Asianet Suvarna News Asianet Suvarna News

1 ಲಕ್ಷ ಭಗವದ್ಗೀತೆ ಪ್ರತಿ ಹಂಚಲಿರುವ ISKCON

ಡಿಸೆಂಬರ್ 3ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಲಿರುವ ಒಂದು ತಿಂಗಳ ಅವಧಿಯ 'ಗೀತಾದಾನ ಯಜ್ಞ'ದಲ್ಲಿ ಒಂದು ಲಕ್ಷ ಭಗವದ್ಗೀತೆ ಪ್ರತಿಗಳನ್ನು ವಿತರಿಸುವ ಗುರಿಯನ್ನು ಇಸ್ಕಾನ್ ಬೆಂಗಳೂರು ದೇವಾಲಯಗಳ ಸಮೂಹ ಹೊಂದಿದೆ.

ISKCON Bangalore to distribute 1 lakh Bhagavad Gitas skr
Author
First Published Nov 29, 2022, 4:12 PM IST

ಒಂದು ತಿಂಗಳ ಅವಧಿಯ 'ಗೀತಾದಾನ ಯಜ್ಞ'ದಲ್ಲಿ ಒಂದು ಲಕ್ಷ ಭಗವದ್ಗೀತೆ ಪ್ರತಿಗಳನ್ನು ವಿತರಿಸುವ ಗುರಿಯನ್ನು ಇಸ್ಕಾನ್ ಬೆಂಗಳೂರು ದೇವಾಲಯಗಳ ಸಮೂಹ ಹೊಂದಿದೆ. ಡಿಸೆಂಬರ್ 3ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಈ ಅವಧಿಯಲ್ಲಿ ಭಗವದ್ಗೀತೆ ಆಧಾರಿತ ವಿಚಾರ ಸಂಕಿರಣಗಳು ಮತ್ತು ತಾತ್ವಿಕ ಚರ್ಚೆಗಳನ್ನು ಎಲ್ಲೆಡೆ ಆಯೋಜಿಸಲಾಗುವುದು ಎಂದು ಇಸ್ಕಾನ್ ಬೆಂಗಳೂರು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ವಸಂತಪುರದಲ್ಲಿರುವ ಇಸ್ಕಾನ್ (ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್) ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನದಲ್ಲಿ 'ಗೀತಾ ಜಯಂತಿ'ಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್ ಅಶೋಕ ಮತ್ತು ಕೆ ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿರುವರು.

ದೇವಾಲಯದ ಸಂಕೀರ್ಣದಲ್ಲಿ ಮಕ್ಕಳು ಮತ್ತು ವಯಸ್ಕರ ವಿವಿಧ ಗುಂಪುಗಳು ಗೀತೆಯ 700 ಶ್ಲೋಕಗಳನ್ನು ಪಠಿಸುತ್ತವೆ. ಖ್ಯಾತ ಭಕ್ತಿ ಗಾಯಕ ವಿದ್ಯಾಭೂಷಣ ಅವರ ಭಗವದ್ಗೀತೆ ಪಠಣದ ಮಲ್ಟಿಮೀಡಿಯಾ ವಿಡಿಯೋ ಪ್ರಸ್ತುತಿ ಜೊತೆಗೆ ಆರು ಭಾಷೆಗಳಲ್ಲಿ ಅನುವಾದವನ್ನು ಬಿಡುಗಡೆ ಮಾಡಲಾಗುತ್ತಿದೆ.

Follow Us:
Download App:
  • android
  • ios