Asianet Suvarna News Asianet Suvarna News

ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ಹೊರ ಬಂದ್ರೆ ಅಂಗವಿಕಲ ಮಕ್ಕಳಾಗ್ಬೋದು!

ಚಂದ್ರಗ್ರಹಣ ಹಿನ್ನೆಲೆಯಲ್ಲಿ ನವೆಂಬರ್ 8, ಮಂಗಳವಾರ ರಾಜ್ಯದ ಬಹುತೇಕ ದೇವಾಲಯಗಳು ಬಾಗಿಲು ಮುಚ್ಚಿರುತ್ತವೆ. ಈ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರು ಮನೆಯಿಂದ ಹೊರ ಬರಬಾರದೆಂದು ಅರ್ಚಕರು ಎಚ್ಚರಿಸಿದ್ದಾರೆ. 

Is Lunar eclipse harmful during pregnancy skr
Author
First Published Nov 8, 2022, 11:40 AM IST

ಇಂದು ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಹುತೇಕ ದೇವಾಲಯಗಳು ಮಧ್ಯಾಹ್ನದ ಬಳಿಕ ಬಾಗಿಲು ಮುಚ್ಚುತ್ತಿವೆ.  ಈ ದಿನ ಕಾರ್ತಿಕ ಮಂಗಳವಾರವಾಗಿದ್ದು, ಹುಣ್ಣಿಮೆಯೂ ಆಗಿದೆ. ಜೊತೆಗೆ, ಮಧ್ಯಾಹ್ನದ ಬಳಿಕ ದೇವಾಲಯಗಳು ಮುಚ್ಚುತ್ತವೆ ಎಂಬ ಕಾರಣದಿಂದ ಭಕ್ತರು ಮಂಗಳವಾರ ಬೆಳಗ್ಗೆ ದೇವರ ದರ್ಶನಕ್ಕೆ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಬೆಳಗ್ಗೆ 10ರವರೆಗೆ ವಿಶೇಷ ಪೂಜೆ ನಡೆದಿದೆ. ನೂರಾರು ಭಕ್ತರು ದೇವರ ದರ್ಶನ ಮಾಡಿದ್ದಾರೆ. ಈ ಬಗ್ಗೆ ಮಾತಾಡಿದ ದೇವಾಲಯದ ಅರ್ಚಕರಾದ ಬಿ.ಆರ್.ಪಟ್ಟಾಭಿರಾಮ್, 'ಗ್ರಹಣ ಕಾಲದಲ್ಲಿ ದೇವರಿಗೆ ಸಹ ನೆಗೆಟಿವ್ ಎನರ್ಜಿ ತಟ್ಟತ್ತೆ‌. ಹೀಗಾಗಿ ದೇವಾಲಯವನ್ನು ಕ್ಲೋಸ್ ಮಾಡುತ್ತೇವೆ. ಬಳಿಕ ದರ್ಬೆಯಿಂದ ದೇವರನ್ನು ಮುಚ್ಚುತ್ತೇವೆ. ಸಂಜೆ ಶುದ್ಧೀಕರಣ ಮಾಡಿದ ಬಳಿಕ ದೇವಾಲಯ ಓಪನ್ ಮಾಡಲಾಗುತ್ತದೆ,' ಎಂದರು. 

ಗರ್ಭಿಣಿಯರು ಹೊರ ಬರಬಾರದು
'ಗ್ರಹಣ ಕಾಲದಲ್ಲಿ ಗರ್ಭೀಣಿ ಸ್ತ್ರೀಯರು ಯಾರೂ ಹೊರ ಬರಬಾರದು. ಹೊರ ಬಂದ್ರೆ ಅವರಿಗೆ ಸೂರ್ಯನ ರೇಸ್ ನಿಂದ ಎಫೆಕ್ಟ್ ಆಗುತ್ತೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.ಕೆಲವರಿಗೆ ಇದರ ಎಫೆಕ್ಟ್ ಆಗುತ್ತೆ. ಮತ್ತೆ ಕೆಲವರಿಗೆ ಆಗೋದಿಲ್ಲ. ಗರ್ಭಿಣಿ ಸ್ತ್ರೀಯರು ಹೊರ ಬಂದ್ರೆ, ಹುಟ್ಟುವ ಮಕ್ಕಳ ಮೇಲೆ ಗ್ರಹಣದ ಎಫೆಕ್ಟ್ ತಾಕಿ ಅವರಲ್ಲಿ ಅಂಗವೈಕಲ್ಯ ಕಾಡಬಹುದು, ಹೀಗಾಗಿ ಗರ್ಭೀಣಿ ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು,' ಎಂದು ಅರ್ಚಕರು ತಿಳಿಸಿದ್ದಾರೆ. 

