Evil eye Touch wood : ದೃಷ್ಟಿ ಬೀಳೋದು ಸಾಮಾನ್ಯ. ಅದ್ರಿಂದ ಬಚಾವ್ ಆಗಲು ಜನರು ಕಪ್ಪು ದಾರ ಕಟ್ಟಿಕೊಳ್ತಾರೆ. ಮನೆ ಮುಂದೆ ದೃಷ್ಟಿ ಗೊಂಬೆ ಇಡ್ತಾರೆ. ಅನೇಕರು ಮಾತಿನ ಮಧ್ಯೆ ಟಚ್ ವುಡ್ ಹೇಳ್ತಾ, ದೃಷ್ಟಿ ಬೀಳದಂತೆ ಎಚ್ಚರಿಕೆವಹಿಸ್ತಾರೆ. ನಿಜವಾಗ್ಲೂ ಟಚ್ ವುಡ್ ಅಂದ್ರೆ ದೃಷ್ಟಿ ಬೀಳೋದು ನಿಲ್ಲುತ್ತಾ?

ಕೆಟ್ಟ ದೃಷ್ಟಿಯನ್ನು ಭಾರತದಲ್ಲಿ ಮಾತ್ರವಲ್ಲ ಇನ್ನೂ ಅನೇಕ ದೇಶದ ಜನರು ನಂಬ್ತಾರೆ. ನಾನಾ ಕಾರಣಕ್ಕೆ ಈ ದೃಷ್ಟಿ ಬೀಳೋದಿದೆ. ಕೆಲವರ ಕಣ್ಣು ಅತೀ ಕೆಟ್ಟದ್ದಾಗಿರುತ್ತದೆ. ಅವರು ಕೆಟ್ಟ ದೃಷ್ಟಿಯಲ್ಲಿ ವ್ಯಕ್ತಿಯನ್ನು ನೋಡಿದ್ರೆ ಆತನ ಸರ್ವನಾಶವಾಗೋದಿದೆ. ದುಷ್ಟ ಕಣ್ಣು ಅಥವಾ ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆ ಮಾಡಲು ಜನರು ನಾನಾ ಪ್ರಯತ್ನ ನಡೆಸ್ತಾರೆ. ಅದ್ರಲ್ಲಿ ಟಚ್ ವುಡ್ ಅನ್ನೋದು ಒಂದು. ಯಾವುದೇ ವ್ಯಕ್ತಿಯ ಬಗ್ಗೆ, ವಸ್ತುವಿನ ಬಗ್ಗೆ ಇಲ್ಲ ಘಟನೆ, ಅದೃಷ್ಟದ ಬಗ್ಗೆ ಹೊಗಳಿದ ನಂತ್ರ ಟಚ್ ವುಡ್ ಎನ್ನುವ ಮಾತು ಕಲ್ಪನೆ ಇಲ್ದೆ ಬಂದಿರುತ್ತದೆ. ಈ ಟಚ್ ವುಡ್ ಹೇಳೋದು ಏಕೆ, ಅದ್ರಿಂದ ಲಾಭ ಇದ್ಯಾ? ಇದಕ್ಕೆ ಉತ್ತರ ಇಲ್ಲಿದೆ.

ಟಚ್ ವುಡ್ (Touch Wood) ಅಂತ ಹೇಳಿದ್ರೆ ದೃಷ್ಟಿ ಬೀಳೋದಿಲ್ವ? :

ಕೆಲವರು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಟಚ್ ವುಡ್ ಎನ್ನುತ್ತಲೇ ಮಾತು ಶುರು ಮಾಡ್ತಾರೆ. ಟಚ್ ವುಡ್ ಎನ್ನುತ್ತ ಹತ್ತಿರ ಇರುವ ಮರದ ವಸ್ತುಗಳನ್ನು ಟಚ್ ಮಾಡುವವರಿದ್ದಾರೆ. ಟಚ್ ವುಟ್ ಅಂತ ಮರದ ವಸ್ತುಗಳನ್ನು ಸ್ಪರ್ಶ ಮಾಡಿದ್ರೆ ದೃಷ್ಟಿ ಬೀಳೋದಿಲ್ಲ ಅನ್ನೋದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಆದ್ರೆ ಜ್ಯೋತಿಷ್ಯ, ಸಂಪ್ರದಾಯದಲ್ಲಿ ಇದನ್ನು ಬಲವಾಗಿ ನಂಬಲಾಗುತ್ತದೆ.

ಸೂರ್ಯನ ಅಪಾಯಕಾರಿ ಸಂಚಾರದಿಂದ ಎಲ್ಲವೂ ಹಾಳು, 5 ರಾಶಿಗೆ ಸಮಸ್ಯೆ

ಮರ (tree) ಸಕಾರಾತ್ಮಕ ಶಕ್ತಿ ಹೊಂದಿದೆ ಎಂಬುದು ಟಚ್ ವುಡ್ ಹಿಂದಿನ ಮೂಲ ಕಲ್ಪನೆಯಾಗಿದೆ. ಮರ ಸ್ಥಿರತೆ ಮತ್ತು ರಕ್ಷಣೆಯನ್ನು ಸೂಚಿಸುತ್ತದೆ. ಮರ ಅಥವಾ ಮರದ ವಸ್ತುವನ್ನು ಸ್ಪರ್ಶಿಸಿ ಟಚ್ ವುಡ್ ಅಂದ್ರೆ ಅದು ಸಕಾರಾತ್ಮಕ ಶಕ್ತಿ ಮತ್ತು ನಂಬಿಕೆಯನ್ನು ಜಾಗೃತಿಗೊಳಿಸುತ್ತದೆ. ಇದು ನಿಮ್ಮನ್ನು ದುಷ್ಟ ಶಕ್ತಿಯಿಂದ ರಕ್ಷಿಸುತ್ತದೆ. ಇದನ್ನು ಸಾಬೀತುಪಡಿಸಲು ನಿಮ್ಮ ಬಳಿ ಯಾವುದೇ ಪುರಾವೆ ಇಲ್ದೆ ಹೋದ್ರೂ ಇದು ದುಷ್ಟ ಕಣ್ಣುಗಳಿಂದ ದೂರವಿಡುವ ಸಂಕೇತ ಎಂದು ನಂಬಲಾಗುತ್ತದೆ.

ಈ 4 ರಾಶಿಯವರಿಗೆ 2026ರಲ್ಲಿ ಮದುವೆಯಾಗುತ್ತೆ.. ಬಯಸಿದ ವರ, ವಧು ಸಿಗ್ತಾರೆ

ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ :

ಮರ ಮತ್ತು ಸಸ್ಯಗಳಲ್ಲಿ ದುಷ್ಟಶಕ್ತಿಗಳು ಮತ್ತು ದೇವತೆಗಳು ವಾಸಿಸುತ್ತವೆ ಎಂದು ಪ್ರಾಚೀನ ಪೇಗನ್ ನಾಗರಿಕತೆಗಳಲ್ಲಿ ನಂಬಲಾಗಿತ್ತು. ಇದು ಅತ್ಯಂತ ಹಳೆಯ ಮತ್ತು ಅತ್ಯಂತ ಜನಪ್ರಿಯ ಸಿದ್ಧಾಂತವಾಗಿದೆ. ಆದ್ದರಿಂದ, ಮರಗಳನ್ನು ಸ್ಪರ್ಶಿಸುವ ಮೂಲಕ, ಅವು ದೈವಿಕ ಶಕ್ತಿಯೊಂದಿಗೆ ಸಂಪರ್ಕ ಸಾಧಿಸುತ್ತವೆ ಮತ್ತು ದುಷ್ಟಶಕ್ತಿಗಳಿಂದ ತಮ್ಮ ಅದೃಷ್ಟವನ್ನು ರಕ್ಷಿಸುತ್ತವೆ ಎಂದು ಅವರು ನಂಬಿದ್ದರು. ಕ್ರಿಶ್ಚಿಯನ್ ಧರ್ಮದಲ್ಲೂ ಇದನ್ನು ನಂಬಲಾಗುತ್ತದೆ. ಕ್ರಿಶ್ಚಿಯನ್ನರು ಯೇಸುಕ್ರಿಸ್ತನ ಶಿಲುಬೆಯ ಮರವನ್ನು ಪವಿತ್ರವೆಂದು ಪರಿಗಣಿಸಿದ್ದರು. ಮರ ಅಥವಾ ಶಿಲುಬೆಯನ್ನು ಸ್ಪರ್ಶಿಸುವ ಮೂಲಕ, ಜನರು ದೇವರ ಆಶೀರ್ವಾದ ಪಡೆಯುತ್ತಾರೆಂದು ನಂಬಲಾಗಿತ್ತು.

ಇನ್ನು ಜ್ಯೋತಿಷ್ಯದಲ್ಲಿ ಮರವು ಪ್ರಾಥಮಿಕವಾಗಿ ಗುರು ಮತ್ತು ಚಂದ್ರನಂತಹ ಶುಭ ಗ್ರಹಗಳೊಂದಿಗೆ ಸಂಬಂಧ ಹೊಂದಿದೆ. ವಿವಿಧ ರೀತಿಯ ಮರಗಳು ಇತರ ಗ್ರಹಗಳೊಂದಿಗೆ ಸಹ ಸಂಬಂಧ ಹೊಂದಿದ್ದರೂ, ಗುರು ಮತ್ತು ಚಂದ್ರನನ್ನು ಪ್ರಾಥಮಿಕವಾಗಿ ಮರಕ್ಕೆ ಸಂಬಂಧಿಸಿದ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಗುರು ರಕ್ಷಣೆ ಮತ್ತು ಸಕಾರಾತ್ಮಕತೆಗೆ ಸಂಬಂಧಿಸಿದೆ, ಆದರೆ ಚಂದ್ರನು ಭಾವನಾತ್ಮಕ ಸ್ಥಿರತೆಗೆ ಸಂಬಂಧಿಸಿದೆ. ಆದ್ದರಿಂದ, ಮರವನ್ನು ಮುಟ್ಟುವುದನ್ನು ಶುಭ ಗ್ರಹಗಳ ಶಕ್ತಿಯನ್ನು ಆಹ್ವಾನಿಸಲು ಮತ್ತು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಸಾಂಕೇತಿಕ ಮಾರ್ಗವೆಂದು ಪರಿಗಣಿಸಲಾಗುತ್ತದೆ.