ಫೆಂಗ್ ಶೂಯಿ ಒಂಟೆ ನಿಮ್ಮೊಟ್ಟಿಗಿದ್ದರೆ ಅದೃಷ್ಟ ಖುಲಾಯಿಸೋದ್ರಲ್ಲಿ ಇಲ್ಲ ಅನುಮಾನ
ದುಡಿಮೆ ಮಾತ್ರವಲ್ಲ, ದುಡಿಮೆಗೆ ತಕ್ಕಂತೆ ಗಳಿಗೆಯಿದ್ರೆ ಒಳ್ಳೆಯದು. ಎಲ್ಲರಿಗೂ ಇದು ಸಾಧ್ಯವಿಲ್ಲ. ನಾವು ಕೆಲಸ ಮಾಡುವ ಸ್ಥಳ ಹಾಗೂ ನಮ್ಮ ಮನೆ ವಾಸ್ತು ಕೂಡ ನಮ್ಮ ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ವಾಸ್ತುದೋಷ ಕಡಿಮೆ ಮಾಡಲು ಸಣ್ಣ ಉಪಾಯ ಮಾಡ್ಬಹುದು.
ನಾವು ನೀವೆಲ್ಲ ಮಾಡ್ತಿರೋದು ಸುಖ, ಶಾಂತಿ ಜೊತೆ ಸಮೃದ್ಧ ಜೀವನಕ್ಕಾಗಿ. ಶ್ರೀಮಂತಿಕೆಯ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ಮನೆಯ ಖಜಾನೆ ಸದಾ ತುಂಬಿರಬೇಕೆಂದು ಬಯಸ್ತಾರೆ. ಅನೇಕ ಬಾರಿ ಅದೆಷ್ಟು ಪ್ರಯತ್ನಿಸಿದ್ರೂ ಅದೃಷ್ಟ ನಮ್ಮ ಕೈ ಹಿಡಿಯೋದಿಲ್ಲ. ನಮ್ಮ ಜ್ಯೋತಿಷ್ಯ ಶಾಸ್ತ್ರದಂತೆ ಚೀನಾದ ಫೆಂಗು ಶೂಯಿಯಲ್ಲೂ ನಮ್ಮ ಜೀವನ ಬದಲಿಸಬಲ್ಲ, ಅದೃಷ್ಟ ಬದಲಿಸಬಲ್ಲ ಅನೇಕ ಸಂಗತಿಯಗಳನ್ನು ಹೇಳಲಾಗಿದೆ. ಅದ್ರಲ್ಲಿ ಒಂಟೆ ಕೂಡ ಒಂದು. ಫೆಂಗ್ ಶೂಯಿಯಲ್ಲಿ, ಮನೆಯಲ್ಲಿ ಒಂಟೆ ಇದ್ರೆ ಏನೆಲ್ಲ ಲಾಭವಿದೆ ಎಂಬುದನ್ನು ವಿವರಿಸಲಾಗಿದೆ. ವ್ಯಾಪಾರದಲ್ಲಿ ಅಭಿವೃದ್ಧಿಯಾಗ್ಬೇಕು, ಸಂಪತ್ತಿನ ಮೂಲದ ಬಾಗಿಲು ತೆರೆಯಬೇಕು ಎಂದಾದ್ರೆ ಫೆಂಗ್ ಶೂಯಿಯಲ್ಲಿ ಹೇಳಿದ ನಿಯಮ ಪಾಲನೆ ಮಾಡ್ಬೇಕು. ನಾವಿಂದು ಒಂಟೆ ಬಗ್ಗೆ ಫೆಂಗ್ ಶೂಯಿಯಲ್ಲಿ ಏನೆಲ್ಲ ಹೇಳಲಾಗಿದೆ ಎಂಬುದನ್ನು ಹೇಳ್ತೇವೆ.
ಫೆಂಗ್ ಶೂಯಿ (Feng Shui) ಪ್ರಕಾರ, ವ್ಯಕ್ತಿ ಮೇಲೆ ಒಂಟೆ (Camel) ಸಕಾರಾತ್ಮಕ ಪರಿಣಾಮ ಬೀರುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಜೊತೆಗೆ ಮನೆಯಲ್ಲಿ ಸಂಪತ್ತು, ಸಮೃದ್ಧಿ ನೆಲೆಸುತ್ತದೆ.
ಒಂಟೆ ಮೂರ್ತಿ ಮನೆಯಲ್ಲಿದ್ದರೆ ಏನೆಲ್ಲ ಲಾಭ ? :
ಶ್ರಮವಹಿಸಿ ದುಡಿಯುವ ಛಲ : ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ, ಒಂಟೆ ಕಠಿಣ ಪರಿಶ್ರಮ ಮತ್ತು ಹೋರಾಟದ ಪ್ರಾಣಿ (Animal) ಯಾಗಿದೆ. ನಿಮ್ಮ ಮನೆಯಲ್ಲಿ ಒಂಟೆಯ ವಿಗ್ರಹವನ್ನು ಇಟ್ಟುಕೊಳ್ಳುವುದರಿಂದ ಶ್ರಮವಹಿಸಿ ದುಡಿಯುವ ಛಲ ಹೆಚ್ಚುತ್ತದೆ.
ಯಶಸ್ಸು ನಿಶ್ಚಿತ : ಫೆಂಗ್ ಶೂಯಿ ಪ್ರಕಾರ, ಒಂಟೆಯನ್ನು ಮನೆಯಲ್ಲಿ ಇಡುವುದ್ರಿಂದ ವ್ಯಕ್ತಿ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು (Success ) ಪಡೆಯುತ್ತಾನೆ. ಎಲ್ಲ ಪರಿಸ್ಥಿತಿಗಳನ್ನು ಎದುರಿಸಿ ಮುನ್ನಡೆಯುವ ಶಕ್ತಿ, ಸಾಮರ್ಥ್ಯ ಪಡೆಯುತ್ತಾನೆ.
