Chanakya Niti: ವಂಚಕರನ್ನು ಈ ರೀತಿ ಗುರುತಿಸಿ, ಅವರಿಂದ ದೂರವಿರಿ

ಆಚಾರ್ಯ ಚಾಣಕ್ಯ ತಮ್ಮ ನೀತಿಯಲ್ಲಿ ಹೇಳಿರುವ ಒಂದೊಂದು ಮಾತೂ ಮುತ್ತುಗಳಿಂತಿವೆ. ಎಷ್ಟೇ ತಲೆಮಾರುಗಳು ಕಳೆದರೂ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತವಾಗಿದ್ದು, ಅದು ಪ್ರತಿ ಯುಗಕ್ಕೂ ಮಾರ್ಗದರ್ಶಕವಾಗಿ ಕೆಲಸ ಮಾಡುತ್ತಿದೆ. 

According to Acharya Chanakya Identify fraudsters this way skr

ಆಚಾರ್ಯ ಚಾಣಕ್ಯ ಬಹಳ ದೊಡ್ಡ ರಾಜಕಾರಣಿ, ಆದರೆ ಅದೇ ಸಮಯದಲ್ಲಿ ಅವರು ದೊಡ್ಡ ಧಾರ್ಮಿಕ ಪಂಡಿತರಾಗಿದ್ದರು. ಇದರೊಂದಿಗೆ, ಆಚಾರ್ಯ ಚಾಣಕ್ಯರು ಶ್ರೇಷ್ಠ ರಾಜತಾಂತ್ರಿಕ, ನುರಿತ ಅರ್ಥಶಾಸ್ತ್ರಜ್ಞ ಮತ್ತು ಉತ್ತಮ ಶಿಕ್ಷಕರಾಗಿದ್ದರು. ತಮ್ಮ ನೀತಿಯಲ್ಲಿ ಸರಳ ಜೀವನ ನಡೆಸುವುದು ಹೇಗೆ ಎಂದು ಅವರು ಹೇಳಿದ್ದಾರೆ. ಶತಶತಮಾನಗಳ ಬಳಿಕ ಇಂದಿಗೂ ಜನರು ಆಚಾರ್ಯರ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದರೆ ಅದಕ್ಕೆ ಆ ಜೀವನಪಾಠಗಳ ಪ್ರಸ್ತುತತೆ, ಸಾರ್ವಕಾಲಿಕತೆ ಹಾಗೂ ಗಟ್ಟಿತನವೇ ಕಾರಣ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬಹುದು ಎಂಬುದು ಚಾಣಕ್ಯ ನೀತಿ. ಅವರ ನೀತಿಶಾಸ್ತ್ರದಲ್ಲಿ, ಅವರು ಹೇಳಿರುವ ಜೀವನ ವಿಧಾನಗಳ ಮೂಲಕ ಒಬ್ಬ ವ್ಯಕ್ತಿಯು ಯಶಸ್ಸನ್ನು ಪಡೆಯುವುದು ಖಚಿತ. ಅವರ ನೀತಿಯ ಸಾರದಲ್ಲಿ ಮೋಸ ಮತ್ತು ಸ್ವಾರ್ಥಿಗಳ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. ಇದರಲ್ಲಿ, ಸಮಯಕ್ಕೆ ಸರಿಯಾಗಿ ಸಹಾಯ ಮಾಡದೆ ಮಾತನಾಡುವ ಜನರ ಬಗ್ಗೆ ಹೇಳಲಾಗಿದೆ, ನೀವು ಮೋಸಗಾರರನ್ನು ಹೇಗೆ ಗುರುತಿಸಬಹುದೆಂಬುದನ್ನೂ ತಿಳಿಸಲಾಗಿದೆ.

ತಿರುಚಿ ಮಾತನಾಡುವವರು
ಯಾರು ಸತ್ಯವಂತರೋ ಅವರು ಎಂದಿಗೂ ತಿರುಚಿದ ರೀತಿಯಲ್ಲಿ ಮಾತನಾಡುವುದಿಲ್ಲ. ಅವರು ಏನು ಹೇಳಬೇಕೋ ಅದನ್ನಿ ನೇರವಾಗಿ ಮಾತನಾಡುತ್ತಾರೆ. ಮನದಲ್ಲಿ ಕಪಟವಿರುವವನು ಸುತ್ತಿ-ಬಳಸಿ ಮಾತನಾಡುತ್ತಾನೆ. ಅಲ್ಲದೆ, ಮಾತನ್ನು ಕೊಂಚ ತಿರುಚಿ ಮಾತನಾಡುತ್ತಾನೆ. ಅಂತಹ ವ್ಯಕ್ತಿಯನ್ನು ಎಂದಿಗೂ ನಂಬಲಾಗುವುದಿಲ್ಲ. ಇದು ನಿಮಗೆ ಮಾರಕವಾಗಬಹುದು, ಆದ್ದರಿಂದ ಅಂಥ ವ್ಯಕ್ತಿಯಿಂದ ನಿಮ್ಮ ಅಂತರವನ್ನು ಕಾಪಾಡಿಕೊಳ್ಳಿ.

ಇಂದು ಯಮದ್ವಿತೀಯ; ಚಿತ್ರಗುಪ್ತ ಪೂಜೆ ಮಾಡಿ..

