Asianet Suvarna News Asianet Suvarna News

ಮಣ್ಣಿನ ದೇವಿ ಬದಲಿಗೆ ಪಂಚಲೋಹದ ದೇವಿ ಪ್ರತಿಷ್ಠಾಪನೆ: ದೇವಿದರ್ಶನಕ್ಕೆ ಮುಗಿಬೀಳ್ತಿರೋ ಭಕ್ತರು!

ನಾಡಿನೆಲ್ಲೆಡೆ ನವರಾತ್ರಿ ಹಬ್ಬದ ಸಡಗರ ಸಂಭ್ರಮ ದಿನೇ ದಿನೇ ಹೆಚ್ಚುತ್ತಿದೆ. ಗುಮ್ಮಟನಗರಿ ವಿಜಯಪುರದಲ್ಲಿ ನಾಡದೇವಿ ತರುಣ ಮಂಡಳಿ  ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ ಮಾಡಿದೆ. ಈ ದೇವಿಯ ದರ್ಶನ ಪಡೆಯಲು ಭಕ್ತರು ಮುಗಿಬಿಳುತ್ತಿದ್ದಾರೆ. 

Installation of panchaloha goddess instead of earthen goddess at Vijayapura gvd
Author
First Published Oct 7, 2024, 9:45 AM IST | Last Updated Oct 7, 2024, 9:45 AM IST

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಅ.07): ನವರಾತ್ರಿ ಸಂದರ್ಭದಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಿ 9 ದಿನಗಳ ಕಾಲ ಪೂಜಿಸಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ದೇವಿಯ ಮಣ್ಣಿನ ಪ್ರತಿಮೆ, ಪ್ಲಾಸ್ಟರ್ ಆಫ್ ಪ್ಯಾರಿಸ್,  ಪೈಬರ್ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡೋದು ಕಾಮನ್. ಆದ್ರೆ ಗುಮ್ಮಟನಗರಿ ವಿಜಯಪುರದಲ್ಲಿ ಪಂಚಲೋಹದ ದೇವಿ ಮೂರ್ತಿ ಸ್ಥಾಪನೆ ಮಾಡಲಾಗಿದ್ದು, ದೇವಿಯ ದರ್ಶನಕ್ಕೆ ಜನರು ಮುಗಿಬೀಳ್ತಿದ್ದಾರೆ. 

ಪಂಚಲೋಹದ ಸಿಂಹಾರೂಢ ದೇವಿ ಪ್ರತಿಷ್ಠಾಪನೆ..!
ನಾಡಿನೆಲ್ಲೆಡೆ ನವರಾತ್ರಿ ಹಬ್ಬದ ಸಡಗರ ಸಂಭ್ರಮ ದಿನೇ ದಿನೇ ಹೆಚ್ಚುತ್ತಿದೆ. ಗುಮ್ಮಟನಗರಿ ವಿಜಯಪುರದಲ್ಲಿ ನಾಡದೇವಿ ತರುಣ ಮಂಡಳಿ  ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ ಮಾಡಿದೆ. ಈ ದೇವಿಯ ದರ್ಶನ ಪಡೆಯಲು ಭಕ್ತರು ಮುಗಿಬಿಳುತ್ತಿದ್ದಾರೆ. ಐತಿಹಾಸಿಕ ನಗರಿ ವಿಜಯಪುರ ದಲ್ಲಿ ಕನಿಷ್ಠ 60 ರಿಂದ 70 ಕಡೆ ನಾಡದೇವಿ ಮೂರ್ತಿ ಪ್ರತಿಷ್ಟಾಪನೆ ಮಾಡಿ ದೇವಿ ಆರಾಧನೆ ಮಾಡಲಾಗುತ್ತದೆ. ಅದ್ರಂತೆ 34 ವರ್ಷಗಳ ಇತಿಹಾಸವಿರುವ ತರುಣ ಮಂಡಳಿಯೊಂದು ಪಂಚಲೋಹದ ದೇವಿ ಮೂರ್ತಿ ಪ್ರತಿಷ್ಟಾಪನೆ ಮಾಡುತ್ತಿದೆ. ಎಲ್ಲ ಕಡೆಗಳಲ್ಲಿ ಪೈಬರ್, ಪ್ಲಾಸ್ಟರ್, ಮಣ್ಣಿನ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿದ್ರೆ, ಇಲ್ಲಿ ಮಾತ್ರ ಪಂಚಲೋಹದ ದೇವಿಯ ಪ್ರತಿಷ್ಠಾಪನೆಯಾಗಿದೆ. 