ಮದುವೆ ಬೇಗ ಆಗ್ಬೇಕಾ? ಈ ಜ್ಯೋತಿಷ್ಯ ಸಲಹೆ ಪಾಲೋ ಮಾಡಿ
ಕಚೇರಿ (Office) ಯಲ್ಲಿರಲಿ ಒಂಟೆ ಮೂರ್ತಿ : ಫೆಂಗ್ ಶೂಯಿ ಒಂಟೆಯನ್ನು ಕಚೇರಿಯಲ್ಲಿ ಇಟ್ಟುಕೊಳ್ಳುವುದರಿಂದ ಕೆಲಸದಿಂದ ಉಂಟಾಗುವ ಒತ್ತಡ ಕಡಿಮೆಯಾಗುತ್ತದೆ. ಕಚೇರಿಯಲ್ಲಿರುವ ನಕಾರಾತ್ಮಕತೆ ಕಡಿಮೆಯಾಗುತ್ತದೆ. ಕಚೇರಿಯ ವಾತಾವರಣ ಶಾಂತವಾಗಿರುವ ಕಾರಣ, ಕೆಲಸ ಮಾಡಲು ಆಸಕ್ತಿ ಹೆಚ್ಚುತ್ತದೆ. ನೀವು ನಿಮ್ಮ ಕಚೇರಿಯ ಮೇಜಿನ ಮೇಲೆ ಫೆಂಗ್ ಶೂಯಿ ಒಂಟೆಯನ್ನು ಇಟ್ಟುಕೊಳ್ಳುವುದ್ರಿಂದ ಸಾಕಷ್ಟು ಲಾಭವನ್ನು ಪಡೆಯುತ್ತೀರಿ.
ಆರ್ಥಿಕ (Financial) ವೃದ್ಧಿಗೆ ಹೀಗೆ ಮಾಡಿ : ವ್ಯವಹಾರ (Business) ದಲ್ಲಿ ನಷ್ಟವನ್ನು ಎದುರಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರವು ಕುಂಠಿತವಾಗಿದ್ದರೆ ವ್ಯಾಪಾರದ ಸ್ಥಳದಲ್ಲಿ ಫೆಂಗ್ ಶೂಯಿ ಒಂಟೆಯ ಮೂರ್ತಿಯನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡಿದ್ರೆ ಕುಂಠಿತವಾಗಿದ್ದ ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು. ವ್ಯವಹಾರದಲ್ಲಿ ಲಾಭ ಪಡೆಯಬಹುದು. ನೀವು ಊಹಿಸದಷ್ಟು ವೇಗದಲ್ಲಿ ನಿಮ್ಮ ವ್ಯಾಪಾರ ಯಶಸ್ವಿ ಪಥದಲ್ಲಿ ಸಾಗುವುದನ್ನು ನೀವು ಕಾಣಬಹುದು.
ಜೋಡಿ ಒಂಟೆ ಇಟ್ಟು ನೋಡಿ : ಫೆಂಗ್ ಶೂಯಿ ಪ್ರಕಾರ, ಜೋಡಿ ಒಂಟೆಯನ್ನು ನೀವು ಮನೆಯಲ್ಲಿ ಇಡಬೇಕು. ಇದ್ರ ಮೂರ್ತಿ ಅಥವಾ ಫೋಟೋವನ್ನು ನೀವು ಡ್ರಾಯಿಂಗ್ ರೂಮಿನಲ್ಲಿ ಅಥವಾ ಲೀವಿಂಗ್ ರೂಮಿನಲ್ಲಿ ಹಾಕಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. ಮನೆಯ ವಾಯುವ್ಯ ಮೂಲೆಯಲ್ಲಿ ಜೋಡಿ ಒಂಟೆಯನ್ನು ಇಡುವುದ್ರಿಂದ ಧನ ಲಾಭವಾಗುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ಆದಾಯಕ್ಕೆ ಅನೇಕ ಮಾರ್ಗಗಳು ತೆರೆದುಕೊಳ್ಳುತ್ತವೆ.
ಸಂಖ್ಯಾಶಾಸ್ತ್ರದ ಪ್ರಕಾರ 2023ರ ಬುತ್ತಿಯಲ್ಲಿ ನಿಮ್ಮ ಜನ್ಮಸಂಖ್ಯೆಗೆ ಏನಿರಲಿದೆ?
ಶಿಕ್ಷಣ, ವೃತ್ತಿಗಾಗಿ ಒಂಟೆ ಇಡಿ : ಮನೆಯಲ್ಲಿ ಜೋಡಿ ಒಂಟೆ ಇಡುವುದ್ರಿಂದ ಬರೀ ಆರ್ಥಿಕ ವೃದ್ಧಿ ಮಾತ್ರವಲ್ಲ ಇನ್ನೂ ಅನೇಕ ಲಾಭವನ್ನು ನಾವು ಪಡೆಯಬಹುದು. ಸಾಲದಿಂದ ನೀವು ಮುಕ್ತಿ ಪಡೆಯಬಹುದು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಬುದ್ಧಿ ಚುರುಕಾಗುತ್ತದೆ. ವೃತ್ತಿ ಜೀವನದಲ್ಲಿ ನೀವು ಬಡ್ತಿ ಪಡೆದು ಉನ್ನತ ಮಟ್ಟಕ್ಕೇರಬಹುದು.