ಶನಿ ನಿಮ್ಮ ವಿಷಯವಾಗಿ ಸಾಫ್ಟ್ ಕಾರ್ನರ್ ಹೊಂದಿದ್ದರೆ, ಆತನ ಕೃಪೆ ನಿಮ್ಮ ಮೇಲಿದ್ದರೆ ಕೆಲವು ಸಂಕೇತಗಳಲ್ಲಿ ಅದನ್ನು ಗುರುತಿಸಬಹುದು. ಶನಿ ನಿಮ್ಮ ವಿಚಾರವಾಗಿ ಪ್ರಸನ್ನನಾಗಿದ್ದಾನೆ ಎಂಬ ಸಂಕೇತಗಳೇನು ನೋಡೋಣ.
ಶನಿಯು ನಮ್ಮ ಕರ್ಮಗಳನುಸಾರ ಒಳಿತು ಇಲ್ಲವೇ ಕೆಡುಕನ್ನುಂಟು ಮಾಡುತ್ತಾನೆ. ಈ ವಿಷಯದಲ್ಲಿ ಆತನಿಗೆ ಯಾವ ಬೇಧಭಾವವೂ ಇಲ್ಲ. ಅತ್ಯಂತ ನಿಧಾನವಾಗಿ ಚಲಿಸುವ ಗ್ರಹಗಳಲ್ಲೊಬ್ಬನಾದ ಶನಿಯು ಒಂದು ರಾಶಿಯಿಂದ ಮತ್ತೊಂದಕ್ಕೆ ಚಲಿಸಲು ಕನಿಷ್ಠ ಎರಡೂವರೆ ವರ್ಷ ಕಾಲ ಬೇಕು. ಆತನ ಸಾಡೇಸಾತಿಯಂತೂ ಏಳೂವರೆ ವರ್ಷ ಕಾಲ ಸಾಕಷ್ಟು ಕಾಡಿಸುತ್ತದೆ. ಹೀಗಾಗಿ, ಶನಿ ಎಂದರೆ ಬಹುತೇಕರಿಗೆ ಭಯ ಹೆಚ್ಚು. ಆತನನ್ನು ಒಲಿಸಲು ಸಾಕಷ್ಟು ಕಷ್ಟ ಪಡುತ್ತಾರೆ. ನಾನಾ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ. ಬಡಬಗ್ಗರಿಗೆ ದಾನ ಮಾಡುತ್ತಾರೆ. ಇಷ್ಟೆಲ್ಲ ಮಾಡಿದ ನಂತರ ಶನಿ ದೇವನು ಪ್ರಸನ್ನನಾಗಿದ್ದಾನೋ ಇಲ್ಲವೋ ಎಂದು ತಿಳಿಯುವುದು ಹೇಗೆ?
ಶನಿ ಪ್ರಸನ್ನನಾಗಿದ್ದರೆ ಈ ಸೂಚನೆಗಳನ್ನು ನೀಡುತ್ತಾನೆ. ಅವೇನೆಂದು ನೋಡೋಣ.
ಹಣ ಲಾಭ(money gain)
ಶನಿಯ ಕೃಪಾ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಇದ್ದಕ್ಕಿದ್ದಂತೆ ಅನಿರೀಕ್ಷಿತವಾಗಿ ಎಲ್ಲಿಂದಲೋ ಹಣ ಕೈ ಸೇರಬಹುದು. ಲಾಟರಿ ಹೊಡೆದರೂ ಅಚ್ಚರಿಯಿಲ್ಲ. ಎಷ್ಟೋ ದಿನಗಳಿಂದ ಏಕೆ, ವರ್ಷಗಳಿಂದ ನಿಂತು ಹೋಗಿ ಭರವಸೆಯೇ ಬಿಟ್ಟ ಕೆಲಸಗಳು ಸುಲಭವಾಗಿ ಪೂರ್ತಿಯಾಗುತ್ತವೆ. ಇದ್ದಕ್ಕಿದ್ದಂತೆ ಆಸ್ತಿಪಾಸ್ತಿ ಹೆಚ್ಚಿ ಸಮಾಜದಲ್ಲಿ ಗೌರವ ಹೆಚ್ಚಾದರೆ ಶನಿ ನಿಮ್ಮ ಬಗ್ಗೆ ಮೃದುಧೋರಣೆ ತೋರುತ್ತಿದ್ದಾನೆ ಎಂಬುದನ್ನು ಅರಿಯಿರಿ. ಮತ್ತು ದೇವಾಲಯಕ್ಕೆ ತೆರಳಿ ನಿಮ್ಮ ಕೃತಜ್ಞತೆ ಅರ್ಪಿಸಿ.