ಸಮಯಕ್ಕೆ ಸರಿಯಾಗಿ ಕೆಲಸ ಮಾಡದವರು
ವ್ಯಕ್ತಿ ಚಿಕ್ಕವನೋ ದೊಡ್ಡವನೋ ಎಂಬುದು ಮುಖ್ಯವಲ್ಲ, ನಿಮ್ಮ ಕೆಟ್ಟ ಸಮಯದಲ್ಲಿ ಆ ವ್ಯಕ್ತಿ ನಿಮ್ಮೊಂದಿಗೆ ಇದ್ದಾನೆ ಎಂಬುದೇ ಮುಖ್ಯ. ಕೆಟ್ಟ ಸಮಯದಲ್ಲಿ, ಹೆಚ್ಚು ಅಗತ್ಯವಿರುವ ಸಮಯದಲ್ಲಿ ನಿಮ್ಮೊಂದಿಗಿರುವವರು ನಿಮ್ಮವರು. ಆದರೆ, ಯಾರು ಸುಖದ ಸಮಯದಲ್ಲಿ ಜೊತೆಗಿದ್ದು, ಕಷ್ಟ ಎಂದಾಗ ದೂರ ಓಡುತ್ತಾರೋ ಅವರು ನಿಮ್ಮ ಹಿತೈಷಿ ಅಲ್ಲ ಎಂದು ಅರ್ಥ ಮಾಡಿಕೊಳ್ಳಿ. ಅಂಥ ಜನರು ನಿಮ್ಮನ್ನು ಯಾವುದೇ ಸಮಯದಲ್ಲಿ ತೊಂದರೆಗೆ ಸಿಲುಕಿಸಬಹುದು. ಅಂತಹ ಜನರು ತುಂಬಾ ಕೆಟ್ಟವರು, ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ.

ಅತಿಯಾಗಿ ಹೊಗಳುವವರು
ಯಾವುದೇ ಆದರೂ ಮಿತಿಯಲ್ಲಿದ್ದರೆ ಒಳ್ಳೆಯದು. ಅತಿಯಾದರೆ ಅಮೃತವೂ ವಿಷ. ಯಾರಾದರೂ ನಿಮ್ಮೆದುರೇ ನಿಮ್ಮನ್ನು ಅತಿಯಾಗಿ ಹೊಗಳುತ್ತಿದ್ದಾರೆಂದರೆ ಅವರು ವಂಚಕರು ಅಲ್ಲವೇ ಸಮಯಸಾಧಕರು ಅಥವಾ ಗೆದ್ದೆತ್ತಿನ ಬಾಲ ಹಿಡಿದು ತಮ್ಮ ಬೇಳೆ ಬೇಯಿಸಿಕೊಳ್ಳುವವರು ಎಂಬುದು ನೆನಪಿರಲಿ. ಆಚಾರ್ಯ ಚಾಣಕ್ಯ ಹೇಳುತ್ತಾರೆ,  ಅಂತಹ ಸುಳ್ಳು ಹೊಗಳಿಕೆಯನ್ನು ನೀಡುವವರಿಂದ ದೂರವಿರಬೇಕು. ಅವರು ನಿಮ್ಮ ಲಾಭವನ್ನು ಪಡೆಯಲು ಮಾತ್ರ ಇದನ್ನು ಮಾಡುತ್ತಿದ್ದಾರೆ ಮತ್ತು ನಿಮ್ಮಿಂದ ಪ್ರಯೋಜನವಿಲ್ಲವೆಂದಾಗ ಹತ್ತಿರವೂ ಸುಳಿಯುವುದಿಲ್ಲ. 

ಹಚ್ಚಿ ಹಾಕುವವರು
ಚಾಣಕ್ಯನ ಪ್ರಕಾರ, ಕೆಲವರು ಈ ಅಭ್ಯಾಸವನ್ನು ಹೊಂದಿದ್ದಾರೆ, ಅವರು ಒಬ್ಬ ವ್ಯಕ್ತಿಯ ಮಾತನ್ನು ಇನ್ನೊಬ್ಬ ವ್ಯಕ್ತಿಗೆ ಹೇಳುತ್ತಾರೆ. ಅಂತಹ ಜನರೊಂದಿಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಅವರು ನಿಮ್ಮ ಮಾತುಗಳನ್ನು ರಹಸ್ಯವಾಗಿಡಲು ಸಾಧ್ಯವಿಲ್ಲ. ನೀವು ಯಾರ ಬಗ್ಗೆಯಾದರೂ ಅವರೊಂದಿಗೆ ಮಾತನಾಡಿದರೆ, ಅವರದನ್ನು ಅಲ್ಲಿ ತಮಗೆ ಬೇಕಾದಂತೆ ಹೇಳಿ ತಂದಿಟ್ಟು ತಮಾಷೆ ನೋಡುತ್ತಾರೆ.  ಇದರಿಂದಾಗಿ, ನಿಮ್ಮ ಮತ್ತು ವ್ಯಕ್ತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಮತ್ತು ನೀವು ಸಾಮಾಜಿಕವಾಗಿ ಮುಜುಗರಕ್ಕೊಳಗಾಗಬಹುದು. ಹಾಗಾಗಿ ಅಂತಹವರಿಂದ ಅಂತರ ಕಾಯ್ದುಕೊಳ್ಳಬೇಕು.

ತುಲಾ ರಾಶಿಯಲ್ಲಿ ಬುಧ ಗೋಚಾರ; ಈ ರಾಶಿಗಳ ಅದೃಷ್ಟದ ಓಟ ಶುರು..

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios