Eclipse 2022: ಈ ವರ್ಷ ನಾಲ್ಕು ಬಾರಿ ಬರಲಿದೆ ಗ್ರಹಣ..
2022ರಲ್ಲಿ ಒಟ್ಟು ನಾಲ್ಕು ಬಾರಿ ಗ್ರಹಣಗಳು ಸಂಭವಿಸುತ್ತವೆ. ಅವುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಗ್ರಹಣ ಕಾಲಕ್ಕೆ ಅದರದೇ ಆದ ಪ್ರಾಮುಖ್ಯತೆ ಇರುತ್ತದೆ. ಕಳೆದ ವರ್ಷದ ಕಡೆಯ ಗ್ರಹಣ ಡಿಸೆಂಬರ್ 4ರಂದು ಗೋಚರಿಸಿತ್ತು. ಗ್ರಹಣವನ್ನು ದೇವತೆಗಳ ಪೂಜೆಗೆ ಸಂಬಂಧಿಸಿದ ಯಾವುದೇ ಕಾರ್ಯಗಳೂ ನಡೆಯದ ಕ್ಷಣ, ನಕಾರಾತ್ಮಕ ಪರಿಣಾಮಗಳನ್ನು ತರುವ ಕ್ಷಣವಾಗಿ ಜ್ಯೋತಿಷ್ಯದಲ್ಲಿ ನೋಡಲಾಗುತ್ತದೆ. ಈ ವರ್ಷ ಒಟ್ಟು ನಾಲ್ಕು ಬಾರಿ ಗ್ರಹಣ(eclipse) ಸಂಭವಿಸಲಿದೆ. ಅದರಲ್ಲಿ ಎರಡು ಬಾರಿ ಸೂರ್ಯಗ್ರಹಣವಾದರೆ ಇನ್ನೆರಡು ಬಾರಿ ಚಂದ್ರಗ್ರಹಣವಾಗಲಿದೆ. ಇದರಲ್ಲಿ ಕೆಲವು ಭಾರತ(India)ದಲ್ಲಿ ಗೋಚರವಾದರೆ ಮತ್ತೆ ಕೆಲವು ಕಾಣಿಸುವುದಿಲ್ಲ.
ಸೂರ್ಯ, ಭೂಮಿ(earth)ಯ ನಡುವೆ ಚಂದ್ರ(moon) ಬಂದಾಗ- ಇವೆಲ್ಲವೂ ನೇರ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಘಟಿಸುತ್ತದೆ. ಹಿಂದೂ ಪುರಾಣಗಳ ಪ್ರಕಾರ, ರಾಹುವು ಸೂರ್ಯ ಮತ್ತು ಚಂದ್ರನನ್ನು ಬಾಯಿಯಿಂದ ಹಿಡಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ವೈಜ್ಞಾನಿಕವಾಗಿ ನೋಡಿದಾಗ ಚಂದ್ರ ಹಾಗೂ ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣವಾಗಲಿದೆ.
ಮೊದಲ ಸೂರ್ಯಗ್ರಹಣ
ಈ ವರ್ಷದ ಮೊದಲ ಗ್ರಹಣ ಸೂರ್ಯನಿಗೆ ಕವಿಯಲಿದೆ. ಏಪ್ರಿಲ್(April) 30ರಂದು ಈ ಗ್ರಹಣ ಆಗಲಿದ್ದು, ಭಾರತದಲ್ಲಿ ಕಾಣಿಸುವುದಿಲ್ಲ. ಹಾಗಾಗಿ, ಇದರ ಸೂತಕದ ಅವಧಿ ಗಣನೆಗೆ ಬರುವುದಿಲ್ಲ. ಇದು ವೃಷಭ ರಾಶಿಯಲ್ಲಿ ಆದರೂ, ಎಲ್ಲ 12 ರಾಶಿಗಳೂ(zodiac signs) ಇದರ ಪರಿಣಾಮ ಎದುರಿಸಲಿವೆ. ಈ ಗ್ರಹಣವು ದಕ್ಷಿಣ ಆಫ್ರಿಕಾ, ಅಮೆರಿಕದ ಕೆಲ ಭಾಗಗಳು, ಪೆಸಿಫಿಕ್ ಸಾಗರ, ಅಟ್ಲಾಂಟಿಕ್ ಹಾಗೂ ಅಂಟಾರ್ಟಿಕ್ ಸಾಗರದಲ್ಲಿ ಗೋಚರಿಸಲಿದೆ.
Chakras And Strength: ರಾಶಿ ಪ್ರಕಾರ, ಯಾವ ಚಕ್ರ ನಿಮಗೆ ಬಲ ತಂದು ಕೊಡಲಿದೆ?