ಚಂದ್ರಗ್ರಹಣ ಹಿನ್ನೆಲೆ; ನ.8ರಂದು ಈ ದೇವಾಲಯಗಳು ಬಂದ್

ಬನಶಂಕರಿ ದೇವಾಲಯ ಬಂದ್
ಗ್ರಹಣ ಹಿನ್ನೆಲೆಯಲ್ಲಿ ನಗರದ ಪ್ರಸಿದ್ಧ ಬನಶಂಕರಿ ಅಮ್ಮನವರ ದೇವಾಲಯವನ್ನು ಬೆಳಗ್ಗೆ 10 ಗಂಟೆಗೆ ಬಂದ್ ಮಾಡಲಾಗಿದೆ. ಗ್ರಹಣ ಮುಗಿದು ಸಂಪೂರ್ಣ ದೇವಸ್ಥಾನ ಸ್ವಚ್ಛಗೊಳಿಸಿ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ. ಸಂಜೆ 7 ಗಂಟೆಯ ನಂತರ ದೇವಿಗೆ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದೆ. ಸಂಜೆ 7.30ರಿಂದ ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ಅನುಮತಿ ಇದೆ ಎಂದು ಅರ್ಚಕ ರಾಜಶೇಖರ್ ಮಾಹಿತಿ ನೀಡಿದ್ದಾರೆ. 

ಕಾಡು ಮಲೇಶ್ವರ ದೇವಾಲಯ
ಚಂದ್ರ ಗ್ರಹಣ ಹಿನ್ನಲೆ, ಕಾಡು ಮಲೇಶ್ವರ ದೇವಾಲಯದಲ್ಲಿ ಬೆಳಗ್ಗೆ 10.30ರವರೆಗೆ ಪೂಜಾ ಕೈಂಕರ್ಯ ನಡೆಯಿತು. ಬಳಿಕ ದೇವರ ಮೇಲೆ ದರ್ಬೆ ಇಟ್ಟ ಅರ್ಚಕರು ದೇಗುಲದ ಬಾಗಿಲು ಬಂದ್ ಮಾಡಿದರು. ಸಂಜೆ 6.20 ನಂತರ ಶುದ್ದಿ ಕಾರ್ಯ ನಡೆಸಿ 7.30 ರ ನಂತರ  ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದು. 

ನವಗ್ರಹಗಳನ್ನೇ ಬಂಧಿಸಿದ್ದ ರಾವಣ! ಆಂಜನೇಯ ಭಕ್ತರಿಗೆ ಶನಿ ಕಾಡದಿರಲು ಇಲ್ಲಿದೆ ಕಾರಣ

ಘಾಟಿ‌ ದೇವಸ್ಥಾನ ಬಂದ್
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನು ಕೂಡಾ ಇಂದು ಬಂದ್ ಮಾಡಲಾಗಿದ್ದು, ಸಂಜೆ 7.30 ರವರೆಗೂ ದೇವಾಲಯದಲ್ಲಿ ಭಕ್ತರಿಗೆ ‌ದರ್ಶನಕ್ಕೆ ಅವಕಾಶವಿರುವುದಿಲ್ಲ. 

 ಬಂಡಿ ಮಹಾಕಾಳಿ ದೇವಾಲಯ
ದೇವಾಲಯದಲ್ಲಿ ಇಂದು ಗ್ರಹಣಕ್ಕೂ ಮುಂಚೆಯೇ ಮೃತ್ಯುಂಜಯ ಹೋಮ ಆರಂಭವಾಗುತ್ತದೆ. ಗ್ರಹಣ ಕಾಲದಲ್ಲೂ ದೇವಾಲಯ ಬಾಗಿಲು ತೆರೆದಿದ್ದು, ಗ್ರಹಣ ಶಾಂತಿ ಹೋಮದಲ್ಲಿ ಭಕ್ತಾಧಿಗಳು ಭಾಗವಹಿಸಬಹುದಾಗಿದೆ.

Follow Us:
Download App:
  • android
  • ios