್ಷದ ಮುಸ್ಲಿಂ ಧರ್ಮದ ಪಾಚಾಸಾಭ್, ಚಿನ್ನದ ನಾಡು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ 1923ರಲ್ಲಿ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಬಳಿಕ ಬರುವ ಪಿಂಚಣಿಯಲ್ಲಿ ಶ್ರೀರಾಮಕೋಟಿ ಬರೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಏ.18): 98 ವರ್ಷದ ಮುಸ್ಲಿಂ (Muslim) ಧರ್ಮದ ಪಾಚಾಸಾಭ್, ಚಿನ್ನದ ನಾಡು ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ 1923ರಲ್ಲಿ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಆದರೆ ಹಿಂದೂಗಳ ಆರಾದ್ಯ ದೈವ ಕಲಿಯುಗದ ಮಹಾ ಪುರುಷ ಶ್ರೀರಾಮನ (Sri Rama) ಜಪ ಮಾಡುತ್ತಾ, ರಾಮನಿಗೆ ತಮ್ಮ ಭಕ್ತಿಯನ್ನ ಸಮರ್ಪಣೆ ಮಾಡುತ್ತಿದ್ದಾರೆ. ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಬಳಿಕ ಬರುವ ಪಿಂಚಣಿಯಲ್ಲಿ ಶ್ರೀರಾಮಕೋಟಿ (Sri Rama Koti) ಬರೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಕರಾಗಿದ್ದಾಗ 23 ವರ್ಷಗಳ ಹಿಂದೆ ಸ್ನೇಹಿತನೊಂದಿಗೆ ಭದ್ರಚಲಂ ದೇವಾಲಯಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಸಾಧು ಶ್ರೀರಾಮ ಕೋಟಿ ಬರೆಯುತ್ತಿದ್ದನ್ನು ಕಂಡು ವಿಚಾರಿಸಿದ ಇವರು ಹಾಗೆ ಬರೆದಲ್ಲಿ ನಿನಗೆ ಒಳ್ಳೆಯದಾಗುತ್ತದೆ ಎಂದಿದ್ದಾರೆ.
ಅಂದಿನಿಂದ ಶ್ರೀರಾಮ ಕೋಟಿ ಬರೆಯುವುದನ್ನು ಪ್ರಾರಂಭಿಸಿ, ಪುಸ್ತಕದಲ್ಲಿ ಬರೆಯುವುದರ ಜೊತೆಗೆ ಎಕ್ಕದ ಎಲೆ, ಆಲದ ಎಲೆ, ಕಂಚಿನ ಎಲೆಯ ಮೇಲೂ ಶ್ರೀರಾಮ ಕೋಟಿ ಬರೆಯುತ್ತಿದ್ದಾರೆ. ಈಗಾಗಲೇ 1 ಕೋಟಿ ಬಾರಿ ಶ್ರೀ ರಾಮ ಎಂದು ಪಾಚಾಸಾಬ್ ಬರೆದಿದ್ದಾರೆ. ಕಳೆದ ವರ್ಷ ಅಕ್ಟೋಬರ್ 15ಕ್ಕೆ 1 ಕೋಟೆ ರಾಮಕೋಟೆಯನ್ನು ಬರೆದು ಮುಗಿಸಿದ್ದಾರೆ. ಇನ್ನು ರಾಮಕೋಟೆಯನ್ನು ಭದ್ರಚಲಂಗೆ ಅಥವಾ ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ಯಾರಾದರೂ ಜನಪ್ರತಿನಿಧಿಗಳ ಕೈಯಲ್ಲಿ ಅರ್ಪಿಸುವ ಕನಸು ಇವರದ್ದು. ಸರ್ವಧರ್ಮ ಸಮನ್ವಯ ಸಾರುವುದೇ ನನ್ನ ಗುರಿಯಾಗಿದೆ. ಈ ಗ್ರಾಮದಲ್ಲಿ ಒಂದು ರಾಮಾಂಜನೇಯ ದೇವಾಲಯ ನಿರ್ಮಾಣ ಮಾಡುವ ಕನಸು ಸಹ ಇವರಿಗಿದೆ.