ಮೋದಿ ಪೂಜೆ ಬಗ್ಗೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರು ಹೇಳಿದ್ದಿಷ್ಟು
ಆರೋಗ್ಯವಾಗಿರುವುದು(healthy body)
ನೀವು ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರು ಉತ್ತಮ ಆರೋಗ್ಯದಿಂದಿದ್ದರೆ ಮತ್ತು ನೀವು ಯಾವುದೇ ರೋಗವನ್ನು ಎದುರಿಸದಿದ್ದರೆ ಅದು ಅತ್ಯಂತ ದೊಡ್ಡ ವರಗಳಲ್ಲೊಂದು. ಆರೋಗ್ಯ ಲಾಭ ನಿಮ್ಮದಾಗಿದ್ದರೆ ಶನಿಯ ಆಶೀರ್ವಾದ ಪಡೆಯುತ್ತಿದ್ದೀರಿ ಎಂದು ಅರ್ಥ ಮಾಡಿಕೊಳ್ಳಿ. ಅದರಲ್ಲೂ ಕೂದಲು, ಉಗುರು, ಮೂಳೆಗಳ ವಿಷಯವಾಗಿ ಆರೋಗ್ಯಕರವಾಗಿದ್ದರೆ ಶನಿಯೇ ಕಾರಣ. ಇದಕ್ಕಾಗಿ ನೀವು ಶನಿದೇವನ ದೇವಸ್ಥಾನಕ್ಕೆ ಹೋಗಿ ಶನಿಗೆ ಧನ್ಯವಾದ ತಿಳಿಸಿ. ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಿ.
ಅಲ್ಪ ಶ್ರಮದಿಂದ ಯಶಸ್ಸು(success with little effort)
ಒಬ್ಬ ವ್ಯಕ್ತಿಯ ಮೇಲೆ ಶನಿದೇವನ ಕೃಪೆ ಇದ್ದರೆ, ಜೀವನದಲ್ಲಿ ಪ್ರತಿಯೊಂದು ಸಮಸ್ಯೆಯೂ ಕೊಂಚ ಪ್ರಯತ್ನದಲ್ಲೇ ಪರಿಹಾರ ಕಾಣುತ್ತದೆ. ಸಣ್ಣ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಲಭ್ಯವಾಗುತ್ತದೆ. ಯಾವುದೇ ರೀತಿಯ ಅಪಘಾತದಿಂದ ಅಚ್ಚರಿಯ ರೀತಿಯಲ್ಲಿ ಪಾರಾಗುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಐಡೆಂಟಿಟಿ ಮೂಡಿಸುತ್ತಾರೆ.
ಪಾದರಕ್ಷೆಗಳ ಕಳ್ಳತನ(footwear theft)
ಶನಿವಾರದಂದು ನಿಮ್ಮ ಬೂಟುಗಳು ಮತ್ತು ಚಪ್ಪಲಿಗಳು ಹಠಾತ್ತನೆ ಕಳ್ಳತನವಾದರೆ, ಶನಿದೇವನ ಮಂಗಳಕರ ಪರಿಣಾಮವು ಪ್ರಾರಂಭವಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
ಕಷ್ಟಗಳು ಕ್ಷೀಣಿಸುವುದು
ಬೆಟ್ಟದಂತೆ ಬರುವ ಕಷ್ಟಗಳು ಬೆಣ್ಣೆಯಂತೆ ಕರಗಿ ಹೋದರೆ, ಇದ್ದಕ್ಕಿದ್ದಂತೆ ಜೀವನ ನೆಗಿಟಿವ್‌ನಿಂದ ಪಾಸಿಟಿವ್‌ನತ್ತ ಹೊರಳುತ್ತಿದೆ ಎನಿಸಿದರೆ ಅದಕ್ಕೆ ಶನಿಯ ಕೃಪೆ ಕಾರಣ.
ನಿಮ್ಮ ರಾಶಿಗೆ ಯಾವ ಬಣ್ಣದ ವಾಹನ ಕೊಂಡ್ರೆ ಒಳ್ಳೇದು?
ಹೆಸರು
ತಿಪ್ಪರಲಾಗದ ಹೊಡೆದರೂ ಸಿಗದ ಹೆಸರು, ಗೌರವ, ಇದ್ದಕ್ಕಿದ್ದಂತೆ ಯಾವುದೋ ಒಂದು ಯಶಸ್ಸಿನಿಂದ ರಾತ್ರೋರಾತ್ರಿ ಒಲಿದು ಬಂದರೆ, ಹೆಚ್ಚು ಕಷ್ಟ ಪಡದೆ ಮಾಡಿದ ಕೆಲಸಗಳು ಅಪಾರ ಲಾಭ ಕೊಡುವ ಜೊತೆಗೆ, ಭವಿಷ್ಯದಲ್ಲಿ ಮತ್ತಷ್ಟು ಅವಕಾಶಗಳಿಗೆ ಕಾರಣವಾದರೆ ಅದಕ್ಕೆ ಶನಿಯ ಆಶೀರ್ವಾದ ಕಾರಣ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
