ಅಡುಗೆ ಮನೆಯಲ್ಲಿ ‘ಈ ‘ವಸ್ತುಗಳನ್ನು ಇಟ್ಟರೆ ನಿಮಗೆ ಮುಂದೆ ಅನ್ನ ಸಿಗಲ್ಲ..!

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಇಡುವ ಕೆಲವು ವಸ್ತುಗಳು ಮನೆಯ ವಾತಾವರಣವನ್ನು ಕೆಡಿಸುತ್ತವೆ. ಆದ್ದರಿಂದ ಈಗಲೇ ನಿಮ್ಮ ಅಡುಗೆ ಮನೆಯಿಂದ ಈ ವಸ್ತುಗಳನ್ನು ಹೊರತೆಗೆಯಿರಿ. ಈ ವಸ್ತುಗಳು ಯಾವುವು ಇಲ್ಲಿದೆ ಮಾಹಿತಿ.

Keeping these items in the kitchen is not good suh

ಸುಖ, ಶಾಂತಿ ಹಾಗೂ ನೆಮ್ಮದಿಯಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಮನೆಯ ವಾತಾವರಣ (atmosphere) ವನ್ನು ಆಹ್ಲಾದಕರವಾಗಿ ಇರಿಸಬೇಕು. ಆದರೆ ಯಾವುದೋ ಕಾರಣದಿಂದ ನಿಮ್ಮ ಮನೆಯ ವಾತಾವರಣ ಹದಗೆಡುತ್ತಿದ್ದರೆ ಅದರಲ್ಲಿ ಒಂದು ಕಾರಣ ಅಡುಗೆ ಮನೆಯಾಗಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಇಡುವ ಕೆಲವು ವಸ್ತುಗಳು ಮನೆಯ ವಾತಾವರಣವನ್ನು ಕೆಡಿಸುತ್ತವೆ. ಆದ್ದರಿಂದ ಈಗಲೇ ನಿಮ್ಮ ಅಡುಗೆ ಮನೆ (kitchen) ಯಿಂದ ಈ ವಸ್ತುಗಳನ್ನು ಹೊರತೆಗೆಯಿರಿ. ಈ ವಸ್ತುಗಳು ಯಾವುವು ಇಲ್ಲಿದೆ ಮಾಹಿತಿ.

ಮನೆಯ ಅಡುಗೆ ಮನೆಯ ಕೆಲಸ ಹೆಚ್ಚಾಗಿ ಮಹಿಳೆ (woman) ಯರ ಜವಾಬ್ದಾರಿ. ಆದ್ದರಿಂದ, ಅಡುಗೆ ಮನೆಯಲ್ಲಿ ಒಂದು ರೀತಿಯ ವಾಸ್ತು ದೋಷವನ್ನು ಹೊಂದಿರುವುದು ಮನೆಯ ಮಹಿಳೆಯರ ಮೇಲೆ ಅತ್ಯಂತ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಅಡುಗೆ ಮನೆಯನ್ನು ನಿರ್ಮಿಸುವಾಗ ದಿಕ್ಕನ್ನು ನೋಡಿಕೊಳ್ಳಲು ಮರೆಯದಿರಿ. ಅಡುಗೆ ಮನೆಯ ವಾಸ್ತು (Vastu) ವಿನ ಜೊತೆ ಅಡುಗೆ ಮನೆಯಲ್ಲಿ ಕೆಲ ವಸ್ತುಗಳು ಇರಬಾರದು. ಅವುಗಳ ಡಿಟೇಲ್ಸ್ ಇಲ್ಲಿದೆ.

 

ಹಳಸಿದ ಹಿಟ್ಟು

ಅನೇಕರು ಉಳಿದ ಹಿಟ್ಟನ್ನು ಫ್ರಿಜ್  (fridge) ನಲ್ಲಿಟ್ಟು ನಂತರ ಬಳಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಆರೋಗ್ಯ (health) ಕ್ಕೆ ಹಾನಿಯಾಗುವುದಲ್ಲದೆ ಶನಿ ಮತ್ತು ರಾಹುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

 

ಅಡುಗೆ ಮನೆಯಲ್ಲಿ ಔಷಧಿಗಳು

ಅನೇಕ ಜನರು ಅಡುಗೆ ಮನೆಯಲ್ಲಿ ಔಷಧಿ (medicine) ಗಳನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಔಷಧಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ರೋಗ ಹೆಚ್ಚಾಗುವ ಸಂಭವವಿದ್ದು, ಆರೋಗ್ಯ ಹದಗೆಟ್ಟು ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಈ ಕಾರಣದಿಂದಾಗಿ ಆರ್ಥಿಕ ಸಮಸ್ಯೆ (Financial problem) ಗಳನ್ನು ಸಹ ಎದುರಿಸಬಹುದು.

