Asianet Suvarna News Asianet Suvarna News

ಉಡುಪಿ ಜಿಲ್ಲೆಯಲ್ಲಿ ಮೇಘಸ್ಫೋಟ?: ದಿಢೀರ್ ಉಕ್ಕೇರಿದ ನದಿ, 10 ಮನೆಗಳು ಮುಳುಗಡೆ

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಅತ್ಯಲ್ಪ ಅವಧಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಮೇಘ ಸ್ಪೋಟವಾಗಿರಬಹುದು ಹೇಳಲಾಗುತ್ತಿದೆ. 2.25 ಗಂಟೆಯಲ್ಲಿ 18 ಸೆಂ.ಮೀ. ಮಳೆಯಾದ ಪರಿಣಾಮ, ಬಮ್ಮಗುಂಡಿ ನದಿಯಲ್ಲಿ ಹಠಾತ್ ಪ್ರವಾಹ ಕಾಣಿಸಿಕೊಂಡಿದೆ. 

Cloudburst in Udupi Hebri Creating a terrible flood gvd
Author
First Published Oct 7, 2024, 8:51 AM IST | Last Updated Oct 7, 2024, 8:51 AM IST

ಕಾರ್ಕಳ (ಅ.07): ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಅತ್ಯಲ್ಪ ಅವಧಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಮೇಘ ಸ್ಪೋಟವಾಗಿರಬಹುದು ಹೇಳಲಾಗುತ್ತಿದೆ. 2.25 ಗಂಟೆಯಲ್ಲಿ 18 ಸೆಂ.ಮೀ. ಮಳೆಯಾದ ಪರಿಣಾಮ, ಬಮ್ಮಗುಂಡಿ ನದಿಯಲ್ಲಿ ಹಠಾತ್ ಪ್ರವಾಹ ಕಾಣಿಸಿಕೊಂಡಿದೆ. ಇದರಿಂದ ಹೆಬ್ರಿ ತಾಲೂಕಿನ ಮು ದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಲಾಡಿ ಯಲ್ಲಿ 10ಕ್ಕೂ ಹೆಚ್ಚು ಮನೆಗಳು ಸಂ ಪೂರ್ಣ ಮುಳುಗಡೆಯಾಗಿವೆ. ಜಮನಿಗೆ ನೀರು ನುಗ್ಗಿದೆ 2 ಕಾರು, ಎರಡು ಬೈಕ್‌ಗಳು ಸೇರಿ 4 ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಆದರೆ ಯಾ ವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

ಮೇಘ ಸ್ಫೋಟದ ಶಂಕೆ: ಪಶ್ಚಿಮಘಟ್ಟ ಗಳ ಸಾಲಿನಲ್ಲಿ ಮಧ್ಯಾಹ್ನ 2.30ರ ವೇಳೆಗೆ ಸಿಡಿಲಬ್ಬರ ಹಾಗೂ ಭಾರೀ ಗಾಳಿಯಿಂದ ಕೂಡಿದ ಮಳೆ ಸುರಿದಿದೆ. ಇದರಿಂದಾಗಿ ನದಿಯಲ್ಲಿ ಹಠಾತ್ ಆಗಿ ಕೆಸರು ಮಿಶ್ರಿತ ನೀರು ಏರಿಕೆಯಾಗಿದೆ. ನೀರು ತೀರಪ್ರದೇಶದ ಮನೆಗಳ ಅಂಗಳಕ್ಕೆ ನುಗ್ಗಿದ್ದು, ಹೊಸಕಂಬದ ಕೃಷ್ಣ ಪೂಜಾರಿ ಅವರ ಕಾರು ಹಾಗೂ ಪಕ್ಕದ ಕೇರಳ ಮೂಲದ ಕುಟುಂಬ ನಿಲ್ಲಿಸಿದ್ದ ಕಾರು, ಎರಡು ಬೈಕ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ.ಮಧ್ಯಾಹ್ನ 2.25ಕ್ಕೆ ಆರಂಭವಾದ ಮಳೆ 5 ಗಂಟೆವರೆಗೆ ಮುಂದುವರಿದಿತ್ತು. 

ಕಬ್ಬಿನಾಲೆ ತಿಂಗಳಮಕ್ಕಿ ಪ್ರದೇಶಗಳಲ್ಲಿ ಮೇಘ ಸ್ಫೋಟವಾಗಿದೆಯೇ ಅಥವಾ ಗುಡ್ಡ ಜರಿದಿದೆಯೇ ಎಂಬ ಕುರಿತು ಖಚಿತ ಮಾಹಿತಿ ಲಭಿಸಿಲ್ಲ. ಜೀವಮಾನ ದಲ್ಲಿ ಈ ಭಾಗದಲ್ಲಿ ಇಂತಹ ಭೀಕರ ಪ್ರವಾಹ ನಾವು ನೋಡಿಲ್ಲವೆಂದು ಸ್ಥಳೀ ಯರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಹಠಾತ್ ನೆರೆಯಿಂದ ನಾಗರಿಕರು ಆತಂಕಗೊಂಡಿದ್ದಾರೆ. ಈ ಪರಿಸದಲ್ಲಿ ಭಾರಿ ಗಾಳಿಗೆ ಮರಗಳು ಬಿದ್ದಿದ್ದು 25ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ವಿದ್ಯುತ್ ಪೂರೈಕೆ ಸಂ ಪೂರ್ಣ ಸ್ಥಗಿತಗೊಂಡಿದೆ. ಬಮ್ಮಗುಂಡಿ ನದಿಯ ಸುತ್ತಮುತ್ತಲಿನ ಪ್ರದೇಶದ ಒಟ್ಟು 150 ಎಕರೆ ಕಟಾವಿಗೆ ಬಂದಿದ್ದ ಬತ್ತ, ರಬ್ಬರ್, ಅಡಕೆ, ತೆಂಗು, ಬಾಳೆ ತೋಟ ಸಂಪೂರ್ಣ ನಾಶವಾಗಿದೆ. 

ಸಿದ್ದರಾಮಯ್ಯ ಪತ್ನಿಯನ್ನು ನಾವು ಹೊರಗೆ ತಂದಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಓಟಕ್ಕಿತ್ತ ಪ್ರವಾಸಿಗರು: ಕಬ್ಬಿನಾಲೆ ಅಬ್ಬಿ ಜಲಪಾತ ವೀಕ್ಷಿಸುತಿದ್ದ ವೇಳೆ ಜಲಪಾತದ ನೀರು ಭಾರೀ ಏರಿಕೆಯಾಯಿತು ಹಾಗೂ ಒಮ್ಮೆಲೆ ಸುರಿದ ಭಾರಿ ಮಳೆ ಯನ್ನು ಗಮನಿಸಿ ಪ್ರವಾಸಿಗರು ಸ್ಥಳದಿಂದ ಓಟಕ್ಕಿತ್ತಿದ್ದಾರೆ. ಪ್ರವಾಹವನ್ನು ನೋಡಿ ನಮ್ಮ ಜೀವ ಉಳಿಸುವುದೇ ಬಲುದೊಡ್ಡ ಸಾಹಸವಾಗಿತ್ತು ಎಂದು ಪ್ರವಾಸಿಗ ಕುಂದಾಪುರದ ಪ್ರದೀಪ್ ತಿಳಿಸಿದ್ದಾರೆ. ಕಬ್ಬಿನಾಲೆ ಸೇತುವೆ ಮೇಲೆ ಯೂ ಪ್ರವಾಹದ ನೀರು ಹರಿದಿದ್ದು ಸಂಪೂರ್ಣ ಜಲಾವೃತವಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಧಾವಿ ಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios