Asianet Suvarna News Asianet Suvarna News

Intelligence and Zodiac sign: ರಾಶಿ ಪ್ರಕಾರ, ನೀವೆಷ್ಟು ಬುದ್ಧಿವಂತರು?

ಯಾವ ರಾಶಿಯವರು ಎಷ್ಟು ಬುದ್ಧಿವಂತರು, ಯಾವ ವಿಷಯದಲ್ಲಿ ಜಾಣರು, ಅವರ ಯಶಸ್ಸಿನ ಗುಣಗಳೇನು ಗೊತ್ತಾ?

is your zodiac sign intelligent skr
Author
Bangalore, First Published Dec 5, 2021, 2:09 PM IST

ನಿಮ್ಮ ಬುದ್ಧಿ ಮಟ್ಟ(IQ level) ಎಷ್ಟಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ನೀವೆಷ್ಟು ಬೇಗ ಕಷ್ಟದ ಸಂದರ್ಭಗಳನ್ನು ನಿಭಾಯಿಸುತ್ತೀರಿ, ಹೇಗೆ ಪ್ರತಿಕ್ರಿಯಿಸುತ್ತೀರಿ, ಎಷ್ಟು ಜ್ಞಾನ ಹೊಂದಿದ್ದೀರಿ ಎಲ್ಲವೂ ನಿಮ್ಮ ಬುದ್ಧಿವಂತಿಕಯ ಸೂಚಕಗಳೇ. ಜನ್ಮರಾಶಿಗಳು ಕೂಡಾ ಬುದ್ಧಿವಂತಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹಾಗಿದ್ದರೆ ನಿಮ್ಮ ರಾಶಿಯ ಬುದ್ಧಿವಂತಿಕೆ ಮಟ್ಟ ಎಷ್ಟು ಎಂದು ತಿಳಿಯಿರಿ. 

ಮೇಷ(Aries)
ಮೇಷ ರಾಶಿಯವರ ಕಲಿಕಾ ಸಾಮರ್ಥ್ಯ ಅಗಾಧವಾದುದು. ಬದುಕಿನ ಬದಲಾವಣೆಗಳಿಗೆಲ್ಲ ಹೊಂದಿಕೊಳ್ಳಲಾಗದಿದ್ದರೂ ಈ ರಾಶಿಯವರು ಹೊಸತನ್ನು ಕಲಿಯಲಂತೂ ಬಯಸುತ್ತಾರೆ. ಇಷ್ಟಪಟ್ಟಿದ್ದನ್ನೇ ಮಾಡಲು ಬಯಸುವವರು. ಮಾಡಿದ್ದನ್ನು ಚೆನ್ನಾಗಿ ನಿಭಾಯಿಸುವವರು. ಆ ಮಟ್ಟಿಗೆ ಇವರ ಬುದ್ಧಿವಂತಿಕೆ ಇವರು ಇಷ್ಟ ಪಟ್ಟ ವಿಷಯಗಳಲ್ಲಿ ಕೈ ಹಿಡಿಯುತ್ತದೆ. 

ವೃಷಭ(Taurus)
ಇವರು ಬಹಳ ವಿಸಿಷ್ಠ ವ್ಯಕ್ತಿತ್ವದವರು, ಪ್ರತಿಭಾಶಾಲಿಗಳು. ಶುಕ್ರ ಗ್ರಹ ಈ ರಾಶಿಯನ್ನಾಳುವುದರಿಂದ ಇವರ ಕುತೂಹಲ ಸುಲಭಕ್ಕೆ ತಣಿಯುವುದಿಲ್ಲ. ಈ ಕುತೂಹಲದ ಸ್ವಭಾವವೇ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ. ತಮ್ಮ ಗುರಿ ಹಾಗೂ ಆಸೆಗಳ ಸಾಧನೆಗಗಾಗಿ ಇರು ವಿಶೇಷ ದಾರಿಯಲ್ಲಿ ಸಾಗಬಲ್ಲರು. 

Vastu Tips for Business Growth: ನಷ್ಟದಲ್ಲಿರೋ ವ್ಯಾಪಾರಕ್ಕೆ ಲಾಭ ತರೋ 'ಯಂತ್ರ'ಗಳು

ಮಿಥುನ(Gemini)
ಹೆಚ್ಚಿನ ಬಾರಿ ಗೊಂದಲವೇ ನಿಮ್ಮ ದಾರಿಗೆ ಅಡ್ಡಿಯಾಗುವುದು. ನಿಮ್ಮ ಮತ್ತೊಂದು ಮೈನಸ್ ಪಾಯಿಂಟ್ ಎಂದರೆ ಯಾವುದಾದರೂ ಕಲಿಯುವಾಗ ಆರಂಭದಲ್ಲಿರುವ ಆಸಕ್ತಿ ಕೊನೆ ಮುಟ್ಟಿಸುವ ತನಕ ಇರುವುದಿಲ್ಲ. ಈ ಕಾರಣದಿಂದ ಮಿಥುನ ರಾಶಿಯವರು ಜಾಕ್ ಆಫ್ ಆಲ್, ಮಾಸ್ಟರ್ ಆಫ್ ನನ್ ಎಂಬ ಸ್ವಭಾವ ಹೊಂದಿರುತ್ತಾರೆ. 

