ಶಕುನಶಾಸ್ತ್ರ: ಮಲಗಿರುವ ವ್ಯಕ್ತಿಯ ಕಾಲನ್ನು ಬೆಕ್ಕು ಮೂಸಿದರೆ ಕಾದಿದೆ ಅಪಾಯ!

ಬೆಕ್ಕುಗಳು ನಮ್ಮ ಜೀವನದ ಸಹಜೀವಿಗಳು. ಅವುಗಳೊಂದಿಗೆ ಸಹಬಾಳ್ವೆ ಶತಶತಮಾನಗಳಿಂದ ನಡೆದುಕೊಂಡು ಬಂದಿದೆ. ಜೊತೆಗೆಯೇ ಅವುಗಳ ಬಗ್ಗೆ ಸಾಕಷ್ಟು ಶಕುನಗಳೂ ಹುಟ್ಟಿಕೊಂಡಿವೆ. ಅಂಥ ಕೆಲ ಶಕುನಗಳನ್ನು ಇಲ್ಲಿ ಕೊಡಲಾಗಿದೆ. 

know the auspicious and inauspicious signs related to the cat skr

ಹಿಂದೂ ಧರ್ಮದಲ್ಲಿ ಅನೇಕ ರೀತಿಯ ಪ್ರಾಣಿಗಳನ್ನು ಪ್ರಮುಖವೆಂದು ವಿವರಿಸಲಾಗಿದೆ. ವಿಶೇಷವಾಗಿ ನೀವು ಅನೇಕ ಧಾರ್ಮಿಕ ಕಥೆಗಳಲ್ಲಿ ಹಸು, ನಾಯಿ, ಬೆಕ್ಕು, ಪಾರಿವಾಳ ಇತ್ಯಾದಿಗಳ ಉಲ್ಲೇಖವನ್ನು ಕಾಣಬಹುದು. ಕೆಲವು ಪ್ರಾಣಿಗಳು ಹಿಂದೂ ದೇವರು ಮತ್ತು ದೇವತೆಗಳ ವಾಹನ ಎನ್ನಲಾಗುತ್ತದೆ. ಅಂತೆಯೇ ಬೆಕ್ಕು ತಾಯಿ ಲಕ್ಷ್ಮಿಯ ಸಹೋದರಿ ಅಲಕ್ಷ್ಮಿಯ ವಾಹನ ಎನ್ನಲಾಗುತ್ತದೆ. ಅಲಕ್ಷ್ಮಿಯನ್ನು ಬಡತನದ ದೇವತೆ, ರಾಹು ಗ್ರಹಕ್ಕೆ ಸಂಬಂಧಿಸಿದವಳು ಎನ್ನಲಾಗುತ್ತದೆ. ಅವನ್ನು ಪೂರ್ವಜರ ರೂಪವೆಂದೂ ಹೇಳಲಾಗುತ್ತದೆ. ಕೆಲವೊಮ್ಮೆ ಮನೆಯಲ್ಲಿ ಬೆಕ್ಕಿನ ಆಗಮನವು ತ್ರಿಗುಣ- ಅಲಕ್ಷ್ಮಿ, ರಾಹು ಮತ್ತು ವ್ಯಕ್ತಿಯ ಜೀವನದ ಪೂರ್ವಜರು- ಶಾಪದ ತೀವ್ರ ಕ್ರೋಧವನ್ನು ಸೂಚಿಸುತ್ತದೆ. 
ಬೆಕ್ಕು ದಾರಿಗಡ್ಡ ಬಂದ್ರೆ ನಿಂತು ಹೋಗೋದೋ, ಅಥವಾ ಮನೆಗೆ ವಾಪಾಸಾಗಿ ಕೆಲ ಸಮಯ ಬಿಟ್ಟು ಹೊರಡೋದೋ ಮಾಡುತ್ತೀರಿ. ಏಕಂದ್ರೆ ಬೆಕ್ಕು ಅಡ್ಡ ಬಂದ್ರೆ ಅಪಶಕುನ, ಹೋದ ಕೆಲಸ ಆಗೋದಿಲ್ಲ ಎಂಬುದು ಜನಜನಿತ ನಂಬಿಕೆ. ಇದ್ದಲ್ಲದೆ ಬೆಕ್ಕಿನ ಕುರಿತು ಇನ್ನೂ ಹಲವಷ್ಟು ಶಕುನಗಳು, ಮೂಢನಂಬಿಕೆಗಳಿವೆ. ಬೆಕ್ಕನ್ನು ಕಪ್ಪು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಬೆಕ್ಕುಗಳು ನಕಾರಾತ್ಮಕ ಶಕ್ತಿಯ ಮೂಲ ಎಂದು ಹೇಳಲಾಗುತ್ತದೆ. ಆದರೆ ಫೆಂಗ್ ಶೂಯಿಯಲ್ಲಿ ಬೆಕ್ಕನ್ನು ಮನೆಯಲ್ಲಿ ಇಡುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಬೆಕ್ಕಿಗೆ ಸಂಬಂಧಿಸಿದ ಎಲ್ಲಾ ಚಿಹ್ನೆಗಳು ಅಶುಭಕರವಾಗಿರುವುದಿಲ್ಲ. ಕೆಲವೊಂದು ಬೆಕ್ಕಿನ ಸಂಕೇತಗಳು ತುಂಬಾ ಮಂಗಳಕರ ಮತ್ತು ಮನೆಯಲ್ಲಿ ಸಮೃದ್ಧಿಯನ್ನು ತರುತ್ತವೆ. ಅವಕ್ಕೆಲ್ಲ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೂ ಜನರಿಗೆ ಹಳೆಯ ಇಂಥ ನಂಬಿಕೆಗಳ ಮೇಲೆ ಕುತೂಹಲ ಹೆಚ್ಚು. ಅವೇನೆಂದು ನೋಡೋಣ.

