Asianet Suvarna News Asianet Suvarna News

ಸಂಪತ್ತು-ಸುಖ-ಸಮೃದ್ಧಿಗಾಗಿ ಅವಶ್ಯವಾಗಿ ಮನೆಯಲ್ಲಿರಬೇಕಾದ ವಸ್ತುಗಳಿವು....!

ವಾಸ್ತು ಶಾಸ್ತ್ರದಲ್ಲಿ ಎಲ್ಲರೂ ಪಾಲಿಸಬಹುದಾದ ಸರಳ ಉಪಾಯಗಳನ್ನು ತಿಳಿಸಿದ್ದಾರೆ. ವಾಸ್ತುವಿನ ಬಗ್ಗೆ ಸ್ವಲ್ಪ ಗಮನಹರಿಸಿದರೆ ಮನೆಯು ಸದಾ ಸಮೃದ್ಧಿಯಿಂದ ತುಂಬಿರುತ್ತದೆ. ಸುಖ-ಸಮೃದ್ಧಿಯು ನೆಲೆಸಬೇಕೆಂದರೆ ಕೆಲವು ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡಿರಲೇಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಿದ್ದಾರೆ.

Keeping these items at home will help to grow wealth and prosperity
Author
Bangalore, First Published Dec 8, 2020, 2:23 PM IST

ಬದುಕಿಗೆ ನೆಮ್ಮದಿ ಮುಖ್ಯ. ಮನೆಯಲ್ಲಿ ಸಂಪತ್ತು-ಸುಖ-ಸಮೃದ್ಧಿ ಇದ್ದರೆ, ನೆಮ್ಮದಿ ತಾನಾಗಿಯೇ ನೆಲೆಸುತ್ತದೆ.  ಹಾಗಾಗಿಯೇ ಎಲ್ಲರು ಮನೆಯ ನೆಮ್ಮದಿಯನ್ನು ಬಯಸುವುದು. ಕೆಲವು ಬಾರಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹಣದ ಸಮಸ್ಯೆ, ಆರೋಗ್ಯದ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಕಾಡುತ್ತವೆ.  ಜ್ಯೋತಿಷ್ಯ ಶಾಸ್ತ್ರದ ಭಾಗವೇ ಆಗಿರುವ ವಾಸ್ತು ಶಾಸ್ತ್ರದಲ್ಲಿ ಕೆಲವು ಉಪಾಯಗಳನ್ನು ತಿಳಿಸಿದ್ದಾರೆ.

ವಾಸ್ತು ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿದೆ. ವಾಸ್ತು ಶಾಸ್ತ್ರವನ್ನು ಸರಿಯಾಗಿ ಪಾಲನೆ ಮಾಡಿ, ವಾಸ್ತು ಪ್ರಕಾರ ಎಲ್ಲವೂ ಇರುವಂತೆ ನೋಡಿಕೊಂಡರೆ, ಅಂಥವರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ. ಹಲವು ನಿಯಮಗಳು ವಾಸ್ತು ಶಾಸ್ತ್ರದಲ್ಲಿದೆ ಎಂದು ತಿಳಿದ ಮೇಲೆ ಹಲವರು ಅವುಗಳನ್ನು ತಿಳಿದುಕೊಂಡು ಪಾಲಿಸುವತ್ತ ಹೆಜ್ಜೆಹಾಕಿದ್ದಾರೆ. ಮನೆಯಲ್ಲಿರುವ ಹಲವು ವಸ್ತುಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ, ಮತ್ತೆ ಕೆಲವು ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ವೃದ್ಧಿಸುತ್ತದೆ. ಹಾಗಾಗಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುವ ವಸ್ತುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. 

ಇದನ್ನು ಓದಿ: ಮನಸ್ಸಿಗೆ ಇಷ್ಟವಾಗೋ ಜಾಬ್ ಪಡೆಯಲು ಈ ಉಪಾಯ ಮಾಡಿ..! 

ವಾಸ್ತು ಶಾಸ್ತ್ರದ ಬಗ್ಗೆ ಸ್ವಲ್ಪ ಗಮನಹರಿಸಿದರೆ ಮನೆಯಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿದೆ. ಜ್ಯೋತಿಷ್ಯದಲ್ಲಿ ಹಲವಾರು ಮಾಹಿತಿಗಳನ್ನು ತಿಳಿಸಿದ್ದಾರೆ, ಅದರ ಪಾಲನೆಯಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ತಲೆದೋರುವುದಿಲ್ಲ. ಹಾಗೆಯೇ ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಕೆಂಬ ಬಗ್ಗೆ ತಿಳಿಸಿದ್ದಾರೆ. ಇದರಿಂದ ಮನೆಯಲ್ಲಿ ಎಂದಿಗೂ ಅನ್ನ ಮತ್ತು ಹಣಕ್ಕೆ ಕೊರತೆಯಾಗುವುದಿಲ್ಲ. ಹಾಗಾಗಿ ಸಂಪತ್ತು-ಸುಖ-ಸಮೃದ್ಧಿಯು ನೆಲೆಸಿರುವಂತೆ ಮಾಡುವ ಆ ವಸ್ತುಗಳ ಬಗ್ಗೆ ತಿಳಿಯೋಣ..

ಅಕ್ಕಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವು ಅನ್ನಕ್ಕೆ ಕಾರಕನಾಗಿರುತ್ತಾನೆ. ಅಂದರೆ ಭೌತಿಕ ಸುಖ-ಸಂಪತ್ತಿಗೆ ಶುಕ್ರಗ್ರಹವು ಕಾರಕ ಗ್ರಹವಾಗಿದೆ. ಹಾಗಾಗಿ ಮನೆಯಲ್ಲಿ ಅಕ್ಕಿಯನ್ನು ಇಟ್ಟುಕೊಂಡಿರಬೇಕೆಂದು ಹೇಳಲಾಗುತ್ತದೆ. ಯಾವುದೇ ಕಾರಣಕ್ಕೂ ಪೂರ್ತಿ ಅಕ್ಕಿ ಖಾಲಿಯಾಗುವ ತನಕ ಕಾಯದೇ, ಸ್ವಲ್ಪ ಇರುವಾಗಲೇ ತಂದಿಟ್ಟುಕೊಳ್ಳುವುದು ಉತ್ತಮವೆಂದು ಹೇಳಲಾಗುತ್ತದೆ. ಅಕ್ಕಿಯನ್ನು ಹಾಕಿಡುವ ಪಾತ್ರೆ ಯಾವಾಗಲೂ ತುಂಬಿಯೇ ಇರುವಂತೆ ನೋಡಿಕೊಂಡರೆ ಉತ್ತಮ. ಅದೇ ರೀತಿ ಮನೆಯಲ್ಲಿ ಅಕ್ಷತೆಯನ್ನು ಇಟ್ಟಕೊಂಡಿರಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ.

ಶುದ್ಧ ಜೇನುತುಪ್ಪ
ಜೇನುತುಪ್ಪವನ್ನು ಮನೆಯಲ್ಲಿಟ್ಟುಕೊಳ್ಳುವುದು ಶುಭವೆಂದು ಹೇಳಲಾಗುತ್ತದೆ. ಒಂದು ಪಾತ್ರೆಯಲ್ಲಿ ಜೇನುತುಪ್ಪವನ್ನು ತುಂಬಿಟ್ಟುಕೊಂಡಿರುವುದು ಸಮೃದ್ಧಿಯ ಸೂಚಕವಾಗಿರುತ್ತದೆ. ಇದರಿಂದ ಸಂಪತ್ತ-ಸಮೃದ್ಧಿ ವೃದ್ಧಿಸುತ್ತದೆಂದು ಹೇಳಲಾಗುತ್ತದೆ. ದೇವರ ಪೂಜೆಯಲ್ಲಿ ಪಂಚಾಮೃತಕ್ಕೆ, ಅಭಿಷೇಕಕ್ಕೆ, ನೈವೇದ್ಯಕ್ಕೆ ಮುಂತಾದ ದೇವರ ಕಾರ್ಯಗಳಲ್ಲಿ ಜೇನುತುಪ್ಪ ಅತೀ ಅವಶ್ಯಕವಾಗಿರುತ್ತದೆ.  ಅಷ್ಟೇ ಅಲ್ಲದೇ ಮನೆಯ ವಾತಾವರಣವನ್ನು ಶುದ್ಧಿಯಾಗಿಡಲು ಜೇನುತುಪ್ಪದ ಪಾತ್ರ ಮಹತ್ವದ್ದು. ಹಾಗಾಗಿ ಸಂಪನ್ನತೆಯ ಪ್ರತೀಕವಾದ ಜೇನುತುಪ್ಪವನ್ನು ಮನೆಯಲ್ಲಿಟ್ಟುಕೊಳ್ಳುವುದು ಅವಶ್ಯಕ.

ಇದನ್ನು ಓದಿ: ಶುಕ್ರ ಗ್ರಹ ರಾಶಿ ಪರಿವರ್ತನೆ: ಈ ಆರು ರಾಶಿಯವರಿಗೆ ಸಖತ್ ಪ್ಲಸ್, ನಿಮ್ಮ ರಾಶಿ ಯಾವುದು? 

ಶ್ರೀಗಂಧ
ದೇವರ ಪೂಜೆಗೆ ಬಳಸುವ ಶ್ರೀಗಂಧ ಮನೆಯಲ್ಲಿರಲೇಬೇಕಾದ ವಸ್ತುಗಳಲ್ಲೊಂದಾಗಿದೆ. ಶ್ರೀಗಂಧವಿರುವುದರಿಂದ ಮನೆಯ ವಾತಾವರಣ ಪರಿಶುದ್ಧವಾಗಿರುವುದಲ್ಲದೇ, ಅದರ ಸುವಾಸನೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಎಲ್ಲಡೆ ಪ್ರವಹಿಸುವಂತೆ ಮಾಡುತ್ತದೆ. ಪರಶಿವನಿಗೆ, ವಿಷ್ಣುವಿಗೂ ಪ್ರಿಯವಾದ ಶ್ರೀಗಂಧ ಮನೆಯಲ್ಲಿದ್ದರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಶ್ರೀಗಂಧವು ಎಷ್ಟೇ ಚಿಕ್ಕದಾದರೂ ಅದರ ಸುಗಂಧ ಕಡಿಮೆಯಾಗುವುದಿಲ್ಲ. ಹಾಗಾಗಿ ಮನೆಯಲ್ಲಿ ಶ್ರೀಗಂಧದ ತುಂಡನ್ನು ಇಲ್ಲಿಟ್ಟುಕೊಳ್ಳಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಇದನ್ನು ಓದಿ: ನೀವು ಡಿಸೆಂಬರ್‌ನಲ್ಲಿ ಹುಟ್ಟಿದವರಾ? ಈ ಗುಣ ನಿಮ್ಮದಾಗಿರುತ್ತೆ! 

ಹಸುವಿನ ತುಪ್ಪ
ಹಸುವಿನ ತುಪ್ಪ ಅತಿ ಶ್ರೇಷ್ಠವೆಂದು ಹೇಳಲಾಗುತ್ತದೆ. ಗೋಮಾತೆಯಲ್ಲಿ 33 ಕೋಟಿ ದೇವತೆಗಳು ವಾಸವಾಗಿರುತ್ತಾರೆಂದು ಹೇಳಲಾಗುತ್ತದೆ. ಹಾಗಾಗಿ ದೇವರ ಕಾರ್ಯಗಳಲ್ಲಿ ಹಸುವಿನ ತುಪ್ಪವನ್ನು ಬಳಸುವುದು ಅವಶ್ಯಕವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಸಹ ಗೋವಿನ ತುಪ್ಪ ಅಮೃತಕ್ಕೆ ಸಮಾನವೆಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ಹಸುವಿನ ಶುದ್ಧತುಪ್ಪವನ್ನು ಇಟ್ಟುಕೊಂಡಿರಬೇಕು. ಅಷ್ಟೇ ಅಲ್ಲದೇ ತುಪ್ಪ ಪಾತ್ರೆಯು ಸದಾ ತುಂಬಿರುವಂತೆ ನೋಡಿಕೊಳ್ಳಬೇಕು ಮತ್ತು ಪ್ರತಿ ನಿತ್ಯ ದೇವರಿಗೆ ಹಸುವಿನ ತುಪ್ಪದ ದೀಪ ಹಚ್ಚುವುದರಿಂದ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

Follow Us:
Download App:
  • android
  • ios