 

ಅಡುಗೆ ಮನೆಯಲ್ಲಿ ದೇವರ ಜಗುಲಿ

ಕೆಲವು ಮನೆಗಳಲ್ಲಿ ಅಡುಗೆಮನೆಯಲ್ಲಿ ದೇವರ (God)  ಜಗುಲಿ ನಿರ್ಮಿಸಿರುವುದು ಕಂಡುಬರುತ್ತದೆ. ಅಡುಗೆ ಮನೆ ಅನ್ನಪೂರ್ಣ ತಾಯಿಯ ಸ್ಥಾನವಾಗಿದ್ದು, ಇಲ್ಲಿ ಅಗ್ನಿ ದೇವನೂ ನೆಲೆಸಿದ್ದಾನೆ ಎಂದು ಜನರು ನಂಬುತ್ತಾರೆ. ಆದರೆ ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ದೇವರ ಜಗುಲಿ ಕಟ್ಟಬಾರದು. ಏಕೆಂದರೆ ಅಡುಗೆ ಮನೆಯಲ್ಲಿ ಸಾತ್ವಿಕ ಮತ್ತು ತಾಮಸಿಕ ಆಹಾರವನ್ನು ಬೇಯಿಸಲಾಗುತ್ತದೆ. ಈರುಳ್ಳಿ (Onion)  ಮತ್ತು ಬೆಳ್ಳುಳ್ಳಿ (Garlic) ಯನ್ನು ಸಹ ಆಹಾರದಲ್ಲಿ ಸೇರಿಸಲಾಗುತ್ತದೆ. ಅಡುಗೆ ಮನೆಯಲ್ಲಿ ದೇವರ ಜಗುಲಿ ಹೊಂದಿರುವುದು ನಕಾರಾತ್ಮಕ ಪರಿಣಾಮ ಬೀರುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಬೇಡಿ; ನಿಮ್ಮ ದಿನ ಹಾಳಾಗುತ್ತೆ ಹುಷಾರ್..!

 

ಒಡೆದ ಮತ್ತು ಬಿರುಕು ಬಿಟ್ಟ ಪಾತ್ರೆಗಳು

ಅನೇಕ ಬಾರಿ ಕೆಲಸ ಮಾಡುವಾಗ ಮಡಕೆ  (pot) ಬಿರುಕು ಬಿಡುತ್ತದೆ ಮತ್ತು ನೀವು ಅದನ್ನು ಬಳಸುತ್ತೀರಿ. ಆದರೆ ವಾಸ್ತು ಪ್ರಕಾರ ಒಡೆದ ಮಡಕೆಗಳನ್ನು ಇಡುವುದರಿಂದ ಮನೆಯ ಆರ್ಥಿಕ ಸ್ಥಿತಿ  (Financial status) ಹಾಳಾಗುತ್ತದೆ ಮತ್ತು ಸಾಲ ಹೆಚ್ಚಾಗುತ್ತದೆ. ಇದರೊಂದಿಗೆ ಪರಸ್ಪರ ಭಿನ್ನಾಭಿಪ್ರಾಯಗಳೂ ಹೆಚ್ಚುತ್ತವೆ.

 

ಅಡುಗೆ ಮನೆಯಲ್ಲಿ ಚಪ್ಪಲಿ ಹಾಕಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಚಪ್ಪಲಿ  (slippers) ಧರಿಸುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಕೊಳೆ ಮತ್ತು ಸೂಕ್ಷ್ಮಾಣುಗಳು ಅಡುಗೆ ಮನೆಗೆ ತಲುಪುತ್ತವೆ. ಇಷ್ಟು ಮಾತ್ರವಲ್ಲದೆ ತಾಯಿ ಅನ್ನಪೂರ್ಣ ಅಡುಗೆ ಮನೆಯಲ್ಲಿ ವಾಸವಾಗಿರುವುದರಿಂದ ಚಪ್ಪಲಿ ಧರಿಸಿ ಅವಮಾನ  (shame) ಮಾಡಬೇಡಿ.

Latest Videos
Follow Us:
Download App:
  • android
  • ios