ದೇವರಿಗೆ ಅಗರಬತ್ತಿ ಉರಿಸುವಾಗ ಇದು ಗೊತ್ತಿರಲಿ! ಯಾವ ದೇವರಿಗೆ ಯಾವ ಪರಿಮಳದ ಅಗರಬತ್ತಿ?

ಕೆಲವೊಮ್ಮೆ ಧಾರ್ಮಿಕ ಆಚರಣೆಗಳನ್ನು ಅವುಗಳ ಅರ್ಥ ಗೊತ್ತಿಲ್ಲದೆ ಆಚರಿಸುತ್ತಿರುತ್ತೇವೆ. ಅಗರಬತ್ತಿ ಯಾಕೆ ಉರಿಸುತ್ತೇವೆ, ಯಾವ ದೇವರಿಗೆ ಯಾವ ಪರಿಮಳದ ಅಗರಬತ್ತಿ ಉರಿಸಬೇಕು ನಿಮಗೆ ಗೊತ್ತೆ?

know these things when burning incense sticks bni

ಕೆಲವರು ಪೂಜೆ ಮಾಡುವಾಗ ಒಂದು ಹಿಡಿಯಷ್ಟು ಅಗರುಬತ್ತಿಗಳನ್ನು ತೆಗೆದುಕೊಂಡು ಬೆಂಕಿ ನೀಡಿ ಹೊಗೆ ಬರಿಸಿ ಮನೆಯೆಲ್ಲಾ ಹೊಗೆಯಿಂದ ತುಂಬಿಸುತ್ತಾರೆ. ಇದು ಆರೋಗ್ಯಕರವೂ ಅಲ್ಲ, ಅದೃಷ್ಟಕಾರಿಯೂ ಅಲ್ಲ. ಹಾಗಾದರೆ ಅಗರುಬತ್ತಿಗಳನ್ನು ಉರಿಸುವ ಸರಿಯಾದ ವಿಧಾನ ಯಾವುದು? ಯಾವ ದೇವರಿಗೆ ಯಾವ ಪರಿಮಳದ ಊದುಬತ್ತಿ ಉರಿಸಬೇಕು? ವಿವರ ಇಲ್ಲಿದೆ. 

ಮೊತ್ತ ಮೊದಲಾಗಿ, ನೀವು ಉತ್ತಮ ಗುಣಮಟ್ಟದ ಅಗರಬತ್ತಿಯನ್ನು ಉರಸುತ್ತಿದ್ದೀರಿ ಎಂದು ಖಾತ್ರಿಪಡಿಸಿಕೊಳ್ಳಿ. ಇಂದಿನ ದಿನಮಾನಗಳಲ್ಲಿ ಬರಿಯ ಕೆಮಿಕಲ್‌ನಿಂದ ಕೂಡಿದ ಅಗರಬತ್ತಿಗಳನ್ನು ಮಾರಲಾಗುತ್ತದೆ. ಇದರ ಬದಲಾಗಿ ಆರೋಗ್ಯಕರವೆಂದು ದೃಢಪಡಿಸಿಕೊಂಡ ಅಗರಬತ್ತಿಗಳನ್ನು ಮಾತ್ರ ಖರೀದಿಸಿ. ಹಾನಿಕರ ಅಗರಬತ್ತಿಗಳಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲ. ದೇವರೂ ಒಲಿಯುವುದಿಲ್ಲ. ಮುಖ್ಯವಾಗಿ, ಹರ್ಬಲ್‌ಗಳಿಂದ ಮಾಡಲಾದ ಅಗರಬತ್ತಿಗಳನ್ನು ಬಳಸಿ. ಅವು ಹೊಗೆ ಸೂಸಿದರೂ ಮನೆಯನ್ನು ಪಾಸಿಟಿವ್‌ ಶಕ್ತಿಯಿಂದ ತುಂಬಿಸುತ್ತವೆ. ಇದರ ಹೊಗೆಯನ್ನು ಉಸಿರಾಡಿದರೆ ಹಾನಿಯಿಲ್ಲ. 

ಪೂಜೆ ಮಾಡುವಾಗ ಹತ್ತಾರು ಅಗರಬತ್ತಿಗಳನ್ನು ಉರಿಸಿ ಇಡಬಾರದು. ಎರಡು ಬತ್ತಿಗಳನ್ನು ಉರಿಸಿದರೆ ಸಾಕು. ಮನೆಯಲ್ಲಿ ಪರಿಮಳ ಇರಬೇಕು ಎಂದರೆ ಒಂದು  ಅಗರಬತ್ತಿ ಸಾಕು. ಮಲಗುವ ಮುನ್ನ ಬತ್ತಿ ಹಚ್ಚಿಡಬೇಡಿ. ಫ್ಯಾನ್‌ ತಿರುಗುವಾಗ ಇದರಿಂದ ಕಿಡಿಗಳು ಸಿಡಿದು ಬಟ್ಟೆಬರೆಗೆ ಸಿಡಿದರೆ ಅನಾಹುತ ಆದೀತು. 

ಲಕ್ಷ್ಮಿ, ಪಾರ್ವತಿ, ದುರ್ಗಾಪರಮೇಶ್ವರಿ, ಮೂಕಾಂಬಿಕೆ, ಅಣ್ಣಮ್ಮ ಮುಂತಾದ ದೇವಿಯರಿಗೆ, ದೇವತೆಗಳಿಗೆ ಪೂಜೆ ಸಲ್ಲಿಸುವಾಗ ಮಲ್ಲಿಗೆ ಅಥವಾ ಜಾಸ್ಮಿನ್‌ ಪರಿಮಳದ ಊದುಬತ್ತಿಯನ್ನು ಹಚ್ಚಿರಿ. ಮಲ್ಲಿಗೆ ದೇವತೆಗಳಿಗೆ ಅತ್ಯಂತ ಪ್ರಿಯ. ಆದ್ದರಿಂದ ಅದು ದೇವಿಯರನ್ನು ಪ್ರಸನ್ನೀಕರಿಸುತ್ತದೆ.

ಶಿವ, ವಿಷ್ಣು, ನರಸಿಂಹ, ಗಣಪತಿ, ಆಂಜನೇಯ ಮುಂತಾದ ದೇವರುಗಳನ್ನು ಪೂಜಿಸುವಾಗ ಶ್ರೀಗಂಧದ ಪರಿಮಳದ ಬತ್ತಿಗಳನ್ನು ಹಚ್ಚುವುದು ಶುಭದಾಯಕ. ಶ್ರೀಗಂಧ ಅಥವಾ ಚಂದನವು ತಂಪುಕಾರಕ.  ದೇವರುಗಳು ಶ್ರೀಗಂಧದ ಪರಿಮಳದಿಂದ ಆನಂದ ಹೊಂದುತ್ತಾರೆ. 

ಅಗರಬತ್ತಿಯನ್ನು ದೇವರ ಕೋಣೆಯಲ್ಲಿ, ತಪ್ಪಿದರೆ ಹೊರಗೆ ತುಳಸಿಗಿಡದ ಮುಂದೆ ಉರಿಸಬಹುದು. ಹಾಲ್‌ನಲ್ಲೂ ಉರಿಸಬಹುದು. ಆದರೆ ಮಲಗುವ ಕೋಣೆಯಲ್ಲಿ ಉರಿಸುವುದು ಸಲ್ಲದು. ಹಾಗೇ ಅಗರಬತ್ತಿಯ ಕರಂಡಕವನ್ನು ಅಗಾಗ ಸ್ವಚ್ಛ ಮಾಡುತ್ತಿರಬೇಕು.  

ಅಗರಬತ್ತಿಯನ್ನು ಸುಡುವುದು ಮಂಗಳಕರ ಮತ್ತು ಸಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ. ಕೆಲವರು ಇದನ್ನು ಧಾರ್ಮಿಕ ಅರ್ಥದಲ್ಲಿ ಮಾತ್ರ ಪರಿಗಣಿಸುತ್ತಾರೆ. ಅಗರಬತ್ತಿಗಳನ್ನು ಸುಡುವ ರೂಢಿ ಅತ್ಯಂತ ಪ್ರಾಚೀನ. ಹಲವು ಧರ್ಮಗಳಲ್ಲಿ ಇದನ್ನು ನಾವು ನೋಡಬಹುದು. ಹಿಂದೂ, ಬೌದ್ಧ, ಸಿಖ್, ಜೈನ, ಇಸ್ಲಾಮಿಕ್ ಮತ್ತು ಬಹಾಯಿ ಧರ್ಮಗಳಲ್ಲಿ ಗಣನೀಯವಾಗಿಇದೆ. ಧಾರ್ಮಿಕ ಅಥವಾ ಸಾಮಾಜಿಕ ಸಮಾರಂಭಗಳು, ಪೂಜೆ, ಶುಭ ಕಾರ್ಯ ಮತ್ತು ಧಾರ್ಮಿಕ ಆಚರಣೆಗಳ ಒಂದು ಭಾಗ ಇದು. 

ಧ್ಯಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸಲು ಸಹ ಅಗರಬತ್ತಿಗಳನ್ನು ಸುಡುವ ಕ್ರಿಯೆಯನ್ನು ಬಳಸಲಾಗುತ್ತದೆ. ಇದು ಶಾಂತಿ ಮತ್ತು ಸ್ವಯಂ-ಸಾಕ್ಷಾತ್ಕಾರವನ್ನು ಉತ್ತೇಜಿಸುತ್ತದೆ. ಧ್ಯಾನ, ಜಪದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಕಾಗೆಗಳು 17 ವರ್ಷ ಮಾನವನ ಮೇಲೆ ಸೇಡು ತೀರಿಸಿಕೊಳ್ಳುತ್ತವೆ: ಅಧ್ಯಯನದಿಂದ ಬಹಿರಂಗ

ಇದನ್ನು ದೇವರಿಗೆ ನಂಬಿಕೆ ಮತ್ತು ಸಮರ್ಪಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿ ಅಗರಬತ್ತಿಗಳನ್ನು ಆರತಿಯಂತೆ ಬೆಳಗಿಸುವ ಕ್ರಮವೂ ಇದೆ. ಇದನ್ನು ಪೂಜೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಆರತಿ ಇಲ್ಲದೆ ಹೋದಲ್ಲಿ ಅಗರಬತ್ತಿಯನ್ನೂ ಇದಕ್ಕಾಗಿ ಬಳಸಬಹುದು. ಅಗರಬತ್ತಿಯ ಉರಿಯುವಿಕೆಯನ್ನು ನಮ್ಮ ಕರ್ಮದ ಕಳೆತಕ್ಕೆ ಹೋಲಿಸಲಾಗಿದೆ. ಅಗರಬತ್ತಿ ಉರಿದು ಬೂದಿಯಾದಂತೆ ನಮ್ಮ ಕರ್ಮಗಳೂ ಉರಿದು ಬೂದಿಯಾಗಿ ನಾವು ಶುದ್ಧಾತ್ಮರಾಗುತ್ತೇವೆ ಎಂಬುದು ಇದರ ಹಿಂದಿನ ಅರ್ಥ.

ಅಗರಬತ್ತಿಗಳನ್ನು ಸುಡುವುದಕ್ಕೆ ಕೇವಲ ಧಾರ್ಮಿಕ ದೃಷ್ಟಿಕೋನ ಮಾತ್ರವಲ್ಲ, ವೈಜ್ಞಾನಿಕ ದಷ್ಟಿಕೋನದಿಂದಲೂ ಮಹತ್ವ ಇದೆ. ಇದು ವ್ಯಕ್ತಿಯ ಭಾವನೆಗಳನ್ನು ಉತ್ತೇಜಿಸುವ ಪರಿಮಳವನ್ನು ಹೊಂದಿದೆ. ಇದು ಧ್ಯಾನ ಮತ್ತು ಸಾವಧಾನತೆಯನ್ನು ಉತ್ತೇಜಿಸುತ್ತದೆ ಮತ್ತು ಆಧ್ಯಾತ್ಮಿಕ ಅನುಭವವನ್ನು ಸುಗಮಗೊಳಿಸುತ್ತದೆ.

ಈ ದಿನಾಂಕಗಳಲ್ಲಿ ಹುಟ್ಟಿದವರು ಶ್ರೀಮಂತರಾಗುವುದು ಪಕ್ಕಾ
 

Latest Videos
Follow Us:
Download App:
  • android
  • ios