ಜೂ. 15ರಿಂದ ಈ ರಾಶಿ ಬೆನ್ನು ಹತ್ತಲಿದೆ ದುರಾದೃಷ್ಟ
ಜೂನ್ 15ರಂದು ದೊಡ್ಡ ಬದಲಾವಣೆಯಾಗಲಿದೆ. ಸೂರ್ಯ ಗ್ರಹ, ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದ್ರಿಂದ ಐದು ರಾಶಿಯವರಿಗೆ ನಷ್ಟವಾಗಲಿದೆ.
ಗ್ರಹಗಳು (Planets) ನಮ್ಮ ಜೀವನ (Life) ದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿದಾಗ, ಅದರ ಪರಿಣಾಮವು 12 ರಾಶಿಗಳ ಮೇಲಾಗುತ್ತದೆ. ಪ್ರತಿ ರಾಶಿಯ ವ್ಯಕ್ತಿಯೂ ಸಮಸ್ಯೆ ಹಾಗೂ ಸಂತೋಷ (Happiness) ಎರಡರಲ್ಲಿ ಒಂದನ್ನು ಅನುಭವಿಸುತ್ತಾನೆ. ಜೂನ್ 15 ರಂದು ಸೂರ್ಯನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಈ ರಾಶಿ ಬದಲಾವಣೆ ಕೆಲವು ರಾಶಿಗಳ ಮೇಲಾಗಲಿದೆ. ಕೆಲ ರಾಶಿಗಳಿಗೆ ಸೂರ್ಯನ ಈ ರಾಶಿ ಬದಲಾವಣೆ ಲಾಭ ನೀಡಿದ್ರೆ ಮತ್ತೆ ಕೆಲ ರಾಶಿಯವರು ತೊಂದರೆ ಎದುರಿಸಲಿದ್ದಾರೆ. ಐದು ರಾಶಿಯವರು ಈ ಅವಧಿಯಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸೂರ್ಯ ಸಂಕ್ರಮಣದ ಅಶುಭ ಪರಿಣಾಮವು ಯಾವ ರಾಶಿ ಮೇಲೆ ಕಂಡುಬರುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.
ಸೂರ್ಯನ ರಾಶಿ ಬದಲಾವಣೆಯಿಂದ ಈ ರಾಶಿಗಳಿಗೆ ತೊಂದರೆ :
ಮೇಷ ರಾಶಿ : ಸೂರ್ಯನ ರಾಶಿ ಬದಲಾವಣೆ ಮೇಷ ರಾಶಿಯವರ ಮೇಲೆ ಮಿಶ್ರ ಪರಿಣಾಮವನ್ನು ಬೀರಲಿದೆ. ಈ ಸಮಯದಲ್ಲಿ ದೊಡ್ಡ ಹೂಡಿಕೆ ಬಗ್ಗೆ ನೀವು ಆಲೋಚನೆ ಮಾಡಿದ್ದರೆ ಮೊದಲು ಹಿರಿಯರ ಸಲಹೆಯನ್ನು ಪಡೆಯಿರಿ. ನಂತ್ರವೇ ಹೂಡಿಕೆ ಮಾಡಲು ಮುಂದಾಗಿ. ಕೌಟುಂಬಿಕ ವಾತಾವರಣ ಸಹಜವಾಗಿರುತ್ತದೆ. ಆದ್ರೆ ಒಡಹುಟ್ಟಿದವರ ನಡುವೆ ಕಲಹ ಉಂಟಾಗುವ ಸಾಧ್ಯತೆಯಿದೆ. ಮೇಷ ರಾಶಿಯವರು ಈ ಸಮಯದಲ್ಲಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಅಪ್ಪಿತಪ್ಪಿಯೂ ಈ ಸಮಯದಲ್ಲಿ ಮೇಷ ರಾಶಿಯವರು ಯಾರಿಗೂ ಸಾಲವನ್ನು ನೀಡ್ಬೇಡಿ. ಹಾಗೆ ಸಾಲವನ್ನು ಕೊಡುವ ಸಾಹಸಕ್ಕೂ ಕೈ ಹಾಕ್ಬೇಡಿ.
