Asianet Suvarna News Asianet Suvarna News

Jyotish Tips : ಐದೇ ನಿಮಿಷದಲ್ಲಿ ಆಸೆ ಈಡೇರ್ಬೇಕೆಂದ್ರೆ ಈ ಮಂತ್ರ ಪಠಿಸಿ

ಹಿಂದೂ ಧರ್ಮದಲ್ಲಿ ದೇವರು, ಪೂಜೆ, ಹೋಮ, ಹವನದ ಮೇಲೆ ಅಪಾರ ನಂಬಿಕೆಯಿದೆ. ಇವುಗಳನ್ನು ಮಾಡುವುದ್ರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಜನರು ನಂಬುತ್ತಾರೆ. ಆದ್ರೆ ಈ ಎಲ್ಲ ಕಾರ್ಯದಿಂದ ಫಲ ಸಿಗಬೇಕೆಂದ್ರೆ ತುಂಬಾ ದಿನ ಕಾಯ್ಬೇಕು ಎಂಬ ಬೇಸರವೂ ಇದೆ. ಅಂಥವರಿಗೆ ಖುಷಿ ವಿಷ್ಯ ಇಲ್ಲಿದೆ. 
 

Jyotish Tips Benefits And Method Of Shiva Tandav Stotram roo
Author
First Published Jun 24, 2023, 5:17 PM IST | Last Updated Jun 24, 2023, 5:17 PM IST

ಬೇಡಿದ ತಕ್ಷಣ ದೇವರು ವರ ನೀಡೋದಿಲ್ಲ, ತಮ್ಮ ಬಯಕೆ ಈಡೇರಬೇಕೆಂದ್ರೆ ದೀರ್ಘ ಸಮಯ ಕಾಯಬೇಕು ಎಂದು ಅನೇಕರು ನಂಬುತ್ತಾರೆ. ಇದೇ ಕಾರಣಕ್ಕೆ ದೇವರ ಪೂಜೆ, ಹೋಮ, ಹವನಗಳಲ್ಲಿ ಆಸಕ್ತಿ ತೋರುವುದಿಲ್ಲ. ಆದ್ರೆ ನೀವು ಮಾಡಿದ ಪಾಪ – ಪುಣ್ಯಗಳ ಫಲ ಇದೇ ಜನ್ಮದಲ್ಲಿ ಪ್ರಾಪ್ತಿಯಾಗುತ್ತದೆ. ಅದೇ ರೀತಿ, ದೇವರ ಪೂಜೆ ಫಲ ನಿಮಗೆ ಆ ಕ್ಷಣವೇ ಸಿಗುತ್ತದೆ.

ಹಿಂದೂ (Hindu) ಧರ್ಮದಲ್ಲಿ ಅತಿ ಬೇಗ ಪ್ರಸನ್ನನಾಗುವ ದೇವರೆಂದ್ರೆ ಶಿವ. ಬೇರೆ ಯಾವ ದೇವರಿಗಿಂತಲೂ ಈಶ್ವರ, ಭಕ್ತನ ಭಕ್ತಿಗೆ ಶೀರ್ಘ ಒಲಿಯುತ್ತಾನೆ. ಈಶ್ವರ (Ishwara) ಸರ್ವ ಸ್ವತಂತ್ರ. ನೀವು ಬೇಡಿದ್ದೆಲ್ಲವನ್ನೂ ಶಿವ ನಿಮಗೆ ನೀಡುವ ಶಕ್ತಿ ಹೊಂದಿದ್ದಾನೆ. ಶಿವನನ್ನು ಒಲಿಸಿಕೊಳ್ಳುವುದು ಕೂಡ ಸುಲಭ. ದೊಡ್ಡ ಹೋಮ, ಹವನ ಮಾಡಿಯೇ ಶಿವನ ಕೃಪೆಗೆ ಪಾತ್ರರಾಗಬೇಕಾಗಿಲ್ಲ. ನೀವು ಶಿವನ ಪೂಜೆಯನ್ನು ಭಕ್ತಿಯಿಂದ ಮಾಡಿದ್ರೆ ಬೇಗ ಫಲ ಪಡೆಯಬಹುದು. ಒಂದೇ ಒಂದು ಸ್ತೋತ್ರ (Stotra) ಪಠಿಸುವ ಮೂಲಕ ನೀವು ಶಿವನ ಕೃಪೆಗೆ ಪಾತ್ರರಾಗಬಹುದು.  