ಮಳೆ ಅವಾಂತರಕ್ಕೆ ನಲುಗಿದ ಬೆಂಗಳೂರು: ಅಪಾರ್ಟ್‌ಮೆಂಟ್‌ಗೆ ನೀರು, 600 ಬೈಕ್ ಮುಳುಗಡೆ

2 ಕ್ವಿಂಟಾಲ್ ಮೂರ್ತಿ, 4 ಕೆ.ಜಿ ಬೆಳ್ಳಿ ಕಿರೀಟ..!
ಪಂಚಲೋಹದಲ್ಲಿ ನಿರ್ಮಾಣವಾದ ಮೂರ್ತಿ ಬರೊಬ್ಬರಿ ಎರಡುವರೆ ಕ್ವಿಂಟಲ್ ಇದೆ. ಪಂಚಲೋಹದ ದೇವಿ ತಲೆ ಮೇಲೆಯೇ ಬರೊಬ್ಬರಿ ನಾಲ್ಕು ಕೆಜಿ ಬೆಳ್ಳಿ ಕಿರಿಟವಿದೆ. ನಗರದ ಶಾಹುನಗರದಲ್ಲಿ 34 ವರ್ಷಗಳ ಹಿಂದೆ ಕೆಲ ಗೆಳೆಯರು ಕೂಡಿಕೊಂಡು ಪಂಚಲೋಹದ ದೇವಿಯ ಮೂರ್ತಿ ಸ್ಥಾಪಿಸಿದ್ದರು.‌ ಒಂದ ಕಾಲದಲ್ಲಿ ಮೈಸೂರು ದಸರಾದ ಹಾಗೆಯೇ ಮೆರವಣಿಗೆ ನಡೆಸಿದ ಇತಿಹಾಸ ಇಲ್ಲಿನ ತರುಣ ಮಂಡಳಿಗಿದೆ. 

ಭಕ್ತರ ಸೆಳೆಯುತ್ತಿರುವ ಪಂಚಲೋಹದ ದೇವಿ..!
ಪಂಚಲೋಹದ ದೇವಿಯ ಸುತ್ತ ಮಂಡಳಿಯ ವತಿಯಿಂದ ಈ ಬಾರಿ ಹಿತ್ತಾಳೆಯ ಪ್ರಭಾವಳಿ ನಿರ್ಮಿಸಿದ್ದು, ಭಕ್ತರ ಗಮನ ಸೆಳೆಯುತ್ತಿದೆ. ಪ್ರತಿದಿನ ಸಾಯಂಕಾಲ ಈ ದೇವಿ ದರ್ಶನ ಪಡೆಯಲು ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಂಟಪದಿಂದ ಅರ್ಧ ಕಿಲೋಮೀಟರ್ ದಷ್ಟು ಬಣ್ಣ ಬಣ್ಣದ ವಿದ್ಯುತ್ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತದೆ. ಪಂಚಲೋಹದ ದೇವಿಯ ದರ್ಶನಕ್ಕೆಂದೆ ಭಕ್ತರು ಬರ್ತಿರೋದು ವಿಶೇಷವೇ ಆಗಿದೆ.

ಉಡುಪಿ ಜಿಲ್ಲೆಯಲ್ಲಿ ಮೇಘಸ್ಫೋಟ?: ದಿಢೀರ್ ಉಕ್ಕೇರಿದ ನದಿ, 10 ಮನೆಗಳು ಮುಳುಗಡೆ

9 ದಿನ, ನವವಿಧಗಳ ಕಾರ್ಯಕ್ರಮ..!
ಒಂಭತ್ತು ದಿನ ವಿವಿಧ ಕಾರ್ಯಕ್ರಮ ನಡೆಯುತ್ತವೆ. ಚಿಕ್ಕ ಮಕ್ಕಳಿಗೆ ಡ್ಯಾನ್ಸ್, ಫ್ಯಾನ್ಸಿ ಹಾಗೂ ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತದೆ. ಜೊತೆಗೆ ಗೊಂದಳ, ಚಂಡಿಕಾ ಹೋಮಗಳನ್ನು ನಡೆಸಲಾಗುತ್ತದೆ. ಇನ್ನೂ ಮನರಂಜನೆಗಾಗಿ ಜಾದೂ ಕಾರ್ಯಕ್ರಮ, ರಸಮಂಜರಿ ಲಾವಣಿಯಂತಹ ಕಾರ್ಯಕ್ರಮ ಆಯೋಜಿಸಿದರೆ ಇತ್ತ ಸಾಮಾಜಿಕವಾಗಿ ರಕ್ತದಾನ ಶಿಬಿರ, ಮಹಾ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುತ್ತವೆ. ಕಳೆದ 34 ವರ್ಷಗಳ ಕಾಲ ನಿರಂತರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಸ್ವಾಗತ ಆದಿಶಕ್ತಿ ತರುಣ ಮಂಡಳಿ ಮಾದರಿಯಾಗಿದೆ.

Latest Videos
Follow Us:
Download App:
  • android
  • ios