ಆರೋಗ್ಯಕರ ಜನನದ ಜೊತೆ ಜನ್ಮ ದಿನಾಂಕ ಕೂಡ ಮಹತ್ವ ಪಡೆಯುತ್ತದೆ. ಒಳ್ಳೆ ದಿನಾಂಕದಂದು ಜನಿಸಿದ ವ್ಯಕ್ತಿಗಳ ಭವಿಷ್ಯ ಚೆನ್ನಾಗಿರುತ್ತದೆ ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗಿದೆ. ಪ್ರತಿಯೊಂದು ಸಂಖ್ಯೆಯೂ ಅದರದೇ ಆದ ಮಹತ್ವ ಹೊಂದಿದೆ. ಇಂದು 6, 15,24ನೇ ತಾರೀಕಿನಂದು ಹುಟ್ಟಿದೋರ ಭವಿಷ್ಯ ಹೇಗಿರುತ್ತೆ ನೋಡೋಣ.  

ವ್ಯಕ್ತಿಯ ಜನನ (Birth) ದಿನ ಹಾಗೂ ಜನನ ದಿನಾಂಕ ಕೂಡ ಮಹತ್ವ ಪಡೆಯುತ್ತದೆ. ಅದೇ ಕಾರಣಕ್ಕೆ ಕೆಲವರು ದಿನಾಂಕ, ಸಮಯ, ಮುಹೂರ್ತ ನೋಡಿ ಹೆರಿಗೆ (Childbirth) ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವ್ಯಕ್ತಿಯ ಜನ್ಮ ದಿನದ ಗ್ರಹ (Planet) ಹಾಗೂ ರಾಶಿಗಳು ಮನುಷ್ಯನ ಮೇಲೆ ಪ್ರಭಾವ ಬೀರುತ್ತದೆ. ಅದೇ ರೀತಿ ಜನ್ಮ ದಿನಾಂಕ (Date Of Birth) ವೂ ಮನುಷ್ಯನ ಜೀವನ (Life) ದ ಮೇಲೆ ಪರಿಣಾಮ ಬೀರುತ್ತದೆ. ಸಂಖ್ಯಾಶಾಸ್ತ್ರದಲ್ಲಿ ಈ ಬಗ್ಗೆ ವಿವರವಾಗಿ ಹೇಳಲಾಗಿದೆ. ಜನ್ಮ ದಿನಾಂಕ ಹಾಗೂ ನಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಸಂಖ್ಯಾಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಯಾವ ದಿನಾಂಕದಂದು ಜನಿಸಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇಂದು ನಾವು 6, 15 ಮತ್ತು 24 ರಂದು ಜನಿಸಿದವರ ಭವಿಷ್ಯ ಮತ್ತು ಅವರ ಸ್ವಭಾವವೇನು ಎಂಬುದನ್ನು ಹೇಳ್ತೇವೆ.

ಇದಕ್ಕಿಂತ ಮೊದಲು ನೀವು ಜನ್ಮ ದಿನಾಂಕವನ್ನು ಲೆಕ್ಕ ಹಾಕಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಜನ್ಮ ದಿನಾಂಕವನ್ನು ಈ ರೀತಿಯಲ್ಲಿ ಲೆಕ್ಕ ಹಾಕಬೇಕು. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ ಜೂನ್ (June) 15 ಆಗಿದ್ದರೆ, ಅದರ ತ್ರಿಜ್ಯವು 1+5 = 6 ಆಗಿರುತ್ತದೆ. ಇದೇ ರೀತಿ 24 ಆಗಿದ್ದರೆ 2 + 4 = 6 ಆಗಿರುತ್ತದೆ.

ರಾಶಿ ಪ್ರಕಾರ, ನಿಮ್ಮ ಯಾವ ವಯಸ್ಸಿನಲ್ಲಿ ಜೀವನಸಂಗಾತಿ ಮೀಟ್ ಆಗ್ತೀರಾ ತಿಳೀಬೇಕಾ?

ರಾಡಿಕ್ಸ್ (Radix) 6ರ ಗುಣಲಕ್ಷಣಗಳು : ರಾಡಿಕ್ಸ್ 6 ರ ಆಡಳಿತ ಗ್ರಹ ಶುಕ್ರ. ಶುಕ್ರ ಗ್ರಹವು ಪ್ರೀತಿ (Love) ಮತ್ತು ಶಾಂತಿ (Peace) ಯ ಸಂಕೇತವಾಗಿದೆ. ರಾಡಿಕ್ಸ್ ಸಂಖ್ಯೆ 6 ಹೊಂದಿರುವ ಜನರು ನೋಡಲು ಸುಂದರವಾಗಿರುತ್ತಾರೆ ಮತ್ತು ಸಾಕಷ್ಟು ಪ್ರಭಾವಶಾಲಿಯಾಗಿರುತ್ತಾರೆ. ಇವರು ಬಹುಬೇಗ ವೃದ್ಧರಾಗುವುದಿಲ್ಲ. ವೃದ್ಧಾಪ್ಯ (Old age) ತಡವಾಗಿ ಬರುತ್ತದೆ. ಈ ಜನರು ಕಲೆಯನ್ನು ಹೆಚ್ಚು ಪ್ರೀತಿಸುತ್ತಾರೆ. ಅವರು ನೋಡಲು ತುಂಬಾ ಪ್ರಭಾವಶಾಲಿ ಮತ್ತು ಸುಂದರವಾಗಿರುತ್ತಾರೆ.