Kolar: ಪ್ರಾಣಿಗಳೇ ಗುಣದಲ್ಲಿ ಮೇಲು ಎಂದು ಬೀದಿ ಪ್ರಾಣಿಗಳಿಗೆ ಆಸರೆಯಾದ ವ್ಯಕ್ತಿ!
ಪಾಚಾಸಾಭ್ ಗಾಂಧೀಜಿ, ನೆಹರು, ಇಂದಿರಾಗಾಂಧಿ, ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪರವರೊಂದಿಗೆ ಒಡನಾಡಿಗಳಾಗಿದ್ದವರು. ಕೆ.ಸಿ.ರೆಡ್ಡಿ ಅವಧಿಯಲ್ಲಿ ಜನರಿಗೆ ಮತ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟವರಾಗಿದ್ದು, ಗೋವಾ ಲೋಕಾಸೇವಾದಿಂದ ನಡೆದ ಗೋವಾ ಸತ್ಯಾಗ್ರಹದಲ್ಲಿ ಕೃಷ್ಣಯ್ಯಶೆಟ್ಟಿರವರ ನೇತೃತ್ವದಲ್ಲಿ ಸ್ವಾತಂತ್ರಕ್ಕೆ ಸತ್ಯಾಗ್ರಹದಲ್ಲಿ ಸಹ ಭಾವಹಿಸಿದ್ದಾರಂತೆ. ಅದರ ಸವಿ-ನೆನಪುಗಳನ್ನು ಇಂದಿಗೂ ಹಂಚಿಕೊಳ್ಳುತ್ತಾರೆ. ಇನ್ನು ಜೀವನದಲ್ಲಿ ನೆಮ್ಮದಿ ಸಿಕ್ಕಿದೆ, ಆರೋಗ್ಯವಾಗಿದ್ದೇನೆ, ಸಕ್ಕರೆ, ಬಿಪಿ, ಆಗಲಿ ಯಾವುದೇ ಕಾಯಿಲೆ ಇಲ್ಲ, ಬೇರೆ ಅವ್ಯಾಸಗಳು ಇಲ್ಲ, ಮನಸ್ಸಿಗೆ ನೆಮ್ಮದಿ ಸಿಕ್ಕಿದೆ.ಈ ರಾಮ ಕೋಟಿ ಬರೆಯುವದರಿಂದ ನಾನು ಹೇಳಿದ ಮಾತು ನಡೆಯುತ್ತದೆ ಎನ್ನುತ್ತಾರೆ ಪಾಚಾಸಾಬ್.
ಸರ್ವರಿಗೂ ಒಳ್ಳೆಯದನ್ನು ಮಾಡುವ ಆಸೆ ಇವರಿಗಿದ್ದು ಪಾಚಾಸಾಭ್ ಬಗ್ಗೆ ಸ್ಥಳೀಯರು ಸಹ ಅಷ್ಟೇ ಗೌರವದಿಂದ ಇವರನ್ನು ನಡೆಸಿಕೊಳ್ಳುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ರು ಸಹ ಶ್ರೀರಾಮನ ಮೇಲಿರುವ ಆಸೆ,ಇವರ ಭಕ್ತಿಯನ್ನ ಪ್ರತಿಯೊಬ್ಬರು ಮೆಚ್ಚುವಂತಂಹದ್ದಾಗಿದೆ.ಈತನ ಸಿದ್ಧಾಂತ,ಕೋಮು ಸೌಹಾರ್ಧತೆ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದೆ. ಮೂಲತಃ ಮುಸಲ್ಮಾನ ಸಮುದಾಯಕ್ಕೆ ಸೇರಿರುವ ಇವರು ಇನ್ನು ಸ್ವರಾಜ್ಯ ಬರುವ ಮುನ್ನ ಅಂದರೆ ರಾಜರ ಕಾಲದಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ 27 ವಷ೯ಗಳ ಕಾಲ ಕೆಲಸ ಮಾಡಿದ್ದಾರೆ.