ಕಟಕ(Cancer) 
ಇವರು ಆತ್ಮವಿಶ್ವಾಸಿಗಳು ಹಾಗೂ ಹೃದಯದ ಮಾತನ್ನೇ ಕೇಳಬಯಸುವವರು. ಇವರು ಭಾವನಾತ್ಮಕವಾಗಿ ಸಿಕ್ಕಾಪಟ್ಟೆ ಬುದ್ಧಿವಂತರು. ಇದರಿಂದ ಜನರೊಂದಿಗೆ ಬಹಳ ಸುಲಭವಾಗಿ ಕನೆಕ್ಟ್ ಆಗಬಲ್ಲರು. ಹೀಗೆ ಜನಸಂಪರ್ಕಗಳನ್ನು ತಮ್ಮ ಲಾಭಕ್ಕಾಗಿ ಚೆನ್ನಾಗಿ ಬಳಸಿಕೊಳ್ಳಲೂ ಅರಿತವರು. ಬಯಸಿದ ಎತ್ತರಕ್ಕೇರುವ ಬುದ್ಧಿವಂತಿಕೆ ಇವರದು. 

zodiac signs and personality: ಈ ಅಪಾಯಕಾರಿ ರಾಶಿಗಳೊಂದಿಗೆ ಎಚ್ಚರ, ಕಟ್ಟೆಚ್ಚರ!

ಸಿಂಹ(Leo)
ಇವರು ಹೆಚ್ಚು ಪ್ರಾಕ್ಟಿಕಲ್ಲಾಗಿ ಯೋಚಿಸಿ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸುವವರು. ಆದರೆ, ಹಟಮಾರಿತನ(adament)ದಿಂದಾಗಿ ಹೆಚ್ಚು ತಪ್ಪುಗಳನ್ನು ಮಾಡುವವರು. ತಕ್ಷಣದಲ್ಲಿ ಯೋಚಿಸಿ ಪ್ರತಿಕ್ರಿಯಿಸಬಲ್ಲ ಸಿಂಹ ರಾಶಿಯವರು ಬೇರೆಯವರ ಕಣ್ಣಿಗೆ ಬಹಳ ಬುದ್ಧಿವಂತರಂತೆ ಕಾಣಿಸುತ್ತಾರೆ. 

ಕನ್ಯಾ(Virgo)
ಇವರು ಅಷ್ಟೇನು ಬುದ್ಧಿವಂತರಲ್ಲ. ತಮ್ಮ ಬದುಕಿನ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲೂ ಬೇರೆಯವರನ್ನು ಅಲಂಬಿಸುವವರು. ಎಲ್ಲ ವಿಷಯಗಳನ್ನು ಹೆಚ್ಚು ವಿಮರ್ಶೆಗೊಳಪಡಿಸುತ್ತಾರೆ. ಆದರೆ, ಪ್ರತಿಕ್ರಿಯಿಸುವುದು ಬಹಳ ನಿಧಾನವಾಗಿ. ಹೀಗಾಗಿ, ಮಂದ ಎನಿಸಿಕೊಳ್ಳುತ್ತಾರೆ. ಯಾವೊಂದು ನಿರ್ಧಾರವನ್ನೂ ಆತುರದಲ್ಲಿ ತೆಗೆದುಕೊಳ್ಳುವವರಲ್ಲ. ಹಾಗಂಥ ಕೆಲವೊಮ್ಮೆ ಅದೆಷ್ಟು ತಡವಾಗುತ್ತದೆ ಅಂದರೆ ತೆಗೆದುಕೊಂಡ ನಿರ್ಧಾರದಿಂದ ಪ್ರಯೋಜನವೇ ಆಗುವುದಿಲ್ಲ. 

ತುಲಾ(Libra)
ಶುಕ್ರ ಗ್ರಹಾಧಿಪತ್ಯರಾದ ತುಲಾ ರಾಶಿಯವರು ಬಹಳ ಬುದ್ಧಿವಂತರು. ಇವರ ಸರಿ ತಪ್ಪುಗಳೇನು ಎಂಬುದು ಇವರಿಗೇ ಗೊತ್ತಿರುತ್ತದೆ. ಗುರಿಸಾಧನೆಗೆ ಬೇಕಾದ ಬುದ್ಧಿವಂತಿಕೆ, ಕ್ರಿಯಾಶೀಲತೆ ಇವರಲ್ಲಿರುತ್ತದೆ. ಇವರ ಬುದ್ಧಿವಂತಿಕೆಯೇ ಇವರಿಗೆ ಅತಿ ದೊಡ್ಡ ಬಲ. 

ವೃಶ್ಚಿಕ(Scorpio)
ವಂಶವಾಹಿನಿಯಲ್ಲೇ ಬುದ್ಧಿವಂತಿಕೆ ಇರಿಗೆ ಹರಿದು ಬಂದಿರುತ್ತದೆ. ಹಾಗಾಗಿ, ಇವರು ಬಲವಾದ ತರ್ಕಶೀಲರು, ಬಹಳ ಬುದ್ಧಿವಂತರು(intelligent). ಇನ್ನೊಬ್ಬರಿಗೆ ಬೋಧನೆ ಮಾಡಿ ಪಾಠ(lesson) ಕಲಿಸುವವರು. ಇರುವ ಜ್ಞಾನವನ್ನು ಎಲ್ಲರಿಗೂ ಹಂಚ ಬಯಸುವವರು. ಶಿಕ್ಷಕರಾಗುವುದು ಈ ರಾಶಿಗೆ ಹೆಚ್ಚು ಹೊಂದುತ್ತದೆ. 

ಧನುಸ್ಸು(Sagittarius)
ಬಹಳ ಕಷ್ಟ ಪಟ್ಟು ಕೆಲಸ ಮಾಡುವ ಸ್ವಭಾವ ಧನು ರಾಶಿಯವರದು. ಜನರನ್ನು ಹಾಗೂ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಕಷ್ಟ ಪಟ್ಟು ಕೆಲಸ ಮಾಡುವ ಇವರಿಗೆ ಯಶಸ್ಸು ದಕ್ಕಲೇಬೇಕು. ಬುದ್ಧಿವಂತಿಕೆ ಹಾಗೂ ಹಾರ್ಡ್ ವರ್ಕ್(hardwork) ಎರಡಕ್ಕೂ ಧನರಾಶಿಯವರು ಉತ್ತಮ ಉದಾಹರಣೆ.

ಮಕರ(Capricorn)
ಇವರದು ಬಿಸ್ನೆಸ್ ಮೈಂಡ್‌ಸೆಟ್. ಇವರ ಪಾಲಿಗೆ ಅದೊಂದು ವರವೇ ಸರಿ. ಭಾವನೆ(emotions)ಗಳನ್ನು ಸರಿದೂಗಿಸಿಕೊಂಡು ಹೋಗಬಲ್ಲರು. ಜೀವನದ ಪ್ರತಿ ಹೆಜ್ಜೆಯನ್ನೂ ತುಂಬಾ ಯೋಚಿಸಿ, ಎಚ್ಚರಿಕೆಯಿಂದ ಇಡುವ ಇವರು ಬಹಳ ಯಶಸ್ವೀಯಾಗುತ್ತಾರೆ. 

ಕುಂಭ(Aquarius)
ಇವರ ವಿಶ್ಲೇಷಣಾ ಸಾಮರ್ಥ್ಯ ಅಧಿಕ. ಬಹಳ ಸೃಜನಶೀಲರು(creative) ಹಾಗೂ ಸರಿಯಾಗಿ ಇನ್ನೊಬ್ಬರ ಗುಣ ಗ್ರಹಿಸಬಲ್ಲರು. ಸೃಜನಶೀಲತೆ, ಬುದ್ಧಿವಂತಿಕೆ ಹಾಗೂ ಜನರೊಂದಿಗೆ ಹೊಂದಿಕೊಂಡು ಹೋಗುವ ಗುಣದಿಂದ ಇವರು ಗುರಿ ತಲುಪುವರು. 

ಮೀನ(Pisces)
ಬಹಳ ಭಾವಜೀವಿಗಳು. ತಮಗಿಂತ ತಾವು ಪ್ರೀತಿಸುವವರನ್ನು ಮೇಲಿಟ್ಟು ನೋಡುವವರು. ಭಾವನಾತ್ಮಕವಾಗಿ ಬಹಳ ಪ್ರಬುದ್ಧರು. ಇದೇ ಮೀನ ರಾಶಿಯವರ ಬಲವೂ ಹೌದು. ಬೇರಾವುದೇ ಕೆಟ್ಟ ಯೋಚನೆ ಇಲ್ಲದೆ ಜನರನ್ನು ಪ್ರೀತಿಸುವ ಗುಣವೇ ಯಶಸ್ಸಿನ ಏಣಿ ಹತ್ತಿಸುತ್ತದೆ. ಒಳ್ಳೆಯತನ(kindness)ಕ್ಕಾಗಿ ಎಲ್ಲರಿಂದ ಗುರುತಿಸಲ್ಪಡುವವರು. 

Follow Us:
Download App:
  • android
  • ios