ವಾರ ಭವಿಷ್ಯ: ನಾಲ್ಕು ರಾಶಿಗಳಿಗೆ ಈ ವಾರ ಸಂಪತ್ತಿನ ಬೆಳವಣಿಗೆಯ ಸಂತಸ

ಬೆಕ್ಕಿನ ಕುರಿತ ಅಪಶಕುನಗಳು

  • ಯಾರದಾದರೂ ಮನೆಯಲ್ಲಿ ಬೆಕ್ಕು ಅಳುತ್ತಿದ್ದರೆ ಅದು ಸಾವಿನ ಕುರಿತ ಶಕುನ ಹೇಳುತ್ತಿದೆ ಎಂದು ನಂಬಲಾಗಿದೆ. ಹಾಗಾದಾಗ ಕುಟುಂಬದಲ್ಲಿ ಸಾವು ಸಂಭವಿಸುತ್ತದೆ ಎಂದು ಭಯ ಪಡುತ್ತಾರೆ. 
  • ಹಿಂದೂ ನಂಬಿಕೆಗಳ ಪ್ರಕಾರ, ಬೆಕ್ಕು ಜಗಳವಾಡುವುದು ಅಥವಾ ಅಳುವುದು ಕಂಡುಬಂದರೆ, ಕುಟುಂಬದ ಯಾವ ವ್ಯಕ್ತಿಯ ಕೆಲಸವೂ ಯಶಸ್ವಿಯಾಗುವುದಿಲ್ಲ.
  • ಬೆಕ್ಕು ಮಲಗಿರುವ ವ್ಯಕ್ತಿಯ ಪಾದಗಳ ವಾಸನೆಯನ್ನು ನೋಡಿದರೆ, ಆ ವ್ಯಕ್ತಿಯು ಶೀಘ್ರದಲ್ಲೇ ಅನಾರೋಗ್ಯಕ್ಕೆ ಒಳಗಾಗುತ್ತಾನೆ.
  • ಯಾವುದೇ ಶುಭ ಕಾರ್ಯಕ್ಕೆ ಹೋಗುವಾಗ ಬೆಕ್ಕು ರಸ್ತೆ ದಾಟಿದರೆ ಅದು ತುಂಬಾ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯು ಯಾವ ಕೆಲಸಕ್ಕಾಗಿ ಹೋಗುತ್ತಾನೋ ಆ ಕೆಲಸವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ನಂಬಲಾಗಿದೆ.
  • ಒಬ್ಬ ವ್ಯಕ್ತಿಯು ಮಲಗಿದ್ದಾಗ ಬೆಕ್ಕನ್ನು ಆ ವ್ಯಕ್ತಿಯ ಬಳಿಗೆ ಕರೆದೊಯ್ದರೆ, ಆ ವ್ಯಕ್ತಿಯು ಸಾವಿನಂತೆಯೇ ನರಳಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
  •  ಕಪ್ಪು ಬೆಕ್ಕು ಕಪ್ಪು ಶಕ್ತಿಗಳ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಕಪ್ಪು ಬೆಕ್ಕು ರಸ್ತೆ ದಾಟಿದರೆ ಅದು ಕೆಟ್ಟ ಶಕುನ ಎಂದು ನಂಬಲಾಗುತ್ತದೆ. 
  • ನಿಮ್ಮ ಕನಸಿನಲ್ಲಿ ಬೆಕ್ಕನ್ನು ನೋಡಿದರೆ, ಮುಂದಿನ ದಿನಗಳಲ್ಲಿ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು ಎಂದು ನಂಬಲಾಗಿದೆ.