ಆದರೆ ಪಾಚಾಸಾಭ್ ಅವರಿಗೆ ಅದೇನಾಯ್ತೋ ಗೊತ್ತಿಲ್ಲ ಇದ್ದಕ್ಕಿದ ಹಾಗೆ ತಮ್ಮ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಭಾರತ ದೇಶದಲ್ಲಿರುವ ಪ್ರಮುಖ ಹಿಂದೂ ದೇವಾಲಯಗಳನ್ನು ವೀಕ್ಷಣೆ ಮಾಡಬೇಕೆಂದು ನಿಧ೯ರಿಸಿ ತಿರುಗಾಡಲು ಆರಂಭಿಸುತ್ತಾರೆ. ತಮ್ಮ ಪ್ರವಾಸವನ್ನು ಮುಗಿಸಿ ಮನೆಗೆ ಹಿಂತಿರುಗಿದಾಗ ಕುಟುಂಬಸ್ಥರು ಹಾಗೂ ಗ್ರಾಮಸ್ಥರೆಲ್ಲಾ ನೀನು ಇರೋ ಕೆಲಸವನ್ನು ಬಿಟ್ಟು ದೇಶ ಸುತ್ತಿ ಬರಿಕೈಯಲ್ಲಿ ವಾಪಸ್ಸಾಗಿದೀಯ ಎಂದು ಗೇಲಿ ಮಾಡಿದ್ದಾರೆ. ಪಾಚಾಸಾಭ್ ಅವೂ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿರೋದು ಮತ್ತೊಂದು ವಿಶೇಷ ಸಂಗತಿ. ಹೀಗಾಗಿ ಇವರ ಸ್ನೇಹಿತರಾದ ವೆಂಕಟರಾಮಯ್ಯ, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನು ಕೆಲವರು ಸೇರಿಕೊಂಡು ಇವರಿಗೆ ಪಿಂಚಣಿ ಬರುವಂತೆ ಮಾಡಿಕೊಟ್ಟಿದ್ದಾರೆ.
ಅವರನನ್ನು ಪಾಚಾಸಾಭ್ ಸಹ ನೆನೆಪು ಮಾಡಿಕೊಳ್ತಾರೆ. ಇವರಿಗೆ ಬರುತ್ತಿರುವ 15 ಸಾವಿರ ರೂಪಾಯಿ ಪಿಂಚಣಿ ಹಣದಿಂದಲೇ ಇವರೂ ಜೀವನ ಸಾಗಿಸುತ್ತಿದ್ದಾರೆ. ಪ್ರತಿ ದಿನ ಒಂದೂ ಮೈಲಿಯಷ್ಟು ದೂರ ವಾಕಿಂಗ್ ಹೋಗುವ ಇವರಿಗೆ ಯಾವುದೇ ಚಿಕ್ಕಪುಟ್ಟ ಖಾಯಿಲೆ ಸಹ ಇಲ್ಲದೆ ಆರೋಗ್ಯವಾಗಿರುವುದನ್ನು ಕಂಡು ಪ್ರತಿವೊಬ್ಬರು ಆಶ್ಚಯ೯ ವ್ಯಕ್ತಪಡಿಸುತ್ತಿದ್ದಾರೆ. ನಾನು ಆರೋಗ್ಯವಾಗಿರಲು ಕಾರಣ ರಾಮಕೋಟಿ ಬರೆದಿರೋದೆ ಅನ್ನೋದು ಪಾಚಾಸಾಭ್ ಅವರ ನಂಬಿಕೆ ಕೂಡ.