ರಾಡಿಕ್ಸ್ 6ರಲ್ಲಿ ಜನಿಸಿದವರ ಆರ್ಥಿಕ ಸ್ಥಿತಿ (Financial Position) : ರಾಡಿಕ್ಸ್ 6ರಲ್ಲಿ ಜನಿಸಿದ ಈ ಜನರ ಆರ್ಥಿಕ ಸ್ಥಿತಿಯ ಬಗ್ಗೆ ಹೇಳೋದಾದ್ರೆ ಇವರ ಆರ್ಥಿಕ ಸ್ಥಿತಿ ಯಾವಾಗಲೂ ಒಂದೇ ಆಗಿರುವುದಿಲ್ಲ. ಇವರು ತಮ್ಮ ಆದಾಯ (Income) ಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ತಮ್ಮ ಪ್ರಯತ್ನಗಳ ಮೂಲಕ ಹಣ (Money) ಗಳಿಸಲು ಇಷ್ಟಪಡ್ತಾರೆ.

ಸಂಬಂಧ (Relationship) : ರಾಡಿಕ್ಸ್ ಆರರಲ್ಲಿ ಜನಿಸಿದ ಜನರ ಕೌಟುಂಬಿಕ ಸಂಬಂಧ ಹೇಳಿಕೊಳ್ಳುವಷ್ಟು ಚೆನ್ನಾಗಿರುವುದಿಲ್ಲ. ಒಡಹುಟ್ಟಿದವರ ಜೊತೆ ಸದಾ ಗಲಾಟೆ ನಡೆಯುತ್ತಿರುತ್ತದೆ. ಸಂಬಂಧಿಕರ ಜೊತೆಯೂ ಅವರು ಕೆಲವು ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗುತ್ತದೆ. ಆದ್ರೆ ಸ್ನೇಹ (Friendship) ದ ವಿಷ್ಯದಲ್ಲಿ ಅವರು ಎತ್ತಿದ ಕೈ.

ಜೂ. 15ರಿಂದ ಈ ರಾಶಿ ಬೆನ್ನು ಹತ್ತಲಿದೆ ದುರಾದೃಷ್ಟ

ಕೆಲಸ (Work), ವ್ಯಾಪಾರ (Business) : ರಾಡಿಕ್ಸ್ ಸಂಖ್ಯೆ 6 ಹೊಂದಿರುವ ಜನರು ಕಲೆ, ಆಭರಣಗಳು, ಬಟ್ಟೆ ಅಥವಾ ಸಂಬಂಧಿತ ಕೆಲಸಗಳ ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಇದಲ್ಲದೆ ಚಲನಚಿತ್ರ, ನಾಟಕ, ರಂಗಭೂಮಿ, ಚಿನ್ನ, ಬೆಳ್ಳಿ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸಗಳೂ ಇವರಿಗೆ ಉತ್ತಮ ಆದಾಯ ತಂದುಕೊಡುತ್ತದೆ. ಊಟೋಪಚಾರಕ್ಕೆ ಸಂಬಂಧಿಸಿದ ಕೆಲಸ, ಹೋಟೆಲ್ ಇತ್ಯಾದಿಗಳು ಅವರಿಗೆ ಮಂಗಳಕರ. 

ಆರೋಗ್ಯ : ರಾಡಿಕ್ಸ್ ಸಂಖ್ಯೆ 6ರನ್ನು ಹೊಂದಿರುವ ಜನರು ಉತ್ತಮ ದೈಹಿಕ ಶಕ್ತಿಯನ್ನು ಹೊಂದಿರುತ್ತಾರೆ. ಅವರು ಗಂಟಲು, ಮೂಗು, ಶ್ವಾಸಕೋಶಗಳು, ಎದೆಗೆ ಸಂಬಂಧಿಸಿದ ರೋಗಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದಲ್ಲದೆ, ಸಕ್ಕರೆ ಖಾಯಿಲೆ, ವೀರ್ಯ ಅಥವಾ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಸಹ ಇವರನ್ನು ಕಾಡುವ ಸಂಭವವಿರುತ್ತದೆ.