ಮೊದಲ ಚಂದ್ರಗ್ರಹಣ(Lunar Eclipse)
ಇದಾಗಿ ಹದಿನೈದೇ ದಿನಕ್ಕೆ ಅಂದರೆ ಮೇ 15ರಂದು ಚಂದ್ರ ಗ್ರಹಣವಾಗಲಿದೆ. ಇದು ಪೂರ್ಣ ಚಂದ್ರ ಗ್ರಹಣವಾಗಿದ್ದು, ವೃಶ್ಚಿಕ ರಾಶಿಯಲ್ಲಿ ಆಗಲಿದೆ. ಈ ಗ್ರಹಣ ಭಾರತದಲ್ಲೂ ಕಾಣಲಿದೆ. ಭಾರತ ಹೊರತಾಗಿ, ಯೂರೋಪ್, ಏಷ್ಯಾದ ಕೆಲ ರಾಷ್ಟ್ರಗಳು, ಆಫ್ರಿಕಾ, ಉತ್ತರ ಅಮೆರಿಕಾದ ಬಹುತೇಕ ಭಾಗಗಳು, ದಕ್ಷಿಣ ಅಮೆರಿಕಾ, ಪೆಸಿಫಿಕ್ ಸಾಗರ, ಹಿಂದೂ ಮಹಾ ಸಾಗರ, ಅಂಟಾರ್ಟಿಕಾ ಹಾಗೂ ಅಟ್ಲಾಂಟಿಕ್ ಸಾಗರ ಭಾಗಗಳಲ್ಲಿ ಕಾಣಿಸುತ್ತದೆ.
ಎರಡನೇ ಸೂರ್ಯಗ್ರಹಣ
ಈ ವರ್ಷದ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 25ರಂದು ನಡೆಯಲಿದೆ. ಇದು ಕೂಡಾ ವೃಶ್ಚಿಕ ರಾಶಿಯಲ್ಲಾಗಲಿದ್ದು, ಭಾರತದಲ್ಲಿ ಕಾಣಿಸುವುದಿಲ್ಲ. ಇದರ ಸೂತಕದ ಅವದಿ ಗಣನೆಗೆ ಬರುವುದಿಲ್ಲ. ಭಾಗಶಃ ಗ್ರಹಣವಾಗಿರುವ ಇದು ಯೂರೋಪ್, ಷ್ಯಾದ ಕೆಲ ರಾಷ್ಟ್ರಗಳು, ಈಶಾನ್ಯ ಆಫ್ರಿಕಾ ಹಾಗೂ ಅಟ್ಲಾಂಟಿಕ್ ಸಾಗರ(Atlantic Ocean)ದಲ್ಲಿ ಕಂಡು ಬರಲಿದೆ.
Saturday Shopping : ಶನಿವಾರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಗೆ ತರಬೇಡಿ!
ಎರಡನೇ ಚಂದ್ರಗ್ರಹಣ
ಕೊನೆಯ ಹಾಗೂ ಎರಡನೇ ಚಂದ್ರಗ್ರಹಣ ನವೆಂಬರ್ 7-8 ರಂದು ಸಂಭವಿಸಲಿದೆ. ಇದು ಕೂಡಾ ಸಂಪೂರ್ಣ ಗ್ರಹಣವಾಗಿದ್ದು ವೃಷಭದಲ್ಲಿ ಆಗಲಿದೆ. ಭಾರತದ ಕೆಲ ಭಾಗಗಳಲ್ಲಿ ಗೋಚರವಾಗಲಿದೆ. ಇದಲ್ಲದೆ ಈಶಾನ್ಯ ಯೂರೋಪ್, ಏಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ಉತ್ತರ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್‌ಟಿಕ್, ಅಂಟಾರ್ಟಿಕಾ ಹಾಗೂ ಹಿಂದೂ ಮಹಾ ಸಾಗರದಲ್ಲಿ ಕಾಣಿಸಲಿದೆ.
ಪರಿಣಾಮಗಳು(effects)
ಇದರಲ್ಲಿ ಎರಡು ಗ್ರಹಣಗಳು ವೃಷಭದಲ್ಲಾದರೆ, ಮತ್ತೆರಡು ಗ್ರಹಣಗಳು ವೃಶ್ಚಿಕದಲ್ಲಾಗುತ್ತದೆ. ಹಾಗಾಗಿ, ಈ ಎರಡು ರಾಶಿಗಳ ಜನರು ಹೆಚ್ಚಿನ ಪರಿಣಾಮವನ್ನು ಕಾಣಲಿದ್ದಾರೆ. ಇದಲ್ಲದೆ, ಶನಿ(Saturn) ಕೂಡಾ ಏಪ್ರಿಲ್‌ನಲ್ಲಿ ತನ್ನ ರಾಶಿ ಬದಲಿಸಿ ಸ್ವರಾಶಿಗೆ ಬರುತ್ತಿರುವುದರಿಂದ ಇವೆರಡರ ಪರಿಣಾಮಗಳು ಎಲ್ಲ 12 ರಾಶಿಗಳ ಮೇಲೆ ಆಗಲಿದೆ. ಗ್ರಹಣ ಸಂದರ್ಭವು ಭೂಮಿಯ ಪ್ರತಿ ಚರಾಚರಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಗ್ರಹಣ ಸಂದರ್ಭದಲ್ಲಿ ಕೆಲ ಹಕ್ಕಿಗಳು ಹಾಡುವುದಿಲ್ಲ, ಕೆಲ ಹೂವುಗಳು ಮುದುಡುತ್ತವೆ. ಅಂತೆಯೇ ಮನುಷ್ಯರು ಕೂಡಾ ಈ ಸಂದರ್ಭದಲ್ಲಿ ಊಟ ಮಾಡುವುದು, ನೀರು ಕುಡಿಯುವುದು ಸರಿಯಲ್ಲ ಎನ್ನಲಾಗುತ್ತದೆ.