    Nag Panchami 2022: ಹಬ್ಬದ ದಿನ ತಪ್ಪಿಯೂ ಈ ಕೆಲಸ ಮಾಡಬೇಡಿ..

ಬೆಕ್ಕಿನ ಶುಭ ಶಕುನಗಳು

  • ದೀಪಾವಳಿಯ ರಾತ್ರಿ ಬೆಕ್ಕು ಕಾಣಿಸಿಕೊಂಡರೆ, ಅದು ತುಂಬಾ ಮಂಗಳಕರ ಸಂಕೇತವಾಗಿದೆ.
  • ಯಾರದಾದರೂ ಮನೆಯಲ್ಲಿ ಬೆಕ್ಕಿನ ಮರಿಗಳು ಜನಿಸಿದರೆ, ಅದು ತುಂಬಾ ಶುಭ ಸಂಕೇತವಾಗಿದೆ.
  • ಹೆಣ್ಣು ಬೆಕ್ಕು ಮನೆಗೆ ಬಂದು ಸೇರಿಕೊಂಡರೆ ಆ ಮನೆಯ ಅವಿವಾಹಿತರಿಗೆ ವಿವಾಹ ಮಾಡಿಸಲು ಬಂದಿದೆ ಎನ್ನಲಾಗುತ್ತದೆ. 
  • ಸಂಪೂರ್ಣವಾಗಿ ಬಿಳಿ ಬೆಕ್ಕು ನಿಮ್ಮ ಮನೆಗೆ ಬಂದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಬಹುದು. ಏಕೆಂದರೆ ಬಿಳಿ ಬೆಕ್ಕು ಅದರೊಂದಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಬಿಳಿ ಬೆಕ್ಕಿನ ಆಗಮನದೊಂದಿಗೆ, ಮನೆಯಲ್ಲಿ ಎಲ್ಲ ನಕಾರಾತ್ಮಕ ಶಕ್ತಿಗಳು ಕೊನೆಗೊಳ್ಳುತ್ತವೆ.
  • ಮುಂಜಾನೆ ಬೆಕ್ಕನ್ನು ಕಂಡರೆ ಅಂದು ನಿಮ್ಮ ಮನೆಗೆ ಅತಿಥಿಗಳು ಬರಲಿದ್ದಾರೆ ಅಥವಾ ನೀವು ಸ್ನೇಹಿತರನ್ನು ಭೇಟಿಯಾಗಲಿದ್ದೀರಿ ಎಂಬುದರ ಸಂಕೇತವಾಗಿದೆ. ವಿದ್ಯಾರ್ಥಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅವನು ಅಧ್ಯಯನದಲ್ಲಿ ಅಥವಾ ಯಾವುದೇ ಸ್ಪರ್ಧೆಯಲ್ಲಿ ಯಶಸ್ಸನ್ನು ಪಡೆಯುತ್ತಾನೆ.
Latest Videos
Follow Us:
Download App:
  • android
  • ios