ಶುಕ್ರ ಗ್ರಹವು ಭೌತಿಕ ಸುಖ-ಸಮೃದ್ಧಿಯ ಕಾರಕ ಗ್ರಹವಾಗಿದೆ. ಈಗ ಶುಕ್ರ ಗ್ರಹದ ಸ್ವರಾಶಿಯಾದ ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡಲಿದೆ. ಇದೇ ಡಿಸೆಂಬರ್ 11ರಂದು ಪ್ರವೇಶಿಸಲಿರುವ ಶುಕ್ರ ಗ್ರಹವು, ಬರುವ ವರ್ಷ ಜನವರಿ 4ರ ವರೆಗೆ ಅದೇ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ.

ಗ್ರಹಗಳ ರಾಶಿ ಪರಿವರ್ತನೆ ಆಗಿಂದಾಗ್ಗೆ ಆಗುತ್ತಲೇ ಇರುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಇನ್ನು ಕೆಲವು ರಾಶಿಯವರಿಗೆ ಕೆಟ್ಟದಾಗುತ್ತದೆ. ಮತ್ತೆ ಕೆಲವರಿಗೆ ಮಿಶ್ರ ಫಲವನ್ನು ಕೊಡುತ್ತದೆ. ಕೆಲವರಿಗೆ ಆರ್ಥಿಕ ಸ್ಥಿತಿ ಸುಧಾರಿಸಿದರೆ, ಮತ್ತೆ ಕೆಲವರಿಗೆ ಜೀವನದಲ್ಲಿ ಏರುಪೇರು ಆಗಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಅಶುಭ ಉಂಟಾಗುವ ರಾಶಿಯವರಿದ್ದರೆ, ಆ ಗ್ರಹದ ಆರಾಧನೆ ಮಾಡಿದರೆ ಶುಭ ಫಲ ಉಂಟಾಗುವ ಸಮಸ್ಯೆಗಳು ಪರಿಹಾರವಾಗುತ್ತವೆ. 

ಪ್ರೇಮ ಮತ್ತು ಪ್ರಣಯ ವಿಚಾರಗಳಲ್ಲಿ ಶುಕ್ರ ಗ್ರಹದ ಪಾತ್ರ ಮಹತ್ವದ್ದಾಗಿರುತ್ತದೆ. ಶುಕ್ರಗ್ರಹದ ಈ ಪರಿವರ್ತನೆಯು ಕೆಲವು ರಾಶಿಯವರಿಗೆ ಅತ್ಯಂತ ಶುಭವನ್ನುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ್ಯಾವ ರಾಶಿ ತಿಳಿಯೋಣ..

ಇದನ್ನು ಓದಿ: ನೀವು ಡಿಸೆಂಬರ್‌ನಲ್ಲಿ ಹುಟ್ಟಿದವರಾ? ಈ ಗುಣ ನಿಮ್ಮದಾಗಿರುತ್ತೆ! 

ಮೇಷ ರಾಶಿ
ಪ್ರೇಮ ವಿಚಾರಗಳಲ್ಲಿ ಶುಭ ಸುದ್ದಿ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಸುಖ-ಸಮೃದ್ಧಿ ವೃದ್ಧಿಸಲಿದೆ. ಈ ಅವಧಿಯಲ್ಲಿ ಹೊಸ ವಾಹನ ಅಥವಾ ಜಮೀನು ಖರೀದಿಸುವ ಸಂಭವವಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಅನಿರೀಕ್ಷಿತ ಧನಲಾಭದ ಯೋಗವಿದೆ. ಮೇಷ ರಾಶಿಯವರಿಗೆ ಶುಕ್ರನ ರಾಶಿ ಪರಿವರ್ತನೆ ಶುಭ ಪ್ರಭಾವವನ್ನು ಬೀರಲಿದೆ.ಕರ್ಕಾಟಕ ರಾಶಿ
ಶುಕ್ರ ಗ್ರಹದ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಶುಭ ಪ್ರಭಾವವನ್ನು ನೀಡಲಿದೆ.  ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ. ಈ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಉತ್ತಮ ಫಲವನ್ನು ನೀಡುತ್ತದೆ. ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ ಹೆಚ್ಚಲಿದೆ. ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಲಿದೆ. ಮಕ್ಕಳಿಂದ ಒಳಿತಾಗಲಿದೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಯಶಸ್ಸು ಲಭಿಸಲಿದೆ.

ಇದನ್ನು ಓದಿ: ಈ ಫೋಟೋ ಮನೆಯಲ್ಲಿಟ್ಟರೆ ಕೆಡುಕು ಖಚಿತ, ನಿಮ್ಮ ಮನೆಯಲಿದ್ಯಾ? 

ಕನ್ಯಾ ರಾಶಿ
ಶುಕ್ರನ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಹಲವು ಬಗೆಯ ಲಾಭವನ್ನು ನೀಡುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಹಣ ಗಳಿಸುವುದಕ್ಕಾಗಿ ಹೆಚ್ಚಿನ ಪರಿಶ್ರಮವನ್ನು ಪಡುತ್ತೀರಿ. ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ. ಯಾತ್ರೆ ಮಾಡುವ ಸಂಭವ ಸಹ ಇದೆ.

ತುಲಾ ರಾಶಿ
ಈ ಅವಧಿಯಲ್ಲಿ ಹೆಚ್ಚಿನ ಹಣವನ್ನು ಕೂಡಿಡುವುದರಲ್ಲಿ ಸಫಲರಾಗುತ್ತೀರಿ. ಕುಟುಂಬದ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದಾಗಿದೆ. ಮನೆಯಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ. ಹಣಕ್ಕೆ ಸಂಬಂಧಿಸಿದ ಇಷ್ಟಾರ್ಥಗಳೆಲ್ಲ ಸಿದ್ಧಿಸುತ್ತವೆ. ಮಾತಿನಿಂದ ಇತರರ ಮನ ಒಲಿಸುವಲ್ಲಿ ಸಫಲತೆಯನ್ನು ಕಾಣಬಹುದಾಗಿದೆ.

ಮಕರ ರಾಶಿ
ಶುಕ್ರ ಗ್ರಹದ ರಾಶಿ  ಪರಿವರ್ತನೆಯು ಈ ರಾಶಿಯವರಿಗೆ ಲಾಭವನ್ನು ತರುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ಸಫಲತೆ ಸಿಗಲಿದೆ. ಆರ್ಥಿಕ ಸ್ಥಿತಿಯು ಬಲಗೊಳ್ಳವುದಲ್ಲದೆ, ಆದಾಯ ಹೆಚ್ಚಲಿದೆ. ಮಹತ್ವಾಕಾಂಕ್ಷೆಗಳನ್ನು ಪೂರ್ಣಗೊಳಿಸಿಕೊಳ್ಳಲು ಇದು ಸುಸಂದರ್ಭವಾಗಿದೆ.

ಇದನ್ನು ಓದಿ: ಸಾಲ ಪಡೆಯುವಾಗ ಈ ವಿಷಯಗಳನ್ನು ಅಲಕ್ಷಿಸಿದರೆ - ಋಣ ಮುಕ್ತರಾಗುವುದು ಕಷ್ಟ..! 

ಮೀನ ರಾಶಿ
ಶುಕ್ರ ಗ್ರಹದ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರಲಿದೆ. ಈ ಅವಧಿಯಲ್ಲಿ ಧನಲಾಭವಾಗುವ ಸಂಭವ ಹೆಚ್ಚಿದೆ. ಸಹೋದರ-ಸಹೋದರಿಯರು ನಿಮ್ಮ ಆಜ್ಞೆಯನ್ನು ಪಾಲಿಸುತ್ತಾರೆ. ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುವುದರಿಂದ ಮಾನಸಿಕ ನೆಮ್ಮದಿ ಕೊಂಚ ತಗ್ಗಲಿದೆ.