ಕಾಲಿಗೆ ಚಿನ್ನ ಧರಿಸಿದರೆ ಎದುರಾಗುತ್ತೆ ಕಂಟಕ; ಬಡತನ ನಿಮ್ಮ ಬಾಗಿಲು ತಟ್ಟಲಿದೆ ಹುಷಾರ್..!

ಐದು ನಿಮಿಷಗಳಲ್ಲಿ ಪರಿಣಾಮ ತೋರಿಸುತ್ತೆ ಶಿವನ ಈ ಮಂತ್ರ : ಶಾಸ್ತ್ರಗಳ ಪ್ರಕಾರ, ಶಿವ ತಾಂಡವ ಸ್ತೋತ್ರವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಎಲ್ಲಾ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬಹುದು. ಶಿವ ತಾಂಡವ ಸೋತ್ರವನ್ನು ರಾವಣ ತಾಂಡವ ಸ್ತೋತ್ರ ಎಂದೂ ಕರೆಯುತ್ತಾರೆ. ಯಾಕೆಂದ್ರೆ ಈ ಸ್ತೋತ್ರವನ್ನು ರಾವಣ ರಚಿಸಿದ್ದಾನೆ. ರಾವಣ ಕೈಲಾಸವನ್ನು ಎತ್ತಲು ಹೋದಾಗ ಶಿವ ಅದನ್ನು ಸರಿಮಾಡಿದ್ದ. ಈ ವೇಳೆ ರಾವಣನ ಬೆರಳು, ಕೈಲಾಸದ ಅಡಿ ಸಿಲುಕಿತ್ತಂತೆ. ಆ ನೋವಿನಲ್ಲಿ ರಾವಣ ಹೇಳಿದ ಶಿವನ ಸ್ತುತಿಗೆ ಶಿವ ತಾಂಡವ ಸ್ತೋತ್ರ. ಎಲ್ಲ ಮಂತ್ರಗಳಿಗಿಂತ ಶಿವನಿಗೆ ತಾಂಡವ ಸ್ತೋತ್ರವೆಂದ್ರೆ ಹೆಚ್ಚು ಪ್ರೀತಿ. ಈ ಸ್ತೋತ್ರವನ್ನು ಹೇಳಿದ್ರೆ ಶಿವ ಬೇಗ ಪ್ರಸನ್ನನಾಗ್ತಾನೆ. ಈ ಸ್ತೋತ್ರದಲ್ಲಿ ಅಪಾರ ಶಕ್ತಿ ಅಡಗಿದೆ. 

ಶಿವ ತಾಂಡವ ಸ್ತೋತ್ರದ ಲಾಭ ಹಾಗೂ ಬಳಸುವ ವಿಧಾನ ಯಾವುದು? : 
• ಶಿವ ತಾಂಡವ ಸ್ತೋತ್ರವನ್ನು ನೀವು ಪಠಿಸಿದ್ರೆ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಸಾಲದಿಂದ ಮುಕ್ತಿ ಸಿಗುತ್ತದೆ. ಅಲ್ಲದೆ ಎಂದಿಗೂ ಸಾಲ ಮಾಡುವ ಪ್ರಮೇಯ ಬರೋದಿಲ್ಲ.
• ವ್ಯವಹಾರದಲ್ಲಿ ನಷ್ಟವಾಗ್ತಿದ್ದರೆ, ಉದ್ಯೋಗದಲ್ಲಿ ಏಳ್ಗೆ ಕಾಣದೆ ಹೋದ್ರೆ, ನೌಕರಿ ಸಿಗದಿದ್ದಲ್ಲಿ ಅಥವಾ ಒಂದಾದ್ಮೇಲೆ ಒಂದರಂತೆ ಕಷ್ಟಗಳು ಎದುರಾಗಿ ಹಣ ನಷ್ಟವಾಗ್ತಿದ್ದರೆ ಅಂಥವರು ಇದ್ರ ಪರಿಹಾರಕ್ಕಾಗಿ 41 ದಿನಗಳ ಕಾಲ ಶಿವ ತಾಂಡವ ಸ್ತೋತ್ರವನ್ನು ಪಠಿಸಬೇಕು.
• ಮದುವೆಗೆ ಸಾಕಷ್ಟು ಸಮಸ್ಯೆಯಾಗ್ತಿದ್ದರೆ, ಗ್ರಹ ದೋಷಗಳು ಅವಿವಾಹಿತ ಹುಡುಗಿಗೆ ಕಾಡ್ತಿದ್ದರೆ ಆಕೆ 51 ದಿನಗಳ ಕಾಲ ಶಿವ ತಾಂಡವ ಸ್ತೋತ್ರವನ್ನು ಪಠಿಸಬೇಕು.

Zodiac Sign: ನಿಮ್ಮ ರಾಶಿಗೆ ಆಗಿಬರದ ರಾಶಿ ಯಾವ್ದು? ಯಾವ ರಾಶಿಯವರೊಂದಿಗೆ ಸ್ನೇಹ ಕಷ್ಟ?

• ಬಿಳಿ ಹೂ ಹಾಗೂ ಬಿಲ್ವ ಪತ್ರೆಯನ್ನು ಶಿವನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗ್ಬೇಕು. ಶಿವ ತಾಂಡವ ಸ್ತೋತ್ರ ಕೊನೆಯಲ್ಲಿ ಶಿವಲಿಂಗಕ್ಕೆ ಬಿಲ್ವ ಪತ್ರೆ ಮತ್ತು ಬಿಳಿ ಹೂವನ್ನು ಅರ್ಪಿಸಬೇಕು.
• ಶಿವ ತಾಂಡವ ಸ್ತೋತ್ರವನ್ನು ಬೆಳಿಗ್ಗೆ ಅಥವಾ ಪ್ರದೋಷ ಕಾಲದಲ್ಲಿ ಪಠಿಸಬೇಕು. ಮೊದಲು ಸ್ನಾನ ಮಾಡಿ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಶಿವನಿಗೆ ನಮಸ್ಕರಿಸಿ ಧೂಪ, ದೀಪ ಮತ್ತು ನೈವೇದ್ಯದಿಂದ ಪೂಜಿಸಿದ ಮೇಲೆ ಶಿವ ತಾಂಡವ ಸ್ತೋತ್ರವನ್ನು ಪಠಿಸಬೇಕು.
• ಶಿವ ತಾಂಡವ ಸ್ತೋತ್ರವನ್ನು ಹೇಳಿದ್ರೆ ಮುಖದಲ್ಲಿ ತೇಜಸ್ಸು ಬರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ.
• ಶಿವ ತಾಂಡವ ಸ್ತೋತ್ರವನ್ನು ಬಲಿಷ್ಠ ಸ್ತೋತ್ರವೆಂದು ನಂಬಲಾಗುತ್ತದೆ. ಇದನ್ನು ಪಠಿಸುವ ವೇಳೆ ನೀವು ಯಾವುದೇ ಕಾರಣಕ್ಕೂ ಬೇರೆಯವರ ಬಗ್ಗೆ ಕೆಟ್ಟ ಭಾವನೆ ಇಟ್ಟುಕೊಳ್ಳಬಾರದು. 

Latest Videos
Follow Us:
Download App:
  • android
  • ios