ಇಳಿ ವಯಸ್ಸಲ್ಲೂ ಪಾಚಾಸಾಭ್ ಅವ್ರೂ ತಮ್ಮ ಅಮೂಲ್ಯವಾದ ಸಮಯವನ್ನು ವ್ಯಥ೯ ಮಾಡಲು ಇಚ್ಚಿಸದೆ, ಅಕ್ಕ ಪಕ್ಕದ ಊರಿನ ಹಾಗೂ ಬೇರೆ ಬೇರೆ ತಾಲೂಕಿನ ಶಾಲೆಗಳಿಗೆ ಭೇಟಿ ಕೊಟ್ಟು ನಾನು ಸಹ ಶಿಕ್ಷಕನೇ ಅಂತ ಮಕ್ಕಳಿಗೆ ಪಾಠ ಮಾಡುವ ಮೂಲಕ ತಮ್ಮ ರಾಮಕೋಟಿಯ ಬಗ್ಗೆ ತಿಳಿಸಿ ನೀವು ಸಹ ಬರೆಯಿರಿ ಹಾಗೂ ಸದಾಕಾಲ ಶ್ರೀರಾಮನ ಜಪ ಮಾಡ್ತಾ ಇರಿ ಭವಿಷ್ಯದಲ್ಲಿ ರಾಮನು ನಿಮ್ಮನು ಸರಿ ದಾರಿಗೆ ಕರೆದುಕೊಂಡು ಹೋಗುತ್ತಾನೆ ಅಂತ ಪ್ರಚಾರ ಮಾಡ್ತಿದ್ದಾರೆ. ಕನ್ನಡ ಶಿಕ್ಷರಾಗಿದ್ದ ಪಾಚಾಸಾಭ್ ಅವರು ಮಹಾಭಾರತ, ಭಗವದ್ಗೀತೆ, ರಾಮಾಯಣ, ಭಾಗವತ, ಬೈಬಲ್ ಹಾಗೂ ಕುರಾನ್ ಎಲ್ಲವನ್ನೂ ಅಧ್ಯಯನ ಮಾಡಿದ್ದಾರೆ.
Chikkaballapur: ಬೇಸಿಗೆ ಆರಂಭದ ಬೆನ್ನಲೇ ಹಾಲು ಉತ್ಪಾದನೆ ಕುಸಿತ
ಇದೀಗ ಇವರು ಬರೆದಿರುವ ರಾಮಕೋಟಿಯನ್ನು ಅಯೋಧ್ಯೆಗೆ ಹೋಗಿ ಕೊಡಬೇಕು ಅಂತ ಮನಸ್ಸು ಮಾಡಿದ್ದಾರೆ. ಇನ್ನು ರಾಮಕೋಟಿ ಬರೆಯಲು ಇದುವರೆಗೂ ಯಾರು ಸಹಾಯ ಮಾಡಿಲ್ಲ ತಮಗೆ ಬರುವ ಪಿಂಚಣಿ ಹಣದಲ್ಲೆ ಖಚು೯ ಮಾಡಿ ಬರೆದಿದ್ದಾರೆ. ಸವ೯ ಧಮ೯ ಸಮನ್ವಯದಿಂದ ಹಿಂದೂ ಮುಸ್ಲಿಂ ಸಮುದಾಯದವರು ಬಾಳಬೇಕು ಅಂತ ಪಾಚಾಸಾಭ್ ಅವರ ಅಭಿಪ್ರಾಯವಾಗಿದೆ. ಇನ್ನು ಬಾಬ್ರಿ ಮಸೀದಿ, ಅಯೋಧ್ಯೆಯ ಶ್ರೀರಾಮ ಮಂದಿರ ಎಲ್ಲವೂ ಒಂದೇ ಆಗಾಗಿ ನಾನು ಈಗಲೂ ಮಸೀದಿಗೆ ಹೋಗಿ ನಮಾಜ್ ಮಾಡುತ್ತೇನೆ. ಮಂದಿರಕ್ಕೆ ಹೋಗಿ ಮಯಾ೯ದೆ ಪುರುಷ ಶ್ರೀರಾಮನ ಜಪ ಮಾಡುತ್ತೇನೆ ಅಂತಾರೆ ಪಾಚಾಸಾಭ್.