ಕರ್ಕಾಟಕ ರಾಶಿ: ಸೂರ್ಯನ ರಾಶಿ ಬದಲಾವಣೆಯಿಂದ ಕರ್ಕಾಟಕ ರಾಶಿಯವರು ಒತ್ತಡವನ್ನು ಎದುರಿಸಬೇಕಾಗಬಹುದು. ಕೆಲವು ಕೆಲಸಗಳಲ್ಲಿ ವೈಫಲ್ಯ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಅಸಮಾಧಾನ ಮತ್ತು ಚಿಂತೆ ಕಾಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಾಲವನ್ನು ನೀಡ್ಬೇಡಿ. ಒಂದ್ವೆಳೆ ಈ ಸಮಯದಲ್ಲಿ ಸಾಲ ನೀಡಿದ್ರೆ ನೀವು ನಷ್ಟ ಅನುಭವಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳು ವ ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಅಗತ್ಯವಿದೆ. ವೈವಾಹಿಕ ಜೀವನದಲ್ಲೂ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಬದಲು ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಈ ರಾಶಿಯ ಹೆಣ್ಮಕ್ಕಳನ್ನು ತಂಗಿಯಾಗಿ ಪಡೆಯೋಕೆ ಪುಣ್ಯ ಮಾಡಿರಬೇಕು!
ವೃಷಭ ರಾಶಿ : ಸದ್ಯ ಸೂರ್ಯ ವೃಷಭ ರಾಶಿಯಲ್ಲಿದ್ದಾನೆ. ಜೂನ್ 15ರಂದು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರ ಪರಿಣಾಮ ವೃಷಭ ರಾಶಿಯವರ ಮೇಲೂ ಕಾಣಿಸುತ್ತದೆ. ವೃಷಭ ರಾಶಿಯವರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಮಗುವಿನ ಮೇಲೆ ಕೋಪ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು. ಈ ಸಮಯದಲ್ಲಿ ಕಠಿಣ ಪರಿಶ್ರಮದ ನಂತರವೂ ಉತ್ತಮ ಫಲಿತಾಂಶ ಸಿಗದೆ ಹೋಗಬಹುದು. ಹಣದ ಅತಿಯಾದ ವ್ಯಯದಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ವೃಷಭ ರಾಶಿಯವರು ಈ ಸಂದರ್ಭದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು.
ತುಲಾ ರಾಶಿ : ಈ ರಾಶಿಯವರು ಕಷ್ಟವನ್ನು ಎದುರಿಸಬೇಕಾಗುತ್ತದೆ. ಈ ಬಾರಿಯೂ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಪರೀಕ್ಷೆಗೆ ಕಷ್ಟಪಡಬೇಕಾಗುತ್ತದೆ. ಇಲ್ಲದಿದ್ದರೆ ಧನ ನಷ್ಟವಾಗಬಹುದು. ವ್ಯಾಪಾರದಲ್ಲಿ ಬದಲಾವಣೆಗಳು ನಷ್ಟಕ್ಕೆ ಕಾರಣವಾಗಬಹುದು. ಈ ಸಮಯದಲ್ಲಿ ಪೂಜೆ ಮಾಡಿ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ.
Aquarius to Capricorn: ಈ ನಾಲ್ಕು ರಾಶಿಯವರು ಆನ್‌ಲೈನ್ ಫೇಕ್ ಪ್ರೊಫೈಲ್ ವೀರರು!
ಮೀನ ರಾಶಿ : ಮೀನ ರಾಶಿಯ ಮೇಲೆ ಮಿಶ್ರ ಪರಿಣಾಮ ಕಂಡುಬರಲಿದೆ. ಮೀನ ರಾಶಿಯವರು ಪ್ರವಾಸಕ್ಕೆ ಹೋಗುತ್ತಿದ್ದರೆ ಈ ಸಮಯದಲ್ಲಿ ವಿಶೇಷ ಕಾಳಜಿಯನ್ನು ವಹಿಸಬೇಕು. ವ್ಯಾಪಾರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಸಹ ಜಾಗರೂಕರಾಗಿರಬೇಕು. ಸ್ವಲ್ಪ ಅಜಾಗರೂಕತೆ ಕೂಡ ನಿಮಗೆ ಹಾನಿ ಮಾಡುವ ಸಾಧ್ಯತೆಯಿರುತ್ತದೆ.